ಅವರಿಗೆ ಸಾವೇ ಇಲ್ಲ! ಪುರಾಣದ ಸಪ್ತ ಚಿರಂಜೀವಿಗಳು!!

There is no death for them! The Seven Eternals of Purana!!

Featured Image Source: The daily voice

ಪುರಾಣದಲ್ಲಿ ಚಿರಂಜೀವಿಗಳ ಬಗ್ಗೆ ಸಾಕಷ್ಟು ಉಲ್ಲೇಖವಿದೆ. ಪುರಾಣದ ಪ್ರಕಾರ ಏಳು ಜನರು ಚಿರಂಜೀವಿಗಳಾಗಿದ್ದಾರೆ. ಅಂದರೆ ಅವರಿಗೆ ಸಾವೇ ಇಲ್ಲ. ಹುಟ್ಟಿದ ಯಾವುದೇ ಮನುಷ್ಯ ಅಥವಾ ಜೀವಿ ಆಯಸ್ಸು ಮುಗಿದ ಕೂಡಲೇ ಸಾವಿಗೀಡಾಗುತ್ತದೆ. ಚಿರಂಜೀವಿ ಅಂದರೆ ಈ ಭೂಮಿ ಎಲ್ಲಿಯವರೆಗೆ ಶಾಶ್ವತವಾಗಿ ಇರುತ್ತದೋ ಅಲ್ಲಿಯವರೆಗೆ ಅವರು ಶಾಶ್ವತವಾಗಿ ಜೀವಿಸಿರುತ್ತಾರೆ. ಪುರಾಣದ ಪ್ರಕಾರ ಹೀಗೆ ಏಳು ಜನರು ಸಪ್ತ ಚಿರಂಜೀವಿಗಳಾಗಿದ್ದಾರೆ.

1)ಅಶ್ವಥ್ಥಾಮ

ಅಶ್ವಥ್ಥಾಮನ ಕಥೆ ಮಹಾಭಾರತ ಕಥೆ ಓದಿದದವರಿಗೆ ತಿಳಿದುರುತ್ತದೆ. ದ್ರೋಣಾಚಾರ್ಯರ ಮಗನಾದ ಅಶ್ವಥ್ಥಾಮ ಹತನಾದ ಎಂದು ಧರ್ಮರಾಯ ಹೇಳಿದಾಗ ದ್ರೋಣಾಚಾರ್ಯ ಧ್ಯಾನದ ಮೂಲಕ ಅವನು ಜೀವಂತವಾಗಿ ಇರುವವನೇ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ದ್ರೋಣಾಚಾರ್ಯರನ್ನು ಕೊಲ್ಲಲಾಗುತ್ತದೆ. ಅಶ್ವಥ್ಥಾಮ ಮಹಾ ಭಾರತದ ಕೊನೆಯವರೆಗೆ ಕಾದಾಡುವ ವೀರ ಸೈನಿಕನಾಗಿದ್ದು ಕೊನೆಯಲ್ಲಿ ಬ್ರಹ್ಮಾಸ್ತ್ರ ಪ್ರಾಯೋಗಿಸುತ್ತಾನೆ. ಇದರಿಂದ ಕೋಪಗೊಂಡ ಕೃಷ್ಣ ಕಲಿಯುಗ ಅಂತ್ಯವಾಗುವವರೆಗೆ ಚಿರಂಜೀವಿ ಆಗಿದ್ದು ನರಕ ಅನುಭವಿಸು ಎಂದು ಶಾಪ ನೀಡುತ್ತಾನೆ. ಹೀಗೆ ಅಶ್ವಥ್ಥಾಮ ಕೂಡ ಚಿರಂಜೀವಿಗಳಲ್ಲಿ ಒಬ್ಬನಾಗುತ್ತಾನೆ.

2) ಬಲಿ ಚಕ್ರವರ್ತಿ

ಪ್ರಹ್ಲಾದನ ಮಗನಾದ ಬಲಿ ಚಕ್ರವರ್ತಿಯನ್ನು ವಾಮನ ಅವತಾರದ ಮೂಲಕ ಶ್ರೀ ವಿಷ್ಣು ಪಾತಾಳಕ್ಕೆ  ತಳ್ಳುತ್ತಾನೆ. ಇಂದಿಗೂ ಕೂಡ ಕಲಿಯುಗದಲ್ಲಿಯೂ ಚಿರಂಜೀವಿ ಆಗಿ ಉಳಿದುಕೊಂಡಿರುವ ಬಲಿ ಚಕ್ರವರ್ತಿ ಬಲಿಂದ್ರ ಪೂಜೆಯಂದು ಭಲೋಕಕ್ಕೆ ಭೇಟಿ ನೀಡುತ್ತಾನೆ ಎಂದು ಹೇಳುತ್ತಾರೆ.

3)ವೇದವ್ಯಾಸ

ವೇದಗಳನ್ನು ವಿಂಗಡಿಸಿದ ಕಾರಣದಿಂದ ವ್ಯಾಸರನ್ನು ವೇದ ವ್ಯಾಸರು ಎನ್ನುತ್ತಾರೆ. ಅವರಿಗೆ ವೇದಗಳ ಬಗ್ಗೆ ಅಪಾರವಾದ ಜ್ಞಾನವಿತ್ತು. ಪರಾಶರ ಮುನಿಯ ಪುತ್ರನಾದ  ಕಲಿಯುಗದ ಅಂತ್ಯದವರೆಗೆ ಜೀವಿಸಿದ್ದು ಕಲ್ಕಿಯ ಅವತಾರ ಎತ್ತಿದಾಗ ವಿಷ್ಣುವನ್ನು ಭೇಟಿ ಆಗುತ್ತಾರೆ ಎಂದು ಪುರಾಣಗಳಲ್ಲಿ ವಿವರಿಸಲಾಗಿದೆ.

4) ಆಂಜನೇಯ

ಚಿಕ್ಕಂದಿನಲ್ಲಿ ಸೂರ್ಯನನ್ನು ಒಂದು ಹಣ್ಣು ಎಂದುಕೊಂಡು ಭ್ರಮಿಸಿ ತಿನ್ನಲು ಹೋದ ಆಂಜನೇಯ ವಾಯುವಿನ ಪುತ್ರ. ತ್ರಿಮೂರ್ತಿಗಳು ಆಂಜನೇಯನಿಗೆ ಚಿರಂಜೀವಿ ಆಗು ಎಂದು ವರ ನೀಡುತ್ತಾರೆ ಎನ್ನುವುದು ಒಂದು ಕಥೆ. ರಾಮನ ಭಂಟನಾದ ಆಂಜನೇಯನ ಉಲ್ಲೇಖವನ್ನು ಮಹಾಭಾರತ ಕಥೆಯಲ್ಲೂ ಕಾಣಬಹುದು.

5) ವಿಭೀಷಣ

ರಾವಣನ ಸಹೋದರನಾದ ವಿಭೀಷಣ ರಾವಣ ಪರಸ್ತ್ರೀಯನ್ನು ಅಪಹರಿಸಿದಾಗ ಬುದ್ಧಿವಾದ ಹೇಳಲು ಪ್ರಯತ್ನಿಸುತ್ತಾನೆ. ಆದರೆ ರಾವಣ ಅವನ ಮಾತುಗಳನ್ನು ಕೇಳುವುದಿಲ್ಲ. ಆಗ ವಿಭೀಷಣ ರಾಮನ ಬಳಿಗೆ ತೆರಳುತ್ತಾನೆ. ರಾವಣನನ್ನು ಸಂಹರಿಸಿದ ಬಳಿಕ ವಿಭೀಷಣ ಲಂಕೆಯ ಆಡಳಿತ ನಡೆಸುತ್ತಾನೆ. ಜನರ ಮೆಚ್ಚುಗೆ ಪಡೆಯುವ ವಿಭೀಷಣ ಕೂಡ ಚಿರಂಜೀವಿಗಳಲ್ಲಿ ಒಬ್ಬನೆಂದು ಹೇಳುತ್ತಾರೆ.

6) ಕೃಪಾಚಾರ್ಯ

ಮಹಾಭಾರತ ಯುದ್ಧದಲ್ಲಿ ಕೌರವರ ಪರ ಹೋರಾಡುವ ವೀರ ಯೋಧರಲ್ಲಿ ಕೃಪಾಚಾರ್ಯ ಕೂಡ ಒಬ್ಬರು. ಶ್ರೀ ಕೃಷ್ಣ ಅವರಿಗೆ ಚಿರಂಜೀವಿ ಆಗು ಎಂದು ವರ ನೀಡುತ್ತಾನೆ. ಹಾಗಾಗಿ ಕಲಿಯುಗದ ಅಂತ್ಯ ಆಗುವವರೆಗೆ ಚಿರಂಜೀವಿಯಾಗಿ ಇರುವವರಲ್ಲಿ ಕೃಪಾಚಾರ್ಯ ಕೂಡ ಒಬ್ಬರು.

7) ಪರಶುರಾಮ.

ಪರಶು ಅಂದರೆ ಕೊಡಲಿ ಎಂದರ್ಥ. ಕೊಡಲಿಯನ್ನು ತನ್ನ ಆಯುಧವಾಗಿ ಹಿಡಿದುಕೊಳ್ಳುವ ಕಾರಣ ಅವರನ್ನು ಪರಶುರಾಮ ಎನ್ನುತ್ತಾರೆ. ಪರಶುರಾಮನ ತಂದೆ ಜಮದಗ್ನಿ. ತಾಯಿ ರೇಣುಕಾದೇವಿ. ಭೀಷ್ಮನಿಗೆ ಹಾಗೂ ದ್ರೋಣಾಚಾರ್ಯರಿಗೆ ಗುರು ಆಗಿರುವ ಪರಶುರಾಮ ಕೂಡ ಸಪ್ತ ಚಿರಂಜೀವಿಗಳಲ್ಲಿ ಒಬ್ಬರು.

ಹುಟ್ಟಿದ ಪ್ರತಿಯೊಂದು ಜೀವಿ ಸಾಯುವುದು ಪ್ರಕೃತಿಯ ನಿಯಮ. ಆದರೆ ಭಗವಂತನ ಆಶೀರ್ವಾದ ಇದ್ದರೆ ಚಿರಂಜೀವಿ ಆಗಬಹುದು ಎನ್ನುವುದಕ್ಕೆ ಈ ಸಪ್ತ ಚಿರಂಜೀವಿಗಳೇ ಉದಾಹರಣೆ. ಅನೇಕ ರಾಕ್ಷಸರು ಅವರಿಗೆ ಮೃತ್ಯು ಬರದ ಹಾಗೆ ಚಿರಂಜೀವಿ ಆಗುವ ವರ ನೀಡಬೇಕು ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತಾರೆ. ಆದರೆ ವಿಷ್ಣು ಆಗಲಿ ಶಿವ ಆಗಲಿ ವರ ನೀಡಲು ನಿರಾಕರಿಸುತ್ತಾರೆ. ಆದರೆ ಹಾಗೆಂದ ಮಾತ್ರಕ್ಕೆ ಚಿರಂಜೀವಿ ಇಲ್ಲವೆಂದು ಅರ್ಥವಲ್ಲ. ಪುರಾಣದಲ್ಲಿರುವ ಚಿರಂಜೀವಿಗಳ ಉಲ್ಲೇಖವೂ ಇದೆ. ಈ ವಿವರಣೆಗಳು ಸಾಮಾನ್ಯ ಜನರನ್ನು ಬೆರಗುಗೊಳಿಸುತ್ತದೆ.

Enjoyed this article? Stay informed by joining our newsletter!

Comments

You must be logged in to post a comment.

About Author