ಶುಗರ್ ನಿಯಂತ್ರಿಸಲು ಮೆಂತೆ ಸೊಪ್ಪನ್ನು ಈ ರೀತಿ ಬಳಸಿ ನೋಡಿ

 
ಶುಗರ್ ಅನ್ನುವುದು ಇಂದಿನ ಸಾಮಾನ್ಯ ಸಮಸ್ಯೆಯಾಗಿದೆ. ನಮ್ಮ ಸುತ್ತಮುತ್ತಲಿನ ಬಹುತೇಕ ಮಂದಿ ಶುಗರ್ ನಿಂದ ಬಳಲುತ್ತಿರುತ್ತಾರೆ. ಶುಗರ್ ಇರುವವರಿಗೆ ಮೆಂತ್ಯ ಎಲೆಗಳು ಬಹಳ ಪ್ರಯೋಜನಕಾರಿಯಾಗಿದೆ.
ಚಳಿಗಾಲದಲ್ಲಿ, ಮಧುಮೇಹ ರೋಗಿಗಳು ಮೆಂತ್ಯ ಎಲೆಗಳನ್ನು ಸೇವಿಸಬೇಕು, ಇದರಿಂದಾಗಿ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
ಮೆಂತ್ಯದ ಎಲೆಗಳು ಟೈಪ್ 1 ಮತ್ತು ಟೈಪ್ 2 ಮಧುಮೇಹ ಎರಡರಲ್ಲೂ ಬಹಳ ಪ್ರಯೋಜನಕಾರಿಯಾಗಿರುತ್ತದೆ. ಮಧುಮೇಹ ರೋಗಿಗಳ ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಉತ್ಪತ್ತಿಯಾಗುವುದಿಲ್ಲ. ಈ ಕಾರಣದಿಂದಾಗಿ, ಅವರ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗುತ್ತದೆ. ಈ ಸಮಸ್ಯೆಗೆ ಮೆಂತ್ಯ ಸೇವನೆಯು ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮೆಂತ್ಯವನ್ನು ಸೇವಿಸುವುದರಿಂದ ಆಗುವ ಇತರ ಪ್ರಯೋಜನಗಳು
1. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ :
ಕೆಲವು ಅಧ್ಯಯನಗಳ ಪ್ರಕಾರ, ಮೆಂತ್ಯವು ಉತ್ತಮ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸಲು ಮತ್ತು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಮೆಂತ್ಯ ಎಲೆಗಳು ಯಕೃತ್ತಿನಲ್ಲಿ ಕೊಲೆಸ್ಟ್ರಾಲ್ ರಚನೆಯನ್ನು ತಡೆಯುತ್ತದೆ.
2. ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಸಹಕಾರಿ :
ಮೆಂತ್ಯದ ಎಲೆಗಳು ಫೈಬರ್ ಜೊತೆಗೆ ಅಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮೆಂತ್ಯ ಎಲೆಯ ಚಹಾವು ಮಲಬದ್ಧತೆ , ಅಜೀರ್ಣ ಮತ್ತು ಹೊಟ್ಟೆ ನೋವಿನ ಸಮಸ್ಯೆಯನ್ನು ನಿವಾರಿಸುತ್ತದೆ. ಇವುಗಳ ಸೇವನೆಯಿಂದ ಅಸಿಡಿಟಿ ಸಮಸ್ಯೆಯೂ ದೂರವಾಗುತ್ತದೆ.
3. ಹೃದ್ರೋಗಿಗಳಿಗೆ ಪ್ರಯೋಜನಕಾರಿ :
ಮೆಂತ್ಯ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಮೆಂತ್ಯ ಎಲೆಗಳು ಗಿಡಮೂಲಿಕೆಗಳಂತೆ ಕಾರ್ಯನಿರ್ವಹಿಸುತ್ತವೆ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
4. ಮೆಂತ್ಯವು ತೂಕ ನಷ್ಟಕ್ಕೂ ಸಹಕಾರಿ :
ತೂಕ ಇಳಿಸಿಕೊಳ್ಳಬೇಕಾದರೆ ಆಹಾರದಲ್ಲಿ ಮೆಂತ್ಯವನ್ನು ಸೇವಿಸಿ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಮೆಂತ್ಯಕ್ಕಿಂತ ಉತ್ತಮವಾದ ಆಯ್ಕೆ ಇನ್ನೊಂದಿಲ್ಲ. ಒಂದು ಕಪ್ ಮೆಂತ್ಯ ಎಲೆಗಳು ಕೇವಲ 13 ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇದನ್ನು ಸ್ವಲ್ಪ ತಿಂದರೆ ಹೊಟ್ಟೆ ತುಂಬಿದಂತೆ ಅನಿಸುತ್ತದೆ. ನಂತರ ಬೇಗ ಹಸಿವಾಗುವುದಿಲ್ಲ. ಇದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು.
ಸಂಗ್ರಹ ಮೂಲ - ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿ

Enjoyed this article? Stay informed by joining our newsletter!

Comments

You must be logged in to post a comment.

About Author