ವಿದ್ಯಾರ್ಥಿಗಳಿಗೆ ಕೌಶಲ್ಯಾವೃದ್ಧಿ ತರಬೇತಿಯಿಂದ ಹೆಚ್ಚು ಪ್ರಯೋಜನ

ತುಮಕೂರು:

 ಇತ್ತೀಚಿನ ದಿನಗಳಲ್ಲಿ ಸಂವಹನ ಎಂಬುದು ಅತ್ಯವಶ್ಯಕವಾಗಿದೆ. ಸಂವಹನವಿಲ್ಲದೆ ಯಾವುದೇ ಕ್ರಿಯೆ ನಡೆಯುವುದಿಲ್ಲ, ಪ್ರತಿಯೊಬ್ಬರೂ ಜೀವನದಲ್ಲಿ ಏನಾದರೂ ಸಾಕಾರಾತ್ಮಕ ಬೆಳವಣಿಗೆ ಬೆಳೆಸಿಕೊಳ್ಳಬೇಕು, ಆತ್ಮ ಸಂವಹನವನ್ನು ಮಾಡಿಕೊಳ್ಳುವುದರಿಂದ ತಮ್ಮಗೆ ತಾವೇ ಕೌಶಲ್ಯ ಜ್ಞಾನವನ್ನು ಪಡೆಯಲು ಅನುಕೂಲವಾಗುತ್ತದೆ. ಪ್ರತಿಯೊಬ್ಬರು ತಮ್ಮ ಭಾವನೆ, ವಿಚಾರ, ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಸಂವಹನ ಪ್ರಾರಂಭವಾಗುತ್ತದೆ ಎಂದು ಶ್ರೀದೇವಿ ಕಾಲೇಜಿನ ಆಡಳಿತಾಧಿಕಾರಿಯಾದ ಟಿ.ವಿ. ಬ್ರಹ್ಮದೇವಯ್ಯರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

 ಶ್ರೀದೇವಿ ಕೌಶಲ್ಯಾವೃದ್ಧಿ ಕೇಂದ್ರದ ತರಬೇತಿ ತರಗತಿಗಳ ಪ್ರಾರಂಭೋತ್ಸವವನ್ನು ಡಿ.10 ರಂದು ಬೆಳಿಗ್ಗೆ 10 ಗಂಟೆಗೆ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಮತ್ತು ರಾಷ್ಟಿçÃಯ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯ ಕರ್ನಾಟಕ, ಇವರುಗಳ ಅಡಿಯಲ್ಲಿ ಕೌಶಲ್ಯಾವೃದ್ಧಿ ಕೇಂದ್ರದಲ್ಲಿ ತರಬೇತಿ ತರಗತಿಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ಈ ಪ್ರಾರಂಭೋತ್ಸವದಲ್ಲಿ ಮಾತನಾಡುತ್ತಾ ಕೌಶಲ್ಯಾಭಿವೃದ್ಧಿ ತರಬೇತಿಗಳು ಸಮುದಾಯಗಳು ಅತ್ಯವಶ್ಯಕವಾಗಿರುತ್ತದೆ. ನುರಿತ ತಜ್ಞ ವ್ಯಕ್ತಿಗಳಿಂದ ಸೂಕ್ತ ಚಿಕಿತ್ಸೆ, ಸೂಕ್ತ ಸಮಯದಲ್ಲಿ ಒದಗಿಸಲಾಗುತ್ತದೆ. ಕೌಶಲ್ಯಾಭಿವೃದ್ಧಿಯಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಪ್ರಯೋಜನಕಾರಿಯಾಗಲಿ. ಇತಂಹ ದೃಷ್ಟಿಯಿಂದ ನಮ್ಮ ಸಂಸ್ಥೆಯ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಸರ್ಕಾರದ ಸಹಯೋಗದೊಂದಿಗೆ ಪ್ರಾರಂಭಿಸಲಾಗುತ್ತದೆ. ಈ ತರಬೇತಿಗಳು ಬೌದ್ಧಿಕ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಹೊಂದಿರುತ್ತದೆ ಅರ್ಥಪೂರ್ಣವಾಗಿ ತಿಳಿಸಿದರು.

 ಕಾರ್ಯಕ್ರಮವನ್ನು ಶ್ರೀದೇವಿ ಛಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್, ಶ್ರೀದೇವಿ ಮಾನವ ಸಂಪನ್ಮೂಲ ವಿಭಾಗದ ಎಂ.ಎಸ್. ಪಾಟೀಲ್‌ರವರು ತರಬೇತಿಯ ತರಗತಿಗೆ ಶುಭ ಹಾರೈಸಿದ್ದರು. 

 ಕಾರ್ಯಕ್ರಮದಲ್ಲಿ ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಸಿ. ಕೃಷ್ಣರವರು ಮಾತನಾಡುತ್ತಾ ಆರೋಗ್ಯ ಮತ್ತು ಸಮೃದ್ಧಿ ಭಾರತವನ್ನು ನಿರ್ಮಿಸಲು ಯುವಪೀಳಿಗೆ ಜವಾಬ್ದಾರಿಯಾಗಿರುತ್ತದೆ. ಸದರಿ ತರಬೇತಿಗೆ ಹಾಜರಾಗಿರುವ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸ್ವಾಗತಿಸುತ್ತಾ ಸಮುದಾಯದಲ್ಲಿ ಆರೋಗ್ಯ ಸೇವೆಗಳನ್ನು ನೀಡುವಲ್ಲಿ ನಮ್ಮ ಪಾತ್ರ ಹಾಗೂ ತುರ್ತು ಸಂಬAಧಗಳಲ್ಲಿ ಸಾಂಕ್ರಾಮಿಕ ರೋಗಗಳು ಬಂದಾಗ ಮುಂಜಾಗ್ರತಾ ಕ್ರಮಗಳನ್ನು ವಹಿಸಲು ನುರಿತ ನೈಪುಣ್ಯತೆ ಮತ್ತು ಕೌಶಲ್ಯವನ್ನು ಹೊಂದಿರುತ್ತದೆ. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಒಟ್ಟುಗೂಡಿ ಇತಂಹ ವಿನೂತನ ತರಬೇತಿಗಳನ್ನು ಆಯೋಜಿಸಲಾಗಿದೆ. ಶ್ರೀದೇವಿ ಸಂಸ್ಥೆಯ ವತಿಯಿಂದ ಕೆಲಸ ಪಡೆಯಲು ಬೇಕಾದ ಎಲ್ಲಾ ಕೌಶಲ್ಯಾಭಿವೃದ್ದಿ ತರಗತಿಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳ ಮೂಲಕ ತಮ್ಮ ವೃತ್ತಿಯನ್ನು ಆಯ್ದುಕೊಳ್ಳುವ ನೈಪುಣ್ಯತೆಯನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.

 ಶ್ರೀದೇವಿ ಸಂಸ್ಥೆಯ ಕೌಶಲ್ಯಾಭಿವೃದ್ಧಿಯ ಸಂಯೋಜಕರಾದ ಮಮತ. ಕೆ.ಕೆ.ರವರು ಮಾತನಾಡುತ್ತಾ ಜ್ಞಾನ, ಕೌಶಲ್ಯ, ಶಿಸ್ತು, ಯಾವ ರೀತಿಯ ಉತ್ತೇಜನ ಪಡೆಯುವುದು ಹೀಗೆ, ಪ್ರಾಮಾಣಿಕತೆ, ನೈಪುಣ್ಯತೆ, ಯಾವ ರೀತಿಯಲ್ಲಿ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಜೀವನದಲ್ಲಿ ದೊಡ್ಡ ದೊಡ್ಡ ಗುರಿ ಮತ್ತು ಕನಸ್ಸುಗಳನ್ನು ಇಟ್ಟುಕೊಂಡು ಮುಂದೆ ನಡೆಯಬೇಕು ಎಂದು ಅರ್ಥಪೂರ್ಣವಾಗಿ ವಿವರಿಸಿದರು. ಕೌಶಾಲಾಭಿವೃದ್ಧಿಯಲ್ಲಿ ಅತಿಮುಖ್ಯವಾಗಿ ಮೂರು ರೀತಿಯಲ್ಲಿ ಹೊಂದಿರುತ್ತದೆ ಯಾವುದೆಂದರೆ ಇಂಜಿನಿಯರಿAಗ್ ಕ್ಷೇತ್ರ, ಆರೋಗ್ಯ ಕ್ಷೇತ್ರ, ಸಾಮಾನ್ಯ ಕ್ಷೇತ್ರ ಈ ರೀತಿಯಲ್ಲಿ ಹೊಂದಿರುತ್ತದೆ. ಈ ಕೌಶಲ್ಯಾಭಿವೃದ್ಧಿ ವಿದ್ಯಾರ್ಥಿಗಳಿಗೆ ಅಲ್ಲದೇ ಸಾರ್ವಜನಿಕರು ಸಹ ಈ ಕೌಶಲ್ಯಾಭಿವೃದ್ಧಿ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

 ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶ್ರೀರಮಣ ಮಹರ್ಷಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದಯಾನಂದ್, ಶ್ರೀದೇವಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಆರ್.ಕೆ.ಮುನಿಸ್ವಾಮಿ, ಶ್ರೀದೇವಿ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲರಾದ ಮುಭಾರಕ್, ಶ್ರೀದೇವಿ ವಿದ್ಯಾಮಂದಿರದ ಮುಖ್ಯಶಿಕ್ಷಕರಾದ ಆರ್.ನಾರಾಯಣಪ್ಪ, ಶ್ರೀದೇವಿ ಸಂಸ್ಥೆಯ ಬಯೋಮೆಡಿಕಲ್ ಇಂಜಿನಿಯರ್ ಕಾಂತರಾಜು, ಶ್ರೀದೇವಿ ಐ.ಟಿ.ಐ. ವಿಭಾಗ ಗಿರೀಶ್, ವಿಜಯ್, ಲಕ್ಷಿö್ಮನಾರಾಯಣ್ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author