ಈ ವಸ್ತುಗಳು ನಾಲಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ಸಿಹಿ.

ಈ ವಸ್ತುಗಳು ನಾಲಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ಸಿಹಿ.
ಕಹಿ ರುಚಿಯನ್ನು ಹೊಂದಿರುವ ಆಹಾರಗಳು ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ವಿಟಮಿನ್‌ಗಳು, ಖನಿಜಗಳು ಮತ್ತು ಫೈಬರ್‌ಗಳಿಂದ ತುಂಬಿರುತ್ತವೆ, ಇದು ದೇಹದ ಪ್ರತಿಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಕರುಳಿನ ಆರೋಗ್ಯವನ್ನು ಖಚಿತಪಡಿಸುತ್ತದೆ.
ಹಲವಾರು ರೋಗಗಳಿಗೆ ಪರಿಹಾರ ನೀಡುತ್ತದೆ. ನಿಮ್ಮ ಆಹಾರದಲ್ಲಿ ಹೆಚ್ಚು ಕಹಿ ಆಹಾರಗಳನ್ನು ಸೇರಿಸಿ ಏಕೆಂದರೆ ಅವು ತುಂಬಾ ಪೌಷ್ಟಿಕವಾಗಿದೆ ಮತ್ತು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮೆಂತೆ ಕಾಳು
ಮೆಂತ್ಯ ಬೀಜಗಳಲ್ಲಿ ಖನಿಜಗಳು, ವಿಟಮಿನ್ಗಳು, ಫೈಬರ್​ ಸೇರಿದಂತೆ ಹಲವಾರು ಪೋಷಕಾಂಶಗಳು ಸಮೃದ್ಧವಾಗಿವೆ. ಮೆಂತ್ಯ ಬೀಜಗಳ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಂತ್ಯವು ದೇಹದಲ್ಲಿ ವಿಷದ ಅಂಶಗಳು ಶೇಖರಣೆಯಾಗುವುದನ್ನು ತಡೆಯುತ್ತದೆ.
ಹಾಗಾಗಿ ಮೆಂತ್ಯೆಯನ್ನು ನೆನೆಸಿ ಬೆಳಗ್ಗೆ ಅದರ ನೀರನ್ನು ಕುಡಿಯುವುದು ಹಾಗೂ ಆಹಾರದಲ್ಲಿ ಮೆಂತ್ಯೆಯನ್ನು ಸೇರಿಸುವುದು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.
ಹಾಗಲಕಾಯಿ
ಹಾಗಲಕಾಯಿಯು ಹೆಚ್ಚು ಕಹಿ ಇರುತ್ತದೆ, ಹೀಗಾಗಿ ಜನರು ಇದನ್ನು ಇಷ್ಟಪಡುವುದಿಲ್ಲ. ಆದರೆ ಇದರಿಂದ ಪ್ರಯೋಜನಗಳು ಖಂಡಿತವಾಗಿಯೂ ಉತ್ತಮವಾಗಿದೆ. ಹಾಗಲಕಾಯಿಯಲ್ಲಿ ಸಾಕಷ್ಟು ಪ್ರಮಾಣದ ರಂಜಕವಿದೆ. ಇದು ಕೆಮ್ಮು, ಮಲಬದ್ಧತೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ.
ಹಾಗಲಕಾಯಿ ರಸವನ್ನು ಕುಡಿಯುವುದರಿಂದ ಯಕೃತ್ತು ಬಲಗೊಳ್ಳುತ್ತದೆ ಮತ್ತು ಎಲ್ಲಾ ಯಕೃತ್ತಿನ ಸಮಸ್ಯೆಗಳನ್ನು ನಿವಾರಣೆಯಾಗುತ್ತದೆ ಎಂದು ಸಾಬೀತಾಗಿದೆ. ಇದೆಲ್ಲದರ ಜೊತೆಗೆ ಹಾಗಲಕಾಯಿಯ ಸೇವನೆ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಕೂಡ ಇದು ತುಂಬಾ ಸಹಕಾರಿ ಎಂದು ಹೇಳಲಾಗುತ್ತದೆ. ಹಾಗಾಗಿ ಹಾಗಾಲಕಾಯಿ ಪಲ್ಯ ಅಥವಾ ಗೊಜ್ಜನ್ನು ಸೇವನೆ ಮಾಡಬಹುದು.
ಗ್ರೀನ್​ ಟೀ
ಹೆಚ್ಚಿನ ಜನರು ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ ಮತ್ತು ಚಹಾದ ಆರೋಗ್ಯಕರ ಪರ್ಯಾಯ ಪದಾರ್ಥದ ವಿಚಾರಕ್ಕೆ ಬಂದಾಗ, ಹಸಿರು ಚಹಾವು(ಗ್ರೀನ್​ ಟೀ) ಮೊದಲು ಬರುತ್ತದೆ. ಗ್ರೀನ್​ ಟೀಯಲ್ಲಿ ಆಯಂಟಿ ಆಕ್ಸಿಡೆಂಟ್​ಗಳಿದ್ದು ಮತ್ತು ಇದರಲ್ಲಿ ಪ್ರಯೋಜನಕಾರಿ ಪಾಲಿಫಿನಾಲ್ಗಳಲ್ಲಿ ಸಮೃದ್ಧವಾಗಿದೆ.
ಗ್ರೀನ್ ಟೀ ಸೇವನೆಯು ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳಿಂದ ರಕ್ಷಿಸುತ್ತದೆ.ಗ್ರೀನ್ ಟೀ ತೂಕವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಕೆಲವರು ಇದು ಕಹಿ ಇರುವ ಕಾರಣ ಸೇವನೆ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಇದನ್ನು ಕುಡಿಯುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.
ತರಕಾರಿಯ ಸೊಪ್ಪುಗಳು
ತರಕಾರಿಯ ಜೊತೆ ಬರುವ ಸೊಪ್ಪುಗಳ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಇದು ತೂಕ ಇಳಿಸಲು, ಹೃದ್ರೋಗ, ಕ್ಯಾನ್ಸರ್, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಇತ್ಯಾದಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ಇವುಗಳಲ್ಲಿರುವ ಕಬ್ಬಿಣಾಂಶ, ಕ್ಯಾಲ್ಸಿಯಂ, ವಿಟಮಿನ್ ಮತ್ತು ಮಿನರಲ್ ಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದ್ದು,
ಇದು ಫಿಟ್ ಆಗಿರಲು ತುಂಬಾ ಸಹಕಾರಿ ಎನ್ನಲಾಗುತ್ತದೆ. ಇದು ಸ್ವಲ್ಪ ಕಹಿ ಇರಬಹುದು ಆದರೆ ಇದಕ್ಕೆ ಸ್ವಲ್ಪ ಹುಣಸೇಹಣ್ಣನ್ನು ಹಾಕಿ ಅಡುಗೆ ಪದಾರ್ಥವನ್ನು ತಯಾರಿಸಿ ಸೇವನೆ ಮಾಡುವುದು ಹೆಚ್ಚು ಆರೋಗ್ಯಕರ.
ಡಾರ್ಕ್ ಚಾಕೊಲೇಟ್
ಯುವಕರು ಚಾಕೊಲೇಟ್ ತಿನ್ನಲು ಇಷ್ಟಪಡುತ್ತಾರೆಯಾದರೂ, ಅವರು ಡಾರ್ಕ್ ಚಾಕೊಲೇಟ್ ತಿನ್ನಲು ಇಷ್ಟಪಡುವುದಿಲ್ಲ. ಏಕೆಂದರೆ ಡಾರ್ಕ್ ಚಾಕೊಲೇಟ್ ತುಂಬಾ ಕಹಿಯಾಗಿದರುತ್ತದೆ. ಏಕೆಂದರೆ ಇದರಲ್ಲಿ ಕೋಕೋ ಪೌಡರ್ ಇರುತ್ತದೆ. ಡಾರ್ಕ್ ಚಾಕೊಲೇಟ್ ಆಯಂಟಿ ಆಕ್ಸಿಡೆಂಟ್​ ಮತ್ತು ವಿವಿಧ ಅಗತ್ಯ ಪದಾರ್ಥಗಳನ್ನು ಹಾಗೂ ಪೋಷಕಾಂಶಗಳನ್ನು ಒಳಗೊಂಡಿದೆ.
ಇದರಿಂದ ನಿಮ್ಮ ಮೆದುಳು ಮತ್ತು ಹೃದಯವನ್ನು ಆರೋಗ್ಯವಾಗಿಡಬಹುದು. ಡಾರ್ಕ್ ಚಾಕೊಲೇಟ್ ತಿನ್ನುವುದು ಖಿನ್ನತೆಯನ್ನು ನಿವಾರಿಸುತ್ತದೆ ಎನ್ನಲಾಗುತ್ತದೆ. ಇದರಲ್ಲಿ ಕಂಡುಬರುವ ಆಕ್ಸಿಡೆಂಟ್‌ಗಳು ಒತ್ತಡವನ್ನು ಕಡಿಮೆ ಮಾಡುತ್ತದೆ ಅಂದರೆ ಒತ್ತಡವನ್ನು ಉಂಟುಮಾಡುವ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author