Image Source : monomousumi
ಮರುಭೂಮಿ ಎಂದರೆ ಎಲ್ಲರಿಗೂ ತಕ್ಷಣಕ್ಕೆ ನೆನಪು ಬರುವುದು ರಾಜಸ್ಥಾನದ ಮರುಭೂಮಿ. ಇಡೀ ರಾಜಸ್ಥಾನವು ಮರುಭೂಮಿಯಲ್ಲದಿದ್ದರೂ, ಮರಳು ಮತ್ತು ಮರುಭೂಮಿಯನ್ನು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಕಾಣಬಹುದು. ಜೈಸಲ್ಮೇರ್ ಥಾರ್ ಮರುಭೂಮಿಯ ಹೃದಯಭಾಗವೆಂದು ಕರೆಯಲ್ಪಡುತ್ತದೆ. ಇದು ಹೆಚ್ಚು ಪ್ರಸಿದ್ಧಿ ಸಹ ಹೊಂದಿರುವ ಕಾರಣ ಮರುಭೂಮಿ ಎಂದರೆ ಥಟ್ಟಂತ ರಾಜಸ್ಥಾನವೇ ನೆನಪಾಗುತ್ತದೆ. ಆದರೆ ನಾವಿಲ್ಲಿ ಹೇಳಲು ಹೊರಟಿರುವುದು ಅಲ್ಲೆಲ್ಲೋ ದೂರದಲ್ಲಿರುವ ರಾಜಸ್ಥಾನದಲ್ಲಿರುವ ಮರುಭೂಮಿಯ ಬಗ್ಗೆ ಅಲ್ಲ. ನಮ್ಮಲ್ಲಿ ಕರ್ನಾಟಕದಲ್ಲಿರುವ ಮರುಭೂಮಿಯ ಬಗ್ಗೆ.
ಇಷ್ಟಕ್ಕೂ ಮರುಭೂಮಿ ಎಂದರೇನು..? ಮರುಭೂಮಿ ಎಂದರೆ ಶಾಶ್ವತ ಬರಗಾಲ. ಮುಖ್ಯವಾಗಿ ಬದುಕಲು ಬೇಕಾದ ನೀರೇ ಇಲ್ಲದ ತಾಣ..ಅಲ್ಲಿರುವುದು ಹಚ್ಚ ಹಸುರಿನ ಪ್ರದೇಶವಿಲ್ಲದ ಬರೀ ಮರಳುಗಾಡು. ಕೊನೆಯಿರದ ದಾರಿ, ಮರಳು, ಬಿಸಿಲು ಇವಿಷ್ಟೇ ಕಾಣಸಿಗುತ್ತದೆ. ಒಟ್ಟಾರೆ ಮರುಭೂಮಿಯಿಂದರೆ ಭೀಕರವೆಂದೇ ಹೇಳಲಾಗುತ್ತದೆ. ಮರುಭೂಮಿಯಂತಹಾ ಪ್ರದೇಶಗಳು ಕಾಣಸಿಗುವುದು ಬಹಳ ಅಪರೂಪ. ಎಲ್ಲಾದರೂ ಮರುಭೂಮಿಯಿದ್ದರೆ ಅದು ಫಲವತ್ತತೆ ಇಲ್ಲದ ಪ್ರದೇಶ ಅಥವಾ ಡೆಡ್ ಲ್ಯಾಂಡ್ ಎಂದೇ ಪರಿಗಣಿಸಲ್ಪಡುತ್ತದೆ.
ಇಂಥಹಾ ಮರುಭೂಮಿ ಕರ್ನಾಟಕದಲ್ಲಿ ಎಲ್ಲಿದೆ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಬಹುದು. ಆ ಎಲ್ಲದರ ಕುರಿತು ಮಾಹಿತಿ ಈ ಕೆಳಗಿದೆ. ಇಷ್ಟಕ್ಕೂ ಕರ್ನಾಟಕದಲ್ಲಿರುವುದನ್ನು ಸಂಪೂರ್ಣವಾಗಿ ಮರುಭೂಮಿಯೆಂದು ಪರಿಗಣಿಸುವಂತೆಯೂ ಇಲ್ಲ. ಇದೊಂದು ಶಾಪಗ್ರಸ್ಥ ಸ್ಥಳ. ಹಿಂದೊಮ್ಮೆ ಫಲವತ್ತಾಗಿದ್ದ ಸ್ಥಳ ಶಾಪಕ್ಕೆ ಸಿಲುಕಿ ಹೀಗೆ ಬರಡು ಭೂಮಿಯಾಗಿ ಪರಿವರ್ತನೆಗೊಂಡಿದೆ. ಹೌದು, ಕರ್ನಾಟಕದಲ್ಲಿಯೂ ಸಂಪೂರ್ಣವಾಗಿ ಮರುಭೂಮಿಯಾಗಿರುವ ಸ್ಥಳವಿದೆ, ಇದನ್ನು ತಲಕಾಡು ಎಂದು ಕರೆಯಲಾಗುತ್ತದೆ.
ಈ ಸ್ಥಳದ ಬಗ್ಗೆ ಅತ್ಯಂತ ಆಸಕ್ತಿದಾಯಕ ಸಂಗತಿಯೆಂದರೆ, ತಲಕಾಡು ಸಂಪೂರ್ಣವಾಗಿ ಮರಳಿನಿಂದ ತುಂಬಿದೆ. ಇದು ವಾಸ್ತವವಾಗಿ ಮರುಭೂಮಿಯಂತಹ ಪ್ರದೇಶವಾಗಿದೆ. ಕಾವೇರಿ ನದಿಯ ಪಕ್ಕದಲ್ಲಿ ಸುಮಾರು 1000 ಎಕರೆ ಸಂಪೂರ್ಣ ಮರುಭೂಮಿಯಾಗಿದೆ. ಈ ಮರಳು ಎಲ್ಲಿಂದ ಬಂತು ಎಂಬುದು ಯಾರಿಗೂ ತಿಳಿದಿಲ್ಲ.
ತಲಕಾಡು ಮರುಭೂಮಿಯಾಗಲು ಕಾರಣವೇನು..?
11 ನೇ ಶತಮಾನದ ಆರಂಭದಲ್ಲಿ ತಲಕಾಡನ್ನು ಗಂಗಾ ಮತ್ತು ನಂತರ ಚೋಳರು ಆಳಿದರು ಎಂದು ಹೇಳಲಾಗುತ್ತದೆ. ಚೋಳರು ತಲಕಾಡನ್ನು ವಶಪಡಿಸಿಕೊಂಡರು ಮತ್ತು ಅದಕ್ಕೆ ರಾಜರಾಜಪುರ ಎಂಬ ಹೆಸರನ್ನು ನೀಡಿದರು. ಆದರೆ ಸುಮಾರು ನೂರು ವರ್ಷಗಳ ನಂತರ ಚೋಳರನ್ನು ಮೈಸೂರಿನಿಂದ ಓಡಿಸಿದ ಹೊಯ್ಸಳ ರಾಜ ವಿಷ್ಣುವರ್ಧನನು ತಲಕಾಡನ್ನು ವಶಪಡಿಸಿಕೊಂಡನು. 14 ನೇ ಶತಮಾನದ ಮಧ್ಯಭಾಗದ ವರೆಗೆ, ಇದು ಹೊಯ್ಸಳರ ವಶವಾಗಿತ್ತು, ಮತ್ತು ನಂತರ ವಿಜಯನಗರ ಸಾರ್ವಭೌಮತ್ವದ ಕೈಗೆ ಸಿಕ್ಕಿತು. 1610 ರಲ್ಲಿ ಇದನ್ನು ಮೈಸೂರಿನ ಒಡೆಯರ್ ರಾಜರು ವಶಪಡಿಸಿಕೊಂಡರು ಎಂದು ಹೇಳಲಾಗುತ್ತದೆ.
ಒಡೆಯರ್ ರಾಜವಂಶದ ಆಳ್ವಿಕೆಯಲ್ಲಿ ತಲಕಾಡು ಮರುಭೂಮಿಯಾಯಿತು ಎಂದು ಹೇಳಲಾಗುತ್ತದೆ. ಒಡೆಯರ್ ರಾಜವಂಶವು 1399ರಿಂದ 1947ರ ವರೆಗೆ ಹಿಂದಿನ ಮೈಸೂರು ಸಾಮ್ರಾಜ್ಯವನ್ನು ಆಳಿತು. 500 ವರ್ಷಗಳಿಗಿಂತ ಹೆಚ್ಚು ಕಾಲ ರಾಜ್ಯವನ್ನು ಆಳಿದ ಭಾರತದ ಏಕೈಕ ರಾಜಮನೆತನ ಇದು. ಈ ರಾಜಮನೆತನದ ಆಡಳಿತವು 5 ಶತಮಾನಗಳಿಗಿಂತಲೂ ಹೆಚ್ಚಿತ್ತು, ಅದರಲ್ಲಿ 25 ರಾಜರು ಇದ್ದರು. ರಾಣಿ ಅಲಮೇಲಮ್ಮನ ಶಾಪದಿಂದಾಗಿ ತಲಕಾಡು ಮರಳಿನ ಕೆಳಗೆ ಹೂತುಹೋಯಿತು ಎಂಬ ಪ್ರತೀತಿಯಿದೆ,
‘ತಲಕಾಡು’ ಮರುಭೂಮಿಯಾಗಲು ಶಾಪ ನೀಡಿದ ಅಲಮೇಲಮ್ಮ..!
Image Credits : navrang india
ತಲಕಾಡಿನಲ್ಲಿ ಯಾವ ದಿಕ್ಕಿನತ್ತ ನೋಡಿದರೂ ಬರೀ ಮರಳಷ್ಟೇ ಕಾಣಸಿಗುತ್ತದೆ. ಈ ಪ್ರದೇಶ ಈ ರೀತಿ ಮರುಭೂಮಿಯಾಗಿ ಪರಿವರ್ತನೆಯಾಗಲು ಅಲಮೇಲಮ್ಮ ನೀಡಿದ ಶಾಪವೇ ಕಾರಣವೆಂದು ಹೇಳಲಾಗುತ್ತದೆ. ಯಾರು ಆ ಅಲಮೇಲಮ್ಮ, ಶಾಪ ನೀಡಿದ್ದು ಯಾಕಾಗಿ ಎಂಬ ಕುತೂಹಲಕಾರಿ ವಿಷಯಗಳನ್ನು ತಿಳಿಯೋಣ..
16ನೇ ಶತಮಾನದಲ್ಲಿ ಮೈಸೂರು ಸಾಮ್ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣ ವಿಜಯನಗರದ ಅರಸರಿಗೆ ಸೇರಿದ್ದಾಗಿತ್ತು. ಶ್ರೀರಂಗರಾಯ ಎಂಬ ಪ್ರತಿನಿಧಿ ಇದನ್ನು ನೋಡಿಕೊಳ್ಳುತ್ತಿದ್ದರು. ಅವರ ಪತ್ನಿ ಅಲಮೇಲಮ್ಮ. ಬೆನ್ನುಫಣಿ ರೋಗವಿದ್ದ ಶ್ರೀರಂಗರಾಯರು ತಲಕಾಡಿಗೆ ಹೋಗಿ ಅಲ್ಲಿ ವೈದ್ಯೇಶ್ವರ ಸ್ವಾಮಿಯ ಪೂಜೆ ಮಾಡಿದರು. ಹೀಗಿದ್ದೂ ರೋಗ ಕಡಿಮೆಯಾಗದೆ ತಲಕಾಡಿನಲ್ಲಿಯೇ ಮರಣಹೊಂದಿದರು.
ಅದರ ನಂತರ ಪತ್ನಿ ಅಲಮೇಲಮ್ಮ ತಲಕಾಡಿನ ಪಕ್ಕದಲ್ಲಿ ನದಿಯ ಆಚೆಗಿರುವ ಮಾಲಂಗಿ ಎನ್ನುವ ಗ್ರಾಮದಲ್ಲಿ ಹೋಗಿ ನೆಲೆಸಿದರು. ಶ್ರೀರಂಗಪಟ್ಟಣ ಮೈಸೂರು ಮನೆತನಕ್ಕೆ ಸೇರಿದ ರಾಜ ಒಡೆಯರ್ ರಾಜವಂಶದ ಕೈವಶವಾಯಿತು. ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದಲ್ಲಿ ನಡೆಯುತ್ತಿದ್ದ ವಿಶೇಷ ದೇವಿ ಪೂಜೆಗೆ ಅಲಮೇಲಮ್ಮ ತಮ್ಮ ಒಡವೆಗಳನ್ನು ನೀಡುತ್ತಿದ್ದರು. ದೇವರಿಗೆ ಆಭರಣಗಳಿಂದ ಅಲಂಕರಿಸಿ ಪೂಜೆಯಾದ ಬಳಿಕ ಒಡವೆಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿದ್ದರು. ಈ ವಿಷಯವು ಅಧಿಕಾರಿಗಳಿಂದ ಮೈಸೂರು ಮಹಾರಾಜರಿಗೆ ತಿಳಿಯಿತು.
ಮೈಸೂರಿನ ಒಡೆಯರ್ ರಾಜ ರಾಣಿ ಅಲಮೆಲಮ್ಮನ ಆಭರಣಗಳನ್ನು ಪಡೆಯಲು ಬಯಸಿದ್ದರು. ಆಭರಣಗಳನ್ನು ತಮಗೆ ಒಪ್ಪಿಸುವಂತೆ ಅಲಮೇಲಮ್ಮಗೆ ಆಜ್ಞೆ ಹೊರಡಿಸಿದರು. ಅಲಮೇಲಮ್ಮ ಅದಕ್ಕೆ ಒಪ್ಪದಿದ್ದಾಗ ಬಲವಂತಪಡಿಸಲು ಸೈನ್ಯವನ್ನೇ ಕಳುಹಿಸಿಕೊಟ್ಟರು. ಇದರಿಂದ ಬಹಳವಾಗಿ ನೊಂದುಕೊಂಡ ರಾಣಿ ಅಲಮೇಲಮ್ಮ ಕಾವೇರಿಯ ದಡಕ್ಕೆ ಹೋಗಿ ತನ್ನ ಆಭರಣಗಳನ್ನು ನದಿಗೆ ಎಸೆದು ತಾವೂ ನೀರಿನಲ್ಲಿ ಮುಳುಗಿಹೋದರು. ಸಾಯುವ ಮುನ್ನ ‘ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ರಾಜರಿಗೆ ಮಕ್ಕಳಾಗದೆ ಹೋಗಲಿ’ ಎಂದು ಶಾಪವಿತ್ತರು.
ಅದರಂತೆ ತಲಕಾಡು ಸಂಪೂರ್ಣವಾಗಿ ಮರಳಿನಲ್ಲಿ ಹೂತು ಹೋಯಿತು, ಮರುಭೂಮಿಯಾಯಿತು ಎಂದು ಹೇಳಲಾಗುತ್ತದೆ. 30ಕ್ಕೂ ಹೆಚ್ಚು ದೇವಾಲಯಗಳು ಮತ್ತು ಒಂದು ಅರಮನೆ ಇವೆಲ್ಲವೂ ಮರಳಿನ ಕೆಳಗೆ ಹೂತು ಹೋಗಿವೆ ಎಂದು ಹೇಳಲಾಯಿತು. ಅದರಲ್ಲಿ ಕೆಲವೊಂದನ್ನು ಉತ್ಖನನದ ಮೂಲಕ ಹೊರತೆಗೆಯಲಾಯಿತು.
ಐದು ದೇವಾಲಯಗಳಿಗೆ ಹೆಸರುವಾಸಿಯಾದ ತಲಕಾಡು..!
ತಲಕಾಡು ಸುಂದರವಾದ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಈ ನಗರವು ಐದು ದೇವಾಲಯಗಳಿಗೆ ಹೆಸರುವಾಸಿಯಾಗಿದೆ, ಅವುಗಳೆಂದರೆ ವೈದ್ಯನಾಥೇಶ್ವರ, ಪಾತಳೇಶ್ವರ, ಮಾರುಳೇಶ್ವರ, ಅರ್ಕೇಶ್ವರ ಮತ್ತು ಮಲ್ಲಿಕಾರ್ಜುನ ದೇವಸ್ಥಾನ. ಐದು ಲಿಂಗಗಳು ಶಿವನ ಐದು ಮುಖಗಳನ್ನು ಪ್ರತಿನಿಧಿಸುತ್ತವೆ. ಈ ಐದು ಶಿವ ದೇವಾಲಯಗಳ ಗೌರವಾರ್ಥವಾಗಿ, 12 ವರ್ಷಗಳಿಗೊಮ್ಮೆ ಪಂಚಲಿಂಗ ದರ್ಶನ ಎಂಬ ಜಾತ್ರೆಯನ್ನು ನಡೆಸಲಾಗುತ್ತದೆ, ಇದನ್ನು ಕೊನೆಯದಾಗಿ 2009 ರಲ್ಲಿ ನಡೆಸಲಾಯಿತು. ತಲಕಾಡು ಬೆಂಗಳೂರಿನಿಂದ ಸುಮಾರು 136 ಕಿ.ಮೀ ಮತ್ತು ಮೈಸೂರಿನಿಂದ 45 ಕಿ.ಮೀ ದೂರದಲ್ಲಿದೆ.
Featured Image Source : Rozbuzz
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
You must be logged in to post a comment.