ಶ್ರೀರಂಗಂ ದೇವಾಲಯದ ಆವರಣದಲ್ಲಿದೆ ವೈಷ್ಣವ ತತ್ವಜ್ಞಾನಿಯ 1000 ವರ್ಷದ ಹಳೆಯ ದೇಹ..!

 ಶ್ರೀರಂಗಂ ದೇವಾಲಯದ ಆವರಣದಲ್ಲಿದೆ ವೈಷ್ಣವ ತತ್ವಜ್ಞಾನಿಯ 1000 ವರ್ಷದ ಹಳೆಯ ದೇಹ..!

srirangam temple

Featured Image Credits : Pinterest

ಭಾರತದಲ್ಲಿರುವಷ್ಟು ದೇವಾಲಯಗಳು ಬಹುಶಃ ಬೇರೆ ಯಾವ ದೇಶದಲ್ಲಾದರೂ ನೋಡಲು ಸಿಗುವುದು ಕಷ್ಟ. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಅಸಂಖ್ಯಾತ ದೇವಾಲಯಗಳಿವೆ. ಅದರಲ್ಲೂ ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳು ಇದೆ ಎಂದೇ ಹೇಳಬಹುದು. ಪ್ರಪಂಚದಲ್ಲಿಯೇ ಸಾಂಪ್ರದಾಯಿಕ ಮಟ್ಟದಲ್ಲಿ ಗುರುತಿಸಿಕೊಂಡ ಜಾಗಗಳಲ್ಲಿ ತಮಿಳುನಾಡು ಅಗ್ರಸ್ಥಾನವನ್ನು ಪಡೆದಿದೆ. ತಮಿಳುನಾಡಿನ ದೇವಾಲಯಗಳ ವಾಸ್ತುಶಿಲ್ಪ ಶೈಲಿಯು ಹಲವಾರು ವಾಸ್ತುಶಿಲ್ಪ ಸಂಶೋಧಕರ ಹಾಗೂ ವಾಸ್ತುಶಿಲ್ಪ ವಿದ್ಯಾರ್ಥಿಗಳ ಅಧ್ಯಯನಕ್ಕೆ ತವರುಮನೆ ಎಂದೇ ಹೇಳಬಹುದು.

ಅಂಥಹದ್ದೇ ದೇವಾಲಯಗಳಲ್ಲಿ ಒಂದು ತಮಿಳುನಾಡಿನ ರಂಗನಾಥ ಸ್ವಾಮಿ ದೇವಾಲಯ. ವಿಷ್ಣುವಿನ ವಿಶೇಷವಾದ ದೈವ ಸ್ವರೂಪವೇ ರಂಗನಾಥ ಸ್ವಾಮಿ. ಶ್ರೀರಂಗನಾಥಸ್ವಾಮಿಯ ಅವತಾರ ವಿಶಿಷ್ಟವಾದುದಾಗಿದೆ. ಪೌರಾಣಿಕವಾಗಿ ರಂಗನಾಥನು ಶಯನಾವಸ್ಥೆಯಲ್ಲಿದ್ದಾಗ ಶಿರ, ನಾಭಿ ಹಾಗೂ ಪಾದಗಳ ಸಂಕೇತವಾಗಿ ಆದಿ, ಮಧ್ಯ ಹಾಗೂ ಅಂತ್ಯ ರಂಗಗಳಾಗಿ ವಿಂಗಡಿಸಲ್ಪಟ್ಟಿದ್ದು, ಆಯಾ ಸ್ಥಳಗಳಲ್ಲಿ ಶ್ರೀರಂಗನಾಥಸ್ವಾಮಿಯ ದೇವಾಲಯಗಳಿವೆ. ಮೊದಲ ಎರಡು ದೇವಾಲಯಗಳು ಕರ್ನಾಟಕದಲ್ಲಿದ್ದರೆ ಕೊನೆಯ ದೇವಸ್ಥಾನವು ಶ್ರೀರಂಗಂನಲ್ಲಿದ್ದು, ವೈಷ್ಣವರ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ..

ಇದನ್ನು ಓದಿ : ತಮಿಳುನಾಡಿನಲ್ಲಿದೆ ಮಾನವ ದೇಹದ ಆಕಾರದ ಚಿದಂಬರಂ ನಟರಾಜ ದೇವಾಲಯ

ಶ್ರೀರಂಗಂ ಒಂದು ಕಡೆಯಿಂದ ಕಾವೇರಿ ನದಿಯಿಂದ ಸುತ್ತುವರೆದಿದ್ದರೆ, ಇನ್ನೊಂದು ಕಡೆಯಿಂದ ಕಾವೇರಿಯ ಉಪನದಿಯಾದ ಕೊಳ್ಳಿಡಂನಿಂದ ಸುತ್ತುವರೆದಿದೆ. ದೇಶದ ವಿವಿಧ ರಾಜ್ಯಗಳಲ್ಲಿ ರಂಗನಾಥ ಸ್ವಾಮಿಯ ಹೆಸರಲ್ಲಿ ಹಲವು ದೇವಾಲಯಗಳು ನಿರ್ಮಾಣವಾಗಿವೆ. ಆದರೆ ಶ್ರೀರಂಗಂ ದೇವಾಲಯ ಅದೆಲ್ಲಕ್ಕಿಂತಲೂ ವಿಶಿಷ್ಟ. ಯಾಕೆಂದರೆ ಈ ದೇವಾಲಯದಲ್ಲಿ ಬೇರೆ ಯಾವ ದೇವಾಲಯದಲ್ಲೂ ಇರದ ವಿಶಿಷ್ಟತೆಯೊಂದಿದೆ. ಆ ದೇವಾಲಯ ಇರುವುದು ಎಲ್ಲಿ. ಅಲ್ಲಿರುವ ವಿಶೇಷತೆಯೇನು ಎಂದು ತಿಳಿಯುವ ಕುತೂಹಲ ನಿಮಗೂ ಇದೆ ಅಲ್ವಾ..

srirangam panchangam

Image Credits : TTravellog

ತಮಿಳುನಾಡಿನ ತಿರುಚ್ಚಿಯ ಶ್ರೀರಂಗಂನಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯ ತನ್ನ ವಿಶಿಷ್ಟತೆಯಿಂದಲೇ ಎಲ್ಲೆಡೆ ಹೆಸರುವಾಸಿಯಾಗಿದೆ. ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಷ್ಣುವಿನ ಪ್ರತಿರೂಪವಾದ ರಂಗನಾಥನಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ದೇವಸ್ಥಾನವು ದ್ರಾವಿಡ ಶೈಲಿಯ ವಾಸ್ತು ರಚನೆಯಲ್ಲಿ ನಿರ್ಮಾಣವಾಗಿದೆ. ದಕ್ಷಿಣ ಭಾರತದ ವೈಷ್ಣವ ದೇವಸ್ಥಾನಗಳಲ್ಲಿಯೇ ಇದು ಬಹಳ ಪ್ರಸಿದ್ದವಾಗಿದೆ.

ಶ್ರೀರಂಗಂ ದೇಗುಲವು ಮಹಾವಿಷ್ಣು ದೇವರ ಎಂಟು ಉದ್ಭವ ಕ್ಷೇತ್ರಗಳಲ್ಲಿ ಒಂದು. ಇದನ್ನು ಮಹತ್ತರವಾದ 108 ಮಹಾವಿಷ್ಣು ದೇವಾಲಯಗಳ ಪೈಕಿ ಮೊಟ್ಟಮೊದಲ ದೇವಾಲಯವೆಂದು ಪರಿಗಣಿಸಲಾಗಿದೆ. ಈ ಕ್ಷೇತ್ರವನ್ನು ತಿರುವರಂಗ ತಿರುಪತಿ, ಪೆರಿಯಕೋಯಿಲ್, ಭೂಲೋಕ ವೈಕುಂಠ, ಭೋಗಮಂಟಪ ಎಂಬ ಹೆಸರುಗಳಿಂಗಲೂ ಕರೆಯಲಾಗುತ್ತದೆ. ಕಾವೇರಿ ಮತ್ತು ಕೊಲೆರೂನ್ ಅವಳಿ ನದಿಗಳು ರಚಿಸಿರುವ ಪರ್ಯಾಯ ದ್ವೀಪವೇ ಈ ಶ್ರೀರಂಗನ ನೆಲೆ. ಈ ಕ್ಷೇತ್ರವು ವಿಸ್ತಾರವಾಗಿದ್ದು, ದೇವಾಲಯದ ಸಂಕೀರ್ಣವು 156 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಇದರಲ್ಲಿ 7 ಪ್ರಾಕಾರಗಳಿವೆ. ಎಲ್ಲ ಪ್ರಾಕಾರಗಳಲ್ಲೂ 21 ಅತ್ಯದ್ಭುತವಾದ ಗೋಪುರಗಳಿವೆ.

ಇದನ್ನು ಓದಿ : ಸತಿ ದೇವಿಯ ಮೂರು ಕಣ್ಣುಗಳು ಬಿದ್ದ ಮಹಾಕ್ಷೇತ್ರವಿದು!

ದೇವಾಲಯದಲ್ಲಿ ಕಂಬಗಳಲ್ಲಿರುವ ಅದ್ಭುತ ರಚನೆಗಳು ಎಂಥವರನ್ನೂ ಸೆಳೆಯುವಂತಿದೆ. ಒಂದು ಕಂಬವು ಬೇಟೆಯಾಡುವ ದೃಶ್ಯವನ್ನು ಚಿತ್ರಿಸುತ್ತದೆ, ಅದರಲ್ಲಿ ಹುಲಿಯ ಮೇಲಿನ ಪಟ್ಟಿಗಳ ವಿವರಗಳು, ಕತ್ತಿಯು ಮಾಂಸದ ಮೂಲಕ ಚುಚ್ಚುವುದು ಮತ್ತು ಹುಲಿಯ ಇನ್ನೊಂದು ಬದಿಯಿಂದ ಹೊರಬರುವುದು ಮೊದಲಾದ ಚಿತ್ರಣವಿದೆ. ಅಲ್ಲದೆ ಕುದುರೆಯ ಹಿಂಭಾಗದಲ್ಲಿರುವ ಅಲಂಕಾರಗಳು, ಕುದುರೆಯ ಹಲ್ಲುಗಳು ಮತ್ತು ಬಾಲ ಕೂದಲನ್ನು ಸಹ ಕಂಬದಲ್ಲಿ ವಿವರಿಸಲಾಗಿದೆ. ಮತ್ತು ಸ್ತಂಭದಲ್ಲಿ ಸೈನಿಕನ ಹೋರಾಟದ ಚಿತ್ರಣವಿದೆ.


ಶ್ರೀರಂಗಂನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯವು ಸಾವಿರಾರು ವರ್ಷಗಳಿಗೂ ಐತಿಹಾಸಿಕ ಗತವೈಭವವನ್ನು ಸಾರುವಂತಿದೆ. ಪಲ್ಲವ ವಂಶದ ಆಡಳಿತವು ದಕ್ಷಿಣ ಭಾರತದಲ್ಲಿ ಧಾರ್ಮಿಕ ವಿಸ್ತರಣೆಗೆ ನೀಡಿದ ಪ್ರೋತ್ಸಾಹವು ಆರ್ಯ ಸಂಸ್ಕೃತಿಗೆ ಕಾವೇರಿ ನದಿ ತೀರದಲ್ಲಿ ಘನವಾದ ಧಾರ್ಮಿಕ ತಳಹದಿಯನ್ನು ಹಾಕಿಕೊಟ್ಟಿತು ಎಂದು ಹೇಳಬಹುದು. ಚೋಳವಂಶದ ಅರಸರು ಕೋರಮಂಡಲ ತೀರವನ್ನು ಸುಮಾರು ಮುನ್ನೂರು ವರ್ಷಗಳ ಕಾಲ ಆಳಿದರಲ್ಲದೇ ಹಿಂದೂ ಸಂಸ್ಕೃತಿಯ ಏಳಿಗೆಗೂ ಮಹತ್ತರವಾದ ಕೊಡುಗೆಯನ್ನು ಸಲ್ಲಿಸಿದರು.

ಪೌರಾಣಿಕ ಹಿನ್ನಲೆಯೇನು..?

Image Credits : The British Library

ಪುರಾಣದ ಪ್ರಕಾರ ಶ್ರೀರಂಗಂನ ರಂಗನಾಥಸ್ವಾಮಿಯ ಕುರಿತಂತೆ ಕುತೂಹಲಕರವಾದ ಹಿನ್ನಲೆಯೊಂದಿದೆ. ಹಿಂದೆ ರಾಮನು ಸೀತೆಯನ್ನು ಗೆದ್ದು ಅಯೋಧ್ಯೆಗೆ ಮರಳಿ ಬಂದು ರಾಜ್ಯಭಾರ ಮಾಡುತ್ತಿದ್ದಾಗ ಒಂದು ದಿನ ವಿಷ್ಣುವಿನ ಮೂರ್ತಿಗೆ ಪೂಜೆ ಸಲ್ಲಿಸಿ ಅದನ್ನು ಆಗ ಲಂಕಾ ದೊರೆಯಾಗಿದ್ದ ವಿಭೀಷಣನಿಗೆ ಅರ್ಪಿಸಿದ. ಲಂಕೆಯನ್ನು ತಲುಪುವ ವರೆಗೂ ಆ ಮೂರ್ತಿಯನ್ನು ಎಲ್ಲಿಯೂ ಇಡಕೂಡದೆಂದು ಆಜ್ಞಾಪಿಸಿದನು.

ಈ ರೀತಿಯಾಗಿ ವಿಭೀಷಣನು ಆ ರಂಗನ ವಿಗ್ರಹವನ್ನು ತೆಗೆದುಕೊಂಡು ಹೋಗುವಾಗ ಕಾವೇರಿ ನದಿ ಹರಿದ ಈಗಿನ ಶ್ರೀರಂಗಂನಲ್ಲಿ ಬೀಡು ಬಿಟ್ಟು ಸ್ನಾನಾದಿಗಳನ್ನು ಮುಗಿಸಿಕೊಳ್ಳುತ್ತೇನೆಂದು ಮೂರ್ತಿಯನ್ನು ಅಲ್ಲಿಯೇ ಇರಿಸಿದ. ತನ್ನ ಕಾರ್ಯಗಳನ್ನು ಪೂರೈಸಿದ ನಂತರ ಲಂಕೆಗೆ ಮರಳಲು ಸಿದ್ಧವಾದಾಗ ಮೂರ್ತಿಯನ್ನು ಕಿಂಚಿತ್ತೂ ಎತ್ತಲಾಗಲಿಲ್ಲ.

ಇದನ್ನು ಓದಿ : ನಮ್ಮ ಮೈಸೂರೂ ಒಂದು ಶಕ್ತಿ ಪೀಠ ಗೊತ್ತಾ? ಸತಿ ದೇವಿಯು ಚಾಮುಂಡೇಶ್ವರಿ ಆಗಿದ್ದು ಹೇಗೆ? 

ಕೊನೆಗೆ ಭಕ್ತಿಯಿಂದ ವಿಷ್ಣುವನ್ನು ಬೇಡಿಕೊಂಡಾಗ ವಿಷ್ಣು ಪ್ರಸನ್ನನಾಗಿ ತನಗೆ ಈ ಕ್ಷೇತ್ರ ಇಷ್ಟವಾಗಿದ್ದು, ತಾನು ಇಲ್ಲಿಯೆ ನೆಲೆಸುವುದಾಗಿ ಹೇಳುತ್ತಾನೆ. ದಕ್ಷಿಣಕ್ಕೆ ಮುಖ ಮಾಡಿ ನಿನ್ನನ್ನು ಸದಾ ಆಶೀರ್ವದಿಸುವುದಾಗಿ ತಿಳಿಸುತ್ತಾನೆ. ಹೀಗಾಗಿ ಶ್ರೀರಂಗಂ ರಂಗನಾಥಸ್ವಾಮಿಯ ವಿಗ್ರಹವು ಶ್ರೀಲಂಕಾ ಇರುವ ದಿಕ್ಕಿಗೆ ಅಂದರೆ ದಕ್ಷಿಣಕ್ಕೆ ಮುಖ ಮಾಡಿ ನಿಂತಿದೆ..

ದೇವಾಲಯದಲ್ಲಿದೆ 1000 ವರ್ಷಗಳಷ್ಟು ಹಳೆಯ ದೇಹ..!

srirangam mummyfied

Image Credits : Tamil Brahmins Community

ಹೌದು, ಅಚ್ಚರಿ ಎನಿಸಿದರೂ ಇದು ನಿಜ. ಶ್ರೀ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ 1000 ವರ್ಷಗಳಷ್ಟು ಹಳೆಯದಾದ ದೇಹವೊಂದನ್ನು ಸಂರಕ್ಷಿಸಲಾಗಿದೆ. ಇಲ್ಲಿನ ಉದಯಾರ್ ದೇವಾಲಯದ ಆವರಣದಲ್ಲಿ ಶ್ರೀ ರಾಮಾನುಜಾರ್ ಅವರ ದೇಹವನ್ನು ಸಂರಕ್ಷಿಸಡಲಾಗಿದೆ. ವೈಷ್ಣವ ಧ್ವಜವನ್ನು ಹಿಡಿದು ಕುಳಿತ ಭಂಗಿಯಲ್ಲಿ ಈ ಮೂರ್ತಿಯಿದೆ. ಇದು ದೇವಾಲಯದ ಮತ್ತೊಂದು ಅಚ್ಚರಿ ಮತ್ತು ಅದ್ಭುತವಾಗಿದೆ. ರಾಮಾನುಜಾರ್ ಹೆಸರಾಂತ ವೈಷ್ಣವ ಮತ್ತು ತತ್ವಜ್ಞಾನಿಯಾಗಿದ್ದರು.

ದೇಹವು ನೈಸರ್ಗಿಕವಾಗಿ ಅಸ್ಥಿಪಂಜರವಾಗಿದ್ದು. ಇದಕ್ಕೆ ಕರ್ಪೂರ ಮತ್ತು ಕೇಸರಿ ಪದರಗಳಿಂದ ಲೇಪಿಸಲಾಗಿದೆ. ಲೇಪನವನ್ನು ವರ್ಷಕ್ಕೆ ಎರಡು ಬಾರಿ ಸ್ವಚ್ಚಗೊಳಿಸಿ ಮತ್ತೆ ಹಚ್ಚಲಾಗುತ್ತದೆ. ಮತ್ತು ಇದಕ್ಕೆ ಯಾವುದೇ ರೀತಿಯಲ್ಲಿ ಅಭಿಷೇಕ ಮಾಡಲಾಗುವುದಿಲ್ಲ ಎಂದು ತಿಳಿದುಬಂದಿದೆ. ಅದೇನೆ ಇರ್ಲಿ, ಈ ದೇವಾಲಯಕ್ಕೆ ಬರುವ ಮಂದಿ ವರ್ಷಗಳಿಂದ ಕಾಪಾಡಿಕೊಂಡು ಬರುತ್ತಿರುವ ಈ ದೇಹವನ್ನು ನೋಡಿಯೇ ಅಚ್ಚರಿಗೊಳ್ಳುತ್ತಿದ್ದಾರೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author