ಶ್ರೀ ಕೃಷ್ಣನನ್ನು ಜಗದ್ಗುರು ಎಂದು ಯಾಕೆ ಕರೆಯುವರು ?🚩

ಶ್ರೀ ಕೃಷ್ಣನನ್ನು ಜಗದ್ಗುರು ಎಂದು ಯಾಕೆ ಕರೆಯುವರು ?🚩

 

ಪ್ರಾಚೀನ ಕಾಲದಿಂದಲೂ ಗುರು-ಶಿಷ್ಯ ಪರಂಪರೆ ಅಸ್ತಿತ್ವದಲ್ಲಿದೆ. ಭೂಮಿಯ ಮೇಲಿನ ಮೊದಲ ಗುರು ಅಥವಾ ಆದಿ ಗುರು. ಯಾರು ಯೋಗ, ಧರ್ಮ ಮತ್ತು ಶಾಸ್ತ್ರಗಳ ಬಗ್ಗೆ ಸಪ್ತ ಋಷಿಗಳು (ಸಂತರು) ಕಲಿಸಿದರು . ಸಪ್ತ ಋಷಿಗಳಿಗೆ ಈ ಯೋಗ, ಸಾಧನೆ, ಮತ್ತು ಶಾಸ್ತ್ರಗಳನ್ನು ಆ ಕಾಲದ ಅತ್ಯಂತ ಶ್ರೇಷ್ಠ ಯೋಗಿಗಳಿಗೆ ಕಲಿಸಿದರು ಮತ್ತು ಅಂದಿನಿಂದ ಈ ಪ್ರಕ್ರಿಯೆಯು ನಡೆಯುತ್ತಿದೆ.

 

ಗುರು ತನ್ನ ಜ್ಞಾನವನ್ನು ತನ್ನ ಶಿಷ್ಯರಿಗೆ ಕೊಟ್ಟು ನಂತರ ಶಿಷ್ಯರು ಈ ಜ್ಞಾನವನ್ನು ಅಳವಡಿಸಿಕೊಂಡು ತಮ್ಮನ್ನು ಗುರುಗಳನ್ನಾಗಿ ಮಾಡಿ ಕೊಳ್ಳುತ್ತಾರೆ. ನಂತರ ಅವರು ಅನೇಕ ಇತರ ಶಿಷ್ಯರಿಗೆ ಕಲಿಸುತ್ತಾರೆ, ಅದರಲ್ಲಿ ಮತ್ತೆ ಈ ಶಿಷ್ಯರ ಸಣ್ಣ ಗುಂಪು, ಅವರು ಪಡೆದ ಜ್ಞಾನದ ಗುಣದಿಂದ, ಗುರುಗಳಾಗಿ ಬದಲಾಗುತ್ತಾರೆ ಮತ್ತು ಮತ್ತಷ್ಟು ಅವರು ಕೆಲವು ಶಿಷ್ಯರನ್ನು ಸಂಗ್ರಹಿಸಿ ಯೋಗ ಮತ್ತು ಸಾಧನದ ಬಗ್ಗೆ ಕಲಿಸುತ್ತಾರೆ ಮತ್ತು ಈ ರೀತಿಯಾಗಿ ಈ ವಲಯವು ಮುಂದು ವರಿಯುತ್ತದೆ ಇದು. ಇದನ್ನು ಗುರು-ಶಿಷ್ಯ ಪರಂಪರೆ ಎಂದು ಕರೆಯಲಾಗುತ್ತದೆ.

 

ಆದರೆ ಶ್ರೀ ಕೃಷ್ಣನನ್ನು ಯೋಗಿ ಎಂದು ಕರೆಯುವೆವು ಬಲ್ಲವರಿಗೆಲ್ಲ ಹೇಳುವವ ಇವನು ಅದನ್ನು ಹೇಳುವ ಕಲೆ ಇವನಿಗೆ ಗೊತ್ತಿರುತ್ತದೆ ಅದು ಹೇಗೆ ಅಂತಾ ನೀವು ಕೇಳಬಹುದು ಇಲ್ಲಿ ನೀವು ಒಂದು ಅರ್ಥ ಮಾಡಿಕೊಳ್ಳಿ ಶ್ರೀಕೃಷ್ಣ ಪರಮ ಸತ್ಯದ ಮೇಲೆ ನೆಲೆಸಿರುವನು. ಸತ್ಯ ವನ್ನು ಹೇಳುವವ ಮಾತ್ರ ಪರಮ ಯೋಗಿ ಆಗಬಲ್ಲ! ಅಸಾಮಾನ್ಯ ಗುರುವಾಗಬಲ್ಲ! 

 

ಜೀವನದಲ್ಲಿ ಅತಿ ಸುಲಭವಾಗಿರುವುದನ್ನು ಅತಿ ಕೃಷ್ಟವಾದ ಭಾಷೆಯಲ್ಲಿ ಕೆಲವರು ಹೇಳುವರು ಆ ಭಾವ ನಮಗೆ ಕಾಣದ ರೀತಿಯಲ್ಲಿ ಪಾಂಡಿತ್ಯ ಅದನ್ನು ಅರ್ಥೈಸುವುದು ಕಷ್ಟ . ಆದರೆ ಶ್ರೀಕೃಷ್ಣನ ಭಾಷೆಯಾದರೂ ಜೀವನದ ಪರಮ ಸತ್ಯಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವಂತೆ ಇರುವುದು . ಅದು ಹೃದಯದಿಂದ ಬಂದ ಭಾಷೆ ಮತ್ತೊಂದು ಹೃದಯಕ್ಕೆ ನೇರವಾಗಿ ತಾಕುವುದು ಶ್ರೀ ಕೃಷ್ಣ ಇಲ್ಲಿ ಏನು ಮಾಡುತ್ತಿರುವನು ? ಅನಾವಶ್ಯ ಕವಾದ ಭಾವನೆಗಳನ್ನೆಲ್ಲ ಬಿಟ್ಟು ಯಾವುದು ಸಾರವೋ! ಭವ ಜೀವಿಗಳ ಅಜ್ಞಾನದ ರೋಗವನ್ನು ಗುಣಮಾಡುವವನು ಇವನು ಅಂತಹ ಅಮೃತವನ್ನು ನೀಡಿದವನು ಕೃಷ್ಣ! 

 

ಅರ್ಜುನಂತೆ ಸಂದೇಹದ ಸುಳಿಗೆ ಸಿಕ್ಕಿ ದಾರಿ ಕಾಣದೆ ದಿಕ್ಕೆಟ್ಟವರು ದಾರಿ ತೋರುವವನು ಬರಲಾರನೇ? ಎಂದು ಕಾತುರದಿಂದ ನಿಂತು ಬಿಡುವರು ಅರಿಯಬೇಕಾದ ಪರಮ ಸತ್ಯವನ್ನು ಲೋಕಕ್ಕೆ ತಿಳಿಸ ಬಂದವನು ಶ್ರೀ ಕೃಷ್ಣ ಆಧ್ಯಾತ್ಮಿಕ ವಿಷಯ ತಿಳಿಯುವುದರಲ್ಲಿ ನಾವು ನೀವು ಅಸುಳೆಗಳು ಇದನ್ನು ನೀವು ನಾವು ಅರ್ಥ ಮಾಡಿ ಕೊಳ್ಳ ಬೇಕು ಇಲ್ಲಿ ಕೃಷ್ಣನು ಗೀತೆ ಭೋಧಿಸುವಾಗ ಶ್ರೀಕೃಷ್ಣನ ಮುಂದೆ ಅರ್ಜುನನು ಮಾತ್ರ ಅಲ್ಲ ಇರುವುದು ಅರ್ಜುನನು ನೇರ ಪ್ರತಿನಿಧಿಯಂತೆ ಇರುವನು ಭಗವಂತ ಮುಖ್ಯವಾಗಿ ಮಾನವ ಕೋಟಿಗೆ ಇಲ್ಲಿ ಸಂದೇಶ ನೀಡುವನು. 

 

"ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ ದೇವಕೀಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್! 

 

ವಸುದೇವನ ಮಗ ಕಂಸನನ್ನು ಕೊಂದವನು ದೇವಕಿಗೆ ಪರಮಾ ನಂದವನ್ನು ಉಂಟು ಮಾಡಿದವನು ಶಿಷ್ಯನಾದವನು ಗುರುವಿಗೆ ಇಲ್ಲಿ ನಮಿಸುವನು ಅರ್ಜುನ ಶ್ರೀ ಕೃಷ್ಣನ ಪ್ರೀಯ ಸಖ ಆದರೂ ಭಗವದ್ಗೀತೆಯಿಂದ ಅರ್ಜುನ ತಿಳಿದ ಜ್ಞಾನ ಅನಂತ ಅಪರಿಮಿತ. 

ಕೃಷ್ಣನನ್ನು ಅರ್ಜುನ ಗುರುವಾಗಿ ಸ್ವೀಕರಿಸುವನು. 

 

ಈ ಮೇಲಿನ ಭಗವದ್ಗೀತೆಯ ಶ್ಲೋಕದಲ್ಲಿ ಶ್ರೀಕೃಷ್ಣನನ್ನು ಕೊಂಡಾಡು ವರು ಅವನು ವಸುದೇವ ದೇವಕಿಯರಿಗೆ ಪರಮಾನಂದವನ್ನು ಉಂಟು ಮಾಡಿದವನು ಒಬ್ಬ ಮಗುವಿನಿಂದ ಅಪ್ಪ ಅಮ್ಮ ಎನಿಸಿ ಕೊಂಡಾಗ ಆಗುವ ಆನಂದವನ್ನು ಹೆತ್ತವರೇ ಬಲ್ಲರು! ಆ ಮಗು ಸಾಧಾರಣ ಮಗುವಲ್ಲದೇ ಇಡೀ ಬ್ರಹ್ಮಾಂಡ ಒಡೆಯ ನಾದವನು , ಅವನಿಗೆ ಜನ್ಮ ನೀಡುವರು , ಅವನು ಮಾಡುವ ಲೀಲೆಗಳನ್ನು ನೋಡುವರು. 

 

ಧರ್ಮದ ರಕ್ಷಣೆಗೆ ನಿಂತ ಶ್ರೀ ಕೃಷ್ಣನು ತನ್ನ ಸೋದರ ಮಾವನಾ ದರೂ ಕಂಸನನ್ನು ಕೊಲ್ಲುವನು ಅವನ ಅವತಾರವೇ ಆಧರ್ಮವನ್ನು ನಿರ್ಧಾಕ್ಷಿಣ್ಯವಾಗಿ ಕೀಳಬೇಕು ಶ್ರೀಕೃಷ್ಣ ಈ ಕೆಲಸವನ್ನು ಮಾಡುವಾಗ ಇವನಿಗೆ ಸ್ವಲ್ಪವೂ ಅರಿವಿನ ಅಗತ್ಯ ಬೇಕಿಲ್ಲ ಇವನು ಜಗದ್ಗುರು

ಆದರೆ ನರ ಮನುಷ್ಯರಾದ ನಮಗೆ ಗೀತೆಯ ಬೆಳಕು ಬೇಕು ಆ ಬೆಳಕಿನ ಜೊತೆಗೆ ನಾವು ಬದುಕಬೇಕು... 

 

    🚩🚩ಜೈ ಶ್ರೀ ರಾಧಾಕೃಷ್ಣ🚩🚩

        🙏🙏ಶೇರ್ ಮಾಡಿ🙏🙏

Enjoyed this article? Stay informed by joining our newsletter!

Comments

You must be logged in to post a comment.

About Author