ಸಂಗೀತದ ಸ್ವರಗಳನ್ನು ಹಾಡುವ ಕನ್ಯಾಕುಮಾರಿಯ ತನುಮಲಯನ್ ದೇವಾಲಯ

 

Thanumalayan temple kanyakumari

Image Credits : Pilgrimaide.com

ಪ್ರಪಂಚದಲ್ಲಿಯೇ ಸಾಂಪ್ರದಾಯಿಕ ಮಟ್ಟದಲ್ಲಿ ಗುರುತಿಸಿಕೊಂಡ ಜಾಗಗಳಲ್ಲಿ ತಮಿಳುನಾಡು ಅಗ್ರಸ್ಥಾನವನ್ನು ಪಡೆದಿದೆ. ತಮಿಳುನಾಡಿನ ದೇವಾಲಯಗಳ ವಾಸ್ತುಶಿಲ್ಪ ಶೈಲಿಯು ಹಲವಾರು ವಾಸ್ತುಶಿಲ್ಪ ಸಂಶೋಧಕರ ಹಾಗು ವಾಸ್ತುಶಿಲ್ಪ ವಿದ್ಯಾರ್ಥಿಗಳ ಅಧ್ಯಯನಕ್ಕೆ ತವರುಮನೆ ಎಂದೇ ಹೇಳಬಹುದು. ಅದರಲ್ಲೂ ದಕ್ಷಿಣಭಾರತದ ಹಲವು ಪುರಾತನ ದೇವಾಲಯಗಳಲ್ಲಿ ಶಿಲ್ಪಕಲೆ, ನಾಟ್ಯ, ಸಂಗೀತಕ್ಕೆ ಹೆಚ್ಚು ಗಮನ ನೀಡಿರುವುದನ್ನು ಗಮನಿಸಬಹುದು. ಪ್ರಾಚೀನ ದೇವಾಲಯದಲ್ಲಿರುವ ಇಂಥಹಾ ಕಲ್ಲಿನ ಸ್ತಂಭಗಳು ಭಾರತೀಯ ಶಿಲ್ಪಕಲೆಯ ಪ್ರತೀಕವಾಗಿ ಕಾಣುತ್ತವೆ.

 

ದೇಶದಲ್ಲಿ ದಕ್ಷಿಣಭಾರತದ ತಮಿಳುನಾಡು, ಕರ್ನಾಟಕ, ಕೇರಳ ರಾಜ್ಯಗಳಲ್ಲಿರುವ ಪುರಾತನ ದೇವಾಲಯಗಳಲ್ಲಿ ಇವುಗಳನ್ನು ಹೆಚ್ಚಾಗಿ ಕಾಣಬಹುದು. ಅದ್ಭುತ ಕೆತ್ತನೆಯ ಶಿಲ್ಪಕಲೆ, ನಾಟ್ಯ ಮಾಡುವ ರೂಪಕ, ಸಂಗೀತವನ್ನು ಪ್ರತಿನಿಧಿಸುವ ಹಲವು ಕಂಬಗಳು, ಪರಿಕರಗಳನ್ನು ಪುರಾತನ ದೇವಾಲಯಗಳಲ್ಲಿ ನೋಡಬಹುದು. ಇದರಿಂದ ದಕ್ಷಿಣಭಾರತವನ್ನು ಆಳ್ವಿಕೆ ಮಾಡುತ್ತಿದ್ದ ಅನೇಕ ರಾಜರಿಗೆ ಸಂಗೀತ  ಬಲುಪ್ರಿಯವಾಗಿತ್ತು ಎಂಬುದು ತಿಳಿದುಬರುತ್ತದೆ.

 

ರಾಜರು ಮನರಂಜನೆಗಾಗಿ ಸಂಗೀತವನ್ನು ಕೇಳುತ್ತಾ ಸಮಯ ಕಳೆಯುತ್ತಿದ್ದರು. ಸಂಗೀತವನ್ನು ವಿಶ್ವವ್ಯಾಪಕವಾಗಿ ವಿಸ್ತರಿಸಬೇಕು ಎಂಬ ಉದ್ದೇಶದಿಂದ ಅಂದಿನ ರಾಜರು ಕಂಕಣವನ್ನು ಕಟ್ಟಿಕೊಂಡು, ಯಾತ್ರಿಕರು ಹೆಚ್ಚಾಗಿ ದರ್ಶಿಸುವ ದೇವಾಲಯಗಳಲ್ಲಿ ಮ್ಯೂಸಿಕಲ್ ಪಿಲ್ಲರ್ಸ್ ಸಿದ್ಧಪಡಿಸುತ್ತಿದ್ದರು. ಯಾವಾಗಲಾದರೂ ರಾಜರು ದೇವಾಲಯಕ್ಕೆ ಭೇಟಿ ನೀಡಿದಾಗ ದೇವಾಲಯದ ಮಧ್ಯದಲ್ಲಿ ಕುಳಿತುಕೊಂಡು ಈ ಸ್ತಂಭಗಳ ಸಮೀಪದಲ್ಲಿ ವಿದ್ವಾಂಸರು ಮಾಡುವ ಕಛೇರಿಗಳು, ನೃತ್ಯಗಾರರ ನೃತ್ಯವನ್ನು ನೋಡುತ್ತಾ ಖುಷಿಯಿಂದ ಕಾಲ ಕಳೆಯುತ್ತಿದ್ದರು.

ಇದನ್ನು ಓದಿ : ಉದ್ಭವ ಲಿಂಗದ ದೇಗುಲ ಕಾಡು ಮಲ್ಲೇಶ್ವರ ದೇವಾಲಯ

ಸಂಗೀತದ ಬಗ್ಗೆ ಭಾರತ ದೇಶಕ್ಕೆ ತಿಳಿದಿರುವಷ್ಟು ಮತ್ತೊಂದು ದೇಶಕ್ಕೆ ತಿಳಿದಿರುವುದಕ್ಕೆ ಸಾಧ್ಯವೇ ಇಲ್ಲ. ಸಂಗೀತ ಎಂದರೆ ಶಬ್ಧವನ್ನು ಕಾಲದ ಜೊತೆ ಮೇಳವನ್ನು ಇಂಪಾಗಿ ನುಡಿಸುವ ಪ್ರಕ್ರಿಯೆ ಆಗಿದೆ. ಕಲ್ಲಿನಿಂದ ನುಡಿಸುವ ಸರಿಗಮಪ ಸ್ವರಗಳು ಭಾರತದ ನಿಜವಾದ ಅದ್ಭುತವೇ ಸರಿ. ನಮ್ಮ ದೇಶದ ದೇವಾಲಯದಲ್ಲಿ ಕಲ್ಲನ್ನು ಕದಲಿಸಿದರೆ ಸಂಗೀತದ ಸ್ವರಗಳು ಕೇಳಿಸುತ್ತವೆ. ಅದಕ್ಕೆ ಸಾಕ್ಷ್ಯಿ ಹಂಪಿಯಲ್ಲಿನ ಸಂಗೀತ ಸ್ವರಗಳು ನುಡಿಸುವ ಸ್ತಂಭಗಳು. ಕೇವಲ ಹಂಪಿಯಲ್ಲಿಯೇ ಅಲ್ಲದೇ ದೇಶದಲ್ಲಿನ ಅನೇಕ ದೇವಾಲಯದಲ್ಲಿಯೂ ಕೂಡ ಸಪ್ತಸ್ವರಗಳು ಹಾಡುವ ಸಂಗೀತ ಸ್ತಂಭಗಳು ಇವೆ.

 

ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಭಾಗವಾಗಿರುವ ಸುಚೀಂದ್ರಂ ಆಧ್ಯಾತ್ಮಿಕತೆಯ ನಗರವಾಗಿದೆ. ತನುಮಲಯನ್ ದೇವಸ್ಥಾನದಿಂದಾಗಿ ಸುಚೀಂದ್ರಂ ಪ್ರಸಿದ್ದಿ ಪಡೆದುಕೊಂಡಿದೆ. ತನುಮಲಯನ್ ದೇವಸ್ಥಾನ ಇಲ್ಲಿ ಪ್ರಸಿದ್ದವಾದರೂ ಕೂಡ ಇತರೆ ಸಾಕಷ್ಟು ದೇವಸ್ಥಾನಗಳನ್ನು ಇಲ್ಲಿ ಕಾಣಬಹುದು. ದ್ವಾರಕಾ ಕೃಷ್ಣ ದೇವಸ್ಥಾನ, ಮುನುತಿತನಂಕೈ ದೇವಸ್ಥಾನ, ಆಸ್ರಮಮ್ ಸಾಸ್ತಾ ದೇವಸ್ಥಾನ, ಕರುಪಸಾಮಿ ಕೋಯಿಲ್, ತಮೌರನ್ ತಂಪುರತಿ ದೇವಸ್ಥಾನ, ಅಕ್ಕರೈ ದೇವಾಲಯ, ಆಸ್ರಮ ಔಸುಯ ಮತ್ತು ಆತ್ರಿ ಮುನಿವರ್ ಹೋಮ ಕುಂಡ, ಸ್ರಮಮರುಳಿಕು ಶ್ರೀ ಭುತತನ್ಮಾಡ್ ಅಂತಂಪುರ ಮೆಣಸಕಿ ಅಮ್ಮನ್ ಕೋವಿಲ್, ದಿ ಮುತರಮ್ಮನ್ ದೇವಸ್ಥಾನ ಮತ್ತು ಪೆರಂಬಲಮ್ ನಟರಾಜ ದೇವಸ್ಥಾನಗಳು ಇಲ್ಲಿವೆ.

 

ಸಂಗೀತದ ಸ್ವರಗಳನ್ನು ಹೊರಡಿಸುವ ಕಂಬ

Thanumalayam temple images

Image Credits : Navrang India

17ನೇಯ ಶತಮಾನದಲ್ಲಿ ನಿರ್ಮಿಸಲ್ಪಟ್ಟ ತನುಮಲಯನ್‍ ದೇವಾಲಯವು ಅದ್ಭುತ ಶಿಲ್ಪಕಲೆಯ ಕಲಾಕೃತಿಗಳಿಂದ ಎಲ್ಲರ ಕಣ್ಮನ ಸೆಳೆಯುತ್ತದೆ. ಇಲ್ಲಿನ ಅದ್ಭುತ ಕೆತ್ತನೆ ಕೆಲಸಗಳು ಎಲ್ಲರ ಮನಸೂರೆಗೊಳ್ಳುತ್ತವೆ. ಕನ್ಯಾಕುಮಾರಿಯ ಸಮೀಪ ಸುಚೀಂದ್ರದಲ್ಲಿನ ಸ್ಥಾಯೇಶ್ವರ ದೇವಾಲಯದಲ್ಲಿಯೂ, ತಮಿಳುನಾಡಿನಲ್ಲಿನ ಕಾಂತಿಮತಿ ಅಂಬಾಲ್ ದೇವಾಲಯ ಮಂಟಪದ ಸಮೀಪದಲ್ಲಿ  ಸಪ್ತಸ್ವರಗಳನ್ನು ನುಡಿಸುವ ಸ್ತಂಭಗಳು ಇವೆ.

ಇದನ್ನು ಓದಿ : ಇದು ಮಳೆ ಬರುವ ಮುನ್ಸೂಚನೆ ಕೊಡುವ ದೇವಾಲಯ; ವೈಜ್ಞಾನಿಕ ಲೋಕಕ್ಕೂ ಸವಾಲಾಗಿದೆ ಇಲ್ಲಿನ ವಿಸ್ಮಯ..!

ಹದಿನೆಂಟು ಅಡಿಗಳಷ್ಟು ಎತ್ತರದ ನಾಲ್ಕು ಸಂಗೀತ ಹೊರಡಿಸುವ ಅದ್ಭುತ ಕಂಬಗಳನ್ನು ಇಲ್ಲಿ ಕೆತ್ತಿರುವುದನ್ನು ಕಾಣಬಹುದು. ದೇವಾಲಯದಲ್ಲಿರುವ ಅಲಂಕಾರ ಮಂಟಪದಲ್ಲಿ ಆ ನಾಲ್ಕು ಸಂಗೀತ ಕಂಬಗಳಿದ್ದು, ಅದರಿಂದ ವಿವಿಧ ಸಂಗೀತ ಸ್ವರಗಳು ಕೇಳಿಸುತ್ತವೆ. ಇದಲ್ಲದೆ ಇಲ್ಲಿ ನೃತ್ಯ ಮಂಟಪವೂ ಇದ್ದು, ಅಲ್ಲಿ ಸಾವಿರಕ್ಕೂ ಅಧಿಕ ಕೆತ್ತನೆಯ ಕಂಬಗಳನ್ನು ಕಾಣಬಹುದು.

 

ತ್ರಿಮೂರ್ತಿಗಳನ್ನು ಪೂಜಿಸುವ ದೇವಸ್ಥಾನ

Image Credits : Twitter

ತನುಮಲಯನ್ ಎಂದು ಕರೆಯಲ್ಪಡುವ ಈ ದೇವಾಲಯವಿರುವುದು ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಸುಚೀಂದ್ರಂ ಪಟ್ಟಣದಲ್ಲಿದೆ. ಸುಚೀಂದ್ರಂ, ಕನ್ಯಾಕುಮಾರಿ ನಗರದಿಂದ 11 ಕಿ.ಮೀ, ನಾಗರಕೋಯಿಲ್ ನಿಂದ 7 ಕಿ.ಮೀ, ತಿರುನೆಲ್ವೇಲಿಯಿಂದ 70 ಕಿ.ಮೀ ಹಾಗೂ ಕೇರಳದ ತಿರುವನಂತಪುರಂನಿಂದ 85 ಕಿ.ಮೀ ಗಳಷ್ಟು ದೂರದಲ್ಲಿದೆ.

 

ಇಲ್ಲಿರುವ ಎಲ್ಲ ದೇವಸ್ಥಾನಗಳ ಮಧ್ಯೆಯೂ ತನುಮಲಯನ್ ದೇವಸ್ಥಾನವು ತನ್ನ ಮೂರು ವಿಭಿನ್ನ ರೀತಿಯ ಹಿಂದೂ ದೇವತೆಗಳಿಂದಾಗಿ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ. ಈ ದೇವಾಲಯದ ವಿಶೇಷವೆಂದರೆ ಇಲ್ಲಿ ತ್ರಿಮೂರ್ತಿಗಳನ್ನು ಪೂಜಿಸಲಾಗುತ್ತದೆ. ಸೃಷ್ಟಿಕರ್ತ ಬ್ರಹ್ಮ, ಪಾಲನಕರ್ತ ವಿಷ್ಣು ಹಾಗೂ ಲಯಕರ್ತ ಶಿವ, ಈ ಮೂವರೂ ತ್ರಿಮೂರ್ತಿಗಳು ಒಟ್ಟಾಗಿ ಒಂದೆಡೆ ನೆಲೆಸಿರುವುದು ಬಹು ಅಪರೂಪ. ಆದರೆ ತನುಮಲಯನ್ ದೇವಸ್ಥಾನದಲ್ಲಿ ಈ ಮೂವರೂ ದೇವರನ್ನು ಪೂಜಿಸಲಾಗುತ್ತದೆ

 

ದೇವಾಲಯದಲ್ಲಿ ವಿಶಿಷ್ಟವಾದ ಆಂಜನೇಯನ ಪ್ರತಿಮೆಯೊಂದಿದ್ದು, ಒಂದೇ ಗ್ರಾನೈಟ್ ಕಲ್ಲಿನಲ್ಲಿ ಅದ್ಭುತವಾಗಿ ಕೆತ್ತಲಾಗಿದೆ. ಈ ಆಂಜನೇಯನ ಮೂರ್ತಿಯು 22 ಅಡಿಗಳಷ್ಟು ಎತ್ತರವಿದೆ. ಇನ್ನೂ ವಿಶೇಷವೆಂದರೆ ಇಲ್ಲಿನ ಹನುಮಂತನ ಮೂರ್ತಿಯ ಬಾಲಕ್ಕೆ ಭಕ್ತರು ಬೆಣ್ಣೆ ಹಚ್ಚಿ ಪೂಜಿಸುತ್ತಾರೆ. ಅದೇನೆ ಇರ್ಲಿ, ಸಂಗೀತದ ಸ್ವರಗಳನ್ನು ಹೊರಡಿಸುವ ಕಂಬಗಳಿರುವ ಈ ದೇವಾಲಯ ಅದ್ಭುತವೇ ಸರಿ.

Feautured Image Credits : kanyakumaritourism.in

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author