ಹೇಳಿ ಕೇಳಿ ಮೊದಲೇ ಚೂರು ಪಾಪಿ ನಾನು!?

ಹೇಯ್,

ಅಸಲು ನೀನು ಕೂಡ ಮೊದಲಿಗೆ ನನ್ನನ್ನು ಕಾಮುಕ ಅಂದುಕೊಂಡಿದ್ದೆ. ಹಾಗೆ ಅಂದುಕೊಂಡೆ ಮೊದಲ ಭೇಟಿಯಲ್ಲಿ ಜಗಳವಾಡಿದೆ. ನಿನ್ನ ನೋಟ ಸರಿಯಿಲ್ಲ ತಿದ್ದಿಕೋ ಎಂದು ಹೇಳಿದೆ. ನಿನ್ನ ದೃಷ್ಟಿ ಅಸಹ್ಯ ಎನಿಸುತ್ತದೆ ಎಂದೆಲ್ಲ ಹೇಳಿದಾಗ ನನಗೂ ಕೂಡ ಬೇಸರ ಆಗಿತ್ತು. ನಂತರ ಬದಲಾದೆ ನೋಡು ಆವಾಗಲೇ ನೀನು ಕಾಲೇಜಿಗೆ ನೋಟಿಸ್ ಬೋರ್ಡ್ ಓದುತ್ತ ನಿಂತಿದ್ದ ನನಗೆ ಹಾಯ್ ಎಂದು ಹೇಳಿದಾಗ ಆಶ್ಚರ್ಯ ಆಗಿತ್ತು.

ನಾನು ಅಜ್ಞಾತ ಎನ್ನುವ ಹೆಸರಿನಲ್ಲಿ ಕವನ ಬರೆಯುತ್ತಿರುವುದು ನಿನಗೆ ತಿಳಿದಾಗ ನೀನು ಸಂಭ್ರಮಪಟ್ಟ ರೀತಿಯೇ ಆಶ್ಚರ್ಯಕರ. ನೋಡ ನೋಡುತ್ತಲೇ ಕಾಮುಕ ನೀನು ಎಂದು ಹೇಳಿದವಳೇ ಪ್ರಪೋಸ್ ಮಾಡಿದೆ. ನಾನು ಒಬ್ಬ ಪಾಪಿ ಅಂದುಕೊಂಡಿದ್ದೆ. ಹಾಗೆಂದುಕೊಂಡೆ ಬದಲಾದೆ. ಆ ಬದಲಾವಣೆಗೆ ಒಲಿದ ವರ ನೀನು.

ಹೇಯ್ ಡಿಗ್ರಿ ಪಾಸ್ ಆಯಿತು. ನೀನೀಗ ಮನೆಯಲ್ಲಿ ಒಂಟಿಯಾಗಿ ಇದ್ದೀಯ. ನೀನು ಕೂಡ ಏನಾದರೂ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ಬಿಡು. ನಾನು ಇಲ್ಲಿ ಇಂಜಿನಿಯರ್ ಆಗಿ ಜಾಬ್ ಹುಡುಕಿಕೊಂಡು ನೆಮ್ಮದಿಯಾಗಿ ದಿನಗಳನ್ನು ಕಳೆಯುತ್ತಿದೇನೆ. ಮನೆಯಲ್ಲಿ ನಿನ್ನನ್ನು ಇಂಜಿನಿಯರಿಂಗ್ ಓದಿಸಿದ್ದು ಏನು ಕಿತ್ತು ದಬ್ಬು ಹಾಕೋಕೆ ಎಂದು ಕೇಳು. ನೀನು ಈಗಿರುವ ಮಂಗಳೂರಿನಿಂದ ಬೆಂಗಳೂರಿಗೆ ಬಂದು ಬಿಟ್ಟರೆ ಇಲ್ಲಿರುವ ಬಿಗ್ ಬಜಾರ್, ಮಾಲ್ ಮಂತ್ರಿ ಮಾಲ್ ಎಲ್ಲವೂ ನಮ್ಮದೇ. ಕಬ್ಬನ್ ಪಾರ್ಕಿನಲ್ಲಿ ಖಾಲಿ ಬೆಂಚುಗಳು ನಮಗಾಗಿ ಕಾಯುತ್ತಿವೆ. ಲಾಲ್ ಭಾಗ್ ನಲ್ಲಿರುವ ಒಂದು ಹೊವನ್ನಾದರೂ ನಿನಗೆ ಮುಡಿಗೆ ಮುಡಿಸಬೇಕು ಎನ್ನುವ ನನ್ನ ಆಸೆಯ ಘಳಿಗೆ ಫಲಿಸುವುದು ಯಾವಾಗ. ಹಾಗಾಗಿ ನಾನು ನಿನಗಾಗಿ ಕಾಯುತ್ತಿರುವೆ. ಬೇಗ ಬೆಂಗಳೂರಿಗೆ ಬಂದು ಬಿಡು.

ಈ ಮಹಾನ್ ನಗರಿಯಲ್ಲಿ ನನ್ನ ಕೆ ಟಿ ಎಮ್ ಬೈಕಿನಲ್ಲಿ ನಿನ್ನನ್ನು ಕೋರಮಂಗಲ, ಕೆ ಆ ರ್ ಪುರ ಎಂದು ಸುತ್ತಿಸಬೇಕು. ನನ್ನ ಬೈಕಿನ ಸೀಟು ನಿನಗಾಗಿ ಕಾಯುತ್ತಿದೆ. ಪ್ರಾಮಿಸ್. ನಿನ್ನನ್ನು ಕೂರಿಸಿಕೊಳ್ಳುವ ಸಲುವಾಗಿ ಡ್ರಾಪ್ ಕೇಳಿದ ಆಫೀಸಿನ ಯಾವ ಹುಡುಗಿಯನ್ನು ಇದುವರೆಗೆ ಕರೆದುಕೊಂಡು ಹೋಗಿಲ್ಲ. ಇಷ್ಟಕ್ಕೂ ನಾನು ಫ್ಲರ್ಟ್ ಅಲ್ಲವೆಂದು ನಿನಗೆ ಗೊತ್ತಿದೆ. ಆದರೆ ನೀನೆ ನನ್ನಲ್ಲಿ ಬದಲಾವಣೆಗೆ ಕಾರಣ ಆದವಳು. ಮೊದಲು ಹುಡುಗಿಯರನ್ನು ಕಂಡರೆ ನನಗೆ ಕೆಂಡದಂತಹ ಕೋಪ. ಈಗ ಹಾಗಲ್ಲ ಮೊದಲು ಹಾಗೆ ವರ್ತಿಸುತ್ತಿದ್ದು ನೆನಪಿಸಿಕೊಂಡರೆ ವಿಷಾದವಾಗುತ್ತದೆ. ಅದೆಲ್ಲ ಪಕ್ಕಕ್ಕೆ ಇರಲಿ ನೀನು ಬೇಗ ಬೆಂಗಳೂರಿಗೆ ಬಂದು ಬಿಡು. ನನ್ನ ತುಂಬಿದ ಪರ್ಸ್ ಅನ್ನು ನಿನ್ನ ಜೊತೆಗೆ ತಿರುಗಿ ಖಾಲಿ ಮಾಡಬೇಕು. ಅದಕ್ಕೆ ನೀನು ಬೆಂಗಳೂರಿಗೆ ಬರಬೇಕು.

ನನಗೆ ಗೊತ್ತು ನನ್ನ ಈ ಮೆಸೇಜ್ ನೋಡಿ ನೀನುವಾರ ಕಳೆಯುವಷ್ಟರಲ್ಲಿ ಬೆಂಗಳೂರಿಗೆ ಬರುತ್ತೀಯ. ಇಲ್ಲವೆಂದರೆ ನಾನೇ ಮಂಗಳೂರಿನ ಬಸ್ ಸ್ಟಾಪ್ ನಲ್ಲಿ ಕಾದುಕೊಂಡು ನಿಂತಿರುತ್ತೇನೆ. ನೀನೇ ಹೇಳಿದ್ದು ನೆನಪಿಲ್ಲವಾ. ಮೊದಲು ಬೆಂಗಳೂರಿಗೆ ಹೋಗಿ ಲೈಫಿನಲ್ಲಿ ಸೆಟ್ಲ್ ಆಗು. ಒಂದು ಅಪಾರ್ಟ್ಮೆಂಟ್ ತೆಗೆದುಕೋ. ನಮ್ಮದೂ ಅಂತ ಒಂದು ಮನೆ ಆದ ಮೇಲೆ ಮದುವೆ ಮಾತು ಕಥೆ ಎಲ್ಲವೂ ಸಲೀಸು ಎಂದು.ಹಾಗಾಗಿ ತಡ ಮಾಡಬೇಡ.

ಆದಷ್ಟು ಬೇಗ ಬೆಂಗಳೂರಿಗೆ ಬಂದು ಬಿಡು.

ನಿನ್ನ ಮರಕೋತಿ.

ಚಿತ್ರ : ಅಂತರ್ಜಾಲ.

Enjoyed this article? Stay informed by joining our newsletter!

Comments

You must be logged in to post a comment.

About Author