ಗೊಂದಲದೊಳಗೆ ಸ್ಥಿತ ಪ್ರಜ್ಞತೆ.......

ಸ್ಥಳೀಯವಾಗಿ ಧರ್ಮ ಸಂಘರ್ಷ, 

ರಾಷ್ಟ್ರದಲ್ಲಿ ಬೆಲೆ ಏರಿಕೆ, 

ಅಂತರರಾಷ್ಟ್ರೀಯವಾಗಿ  ಮೂರನೇ ಮಹಾಯುದ್ಧದ ಕಾರ್ಮೋಡ, 

ವಿಶ್ವದಾದ್ಯಂತ ಕೊರೋನಾ ನಾಲ್ಕನೆಯ ಅಲೆಯ ಭೀತಿ, 

ಮನಸ್ಸಿನಲ್ಲಿ  ಮಾತ್ರ

ಸ್ಥಿತ ಪ್ರಜ್ಞೆಯ ಹುಡುಕಾಟ.......

 

ಪತ್ರಿಕೆಗಳಲ್ಲಿ........

 

ಮೊದಲನೆಯ ಪುಟ ರಾಜಕೀಯ ಕೆಸರಾಟ - ಭ್ರಷ್ಟಾಚಾರದ ಹಗರಣಗಳು,....

 

ಎರಡನೆಯ ಪುಟ ಕೊಲೆ ಅತ್ಯಾಚಾರ ವಂಚನೆ ಮೋಸ ಕಳ್ಳತನ ಆತ್ಮಹತ್ಯೆ,.....

 

ಮೂರನೆಯ ಪುಟ ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳು ಆಕ್ರೋಶ, ದ್ವೇಷ, ಸೌಹಾರ್ಧ, ದಾನ ಧರ್ಮಗಳು, ಉಚಿತ ಶಿಬಿರಗಳು.....

 

ನಾಲ್ಕನೆಯ ಪುಟ ಯುದ್ಧದ ಸಾವು ನೋವುಗಳು, ಬಲಿಷ್ಠ ನಾಯಕರ ಯುದ್ದೋತ್ಸಾಹಿ ಹೇಳಿಕೆಗಳು, ಒಬ್ಬರಿಗೆ ಇನ್ನೊಬ್ಬರ ಧಮಕಿಗಳು,......

 

ಐದನೆಯ ಪುಟದಲ್ಲಿ ಕೆಲವು ಶ್ರೀಮಂತ ಕಂಪನಿಗಳ ಶರವೇಗದ ಲಾಭಗಳಿಕೆ, ಇನ್ನೊಂದಿಷ್ಟು ನಿರುದ್ಯೋಗ, ಹಣದುಬ್ಬರ ಹೆಚ್ಚಳ, ಬೆಲೆ ಏರಿಕೆ........

 

ಆರನೆಯ ಪುಟದಲ್ಲಿ ಮನರಂಜನೆ ಆರ್‌ ಆರ್ ಆರ್, ಜೇಮ್ಸ್, ಭೀಸ್ಟ್, ಕೆಜಿಎಫ್ ಸಿನಿಮಾಗಳ ಹಣದ ಸುರಿಮಳೆ.......

 

ಏಳನೆಯ ಪುಟದಲ್ಲಿ ಒಂದಷ್ಟು ಕ್ರೀಡಾ ಚಟುವಟಿಕೆಗಳು......

 

ಇನ್ನು ಟಿವಿಯಲ್ಲಿ ಇದರ ಪಡಿಯಚ್ಚು. ಜೊತೆಗೊಂದಿಷ್ಟು ಮಸಾಲೆ,......

 

ಇಂತಹ ಸನ್ನಿವೇಶದಲ್ಲಿ ಏನನ್ನಾದರೂ ಮಾಡುವ ತವಕ. ಆದರೆ ಮಾಡಲಾಗುತ್ತಿಲ್ಲ........

 

ಬಡತನವನ್ನು ಆಕರ್ಷಕವಾಗಿ ಕಣ್ಣೀರಾಗುವಂತೆ  ವರ್ಣಿಸಬಲ್ಲೆ,........

 

ಭ್ರಷ್ಟತೆಯನ್ನು ಕೋಪ ಉಕ್ಕುವಂತೆ ಚಿತ್ರಿಸಬಲ್ಲೆ,.......

 

ದೌರ್ಜನ್ಯಗಳನ್ನು  ಕೆಂಡಾಮಂಡಲವಾಗುವಂತೆ ಬರೆಯಬಲ್ಲೆ,.......

 

ವೇಶ್ಯಾವಾಟಿಕೆಯನ್ನು ಮನಮಿಡಿಯುವಂತೆ ಹೇಳಬಲ್ಲೆ,......

 

ರೈತರ ಕಷ್ಟ ಕೋಟಲೆಗಳನ್ನು ನಿಮ್ಮ ಮನದಾಳಕ್ಕೆ ಮುಟ್ಟುವಂತೆ ಸೃಷ್ಟಿಸಬಲ್ಲೆ,.......

 

ಬಾಲಕಾರ್ಮಿಕರ ಸ್ಥಿತಿಯನ್ನು ಮನಕರಗುವಂತೆ ನಿರೂಪಿಸಬಲ್ಲೆ,.......

 

ಧರ್ಮಗಳನ್ನು ಕಟು ಮಾತುಗಳಲ್ಲಿ ಖಂಡಿಸಬಲ್ಲೆ,......

 

ಜಾತಿಗಳ ಅಸ್ತಿತ್ವವನ್ನು ಅಲ್ಲಗಳೆಯಬಲ್ಲೆ,.......

 

ಬುದ್ದ, ಬಸವ, ಗಾಂಧಿ, ವಿವೇಕಾನಂದ, ಅಂಬೇಡ್ಕರ್ ಅವರುಗಳನ್ನು ದೇವರಂತೆ ಚಿತ್ರಿಸಬಲ್ಲೆ,......

 

ಪ್ರೀತಿ, ಕರುಣೆ, ಸಮಾನತೆ, ಮಾನವೀಯತೆಯ ಶ್ರೇಷ್ಠತೆಯನ್ನು ಸಾರಬಲ್ಲೆ,......

 

ನಿಮ್ಮನ್ನು ಮೆಚ್ಚಿಸುವ ಸಿನಿಮಾ ನಿರ್ಮಿಸಬಲ್ಲೆ,......

 

ನಿಮ್ಮನ್ನು ರಂಜಿಸುವ ಲೇಖನ ಬರೆಯಬಲ್ಲೆ,......

 

ನಿಮ್ಮನ್ನು ನಗಿಸುವ ಸಾಹಿತ್ಯ ರಚಿಸಬಲ್ಲೆ,.......

 

ನಿಮ್ಮನ್ನು ಅಳಿಸುವ ಕಥೆ, ಕಾದಂಬರಿ ಸೃಷ್ಟಿಸಬಲ್ಲೆ,......

 

ನಿಮ್ಮನ್ನು ಭಕ್ತಿಯ ಲೋಕದಲ್ಲಿ ತೇಲಿಸಬಲ್ಲೆ,......

 

ನಿಮ್ಮನ್ನು ಮೌಡ್ಯದ ಆಳಕ್ಕೆ ಸೆಳೆಯಬಲ್ಲೆ,......

 

ನಿಮ್ಮನ್ನು ಮಹಾನ್ ಬುದ್ದಿವಂತರೆಂದು ನಂಬಿಸಬಲ್ಲೆ,......

 

ನಿಮ್ಮನ್ನು ಮಾತಿನ ಮೋಡಿಯಲ್ಲಿ ಬೀಳಿಸಬಲ್ಲೆ,....

 

ಹೌದು, 

ಇದನ್ನು ಕೇವಲ ಲೇಖನಿಯಿಂದ ಮಾಡಬಲ್ಲೆ,......

 

ಆದರೆ,.......,

 

ನಿಮ್ಮನ್ನು ನಾಗರೀಕರನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ,.....

 

ನಿಮ್ಮನ್ನು ನಿಜವಾದ ಮನುಷ್ಯರನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ,......

 

ನಿಮ್ಮ ಕಷ್ಟ ಕೋಟಲೆಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ,.......

 

ನನಗೂ ನನ್ನಂತೆ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿಲ್ಲ,.......

 

ಇದೆಲ್ಲಾ ಹೇಳಿದ ನಾನೂ ನಿಮ್ಮೊಳಗೊಬ್ಬನೆ......,

 

ನಿಮ್ಮಂತೆ ನನ್ನ ಮನಸ್ಸೂ ಬದಲಾವಣೆಗಾಗಿ ತುಡಿಯುತ್ತಿದೆ......,

 

ನಿಮ್ಮೊಂದಿಗೆ ನಾನೂ ಆ ನಿರೀಕ್ಷೆಯಲ್ಲಿ ...........

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ

ಮನಸ್ಸುಗಳ ಅಂತರಂಗದ ಚಳವಳಿ.

ವಿವೇಕಾನಂದ. ಹೆಚ್.ಕೆ.

9844013068........

 

Featured Image Source : managingip.com

Enjoyed this article? Stay informed by joining our newsletter!

Comments

You must be logged in to post a comment.

Related Articles
About Author