ಭಾರತದಲ್ಲಿ ಮಂಕಿಪಾಕ್ಸ್ ಗೆ ಮೊದಲ ಬಲಿ, ಯುಎಇಯಿಂದ ಆಗಮಿಸಿದ್ದ ಕೇರಳ ಯುವಕ ಸಾವು

ತಿರುವನಂತಪುರ: ಭಾರತದಲ್ಲಿ ಮಂಕಿಪಾಕ್ಸ್ ಗೆ ಮೊದಲ ಬಲಿಯಾಗಿದ್ದು, ಇತ್ತೀಚೆಗೆ ಯುಎಇಯಿಂದ ಕೇರಳಕ್ಕೆ ವಾಪಸ್ಸಾಗಿದ್ದ ವ್ಯಕ್ತಿಯೊಬ್ಬರು ಮಂಕಿಪಾಕ್ಸ್ ನಿಂದ ಶನಿವಾರ ಮೃತಪಟ್ಟಿರೋದಾಗಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಖಚಿತಪಡಿಸಿದ್ದಾರೆ.

 

 
 

ರೋಗಿಯು ಯುವಕನಾಗಿದ್ದು ಬೇರೆ ಯಾವುದೇ ಅನಾರೋಗ್ಯ ಅಥವಾ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರಲಿಲ್ಲ. ಮಂಕಿಪಾಕ್ಸ್ ನಿಂದಲೇ ಯುವಕ ಮೃತಪಟ್ಟಿದ್ದಾರೆ. ಇದರೊಂದಿಗೆ ಜಗತ್ತಿನಲ್ಲಿ ಮಂಕಿಪಾಕ್ಸ್ ನಿಂದ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದ

“ಜುಲೈ 22 ರಂದು ಯುಎಇಯಿಂದ ಹಿಂದಿರುಗಿದ ಯುವಕನಿಗೆ ಜುಲೈ 26 ರಂದು ಜ್ವರ ಕಾಣಿಸಿಕೊಂಡಿತು. ತನ್ನ ಕುಟುಂಬದೊಂದಿಗೆ ಇದ್ದ ಯುವಕ ಜುಲೈ 27 ರಂದು ಆಸ್ಪತ್ರೆಗೆ ದಾಖಲಾಗಿದ್ದ. ಜುಲೈ 28 ರಂದು ಅವನನ್ನು ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಯಿತು ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಜುಲೈ 30 ರಂದು ನಿಧನರಾದ ಯುವಕನ ಸ್ಯಾಂಪಲ್ಸ್ ಅನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ(NIV) ನಲ್ಲಿ ಜೀನೋಮಿಕ್ ಸೀಕ್ವೆನ್ಸಿಂಗ್ ಗೆ ಕಳಿಸಲಾಗಿತ್ತು. ಪರೀಕ್ಷೆಯಲ್ಲಿ ಮಂಕಿಪಾಕ್ಸ್ ದೃಢಪಟ್ಟಿದ್ದಾಗಿ ಸಚಿವರು ತಿಳಿಸಿದ್ದಾರೆ.

ದುಬೈನಿಂದ ಕೇರಳಕ್ಕೆ ವಾಪಸಾಗಿದ್ದ 22 ವರ್ಷದ ಈ ಯುವಕ ವಿದೇಶದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮಂಕಿಪಾಕ್ಸ್ ಪಾಸಿಟಿವ್ ಬಂದಿದ್ದು, ತೀವ್ರ ಸುಸ್ತು ಹಾಗೂ ಮೆದುಳು ಜ್ವರದಿಂದ ತ್ರಿಶೂರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

 

ಮೃತ ಯುವಕನ ಸಂಪರ್ಕದಲ್ಲಿದ್ದ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ವೈದ್ಯಕೀಯ ಸಿಬ್ಬಂದಿಯ ವೀಕ್ಷಣೆಯಲ್ಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ, ಈ ತಿಂಗಳ ಆರಂಭದಲ್ಲಿ, ಸೋಂಕಿತರ ಪ್ರತ್ಯೇಕತೆ, ಮಾದರಿ ಸಂಗ್ರಹಣೆ ಮತ್ತು ಚಿಕಿತ್ಸೆಗಾಗಿ ಅಥವಾ ರೋಗದ ಚಿಹ್ನೆಗಳನ್ನು ತೋರಿಸಲು ರಾಜ್ಯ ಸರ್ಕಾರವು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್‌ಒಪಿ) ಹೊರಡಿಸಿತ್ತು.

ಆರೋಗ್ಯ ಇಲಾಖೆಯ SOP ಪ್ರಕಾರ, ಮಂಗನ ಕಾಯಿಲೆಯ ಶಂಕಿತ ಮತ್ತು ಸಂಭವನೀಯ ಪ್ರಕರಣಗಳನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಬೇಕು ಮತ್ತು ತಕ್ಷಣ ಜಿಲ್ಲಾ ಕಣ್ಗಾವಲು ಅಧಿಕಾರಿ(DSO)ಗೆ ತಿಳಿಸಬೇಕು. ಮಂಕಿಪಾಕ್ಸ್ ನ  ಮೊದಲ ಪ್ರಕರಣ ಜುಲೈ 14 ರಂದು ದಕ್ಷಿಣ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ವರದಿಯಾಗಿತ್ತು.

Enjoyed this article? Stay informed by joining our newsletter!

Comments

You must be logged in to post a comment.

About Author

A passionate Creator