ರೈಸ್ ಮಿಲ್ ಮಾಲೀಕನ ಮೋಸದಾಟಕ್ಕೆ ಬೀದಿಗೆ ಬಿದ್ದ ರೈತರು.

ರೈಸ್ ಮಿಲ್ ಮಾಲೀಕನ ಮೋಸದಾಟಕ್ಕೆ ಬೀದಿಗೆ ಬಿದ್ದ ರೈತರು.

 

 

ತುಮಕೂರು_ರೈಸ್ ಮಿಲ್ ಗೆ ಸರಬರಾಜು ಮಾಡಿದ ಭತ್ತಕ್ಕೆ ಸಂಬಂಧಿಸಿದಂತೆ ರೈಸ್ ಮಿಲ್ ಮಾಲೀಕರೊಬ್ಬರು ರೈತರಿಗೆ ಹಣ ಮರು ಪಾವತಿ ಮಾಡದ ಹಿನ್ನೆಲೆ ಉತ್ತರ ಕರ್ನಾಟಕದ ಮೂಲದ ರೈತರು ಬೀದಿಗೆ ಬಿದ್ದಿದ್ದಾರೆ.

 

 

 

ತುಮಕೂರಿನ ಚಂದ್ರಧರ ರೈಸ್ ಮಿಲ್ ಮಾಲೀಕರಾದ ರಮೇಶ್ ಎಂಬುವರು ಉತ್ತರ ಕರ್ನಾಟಕದ ಮೂಲದ ರೈತರಿಂದ 2018ರಿಂದ ಭತ್ತವನ್ನು ಖರೀದಿ ಮಾಡುತ್ತಿದ್ದರು ಆದರೆ ರೈತರಿಗೆ ಪಾವತಿಸಬೇಕಾದ ಹಣವನ್ನು ನೀಡಲು ರೈಸ್ ಮಿಲ್ ಮಾಲಿಕ ವಿಫಲನಾದ ಹಿನ್ನೆಲೆ ರೈಸ್ ಮಿಲ್ ಮಾಲೀಕನ ಮನೆಯೆದುರು ಧರಣಿ ಕುಂತ ಘಟನೆಗೆ ತುಮಕೂರು ನಗರ ಸಾಕ್ಷಿಯಾಗಿದೆ.

 

ಇನ್ನು ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಶ್ರೀ ಭಾಗ್ಯಲಕ್ಷ್ಮಿ ಟ್ರೇಡರ್ಸ್ ರವರಿಂದ ಸುಮಾರು 83 ಲಕ್ಷದ ಭತ್ತವನ್ನು ಖರೀದಿ ಮಾಡಿ ಅವರಿಗೆ ಸಂದಾಯವಾಗಬೇಕು 83 ಲಕ್ಷ ರೂಪಾಯಿ ಹಣದಲ್ಲಿ ಕೇವಲ 59 ಲಕ್ಷ ಹಣವನ್ನು ಪಾವತಿ ಮಾಡಿ ಸುಮಾರು 25 ಲಕ್ಷದ ಹಣವನ್ನು ಮರುಪಾವತಿ ಮಾಡುವ ವಿಫಲರಾಗಿದ್ದಾರೆ.

 

 

ಇದಕ್ಕೆ ಸಂಬಂಧಿಸಿದಂತೆ ರೈತರು ಸಾಕಷ್ಟು ಬಾರಿ ರೈಸ್ ಮಿಲ್ ಮಾಲೀಕನ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಇನ್ನೂ ನಕಲಿ ಚೆಕ್ಕುಗಳನ್ನು ರೈತರಿಗೆ ನೀಡಿ ರೈತರನ್ನು ದಾರಿತಪ್ಪಿಸುವ ದೊಡ್ಡ ಹುನ್ನಾರವನ್ನು ರೈಸ್ ಮಿಲ್ ಮಾಲಿಕ ಮಾಡಿ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

ಇನ್ನು ಕೇವಲ ಕಂಪ್ಲಿ ತಾಲೂಕಿನ ರೈತರಿಗೆ ಮಾತ್ರವಲ್ಲದೆ ದಾವಣಗೆರೆ ಮೂಲದ ರೈತರಿಗೆ 50ಲಕ್ಷ, ಬಳ್ಳಾರಿ ಮೂಲದ ರೈತರಿಗೆ 20ಲಕ್ಷ ಆಂಧ್ರಪ್ರದೇಶ ಮೂಲದ ರೈತರಿಗೆ 10ಲಕ್ಷ ಸೇರಿದಂತೆ ಬರೋಬ್ಬರಿ ಒಂದು ಕೋಟಿಗೂ ಹೆಚ್ಚು ಹಣವನ್ನು ನೀಡದೆ ವಂಚನೆ ಎಸಗಿದ್ದಾರೆ ಎಂದು ಮಾಲಿಕನ ಮನೆಯೆದುರು ಧರಣಿ ಕುಳಿತಿದ್ದಾರೆ.

 

ಏನೋ ಘಟನೆಯ ಸೂಕ್ಷ್ಮತೆಯನ್ನು ಅರಿತ ಪೊಲೀಸರು ಸಹ ಮಾಲೀಕನ ಮನೆಗೆ ಭೇಟಿ ನೀಡಿದರು ಆದರೆ ಮಾಲೀಕ ಮನೆಯ ಒಳಗೆ ಸೇರಿಕೊಂಡು ಮನೆಯ ಬಾಗಿಲನ್ನು ಸಹ ತೆಗೆಯದೆ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ ಎಂದು ರೈತರು ಕೂಡ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

 

 

 

ಇನ್ನೂ ಉತ್ತರ ಕರ್ನಾಟಕದಿಂದ ಆಗಮಿಸಿದ್ದ ಸುಮಾರು 15ಕ್ಕೂ ಹೆಚ್ಚು ರೈತರು ಬೀದಿಯಲ್ಲಿ ರಾತ್ರಿ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ

Enjoyed this article? Stay informed by joining our newsletter!

Comments

You must be logged in to post a comment.

Related Articles
About Author