ತಮಿಳುನಾಡಿನಲ್ಲಿದೆ ಮಾನವ ದೇಹದ ಆಕಾರದ ಚಿದಂಬರಂ ನಟರಾಜ ದೇವಾಲಯ

ತಮಿಳುನಾಡಿನಲ್ಲಿದೆ ಮಾನವ ದೇಹದ ಆಕಾರದ ಚಿದಂಬರಂ ನಟರಾಜ ದೇವಾಲಯ

 

ಭಾರತದಲ್ಲಿ ಅಸಂಖ್ಯಾತ ಪುರಾತನ ದೇವಾಲಯಗಳಿವೆ. ಪ್ರಪಂಚದಲ್ಲಿಯೇ ಸಾಂಪ್ರದಾಯಿಕ ಮಟ್ಟದಲ್ಲಿ ಗುರುತಿಸಿಕೊಂಡ ಜಾಗಗಳಲ್ಲಿ ತಮಿಳುನಾಡು ಅಗ್ರಸ್ಥಾನವನ್ನು ಪಡೆದಿದೆ. ತಮಿಳುನಾಡಿನ ದೇವಾಲಯಗಳ ವಾಸ್ತುಶಿಲ್ಪ ಶೈಲಿಯು ಹಲವಾರು ವಾಸ್ತುಶಿಲ್ಪ ಸಂಶೋಧಕರ ಹಾಗು ವಾಸ್ತುಶಿಲ್ಪ ವಿದ್ಯಾರ್ಥಿಗಳ ಅಧ್ಯಯನಕ್ಕೆ ತವರುಮನೆ ಎಂದೇ ಹೇಳಬಹುದು. ದಕ್ಷಿಣಭಾರತದ ಬಹುಪಾಲು ಹೆಸರಾಂತ ಹಿಂದೂ ದೇವರುಗಳ ದೇವಾಲಯಗಳನ್ನು ತಮಿಳುನಾಡಿನಲ್ಲೇ ನೋಡಬಹುದು. ತಮಿಳುನಾಡಿನಲ್ಲಿರುವ ಪ್ರಸಿದ್ಧ ದೇವಾಲಯಗಳಲ್ಲಿ ಒಂದು ಚಿದಂಬರಂ ದೇವಾಲಯ. ಇದು ಕಡಲೂರ್ ಎಂಬ ಜಿಲ್ಲೆಯಲ್ಲಿ ಚಿದಂಬರಂ ಎಂಬ ನಗರದಲ್ಲಿರುವ ಪ್ರಸಿದ್ಧ ದೇವಸ್ಥಾನವಾಗಿದೆ.

 

ಚಿದಂಬರಂ ದೇವಾಲಯ, ಶಿವನಿಗೆ ಸಮರ್ಪಿತವಾಗಿರುವ ದೇವಾಲಯ. ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಇಲ್ಲಿಯ ವಿಶಿಷ್ಟ ಶೈಲಿಯ ಗೋಪುರಗಳು ಎಲ್ಲರ ಗಮನ ಸೆಳೆಯುತ್ತವೆ. ಸಂಗಮ ಸಾಹಿತ್ಯದ ಪ್ರಕಾರ ವಿದುವೆಲ್ವಿದುಗು ಪೆರುಮ್ಟಾಕ್ಕನ್ ಎಂಬ ವಿಶ್ವಕರ್ಮರ ಪರಂಪರೆಯ ಗುಂಪು ಈ ದೇವಾಲಯದ ಜೀರ್ಣೋದ್ಧಾರದ ಪ್ರಧಾನ ಶಿಲ್ಪಿಯಾಗಿದೆ. ಹಿಂದೂ ಸಾಹಿತ್ಯದಲ್ಲಿ, ಚಿದಂಬರಂ ಶಿವನ ದೇವಾಲಯ ಅತ್ಯಂತ ಐದು ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ.

 

ಪ್ರತಿಯೊಂದು ದೇವಾಲಯವೂ ಪಂಚ ಭೂತಗಳಲ್ಲಿ ಒಂದನ್ನು ಸೂಚಿಸುತ್ತದೆ. ಇವುಗಳಲ್ಲಿ ಚಿದಂಬರಂ ದೇವಾಲಯವು ಆಕಾಶವನ್ನು ಸೂಚಿಸುತ್ತದೆ. ಇತರೆ ನಾಲ್ಕು ದೇವಾಲಯಗಳೆಂದರೆ: ತಿರುವನಯ್‌ಕಾವಲ್ ಜಂಬುಕೇಶ್ವರ ವರುಣನನ್ನು, ಕಂಚಿ ಏಕಾಂಬರೇಶ್ವರ ಭೂಮಿಯನ್ನು, ತಿರುವಣ್ಣಾಮಲೈ ಅರುಣಾಚಲೇಶ್ವರ ಅಗ್ನಿಯನ್ನು ಮತ್ತು ಕಲಾಹಸ್ತಿ ನಾದರ್ ವಾಯುವನ್ನು ಪ್ರತಿನಿಧಿಸುತ್ತದೆ.

 

ದೇವಾಲಯದ ವಿಶೇಷತೆ ನಟರಾಜನ ವಿಗ್ರಹ

Nataraja temple chidambaram

Image Credits : Pinterest

ಈ ದೇವಾಲಯದ ಅದ್ವಿತೀಯ ಲಕ್ಷಣವೆಂದರೆ ಆಭರಣಾಲಂಕೃತನಾದ ನಟರಾಜನ ವಿಗ್ರಹ. ಇದು ಭರತನಾಟ್ಯಂ ದೇವರಾದ ಭಗವಂತನಾದ ಶಿವನನ್ನು ಚಿತ್ರಿಸುತ್ತದೆ. ಶಿವನನ್ನು ಉತ್ಕೃಷ್ಟವಾದ ಲಿಂಗದ ರೂಪಕ್ಕೆ ಬದಲಾಗಿ ಮಾನವಾತಾರದ ಮೂರ್ತಿಯ ರೂಪದಲ್ಲಿರಿಸಿದ ಕೆಲವೇ ದೇವಾಲಯಗಳಲ್ಲಿ ಇದೂ ಒಂದಾಗಿದೆ. ನಟರಾಜನ ವಿಶ್ವ ನರ್ತನವು ಭಗವಂತನಾದ ಶಿವನು ವಿಶ್ವದ ಚಲನ ವಲನವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವುದನ್ನು ಸೂಚಿಸುತ್ತದೆ. ದೇವಾಲಯವು ಐದು ಅಂಗಣಗಳನ್ನು ಒಳಗೊಂಡಿದೆ. ಅರಗಲೂರ್ ಉದಯ ಇರರಾತೆವನ್ ಪೊಂಪಾರಪ್ಪಿನನ್ ಸುಮಾರು 1213 ಎಡಿಯಲ್ಲಿ ಚಿದಂಬರಂನ ಶಿವಾಲಯವನ್ನು ಪುನರ್ ನಿರ್ಮಾಣ ಮಾಡಿದನು ಎಂದು ಹೇಳಲಾಗುತ್ತದೆ.

 

ದೇವಾಲಯದಲ್ಲಿರುವ ನಟರಾಜನ ಕಾಲಿನ ಹೆಬ್ಬೆರಳು ಭೂಮಿಯ ಅಯಸ್ಕಾಂತೀಯ ಕೇಂದ್ರವನ್ನು ಸೂಚಿಸುತ್ತದೆ. ಇದನ್ನು ಸುಮಾರು 5000 ವರ್ಷಗಳ ಹಿಂದೆಯೆ ತಮಿಳಿನ ಪ್ರಖ್ಯಾತ ಸಿದ್ಧ ಪುರುಷ ಹಾಗೂ ಸಂತರಾಗಿದ್ದ ತಿರುಮೂಲರ್ ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ.

 

ಮಾನವ ದೇಹವನ್ನು ಪ್ರತಿಬಿಂಬಿಸುವ ದೇವಾಲಯ

Chidambaram temple images

Image Credits : wikimedia commons

ದೇವಸ್ಥಾನವನ್ನು ಎಲ್ಲಾ ಸೂಕ್ಷ್ಮತೆಗಳೊಂದಿಗಿನ ಮಾನವ ದೇಹವನ್ನು ಪ್ರತಿಬಿಂಬಿಸುವಂತೆ ನಿರ್ಮಿಸಲಾಗಿದೆ. ಚಿದಂಬರಂ ದೇವಸ್ಥಾನದ ಮೇಲ್ಛಾವಣಿಯು 21600 ಸುವರ್ಣ ಲೇಪಿತ ಹೊದಿಕೆಗಳಿಂದ ಕೂಡಿದ್ದು ಈ ಸಂಖ್ಯೆಯು ಮನುಷ್ಯನ ದಿನವೊಂದಕ್ಕೆ ಉಸಿರಾಡುವ ಉಸಿರಾಟಗಳ ಸಂಖ್ಯೆಯನ್ನು ಸೂಚಿಸುತ್ತದೆ. 21600 ಸ್ವರ್ಣ ಲೇಪಿತ ಹೊದಿಕೆಗಳನ್ನು ಗೋಪುರಕ್ಕೆ ಅಂಟಿಸಲು 79000 ಹುಕ್ಕುಗಳನ್ನು ಅಳವಡಿಸಲಾಗಿದ್ದು, ಅವು ಮನುಷ್ಯನ ದೇಹದಲ್ಲಿರುವ 79000 ನಾಡಿಗಳನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ. ಅಂದರೆ ದೇವಸ್ಥಾನದ ರಂಗಮಂಟಪವು ಸಮಾನವಾಗಿರದೆ ಕೊಂಚ ಎಡಭಾಗದಲ್ಲಿರುವುದು ಕಂಡುಬರುತ್ತದೆ. ಇದು ಮನುಷ್ಯನ ಎದೆಯ ಎಡ ಭಾಗದಲ್ಲಿರುವ ಹೃದಯದ ಸೂಚಕವಾಗಿದೆ ಎಂದು ಹೇಳುತ್ತಾರೆ.

 

ರಂಗಮಂಟಪವನ್ನು ತಲುಪಲು ಒಟ್ಟಾರೆ ಐದು ಮೆಟ್ಟಿಲುಗಳಿದ್ದು ಅವುಗಳು ಕ್ರಮವಾಗಿ ಪಂಚಾಕ್ಷರಿ ಮಂತ್ರವಾದ ನ ಮಃ ಶಿ ವಾ ಯ ವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ದೇವಸ್ಥಾನದ ಕನಕ ಸಭೆ ಅಂದರೆ ನಟರಾಜನು ನರ್ತಿಸುತ್ತಿರುವ ಜಾಗದಲ್ಲಿ ನಾಲ್ಕು ಕಂಬಗಳಿದ್ದು, ಇವು ನಾಲ್ಕು ವೇದಗಳನ್ನು ಸೂಚಿಸುತ್ತವೆ. ರಂಗಸ್ಥಳದಲ್ಲಿ 28 ಖಂಬಗಳಿದ್ದು ಅವು 28 ಪ್ರಕಾರದ ಅಹಂಗಳನ್ನು ಹಾಗೂ 28 ಬಗೆಯ ಶಿವ ಪೂಜೆಯ ವಿಧಾನಗಳನ್ನೂ ಸೂಚಿಸುತ್ತವೆ ಎನ್ನಲಾಗುತ್ತದೆ. ದೇವಸ್ಥಾನದ ಅರ್ಥಮಂಟಪದಲ್ಲಿರುವ ಆರು ಕಂಬಗಳು ಆರು ಶಾಸ್ತ್ರಗಳನ್ನು, ದೇವಸ್ಥಾನದ ಒಂಬತ್ತು ಕಳಶಗಳು ಒಂಬತ್ತು ಶಕ್ತಿಗಳನ್ನು ಹಾಗೂ ದೇವಸ್ಥಾನದ 18 ಕಂಬಗಳು 18 ಉಪನಿಷತ್ತುಗಳನ್ನು ಸೂಚಿಸುತ್ತವೆ ಎಂದು ಹೇಳುತ್ತಾರೆ,.

 

ಪೌರಾಣಿಕ ಹಿನ್ನಲೆ

Chidambaram temple history

Image Credits : New Indian Express

ಸ್ಥಳ ಪುರಾಣದ ಪ್ರಕಾರ, ತಿಲ್ಲೈ ಮರಗಳ ಕಾಡಿನಲ್ಲಿ ವಾಸಿಸುತ್ತಿದ್ದ ಸಿದ್ಧ ಪುರುಷರು ತಮ್ಮ ಅತಿಶಯ ಶಕ್ತಿಯ ಪ್ರಭಾವದಿಂದ ದೇವರನ್ನೂ ಸಹ ನಿಯಂತ್ರಿಸಬಹುದೆಂದು ನಂಬಿದ್ದರು. ಇದನ್ನು ಪರೀಕ್ಷಿಸಲು ಶಿವನು ಭಿಕ್ಷುಕನ ರೂಪದಲ್ಲಿ ಮತ್ತು ವಿಷ್ಣು ಮೋಹಿನಿಯ ವೇಷಧರಿಸಿ ತಿಲ್ಲೈ ಮರಗಳ ಕಾಡಿಗೆ ಬರುತ್ತಾರೆ. ಗಂಡು ಹೆಣ್ಣಿನ ಅತಿ ಸುಂದರವಾದ ಜೊತೆಯನ್ನು ಕಂಡು ಆ ಪ್ರದೇಶದ ಮಹಿಳೆಯರು ಮೋಹಪರವಶರಾದರು. ಅವರಿಬ್ಬರು ದೇವರು ಎಂದು ತಿಳಿಯದ ಸಿದ್ಧಪುರುಷರು ಅವರಿಗೆ ಪಾಠ ಕಲಿಸಲೆಂದು ಹಾವುಗಳನ್ನು ಸೃಷ್ಟಿಸಿ ಶಿವನ ಮೇಲೆ ಹರಿಬಿಟ್ಟರು. ಶಿವನು ಆ ಹಾವುಗಳನ್ನು ಮಾಲೆಗಳ ಹಾಗೆ ತನ್ನ ಜಡೆಯಲ್ಲಿ ಸಿಕ್ಕಿಸಿಕೊಂಡನು. ನಂತರ ಸಿದ್ಧರು ಕ್ರೂರವಾದ ಹುಲಿಯೊಂದನ್ನು ಸೃಷ್ಟಿಸಿ ಆಕ್ರಮಣ ಮಾಡಿದರು. ಆಗ ಶಿವನು ಆ ಹುಲಿಯನ್ನು ವಧಿಸಿ ಅದರ ಚರ್ಮವನ್ನೇ ತನ್ನ ಉಡುಪನ್ನಾಗಿ ಮಾಡಿಕೊಂಡನು.

 

ಆಗಲೂ ಸೋಲೊಪ್ಪದ ಸಿದ್ಧರು ದೈತ್ಯ ಆನೆಯೊಂದನ್ನು ಸೃಷ್ಟಿಸಿದರು. ಶಿವನು ಆ ಆನೆಯನ್ನೆ ಸಂಹರಿಸಿ ಗಜಸಂಹಾರಮೂರ್ತಿ ಎಂಬ ಹೆಸರು ಪಡೆದನು. ಕೊನೆಗೆ ಆ ಎಲ್ಲ ಸಿದ್ಧರು ತಮ್ಮ ಶಕ್ತಿಗಳನ್ನು ಕ್ರೋಢಿಕರಿಸಿ ಮುಯಲಕನ್ ಎಂಬ ರಾಕ್ಷಸನನ್ನು ಸೃಷ್ಟಿಸಿದರು. ಇದರಿಂದ ಕುಪಿತನಾದ ಶಿವ ಆ ರಾಕ್ಷಸನನ್ನು ಥಳಿಸುತ್ತ ಕೆಳಗೆ ಬಿಳಿಸಿ ಅವನ ಬೆನ್ನಿನ ಮೇಲೆ ಆನಂದ ತಾಂಡವ ನೃತ್ಯ ಮಾಡುತ್ತ ತನ್ನ ಮೂಲ ರೂಪವನ್ನು ತಳೆದನು. ಆಗ ಸಿದ್ಧರೆಲ್ಲರಿಗು ತಮ್ಮ ತಪ್ಪಿನ ಅರಿವಾಗಿ ಶಿವನಿಗೆ ಶರಣಾದರು ಹಾಗೂ ಅತಿಶಯ ಶಕ್ತಿಗಳಿಂದ ದೇವರನ್ನು ನಿಯಂತ್ರಿಸಲಾಗುವುದಿಲ್ಲ ಎಂಬ ಸತ್ಯವನ್ನು ಅರಿತುಕೊಂಡರು.

 

ಚಿದಂಬರಂ ದೇವಾಲಯದಲ್ಲಿರುವ ರಥವು, ಪ್ರಾಯಶಃ ತಮಿಳುನಾಡಿನಲ್ಲಿರುವ ಯಾವುದೇ ದೇವಾಲಯದಲ್ಲಿರುವ ರಥಕ್ಕೆ ಒಂದು ಅತ್ಯಂತ ಸುಂದರವಾದ ಉದಾಹರಣೆಯಾಗಿದೆ. ಈ ರಥದಮೇಲೆ, ವರ್ಷಕ್ಕೆ ಎರಡು ಸಾರಿ ಭಗವಂತನಾದ ನಟರಾಜನನ್ನು ಕುಳ್ಳಿರಿಸಿ ಹಬ್ಬದ ದಿನಗಳಂದು ಸಾವಿರಾರು ಭಕ್ತಾದಿಗಳು ಈ ತೇರನ್ನು ಎಳೆಯುತ್ತಾರೆ.

Featured Image Credits : Amazon.in/wikipedia

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author