ಬ್ರಿಟಿಷರನ್ನು ದಂಗುಬಡಿಸಿದ್ದ ಚಪಾತಿ ಚಳುವಳಿಯ ರಹಸ್ಯವೇನು..!

The chapathi moment of 1857Featured Image Source : Scoopwhoop

ಬ್ರಿಟಿಷರ ದಾಸ್ಯದಲ್ಲಿ ನರಳುತ್ತಿದ್ದ ಭವ್ಯ ಭಾರತದ ಸ್ವಾತಂತ್ರ್ಯಕ್ಕಾಗಿ ಅದೆಷ್ಟೋ ಹೋರಾಟಗಳು ನಡೆದಿವೆ. ಹಗಲು-ರಾತ್ರಿ ವಿದೇಶಿಯರ ಆಳ್ವಿಕೆಯಿಂದ ಹೊರಬಂದು ಸ್ವತಂತ್ರ ಜೀವನವನ್ನು ನಡೆಸಲು ಭಾರತೀಯರು ಹವಣಿಸಿದ್ದಾರೆ. ಅದಕ್ಕಾಗಿ ಶಾಂತಿ-ಕ್ರಾಂತಿ ಎಂದು ಎಲ್ಲಾ ರೀತಿಯ ಮಾರ್ಗವನ್ನು ಅನುಸರಿಸಿದ್ದಾರೆ. ಅದೆಷ್ಟೋ ವೀರರು ಸ್ವತಂತ್ರಕ್ಕಾಗಿ ತಮ್ಮ ಜೀವನವನ್ನೇ ಬಲಿದಾನವಾಗಿ ನೀಡಿದ್ದಾರೆ. ಅಸಂಖ್ಯಾತ ಮಂದಿ ಜೀವವನ್ನೋ ಲೆಕ್ಕಿಸದೆ ಹೋರಾಡಿ ಗಳಿಸಿಕೊಟ್ಟದ್ದೇ ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ.

1947ರ ಆಗಸ್ಟ್‍ 15ರಂದು ಮಧ್ಯರಾತ್ರಿ ಭಾರತಕ್ಕೆ ಬ್ರಿಟಿಷರ ದಾಸ್ಯದಿಂದ ಮುಕ್ತಿ ದೊರೆಯಿತು. ಕೇಸರಿ, ಬಿಳಿ, ಹಸಿರು ಬಾವುಟ ಬಾನೆತ್ತರದಲ್ಲಿ ಹಾರಾಡಿತು. ಆದರೆ ಇದೆಲ್ಲಕ್ಕಿಂತಲೂ ಮೊದಲು ಅದೆಷ್ಟೋ ಮಂದಿಯ ಬಟ್ಟೆ ರಕ್ತದಿಂದ ತೊಯ್ದು ಹೋಗಿದ್ದವು. ಎಲ್ಲೆಲ್ಲೂ ಹೋರಾಟದ ಕಹಳೆ, ಜೈಹಿಂದ್ ಎಂಬ ಘೋಷಣೆ ಮೊಳಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ನಡೆದ ಹೋರಾಟ ಒಂದೆರಡಲ್ಲ. ಹಲವು ಹೆಸರಿನಲ್ಲಿ, ಹಲವು ರೀತಿಯಲ್ಲಿ ಬ್ರಿಟಿಷರನ್ನು ಹಿಮ್ಮೆಟ್ಟಿಸಲು ಹೋರಾಟಗಳು ನಡೆದವು.

ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಪ್ರಮುಖವಾದಂಥವು ಸ್ವದೇಶಿ ಚಳುವಳಿ, ಅಸಹಕಾರ ಚಳುವಳಿ, ಜಲಿಯನ್ ವಾಲಾಭಾಗ್‍, ಕಾನೂನು ಅಸಹಕಾರ ಚಳುವಳಿ, ಹೋಮ್ ರೂಲ್ ಮೂವ್ ಮೆಂಟ್, ಕ್ವಿಟ್ ಇಂಡಿಯಾ ಚಳುವಳಿ ಮೊದಲಾದವು. ಅದರಲ್ಲೂ ಉಪ್ಪಿನ ಮೇಲೆ ವಿಧಿಸಿದ್ದ ತೆರಿಗೆಯನ್ನು ವಿರೋಧಿಸಿ ನಡೆದ ಉಪ್ಪು ಸತ್ಯಾಗ್ರಹ ಬ್ರಿಟಿಷರನ್ನು ಸಂಪೂರ್ಣವಾಗಿ ಕಂಗೆಡಿಸಿತ್ತು. ಅದೇ ರೀತಿ ಇನ್ನೊಂದು ಮುಖ್ಯ ಹೋರಾಟ ಬ್ರಿಟಿಷರನ್ನು ಕಂಗಾಲು ಮಾಡಿತ್ತು. ಈ ಹೋರಾಟ ವ್ಯಾಪಕವಾಗಿ ದೇಶದ ಉದ್ದಗಲಕ್ಕೂ ಬೆಂಕಿಯಿಂದ ಹರಡಿಕೊಂಡಿತ್ತು. ಬ್ರಿಟಿಷರು ಈ ಹೋರಾಟಕ್ಕೆ ಫುಲ್ ಸ್ಟಾಪ್ ಇಡಲು ಸಾಧ್ಯವಾಗದೆ ಕೈ ಚೆಲ್ಲಿದ್ದರು.

ಬ್ರಿಟಿಷರನ್ನು ಕಂಗೆಡಿಸಿದ್ದ ಚಪಾತಿ ಚಳುವಳಿ.>!

british strugguled in chapathi momentImage Source : The Better India

ಭಾರತವನ್ನೇ ಸಂಪೂರ್ಣವಾಗಿ ವಶಪಡಿಸಿಕೊಂಡು ದರ್ಪ ತೋರುತ್ತಿದ್ದ ಬ್ರಿಟಿಷರನ್ನು ಕಂಗೆಡಿಸಿದ ಆ ಹೋರಾಟ ಯಾವುದು..ಆ ಹೋರಾಟದ ವಿಶೇಷತೆಯೇನು..? ಅಷ್ಟಕ್ಕೂ ಆ ಹೋರಾಟದಿಂದ ಬ್ರಿಟಿಷರು ಕಂಗೆಟ್ಟಿದ್ದು ಯಾಕೆ..ಎಲ್ಲವನ್ನೂ ವಿವರವಾಗಿ ತಿಳಿಯೋಣ..

ಬ್ರಿಟಿಷರ ವಿರುದ್ಧ ನಡೆದ ಈ ಚಳುವಳಿ ಅತ್ಯಂತ ರೋಚಕವಾಗಿತ್ತು ಮತ್ತು ಅತ್ಯಂತ ನಿಗೂಢವಾಗಿ ರೂಪುಗೊಂಡಿತ್ತು. ಆ ಹೋರಾಟ ಆರಂಭವಾಗುತ್ತಿದ್ದಂತೆಯೇ ದೇಶದ ಮೂಲೆ ಮೂಲೆಯಲ್ಲಿದ್ದ ಜನರು ಸ್ವಾತಂತ್ರ್ಯಕ್ಕಾಗಿ ಒಕ್ಕೊರಲಿನಿಂದ ದನಿಗೂಡಿಸಿದರು. ಹೋರಾಟದ ಜ್ವಾಲೆ ಎಲ್ಲೆಡೆ ಹಬ್ಬಿಕೊಂಡಿತ್ತು. ಭಾರತೀಯರ ಒಗ್ಗಟ್ಟಿಗೆ ವಿದೇಶಿಯರು ಸಹ ಕಂಗಾಲಾದರು. ಬ್ರಿಟಿಷರನ್ನು ಕಕ್ಕಾಬಿಕ್ಕಿ ಮಾಡಿದ ಆ ಚಳುವಳಿಯ ಹೆಸರು ಚಪಾತಿ ಚಳುವಳಿ.

ಚಪಾತಿ ಚಳುವಳಿ ಎಂದರೇನು..?

the mystery of chapathi momentImage Source : The Better India

1857ರಲ್ಲಿ ಬ್ರಿಟಿಷ್ ಆಕ್ರಮಿತ ಭಾರತದಲ್ಲಿ ಉದ್ವಿಗ್ನತೆ ಪರಿಸ್ಥಿತಿಯಿತ್ತು.  ಬ್ರಿಟಿಷರ ದಬ್ಬಾಳಿಕೆಯಿಂದ ಬೇಸತ್ತ ಭಾರತೀಯರು ಹೈರಾಣಾಗಿ ಹೋಗಿದ್ದರು. ವಿದೇಶಿಯರ ಆಳ್ವಿಕೆಯಿಂದ ಅಸಮಾಧಾನಗೊಂಡ ಭಾರತೀಯರು ಸದ್ದಿಲ್ಲದೆ ದಂಗೆಯನ್ನು ಯೋಜಿಸುತ್ತಿದ್ದರು. ಆ ಯೋಜನೆಯ ಪ್ರಕಾರ ರೂಪುಗೊಂಡಿದ್ದೇ ಚಪಾತಿ ಚಳುವಳಿ..

ಭಾರತದಲ್ಲಿ ಈ ಹೋರಾಟದ ತೀವ್ರತೆ ಎಷ್ಟಿತ್ತೆಂದರೆ ಈ ಬಗ್ಗೆ ಈಸ್ಟ್ ಇಂಡಿಯಾ ಕಂಪನಿಯ ಉದ್ಯೋಗದಲ್ಲಿ ಹಿರಿಯ ಅಧಿಕಾರಿ ಡಾ.ಗಿಲ್ಬರ್ಟ್ ಹ್ಯಾಡೋ ಬ್ರಿಟನ್‌ನಲ್ಲಿರುವ ತನ್ನ ಸಹೋದರಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ. ‘ಪ್ರಸ್ತುತ ಸಂಪೂರ್ಣ ಭಾರತದಲ್ಲಿ ಗುಪ್ತವಾಗಿ ಯಾವುದೋ ಹೋರಾಟ ನಡೆಯುತ್ತಿದೆ. ಇದು ಯಾವುದೋ ಧಾರ್ಮಿಕ ಕಾರ್ಯಕ್ರಮ ಸಂಬಂಧಿಸಿದಂತೆ ತೋರುತ್ತಿದೆ. ಜನರು ರಹಸ್ಯವಾಗಿ ಏನನ್ನೋ ಮಾಡುತ್ತಿದ್ದಾರೆ. ಭಾರತದಲ್ಲಿರುವ ಪತ್ರಿಕೆಗಳ ತುಂಬಾ ಇದರದ್ದೇ ಮಾಹಿತಿಯಿದೆ. ಇದನ್ನು ಚಪಾತಿ ಚಳುವಳಿ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.

ಚಪಾತಿ ಚಳುವಳಿ ಭಾರತೀಯರ ಬಗ್ಗೆ ಬ್ರಿಟಿಷರ ಬಗ್ಗೆ ಭಯ, ಆತಂಕ ಮೂಡಿಸಿದ ಒಂದು ಚಳುವಳಿಯಾಗಿದೆ. ಚಪಾತಿ ಚಳುವಳಿಯನ್ನು ಭಾರತೀಯ ಹೋರಾಟಗಾರರು ಬಹಳ ವ್ಯವಸ್ಥಿತವಾಗಿ ರೂಪಿಸಿಕೊಂಡಿದ್ದರು. ಹೀಗಾಗಿ ಈ ಚಳುವಳಿ ಎಲ್ಲಿಂದ ಆರಂಭವಾಯಿತು, ಯಾರಿಂದ ಆರಂಭವಾಯಿತು ಅನ್ನೋದು ಯಾರಿಗೂ ತಿಳಿಯಲೇ ಇಲ್ಲ. ಬದಲಾಗಿ ಚಳುವಳಿಯ ತೀವ್ರತೆ ದೇಶಾದ್ಯಂತ ಹಬ್ಬುತ್ತಲೇ ಹೋಯಿತು.

ರಾತ್ರಿಯಲ್ಲಿ ಸಾವಿರಾರು ಚಪಾತಿಗಳನ್ನು ಭಾರತದಾದ್ಯಂತ ಮನೆಗಳು ಮತ್ತು ಪೊಲೀಸ್ ಪೋಸ್ಟ್‌ಗಳಿಗೆ ವಿತರಿಸಲಾಗುತ್ತಿತ್ತು. ಹೀಗೆ ಈ ಚಪಾತಿಗಳು ಒಬ್ಬರಿಂದ ಇನ್ನೊಬ್ಬರ ಕೈಗೆ ರವಾನೆಯಾಗುತ್ತಲೇ ಹೋಗುತ್ತಿತ್ತು. ಈ ರೀತಿ ವಿವಿಧ ರಾಜ್ಯಗಳಿಗೆ, ಗ್ರಾಮಗಳಿಗೆ, ಹಳ್ಳಿ ಮೂಲೆಗಳಿಗೆ ಚಪಾತಿಯನ್ನು ತಲುಪಿಸುವವರು ಚಪಾತಿ ಓಟಗಾರರೆಂದೇ ಹೆಸರು ಪಡೆದರು.

ಭಾರತೀಯರು ತಯಾರಿಸಿದ ಈ ಚಪಾತಿಗಳು ಎಷ್ಟು ವೇಗವಾಗಿ ದೇಶವ್ಯಾಪಿ ಹರಡಿತೆಂದರೆ  ಮಥುರಾ ಪಟ್ಟಣದ ಮ್ಯಾಜಿಸ್ಟ್ರೇಟ್ ಮಾರ್ಕ್ ಥಾರ್ನ್ಹಿಲ್ ಅವರ ಟೇಬಲ್ ಮೇಲೂ ಚಪಾತಿಗಳು ತಲುಪಿದವು. ಇದು ಬ್ರಿಟಿಷರ ಬ್ರೆಡ್‍ನಿಂದ ಸಂಪೂರ್ಣವಾಗಿ ಹೊರತಾಗಿದ್ದು ಭಾರತೀಯ ಗೋಧಿಯಿಂದ ತಯಾರಿಸಲ್ಪಟ್ಟಿದ್ದವು. ಅದಾಗಲೇ ಭಾರತದಲ್ಲಿ ಚಪಾತಿ ಚಳುವಳಿ ಹೆಚ್ಚು ಹೆಸರು ಮಾಡಿದ್ದರಿಂದ ಮಾರ್ಕ್ ಥಾರ್ನ್ಹಿಲ್ ಈ ಬಗ್ಗೆ ಪರಿಶೀಲನೆ ನಡೆಸಲು ಮುಂದಾದರು.

ಹೀಗೆ ನಿರ್ಧರಿಸಿ ಅವರು ನಡೆಸಿದ ತನಿಖೆಯಲ್ಲಿ ಚಪಾತಿಗಳು ಪ್ರತಿದಿನ ರಾತ್ರಿ ಚಪಾತಿಗಳು 300 ಕಿಲೋಮೀಟರ್ ವರೆಗೆ ರವಾನೆಯಾಗುತ್ತಿದ್ದುದು ತಿಳಿದುಬಂದು. ದಕ್ಷಿಣದ ನರ್ಮದಾ ನದಿಯಿಂದ ಹಿಡಿದು ನೇಪಾಳದ ಗಡಿಯವರೆಗೆ ಎಲ್ಲೆಡೆ ಚಪಾತಿಗಳು ರವಾನೆಯಾಗುತ್ತಿದ್ದವು. ಆದರೆ ಈ ಚಪಾತಿ ರವಾನೆ ಯಾವ ಕಾರಣಕ್ಕೆ ಆಗುತ್ತಿದೆ ಎಂಬುದು ಮಾತ್ರ ಬಹಿರಂಗವಾಗಲ್ಲಿಲ್ಲ. ಚಪಾತಿಯ ಮೂಲಕ ಯಾವುದಾದರೂ ರೀತಿಯ ರಹಸ್ಯ ವಿನಿಮಯ ನಡೆಯುತ್ತಿದ್ದೆಯೇ ಎಂದು ಅಧಿಕಾರಿಗಳು ಸಂಶಯಿಸಿದರು. ಆದರೆ ಚಪಾತಿಯಲ್ಲಿ ಈ ರೀತಿ ಯಾವುದೇ ಬರಹ ಅಥವಾ ಚಿಹ್ನೆ ಕಂಡು ಬರಲ್ಲಿಲ್ಲ.

ಚಪಾತಿ ವಿತರಣೆ ಅಥವಾ ಚಳುವಳಿ ದೇಶಾದ್ಯಂತ ವ್ಯಾಪಕವಾಗಿ ಹರಡಿದ್ದರೂ ಇದು ಯಾಕಾಗಿ ನಡೆಯುತ್ತಿದೆ ಎಂದು ಬ್ರಿಟಿಷ್ ಅಧಿಕಾರಿಗಳಿಗೆ ಕಂಡು ಹಿಡಿಯಲು ಸಾಧ್ಯವಾಗದ ಕಾರಣ ಯಾರನ್ನೂ ಬಂಧಿಸಲು ಸಾಧ್ಯವಾಗಲ್ಲಿಲ್ಲ. ಅಲ್ಲದೆ ಯಾರ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲ್ಲಿಲ್ಲ. ಚಪಾತಿ ಓಟಗಾರರಲ್ಲಿ ಹೆಚ್ಚಿನವರು ಪೊಲೀಸ್ ಚೌಕೀದಾರರು ಸಹ ಆಗಿದ್ದರು. ಹೀಗಾಗಿ ಯಾವುದೇ ಸಾಕ್ಷಿಯಿಲ್ಲದೆ ಕ್ರಮ ತೆಗೆದುಕೊಳ್ಳುವುದು ಬ್ರಿಟಿಷರಿಗೆ ಅಸಾಧ್ಯವಾಯಿತು.

ವಿಚಿತ್ರವೆಂದರೆ, ಒಂದೆಡೆಯಿಂದ ಇನ್ನೊಂದೆಡೆ ಕೊಂಡೊಯ್ಯುವ ಮಹತ್ವದ ಬಗ್ಗೆ ಚಪಾತಿ ಓಟಗಾರರನ್ನು ಪ್ರಶ್ನಿಸಿದಾಗ, ಅವರಿಗೂ ಇದರ ಕಾರ್ಯ, ಉದ್ದೇಶದ ಬಗ್ಗೆ ಸಂಪೂರ್ಣವಾಗಿ ತಿಳಿದಿರಲ್ಲಿಲ್ಲ. ಚಪಾತಿಗಳು ನೈಜವಾಗಿದ್ದವು ಮತ್ತು ಓಟಗಾರರಿಗೂ ಸಹ ಅದು ಏನೆಂದು ಖಚಿತವಾಗಿ ಗೊತ್ತಿರಲಿಲ್ಲ. ಪೊಲೀಸ್ ಚೌಕಿದಾರ್‌ಗಳು ತಮ್ಮ ಸಹೋದ್ಯೋಗಿಗಳಿಗೆ ತಲಾ ಎರಡು ಇಂಚು ವ್ಯಾಸವನ್ನು ಹೊಂದಿರುವ ಚಪಾತಿಗಳನ್ನು ಬೇಯಿಸಿ ಹಸ್ತಾಂತರಿಸುತ್ತಿದ್ದರು. ಸಹೋದ್ಯೋಗಿಗಳು ಇನ್ನೂ ಹೆಚ್ಚಿನದನ್ನು ಮಾಡಿ ನೆರೆಹೊರೆಯ ಹಳ್ಳಿಗಳಲ್ಲಿನ ತಮ್ಮ ಸಹವರ್ತಿಗಳಿಗೆ ರವಾನಿಸುತ್ತಿದ್ದರು.

ಚಪಾತಿ ರವಾನೆಯಲ್ಲಿ ಸುಮಾರು 90,000 ಪೊಲೀಸರು ಈ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿದಾಗ ಬ್ರಿಟಿಷ್ ಅಧಿಕಾರಿಗಳಲ್ಲಿ ಭೀತಿ ಹರಡಿತು. ಚಪಾತಿಗಳು ಬ್ರಿಟಿಷ್ ಮೇಲಂತಸ್ತಿನ ಮಾಹಿತಿಗಿಂತಲೂ ವೇಗವಾಗಿ ಚಲಿಸುತ್ತಿದೆ ಎಂಬ ಅಂಶವು ಬ್ರಿಟಿಷರಲ್ಲಿ ಆತಂಕಕ್ಕೆ ಕಾರಣವಾಯಿತು. 1857ರ ದಂಗೆಯ ಅಪರೂಪದ ದಾಖಲೆಗಳು ಪ್ರಕಾರ ಮಾರ್ಚ್ 5, 1857ರ ಹೊತ್ತಿಗೆ,  ಚಪಾತಿಗಳು ದೂರದವರೆಗೆ ರೋಹಿಲ್ಖಂಡ್ ನಿಂದ ದೆಹಲಿ ವರೆಗೆ ತಲುಪಿದ್ದವು ಎಂದು ತಿಳಿದುಬಂತು. ಬ್ರಿಟಿಷರು ಭೀತಿಯಿಂದಲೇ 250 ಮಿಲಿಯನ್ ಭಾರತೀಯರನ್ನು ವಶಪಡಿಸಿಕೊಂಡರು. ಒಟ್ಟಾರೆಯಾಗಿ, ಇಡೀ ಚಪಾತಿ ಚಳುವಳಿ  ಬ್ರಿಟಿಷ್ ಸಾಮ್ರಾಜ್ಯವನ್ನು ಅಲುಗಾಡಿಸಿತು..ಚಪಾತಿ ಚಳುವಳಿ ಮುಂದಿನ ದಿನಗಳಲ್ಲಿ ಭಾರೀ ದಂಗೆಯ ಒಂದು ಯೋಜನೆ ಎಂದೇ ಬ್ರಿಟಿಷರು ಊಹಿಸಿದರು. ಅದರಂತೆ ಕಾಕತಾಳೀಯ ಎಂಬಂತೆ ಅದೇ ವರ್ಷ ಮೀರತ್‍ನಲ್ಲಿ ಸಿಪಾಯಿದಂಗೆ ನಡೆಯಿತು

ಕೆಲವೊಂದು ಅಧ್ಯಯನಗಳು  ಚಪಾತಿಗಳ ರವಾನೆಯು ಕಾಲರಾ ಪೀಡಿತ ಜನರಿಗೆ ಆಹಾರವನ್ನು ತಲುಪಿಸುವ ಪ್ರಯತ್ನವಾಗಿರಬಹುದು ಎಂದು ಹೇಳಿತು. ಹಲವಾರು ವರ್ಷಗಳ ನಂತರ, ಲೈಫ್ ಡ್ಯೂರಿಂಗ್ ದಿ ಇಂಡಿಯನ್ ದಂಗೆ ಎಂಬ ಪುಸ್ತಕದಲ್ಲಿ, ಜೆ ಡಬ್ಲ್ಯೂ ಶೆರಾರ್ ಈ ತಂತ್ರದ ಹಿಂದಿನ ಉದ್ದೇಶವು ಬ್ರಿಟಿಷರಲ್ಲಿ ಗೊಂದಲವನ್ನು ಸೃಷ್ಟಿಸುವುದಾಗಿತ್ತು ಮತ್ತು ಇದು ಸಂಪೂರ್ಣವಾಗಿ ಯಶಸ್ವಿಯಾಯಿತು ಎಂದು ಸ್ಪಷ್ಟಪಡಿಸಿದರು.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

 

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

About Author