ಗಣೇಶನಿಗೆ ಇಟ್ಟಿದ್ದ ಈ ಲಾಡು 19 ಲಕ್ಷಕ್ಕೆ ಹರಾಜು!

 The Indian Express Hyderabad: Balapur's 21-kg laddu will not go under the hammer this year Feature Image Source : The Indian Express

ವಿಘ್ನೇಶ್ವರ, ಗಜಮುಖ, ಗಣೇಶನ ಹಬ್ಬ ಭಾರತದಲ್ಲಿ ಬಹಳ ಜೋರಾಗಿ ಆಚರಿಸಲಾಗುತ್ತದೆ. ದೇಶದ ಒಂದೊಂದು ಭಾಗದಲ್ಲಿ ಒಂದೊಂದು ಸಂಪ್ರದಾಯವಿದೆ. ವಿಭಿನ್ನ ರೀತಿಯಲ್ಲಿ ಆಚರಿಸಿ, ಸಂಭ್ರಮಿಸಲಾಗುತ್ತದೆ. 

ಹೈದರಾಬಾದ್‍ನ ಬಾಲಾಪುರದಲ್ಲಿ ಒಂದು ವಿಶೇಷ ಸಂಪ್ರದಾಯವಿದೆ. ಪ್ರತಿ ವರ್ಷ ಬಹಳ ದೊಡ್ಡ ಗಣೇಶ ಮೂರ್ತಿಯನ್ನು ಕೂರಿಸಿ 10 ದಿನಗಳ ಕಾಲ ಪೂಜಿಸಲಾಗುತ್ತದೆ. ಇದು ಭಾರತದ ಅತ್ಯಂತ ಜನಪ್ರಿಯ ಗಣೇಶ ಪೆಂಡಾಲ್‍ಗಳಲ್ಲಿ ಒಂದು. 

 

ಗಣೇಶನಿಗೆ ಲಾಡು ನೈವೇದ್ಯ

1994ರಿಂದ ಈ ಗಣೇಶ ಉತ್ಸವದಲ್ಲಿ ದೇವರಿಗೆ ಲಾಡುವನ್ನು ತಯಾರಿಸಿ ಅದನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಈ ಲಾಡು ಪ್ರಸಾದಕ್ಕಾಗಿ ಬಹಳ ಬೇಡಿಕೆ ಇದೆ. ಪ್ರತಿ ವರ್ಷ 10 ದಿನಗಳ ಉತ್ಸವದ ಬಳಿಕ ಲಾಡುವನ್ನು ಹರಾಜು ಹಾಕಲಾಗುತ್ತದೆ. 

laddu auction in hyderabadImage Source : The News Minute

ಲಾಡುಗಾಗಿ ಭರ್ಜರಿ ಬಿಡ್ಡಿಂಗ್!

ಈ ವರ್ಷ ಲಾಡು ಪ್ರಸಾದವನ್ನು ಬರೋಬ್ಬರಿ 18 ಲಕ್ಷ 90 ಸಾವಿರ ರುಪಾಯಿಗಳಿಗೆ ಬಿಡ್ ಮಾಡಿ ಖರೀದಿ ಮಾಡಲಾಯಿತು. 21 ಕೆ.ಜಿ ತೂಕವಿದ್ದ ಲಾಡುವಿನ ಮೂಲಬೆಲೆ 1116 ರುಪಾಯಿಗಳಾಗಿತ್ತು. ಆ ಲಾಡುವನ್ನು ಖರೀದಿ ಮಾಡಲು 19 ಮಂದಿ ಬಿಡ್ಡಿಂಗ್‍ನಲ್ಲಿ ಪಾಲ್ಗೊಂಡಿದ್ದರು. 

ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ವೈಎಸ್‍ಆರ್ ಕಾಂಗ್ರೆಸ್‍ನ ಎಂಎಲ್‍ಸಿ ಆರ್.ವಿ. ರಮೇಶ್ ಯಾದವ್ ಹಾಗೂ ಅವರ ಜೊತೆಗಾರ ವiರ್ರಿ ಶಶಾಂಕ್ ರೆಡ್ಡಿ ಗಣೇಶನಿಗೆ ಅರ್ಪಿಸಿದ ಲಾಡು ಪ್ರಸಾದವನ್ನು ಹರಾಜಿನಲ್ಲಿ ದೊಡ್ಡ ಮೊತ್ತ ನೀಡಿ ಖರೀದಿಸಿದರು. 

 

1994ರಲ್ಲಿ 450 ರುಪಾಯಿಗೆ ಲಾಡು ಬಿಕರಿ

ಈ ಲಾಡು ಹರಾಜು ಸಂಪ್ರದಾಯ ಆರಂಭಗೊಂಡಿದ್ದು 1994ರಲ್ಲಿ. ಆ ವರ್ಷ 450 ರುಪಾಯಿಗಳಿಗೆ ಲಾಡು ಹರಾಜಾಗಿತ್ತು. 2018ರಲ್ಲಿ 16.60 ಲಕ್ಷ ರುಪಾಯಿಗಳಿಗೆ ಲಾಡು ಬಿಕರಿ ಆಗಿತ್ತು. 2019ರಲ್ಲಿ ಬರೋಬ್ಬರಿ 17.60 ಲಕ್ಷ ರುಪಾಯಿಗಳಿಗೆ ಲಾಡು ಬಿಕರಿಯಾಗಿತ್ತು. 

ಕಳೆದ ವರ್ಷ ಕೊರೋನಾ ಸೋಂಕಿನ ಕಾರಣ ಹರಾಜು ಪ್ರಕ್ರಿಯೆ ನಡೆದಿರಲಿಲ್ಲ. ಹೀಗಾಗಿ ಲಾಡುವನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಹಸ್ತಾಂತರಿಸಲಾಗಿತ್ತು. 

ಈ ಲಾಡು ಹರಾಜು ಪ್ರಕ್ರಿಯೆ ಆಂಧ್ರಪ್ರದೇಶದಲ್ಲಿ ಒಂದು ಸಂಪ್ರದಾಯವಾಗಿ ಬದಲಾಗಿದೆ. ಹರಾಜಿನಲ್ಲಿ ಲಾಡು ಖರೀದಿಸುವುದು ಪ್ರತಿಷ್ಠೆಯ ವಿಷಯ. ಈ ಲಾಡುವನ್ನು ಖರೀದಿಸಿ ಮನೆಗೆ ಕೊಂಡೊಯ್ದು ಸೇವಿಸಿದರೆ ಎಲ್ಲಾ ಕಷ್ಟಗಳು ನಿವಾರಣೆ ಆಗಲಿದೆ ಎನ್ನುವುದು ಜನರಲ್ಲಿರುವ ನಂಬಿಕೆ. 

ಭಾರತದಲ್ಲಿ ವಿಶೇಷ, ವಿಭಿನ್ನ ಆಚರಣೆಗಳಿಗೆ ಕೊರತೆ ಇಲ್ಲ. ಈ ಲಾಡು ಪ್ರಸಾದ ಹರಾಜು ಸಂಪ್ರದಾಯವೂ ಅಂತದ್ದೇ ಒಂದು ವಿಶೇಷ, ವಿಭಿನ್ನ, ಜನಪ್ರಿಯ ಆಚರಣೆಯಾಗಿದೆ. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

https://t.me/Planettvkannada

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author