ತುಳಸಿ ಎಲೆಗಳಲ್ಲಿ ಹಲವು ಔಷಧೀಯ ಗುಣಗಳಿವೆ. ಆಯುರ್ವೇದದ ಪ್ರಕಾರ, ತುಳಸಿ ಎಲೆಗಳ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಆದರೆ ತುಳಸಿ ಎಲೆಗಳ ಸೇವನೆಯ ವೇಳೆ ಕೂಡಾ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಯಾಕೆಂದರೆ ತುಳಸಿ ಎಲೆ ಕೂಡಾ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ.

ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಎಚ್ಚರ :
ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಕೂಡಾ ತುಳಸಿ ಎಲೆಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಬೇಕು. ವೈದ್ಯರ ಸಲಹೆಯಿಲ್ಲದೆ ಯಾವುದೇ ಕಾರಣಕ್ಕೂ ತುಳಸಿ ಎಲೆಗಳನ್ನು ತಿನ್ನಬಾರದು. ಇದು ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ.
ಮಧುಮೇಹದ ಸಮಸ್ಯೆಯಿದ್ದರೆ ಹುಷಾರು :
ಮಧುಮೇಹ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ತುಳಸಿ ಎಲೆಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ತುಳಸಿ ಎಲೆಗಳು ಅನೇಕ ಗುಣಗಳನ್ನು ಹೊಂದಿದೆ. ಆದರೆ ನೀವುಮೊದಲೇ ಯಾವುದಾದರೂ ಔಷಧಿ ತೆಗೆದುಕೊಳ್ಳುತ್ತಿದ್ದರೆ, ತುಳಸಿ ಎಳೆಯನ್ನು ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.
ಈ ವಿಚಾರವು ಗೊತ್ತಿರಲಿ :
ಆಯುರ್ವೇದದ ಪ್ರಕಾರ, ತುಳಸಿ ಎಲೆಗಳು ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕುವ ಗುಣವನ್ನು ಹೊಂದಿವೆ. ಆದರೆ ನಿಮಗೆ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಇಲ್ಲದಿದ್ದರೆ ಮತ್ತು ನೀವು ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ತುಳಸಿ ಎಲೆಗಳನ್ನು ಹೆಚ್ಚು ಸೇವಿಸಬೇಡಿ. ಇದರಿಂದ ರಕ್ತ ತೆಳುವಾಗಬಹುದು.
You must be logged in to post a comment.