The Challenge: ಬಾಹ್ಯಾಕಾಶದಲ್ಲಿ ಚಿತ್ರೀಕರಣಗೊಳ್ಳಲಿದೆ ಮೊತ್ತ ಮೊದಲ ಚಿತ್ರ

The Challenge: ಬಾಹ್ಯಾಕಾಶದಲ್ಲಿ ಚಿತ್ರೀಕರಣಗೊಳ್ಳಲಿದೆ ಮೊತ್ತ ಮೊದಲ ಚಿತ್ರ

russian movie in spacesource and pic credit: https://www.google.com

ಮನುಷ್ಯನ ಉಗಮವೇ ಒಂದು ಅಚ್ಚರಿ..ನಾಗರೀಕತೆ ಬೆಳೆಯುತ್ತಾ ಹೋದಂತೆಲ್ಲಾ ಮನುಷ್ಯ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಅಚ್ಚರಿ ಮೂಡಿಸುತ್ತಾ ಹೋಗಿದ್ದಾನೆ. ಭೂಮಿ ಎಂಬ ಗ್ರಹದಲ್ಲಿನ ಸಂಶೋಧನೆಗಳು ಮಾತ್ರವಲ್ಲ ಬಾಹ್ಯಾಕಾಶದ ಬಗ್ಗೆಯೂ ಹಲವು ವಿಚಾರಗಳನ್ನು ತಿಳಿದುಕೊಂಡಿದ್ದಾನೆ. ಮಾನವ ಭೂಮಿಯ ಸುತ್ತಲು ಗ್ರಹಗಳಿವೆ ಎಂಬುದನ್ನು ಸಂಶೋಧಿಸಿ ಬರೋಬ್ಬರಿ 60 ವರ್ಷಗಳೇ ಕಳೆದಿವೆ. ಇದೀಗ ಮೊತ್ತ ಮೊದಲ ಬಾರಿಗೆ ಸಿನಿಮಾವೊಂದು ಬಾಹ್ಯಾಕಾಶದಲ್ಲಿ ಚಿತ್ರೀಕರಿಸಲ್ಪಡುತ್ತಿದೆ.

russia to shoot in spacesource and pic credit: https://futurism.com

ಹೌದು, ಬಾಹ್ಯಾಕಾಶದಲ್ಲಿ ಮೊತ್ತ ಮೊದಲ ಸಿನಿಮಾ ಚಿತ್ರೀಕರಣಗೊಳ್ಳಲಿದ್ದು, ರಷ್ಯಾ ಈ ಸಿನಿಮಾವನ್ನು ತಯಾರಿಸುತ್ತಿದೆ. ಪ್ರತಿ ಸಾರಿಯಂತೆ ಈ ಬಾರಿಯೂ ರಷ್ಯಾ ಅಮೇರಿಕಾವನ್ನು ಹಿಂದಿಕ್ಕಿ  ಈ ಸಾಧನೆಯನ್ನು ಮಾಡಲು ಹೊರಟಿದೆ. ರಷ್ಯನ್ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸೊಮಸ್‍ ಈ ಬಗ್ಗೆ ಮಾಹಿತಿ ನೀಡಿದೆ. ಬಾಹ್ಯಾಕಾಶಕ್ಕೆ ತೆರಳುತ್ತಿರುವ ತಂಡದ ಬಗ್ಗೆಯೂ ಸಂಸ್ಥೆ ಮಾಹಿತಿ ನೀಡಿದೆ.  ಅತ್ಯಪೂರ್ವ ಸಾಧನೆಯನ್ನು ಮಾಡಲು ತಾವು ಮುಂದಾಗುತ್ತಿರುವುದಾಗಿ ರಷ್ಯನ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

roscosmos to shoot in spacesource and pic credit: https://www.rbth.com

ಬಾಹ್ಯಾಕಾಶದಲ್ಲಿ ಚಿತ್ರೀಕರಿಸಲ್ಪಡುವ ಈ ಚಿತ್ರದಲ್ಲಿ ಯುಲಿಯಾ ಪರ್ಸಿಲಿಡ್ ಅಭಿನಯಿಸಲಿದ್ದು, ಕ್ಲಿಮ್ ಶೆಪೆಂಕೋ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಯುಲಿಯಾ ಪರ್ಸಿಲಿಡ್ ಈಗಾಗಲೇ ಹಲವು ರಷ್ಯನ್ ಚಿತ್ರಗಳಲ್ಲಿ ಅಭಿನಯಿಸಿದ್ದು, ಯಶಸ್ವಿಯಾಗಿದ್ದಾರೆ. ಆದರೆ ಬಾಹ್ಯಾಕಾಶದಲ್ಲಿ ಚಿತ್ರೀಕರಿಸಲ್ಪಡುವ ಈ ಮೊತ್ತ ಮೊದಲ ರಷ್ಯನ್ ಸಿನಿಮಾದ ಕಥಾಹಂದರ ಏನು ಎಂಬ ಬಗ್ಗೆ ಇನ್ನೂ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ.

russian movie in spacesource and pic credit: https://asviral.com

ರಷ್ಯನ್ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸೊಮಸ್‍ ಜತೆ ಸಿನಿಮಾದ ಕೆಲಸ ಮಾಡಲು ಮುಂದಾಗಿರುವ ರಷ್ಯನ್ ಪ್ರಸಿದ್ಧ ಚಾನೆಲ್ ಒನ್, ಇದು ವಿಜ್ಞಾನದ ಕುರಿತಾದ ಸಿನಿಮಾ ಅಲ್ಲ ಎಂಬುದನ್ನು ತಿಳಿಸಿದೆ. ಬದಲಾಗಿ ಬಾಹ್ಯಾಕಾಶ ಪ್ರಯಾಣದ ನಿಜವಾದ ಘಟನೆಯನ್ನು ಆಧರಿಸಿ ನಿರ್ಮಿಸುತ್ತಿರುವ ಚಿತ್ರ ಎಂದು ಹೇಳಿಕೊಂಡಿದೆ. ವ್ಯಾಜೋವ್ ಎಂಬುದು ಸ್ಪೇಸ್‍ ನಲ್ಲಿ ಮೊತ್ತ ಮೊದಲು ಚಿತ್ರೀಕರಣ ನಡೆಯುವ ಈ ಸಿನಿಮಾದ ಹೆಸರಾಗಿದೆ. ವ್ಯಾಜೋವ್ ಎಂದರೆ ಚಾಲೆಂಜ್ ಎಂದರ್ಥ.

russia to spacesource and pic credit: https://asviral.com

ಬಾಹ್ಯಾಕಾಶದಲ್ಲಿ ಚಿತ್ರೀಕರಣಕ್ಕಾಗಿ ತಂಡಕ್ಕೆ ತರವೇತಿ

ದಿ ಚಾಲೆಂಜ್ ಚಿತ್ರಕ್ಕಾಗಿ ಈಗಾಗಲೇ ಚಿತ್ರದ ತಂಡಕ್ಕೆ ಎಲ್ಲಾರೀತಿಯ ಟ್ರೈನಿಂಗ್ಗಳನ್ನು ನೀಡಲಾಗುತ್ತಿದೆ. ಝೀರೋ ಗ್ರಾವಿಟಿಯಲ್ಲಿ ಇರುವ ಬಗ್ಗೆ ನಟ ಯುಲಿಯಾ ಪರ್ಸಿಲಿಡ್ ಮತ್ತಿತರರು ತರಬೇತಿ ಪಡೆಯುತ್ತಿದ್ದಾರೆ. ಚಿತ್ರ ಬಿಡುಗಡೆಯ ದಿನಾಂಕ ಇನ್ನೂ ಬಹಿರಂಗಪಡಿಸಿಲ್ಲ.

ಬಾಹ್ಯಾಕಾಶದಲ್ಲಿ ಈ ಚಿತ್ರದ ಚಿತ್ರೀಕರಣ 5 October 2021ರಿಂದ ಆರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.. ನವೆಂಬರ್ 2020ರಲ್ಲಿ ಚಿತ್ರತಂಡ ನಟ-ನಟಿಯರ ಅಡಿಷನ್ ಗೆ ಕರೆ ನೀಡಿತ್ತು. ಸ್ಟಾರ್‍ ಬಳಿಗೆ ಸಾಗುವ, ಭವಿಷ್ಯದಲ್ಲಿ ದೊಡ್ಡ ಅಂತಾರಾಷ್ಟ್ರೀಯ ಸ್ಟಾರ್ ಆಗುವವರಿಗಾಗಿ ಹುಡುಕುತ್ತಿರುವುದಾಗಿ ಹೇಳಿಕೊಂಡಿತ್ತು. ನಟಿ ರಷ್ಯನ್ ಪ್ರಜೆಯಾಗಿದ್ದು, 25ರಿಂದ 40 ವರ್ಷದವರು ಆಗಿರಬೇಕೆಂದು ಹೇಳಿತ್ತು. ಅಲ್ಲದೆ 50ರಿಂದ 70 ಕೆಜಿ ಇರುವವವರು ಮಾತ್ರ ಅಡಿಷನ್ ನಲ್ಲಿ ಭಾಗವಹಿಸುವಂತೆ ಸೂಚಿಸಿತ್ತು.

russia to space

source and pic credit: https://asviral.com

ಅಲ್ಲದೆ 1 ಕಿ.ಮೀಯನ್ನು 3 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಓಡಿ ಮುಗಿಸುವವರಾಗಿರಬೇಕು. 20 ನಿಮಿಷದಲ್ಲಿ 800 ಮೀಟರ್ ಈಜಬಲ್ಲವರು ಆಗಿರಬೇಕು ಎಂದು ಹೇಳಿತ್ತು. ಅಲ್ಲದೆ ಈ ಹಿಂದೆ ಅಭಿನಯಿಸಿದ ಅನುಭವ ಇಲ್ಲದಿದ್ದರೂ ಪರವಾಗಿಲ್ಲ ಎಂದಿತ್ತು. ರಷ್ಯನ್ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸೊಮಸ್‍ ಚಾಲೆಂಜ್ ಚಿತ್ರ, ರಷ್ಯಾದ ಬಾಹ್ಯಾಕಾಶ ಚಟುವಟಿಕೆಗಳನ್ನು ಹೆಚ್ಚು ಪ್ರಸಿದ್ಧಿಗೊಳಿಸಲಿದೆ ಎಂದು ಹೇಳಿಕೊಂಡಿದೆ.

ರೇಸ್ಟುಸ್ಪೇಸ್

russia to spacesource and pic credit: https://www.sciencetimes.com

ಈಗಾಗ್ಲೇ ವಿಶ್ವದ ದೊಡ್ಡಣ್ಣ ಅಮೇರಿಕಾ ಬಾಹ್ಯಾಕಾಶದಲ್ಲಿ ಮೊತ್ತ ಮೊದಲ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಬಗ್ಗೆ ಕಳೆದ ವರ್ಷ ವಷ್ಟೇ ಅಮೇರಿಕಾ ಬಹಿರಂಗ ಪಡಿಸಿತ್ತು. ನಟ ಟೋಮ್ಕ್ರುಯಿಸ್, ಡೌಗ್ಲಿಮಾನ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ, ಸಿನಿಮಾದ ಚಿತ್ರೀಕರಣ ಬಾಹ್ಯಾಕಾಶದಲ್ಲಿ ನಡೆಯಲಿದೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದ್ದರು.

 

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author