ಆದಿಶಂಕರಾಚಾರ್ಯರು ಜನಿಸಿದ ವಡಕ್ಕುನಾಥನ್ ದೇವಾಲಯ..!

vadakkunnathan templeFeatured Image Source : TravelTriangle

ಭಾರತದ ಎಲ್ಲಾ ರಾಜ್ಯಗಳಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ. ವಿವಿಧೆಡೆಯಿಂದ ಜನರು ಈ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಧನ್ಯರಾಗುತ್ತಾರೆ. ದೇವರನಾಡು ಕೇರಳದಲ್ಲಿಯೂ ನಾವು ಈ ರೀತಿ ಹಲವಾರು ಪ್ರಸಿದ್ಧ ದೇವಾಲಯಗಳನ್ನು ನೋಡಬಹುದು. ಶಬರಿಮಲೆ, ಅನಂತಪದ್ಮನಾಭ ಸ್ವಾಮಿ ದೇವಾಲಯ, ಗುರುವಾಯೂರು ಟೆಂಪಲ್‍ಹೀಗೆ ಹಲವು ಪ್ರಸಿದ್ಧ ದೇವಾಲಯಗಳು ಕೇರಳ ರಾಜ್ಯದಲ್ಲಿವೆ. ವರ್ಷವಿಡೀ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅಂಥಹದ್ದೇ ಒಂದು ದೇವಾಲಯ ವಡಕ್ಕುನಾಥನ್ ಟೆಂಪಲ್‍..

ಕೇರಳದಲ್ಲಿ ಹೆಚ್ಚಾಗಿ ಇರುವಂಥದ್ದು ಪ್ರಾಚೀನವಾಗಿರುವ ಪುರಾತನ ದೇವಾಲಯಗಳು. ಹೀಗಾಗಿಯೇ ಇವುಗಳ ನಿರ್ಮಾಣ, ಕೆತ್ತನೆ ಕೆಲಸಗಳಲ್ಲಿ ವಿಭಿನ್ನತೆಯನ್ನು ಕಾಣಬಹುದು. ಕೇರಳದಲ್ಲಿರುವ ವಡಕ್ಕುನಾಥನ್‍ಅಂಥಹದ್ದೇ ಒಂದು ದೇವಾಲಯ. ಈ ದೇವಾಲಯ ನಿರ್ಮಾಣ ಆಗಿರುವುದು ಯಾವಾಗ.. ವಡಕ್ಕುನಾಥನ್ ದೇವಾಲಯದ ವಿಶೇಷತೆಗಳೇನು ಮೊದಲಾದವುಗಳನ್ನು ತಿಳಿದುಕೊಳ್ಳೋಣ..

1000 ವರ್ಷಗಳಷ್ಟು ಹಳೆಯ ದೇವಾಲಯ..!

 Old Indian Photos Vadakkumnathan Shiva Temple in Thrissur, Kerala - India 1928 - Old Indian PhotosImage Credits : Old Indian Photos

ಕೇರಳ ತ್ರಿಶ್ಯೂರ್‍ರಾಜ್ಯದಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿರುವ ವಡಕ್ಕುನಾಥನ್ ದೇವಸ್ಥಾನವಿದೆ. ಇದು ಕೇರಳದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಈ ಪ್ರಾಚೀನ ದೇವಾಲಯವು ಕೇರಳದ ಸಂಸ್ಕೃತಿ ಮತ್ತು ಪರಂಪರೆಯಿಂದ ಸಮೃದ್ಧವಾಗಿದೆ. ಸುಂದರವಾದ ಮತ್ತು ಹಳೆಯ ಚಿತ್ರಗಳಿಗೆ ಟೆಂಪಲ್ ಹೆಸರುವಾಸಿಯಾಗಿದ. ಈ ದೇವಾಲಯದಲ್ಲಿ ಸುಮಾರು 400 ವರ್ಷಗಳಷ್ಟು ಹಳೆಯದಾದ ವರ್ಣಚಿತ್ರಗಳನ್ನು ನೋಡಬಹುದು. ವಡಕ್ಕುನಾಥನ್ ದೇವಸ್ಥಾನವು ಯುನೆಸ್ಕೋದಿಂದ ಶ್ರೇಷ್ಠವೆಂಬ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ. ವಿಶೇಷವೆಂದರೆ ಈ ದೇವಾಲಯವು 1000 ವರ್ಷಗಳಷ್ಟು ಹಳೆಯದಾಗಿದೆ ಎಂದು ಹೇಳಲಾಗುತ್ತದೆ.

ತ್ರಿಶೂರ್‌ನ ಜನರು ವಡಕ್ಕುನಾಥನ್ ದೇವಾಲಯದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉಳಿಸಿಕೊಂಡಿದ್ದಾರೆ. ದೇವಾಲಯದ ಭವ್ಯ ಪರಂಪರೆ. ಪದ್ಧತಿಗಳು ಹಳೆಯ ಕಾಲದಂತೆ ಇಂದಿಗೂ ಶಿಸ್ತುಬದ್ಧವಾಗಿ ಅನುಸರಿಸಿಕೊಂಡು ಹೋಗಲಾಗುತ್ತಿದೆ. ಈ ದೇವಾಲಯವು ಅದ್ಭುತ ವಾಸ್ತುಶಿಲ್ಪ ಸೌಂದರ್ಯ, ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಮಹಾ ವಿಷ್ಣು ಮತ್ತು ಶಂಕರ ನಾರಾಯಣ ಗುಡಿಗಳು ಸಹ ಈ ದೇವಾಲಯದಲ್ಲಿವೆ. 

ದೇವಾಲಯವು ಕೇರಳದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ಕೂತಂಬಲಂ ಎಂಬ ದೊಡ್ಡ ನೃತ್ಯ ಮಂಟಪವನ್ನು ಸಹ ಹೊಂದಿದೆ. ವಡಕ್ಕುನಾಥನ್ ದೇವಾಲಯದ ಉತ್ಸವದಲ್ಲಿ ವಿವಿಧ ಸಾಂಪ್ರದಾಯಿಕ ಪ್ರದರ್ಶನಗಳು ನಡೆಯುತ್ತವೆ. ಮತ್ತು ಇದನ್ನು ನಂಗ್ಯಾರ್ ಕೂತು ಎಂದು ಕರೆಯಲಾಗುತ್ತದೆ. ದೇವಾಲಯದ ಹೊರಗೆ ತಿರುವಂಬಡಿ ಕೃಷ್ಣ ದೇವಸ್ಥಾನ ಮತ್ತು ಪರಮೆಕ್ಕವು ದೇವಿ ದೇವಸ್ಥಾನ ಸಹ ಇದೆ.

ವಡಕ್ಕುನಾಥನ್ ದೇವಾಲಯವು ಬೆಟ್ಟದ ಬೀದಿಯಲ್ಲಿದೆ. 9 ಎಕರೆ ಪ್ರದೇಶದಲ್ಲಿ ಈ ಭವ್ಯ ದೇವಾಲಯದ ನಿರ್ಮಾಣವಾಗಿದೆ.. ದೇವಾಲಯದ ಪ್ರವೇಶದ್ವಾರವು ನಾಲ್ಕು ಗೋಪುರಗಳನ್ನು ಒಳಗೊಂಡಿದ್ದು, ಉತ್ತರ, ಪೂರ್ವ, ದಕ್ಷಿಣ ಮತ್ತು ಪಶ್ಚಿಮಕ್ಕೆ ಮುಖ ಮಾಡಿದೆ. ಪ್ರವೇಶದ್ವಾರಗಳು ನಾಲ್ಕು ಬೃಹತ್ ಗೇಟ್‌ ಗಳಿವೆ. ವಡಕ್ಕುನಾಥನ್, ಶಂಕರನಾರಾಯಣ್ ಮತ್ತು ಭಗವಾನ್ ರಾಮನ ಮುಖ್ಯ ದೇವಾಲಯಗಳಿವೆ. ಎಡಭಾಗದ ಪ್ರವೇಶದ್ವಾರವು ಇಳಿಜಾರಿನ ಛಾವಣಿಗಳ ಮೇಲೆ ತಾಮ್ರದ ಫಲಕಗಳನ್ನು ಹೊಂದಿದೆ ಮತ್ತು ರಂಗಮಂದಿರವನ್ನೂ ಸಹ ಹೊಂದಿದೆ. ದೇವಾಲಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ವಿಶೇಷವಾಗಿ ಸೋಮವಾರ ಮತ್ತು ವಾರಾಂತ್ಯದಲ್ಲಿ ಇಲ್ಲಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರುತ್ತಾರೆ.

ದೇವಾಲಯದಲ್ಲಿ ವಸ್ತ್ರಸಂಹಿತೆ ಪಾಲನೆ ಕಡ್ಡಾಯ

 Vadakkunnathan Temple - Picture of Vadakkunnathan Temple, ThrissurImage Credits : Tripadvisor

ಕೇರಳದ ಸಂಸ್ಕೃತಿ ಮತ್ತು ಕಲೆಯನ್ನು ಪ್ರತಿಬಿಂಬಿಸುವ ವಡಕ್ಕುನಾಥನ್ ದೇವಾಲಯದ ಒಳಗೆ ಹಳೆಯ ವಸ್ತು ಸಂಗ್ರಹಾಲಯವೂ ಇದೆ. ವಿವಿಧ ಗೋಡೆಯ ವರ್ಣಚಿತ್ರಗಳು, ಮರದ ಕೆತ್ತನೆಗಳು ಮತ್ತು ವಿಭಿನ್ನ ಭವ್ಯವಾದ ಕಲಾಕೃತಿಗಳನ್ನು ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ. ಇನ್ನು ಈ ದೇವಾಲಯದ ವಿಶೇಷತೆಯೆಂದರೆ ಇಲ್ಲಿ ವಸ್ತ್ರಸಂಹಿತೆ ಪಾಲನೆ ಮಾಡುವುದು ಕಡ್ಡಾಯ. ಕುಟುಂಬದೊಂದಿಗೆ ವಡಕ್ಕುನಾಥನ್ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರೆ, ಪರಿಪೂರ್ಣ ಭಾರತೀಯ ಉಡುಗೆ ಉಡುಪನ್ನು ಧರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಕಟ್ಟುನಿಟ್ಟಾದ ವಸ್ತ್ರಸಂಹಿತೆ ಇರುವುದರಿಂದ, ದೇವಾಲಯಕ್ಕೆ ಪ್ರವೇಶಿಸುವ ಮೂಲಕ ನೀವು ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಗೌರವಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಬೇಕು.

ದೇವಾಲಯದಲ್ಲಿ ವರ್ಷವೈ ಆನೇಯೂಟ್ಟು ಉತ್ಸವ ನಡೆಯುತ್ತದೆ, ಇದು ಆನೆಗಳಿಗೆ ಆಹಾರವನ್ನು ನೀಡುವ ವಾರ್ಷಿಕ ಹಬ್ಬವಾಗಿದೆ. ಈ ಉತ್ಸವದಲ್ಲಿ ಆನೆಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಇದು ವಡಕ್ಕುನಾಥನ್ ದೇವಾಲಯದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬದಲ್ಲಿ ಶಿವನ ಆಶೀರ್ವಾದ ಪಡೆಯಲು ದೇಶದ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ. 

ವಡಕ್ಕುನಾಥನ್ ದೇವಾಲಯವು 1000 ವರ್ಷಗಳಷ್ಟು ಹಳೆಯದಾಗಿದೆ. ಇದು ಕೇರಳದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ. ದೇವಾಲಯದ ವಾಸ್ತುಶಿಲ್ಪ ಮತ್ತು ವಿವಿಧ ವರ್ಣಚಿತ್ರಗಳು ಅದ್ಭುತವಾಗಿದೆ. ವಡಕ್ಕುನಾಥನ್‍ದೇವರನ್ನು ಪ್ರಾರ್ಥಿಸಿದ ಕಾರಣ ಶಿವಗುರು ಹಾಗೂ ಆರ್ಯಂಬ ದಂಪತಿಗೆ ಆದಿಶಂಕರಾಚಾರ್ಯಗೆ ಮಗನಾಗಿ ಹುಟ್ಟಿದರು. ಆ ನಂತರ ಶಿವನು ಶಿವಗುರು-ಆರ್ಯಂಬ ದಂಪತಿಯ ಕನಸಿನಲ್ಲಿ ಬಂದು ಆದಿಶಂಕರಾಚಾರ್ಯ ಬದುಕಿಗೆ ಎರಡು ಆಯ್ಕೆಗಳನ್ನು ಕೊಟ್ಟನು, 

ಅದರಲ್ಲಿ ಮೊದಲನೆಯದು ಸಾಮಾನ್ಯ ಮಗನಾಗಿದ್ದು ಆರೋಗ್ಯಕರ ಜೀವನವನ್ನು ನಡೆಸುತ್ತಾನೆ ಮತ್ತು ಎರಡನೆಯವನು ಅಸಾಧಾರಣ ಮಗನಾಗಿದ್ದು ಅವನು ಬೇಗನೆ ಸಾಯುತ್ತಾನೆ. ದಂಪತಿಗಳು ಎರಡನೇ ಆಯ್ಕೆಯನ್ನು ಆರಿಸುತ್ತಾರೆ, ಮತ್ತು ಅವರು ಮಗುವಿಗೆ ಆದಿ ಶಂಕರ ಎಂದು ಹೆಸರಿಡುತ್ತಾರೆ. ಇದು ವಡಕ್ಕುನಾಥನ್ ದೇವಾಲಯದ ಅತ್ಯಂತ ಆಸಕ್ತಿದಾಯಕ ಇತಿಹಾಸವಾಗಿದೆ. ಆದಿಶಂಕರನಿಗೆ ವಡಕ್ಕುನಾಥನ್ ದೇವಾಲಯದಲ್ಲೇ ವಿದೇಹ ಮುಕ್ತಿ ಸಿಕ್ಕಿತು ಎಂದು ಹೇಳಲಾಗುತ್ತದೆ..

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

https://t.me/Planettvkannada

 

 

Enjoyed this article? Stay informed by joining our newsletter!

Comments

You must be logged in to post a comment.

About Author