ಏಕಶಿಲೆಯಲ್ಲಿ ಕೆತ್ತಿರುವ 15 ಅಡಿ ಎತ್ತರದ ನಂದಿ ವಿಗ್ರಹವಿರುವ ಬುಲ್ ಟೆಂಪಲ್..!

bull temple bangaloreImage Source : Makemytrip

ಬೆಂಗಳೂರು ಎಲ್ಲರಿಗೂ ಗೊತ್ತು..ಐಟಿ-ಬಿಟಿ ಸಿಟಿ, ಗಾರ್ಡನ್ ಸಿಟಿ, ಕಾಂಕ್ರೀಟ್ ನಗರ ಎಂದೆಲ್ಲಾ ಕರೆಸಿಕೊಳ್ಳುವ ಮಹಾನಗರ. ಆದರೆ ಕಟ್ಟಡಗಳಿಂದಲೇ ತುಂಬಿರುವ ನಗರವಾಗಿದ್ದರೂ ಇಲ್ಲಿ ದೇವಾಲಯಗಳಿಗೇನೂ ಬರವಿಲ್ಲ. ಇಂದಿನ ಬೆಂಗಳೂರು 500 ವರ್ಷಗಳ ಹಿಂದೆ ಸಾಮಾನ್ಯ ಹಳ್ಳಿಯಾಗಿತ್ತು. ಹೀಗಾಗಿ ಇಲ್ಲಿನ ಹಲವು ಏರಿಯಾಗಳಲ್ಲಿ ಇಂದಿಗೂ ಹಳ್ಳಿಯ ಸೊಗಡಿದೆ. ಸಾಂಪ್ರದಾಯಿಕ ಶೈಲಿಯಲ್ಲಿರುವ ನಿರ್ಮಾಣವಾಗಿರುವ ದೇವಸ್ಥಾನಗಳಿವೆ. ಹಲವು ಪ್ರಸಿದ್ಧ ದೇವಾಲಯಗಳು ಬೆಂಗಳೂರಿನ ಹಲವು ಪ್ರದೇಶಗಳಲ್ಲಿವೆ. ದಿನವೊಂದಕ್ಕೆ ವಿವಿಧ ರಾಜ್ಯಗಳಿಂದ ಸಾವಿರಾರು ಮಂದಿಗೆ ಇಲ್ಲಿಗೆ ಭೇಟಿ ನೀಡುತ್ತಾರೆ.

ಬೆಂಗಳೂರಿನಲ್ಲಿರುವ ಧಾರ್ಮಿಕ ತಾಣಗಳಲ್ಲಿ ಬಸವನಗುಡಿಯಲ್ಲಿರುವ ದೊಡ್ಡ ಬಸವನಗುಡಿ ಮತ್ತು ದೊಡ್ಡ ಗಣಪತಿ ದೇವಸ್ಥಾನಗಳು ವಿಶೇಷ ಸ್ಥಾನ ಗಳಿಸಿವೆ. ನಗರದ ಮೂಲ ಕುರುಹುಗಳನ್ನು ಈ ದೇವಾಲಯಗಳು ಪ್ರತಿನಿಧಿಸುತ್ತವೆ. ಕಡಲೇಕಾಯಿ ಪರಿಷೆ, ಗಣೇಶೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ನೆಲೆಯಾಗಿರುವ ಬಸವನಗುಡಿ ಪ್ರದೇಶದ ಮೂಲ ಹೆಸರು ಸುಂಕೇನಹಳ್ಳಿ. ಈಗಲೂ ದೇವಸ್ಥಾನವಿರುವ ಈ ಪ್ರದೇಶವನ್ನು ಸುಂಕೇನಹಳ್ಳಿಯೆಂದೇ ಕರೆಯಲಾಗುತ್ತದೆ.

ಇದನ್ನು ಓದಿ : ಉದ್ಭವ ಲಿಂಗದ ದೇಗುಲ ಕಾಡು ಮಲ್ಲೇಶ್ವರ ದೇವಾಲಯ

ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನ

Dodda Ganapathi temple basavangudiImage Source : Travel India Travel

ದೊಡ್ಡ ಗಣೇಶನ ಗುಡಿ ಬೆಂಗಳೂರಿನ ಬಸವನಗುಡಿಯಲ್ಲಿರುವ ದೇವಸ್ಥಾನ. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾದ ಈ ಪ್ರದೇಶ ಧಾರ್ಮಿಕತೆಯ ನೆಲೆವೀಡಾಗಿದೆ. ಬೆಂಗಳೂರಿನಲ್ಲಿರುವ ಹಲವು ಪುರಾತನ ದೇವಾಲಯಗಳ ಪೈಕಿ ಬಸವನಗುಡಿಯ ದೊಡ್ಡ ಗಣೇಶನ ದೇವಾಲಯ ಪ್ರಮುಖವಾದದ್ದು. ಈ ದೇವಾಲಯದ ಗರ್ಭಗುಡಿಯಲ್ಲಿ ಏಕಶಿಲೆಯಲ್ಲಿ ನಿರ್ಮಿಸಿದ 8 ಅಡಿ ಎತ್ತರ ಹಾಗೂ 12 ಅಡಿ ಅಗಲ ಇರುವ ಸುಂದರವಾದ ಗಣೇಶನ ವಿಗ್ರಹವಿದೆ. ಈ ಗಣಪ ಸ್ವಯಂಭೂ, ಉದ್ಭವ ಗಣಪ ಎಂದು ಸಹ ಹೇಳುತ್ತಾರೆ. ಬ್ಯೂಗಲ್ ರಾಕ್ ಉದ್ಯಾನಕ್ಕೆ ಹೊಂದಿಕೊಂಡಿರುವ ವಿಶಾಲ ಪ್ರದೇಶದಲ್ಲಿ ದೊಡ್ಡ ಗಣೇಶನ ಸುಂದರ ದೇವಾಲಯವಿದೆ.

450 ವರ್ಷಗಳಷ್ಟು ಪುರಾತನ ದೇವಾಲಯ

Bull temple Bangalore timingImage Source : Gosahin

ಬುಲ್ ಟೆಂಪಲ್ ಅಥವಾ ದೊಡ್ಡ ಬಸವನಗುಡಿ ದೇವಾಲಯವು ದಕ್ಷಿಣ ಬೆಂಗಳೂರಿನ ಎನ್.ಆರ್.ಕಾಲೋನಿ, ಬಸವನಗುಡಿ ಪ್ರದೇಶದಲ್ಲಿದೆ. ಗಣಪತಿ ಹಾಗೂ ನಂದಿಯು ಇಲ್ಲಿಯ ಮುಖ್ಯ ದೇವರು. ಹಿಂದೂ ಪೌರಾಣಿಕ ಪ್ರಕಾರ ನಂದಿಯು ಶಿವನ ವಾಹನನಾಗಿದ್ದು ಅವನ ಹತ್ತಿರದ ಭಕ್ತ. ಬಸವನಗುಡಿಯ ದೊಡ್ಡ ಗಣೇಶನ ದೇವಾಲಯ ಸುಮಾರು 450 ವರ್ಷಗಳಷ್ಟು ಪುರಾತನ ದೇವಾಲಯವಾಗಿದೆ. 1537ರಲ್ಲಿ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಕೆಂಪೇಗೌಡರು ಇದನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ.

ಗಣಪತಿಯ ಮೂಲ ವಿಗ್ರಹ ಇರುವ ಗರ್ಭಗುಡಿ ಮಾತ್ರ ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾಗಿದೆ. ಆವರಣ, ಹೊರಗಿನ ಕಟ್ಟಡ, ಗೋಪುರ ಹೀಗೆ ಎಲ್ಲವನ್ನೂ ಮುಜರಾಯಿ ಇಲಾಖೆ ನಿರ್ಮಿಸಿದೆ ಎಂದು ಹೇಳಲಾಗುತ್ತದೆ. 11 ಅಡಿ ಉದ್ದ ಮತ್ತು 16 ಅಡಿ ಅಗಲವಿರುವ ಗಣಪತಿ ವಿಗ್ರಹವನ್ನು ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ ಎಂದು ತಿಳಿದುಬಂದಿದೆ. ಶಂಖ, ಚಕ್ರ, ಮುರಿದ ದಂತ ಮತ್ತು ಪ್ರಸಾದವನ್ನು ಹಿಡಿದುಕೊಂಡಿರುವ ಚತುರ್ಭುಜ ಗಣಪತಿಯನ್ನು ಕುಳಿತಿರುವ ಭಂಗಿಯಲ್ಲಿ ಆಕರ್ಷಕವಾಗಿ ಕೆತ್ತಲಾಗಿದೆ.  

ಇದನ್ನು ಓದಿ : ಯಾವ ದೇವರಿಗೆ ಯಾವ ಎಣ್ಣೆಯ ದೀಪ ಹಚ್ಚಬೇಕು..?

ಸುಮಾರು 5 ಎಕರೆಯಲ್ಲಿ ಗಣಪ ಹಾಗೂ ನಂದಿ ದೇವಾಲಯವನ್ನು ನಿರ್ಮಿಸಲಾಗಿದೆ. ಬಸವನಗುಡಿ ರಸ್ತೆ ಮೂಲಕ ಹೋದರೆ ಮೊದಲು ದೊಡ್ಡ ಗಣಪತಿ ದೇವಸ್ಥಾನ ಸಿಗುತ್ತದೆ. ಇದೇ ದೇವಾಲಯದ ಆವರಣದಲ್ಲಿ ಮೆಟ್ಟಿಲು ಹತ್ತಿ ಮೇಲ್ಗಡೆ ಹೋದರೆ ನಂದಿ ದೇವಾಲಯ ಸಿಗುತ್ತದೆ.

ಗಮನ ಸೆಳೆಯುವ ಬೃಹತ್ ನಂದಿ ವಿಗ್ರಹ

Bull temple basavangudiImage Source : India Mike

ದೊಡ್ಡ ಗಣಪತಿ ದೇವಾಲಯದಲ್ಲಿರುವ 15 ಅಡಿ ಎತ್ತರ, 20 ಅಡಿ ಉದ್ದವಾದ ಈ ನಂದಿ ವಿಗ್ರಹ ಎಲ್ಲರ ಗಮನಸೆಳೆಯುತ್ತದೆ. ಇದನ್ನು ಗ್ರಾನೈಟ್ ನ ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ. ಬುಲ್ ಟೆಂಪಲ್ ಅನ್ನು ದ್ರಾವಿಡಿಯನ್ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ಇದರ ಪಾದಗಳಿಂದಲೇ ವಿಶ್ವಭಾರತಿ ನದಿಯ ಉಗಮವಾಯಿತು ಎಂದು ಹೇಳಲಾಗುತ್ತದೆ.

ಒಂದು ದಂತಕಥೆಯ ಪ್ರಕಾರ, ಕಡಲೆ ಬೀಜ ಬೆಳೆದ ಭೂಮಿಯಲ್ಲಿ ಹೂಂಕರಿಸುತ್ತ ಓಡುತ್ತಿದ್ದ ಹೋರಿಯೊಂದನ್ನು ನಿಯಂತ್ರಿಸಲು ಇದನ್ನು ಕಟ್ಟಲಾಯಿತು ಎನ್ನುತ್ತಾರೆ. ಇನ್ನೊಂದು ಕಥೆಯ ಪ್ರಕಾರ, ಸುಂಕೇನಹಳ್ಳಿಯ ರೈತರೊಬ್ಬರ ಎತ್ತೊಂದು ಇಲ್ಲಿ ಬೆಳೆಯುತ್ತಿದ್ದ ಕಡಲೇಕಾಯಿ ಬೆಳೆಯನ್ನು ರಾತ್ರಿ ಹೊತ್ತಲ್ಲಿ ಮೇಯುತ್ತಿತ್ತಂತೆ. ಅದನ್ನು ನೋಡಿದ ಕಾವಲುಗಾರನೊಬ್ಬ, ಇದನ್ನು ಊರಿನವರಿಗೆ ತೋರಿಸಬೇಕೆಂದು, ಜನರನ್ನು ಕರೆದುಕೊಂಡು ಬಂದನು. ಈ ಸಂದರ್ಭದಲ್ಲಿ ಮೇವು ತಿನ್ನುತ್ತಿದ್ದ ಎತ್ತು ಅಲ್ಲೇ ಶಿಲೆಯಾಯಿತಂತೆ. ನಂತರ ಜನರು ಈ ವಿಗ್ರಹಕ್ಕೆ ಪೂಜೆ ಮಾಡಲು ಆರಂಭಿಸಿದರು ಎಂದು ಹೇಳಲಾಗುತ್ತದೆ. ನಂತರ ನಂದಿಯ ಈ ದೇವಸ್ಥಾನವನ್ನು ನಿರ್ಮಿಸಲಾಯಿತು ಎಂದು ತಿಳಿದುಬಂದಿದೆ.

ಇದನ್ನು ಓದಿ : ಹಿಂದೂ ದೇವಾಲಯಗಳಲ್ಲಿ ಸರಿಯಾದ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಹೇಗೆ..?

ಎತ್ತು ಕಡಲೇಕಾಯಿ ತಿಂದ ನೆನಪಿಗಾಗಿ ಇಂದಿಗೂ ಕೂಡಾ ಈ ದೇವಾಲಯದ ಹತ್ತಿರ ಕಡಲೆ ಕಾಯಿ ಬೆಳೆಯ ಉತ್ತಮ ಕಾಲವಾದ ನವೆಂಬರ್‍, ಡಿಸೆಂಬರ್ ಮಧ್ಯದಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತದೆ. ದೂರ ದೂರದ ಹಳ್ಳಿಗಳಿಂದ ಕಡಲೇ ಬೆಳೆದ ಮಂದಿ ಮೂಟೆಗಟ್ಟಲೆ ಕಡಲೇಕಾಯಿಯನ್ನು ತಂದು ಇಲ್ಲಿ ಮಾರುತ್ತಾರೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author