ಹೆರಿಗೆಯ ಸಂದರ್ಭದ ಕೆಲವು ವಿಚಾರಗಳು

ಹೆರಿಗೆಯ ಸಂದರ್ಭದ ಕೆಲವು ವಿಚಾರಗಳು

ಪ್ರೀತಿ ಪಾತ್ರರೇ... ಇವನ್ನೆಲ್ಲಾ ಮಾಡಬೇಡಿ..! 

 

ಏನೆಲ್ಲಾ ಮಾಡಬಾರದು ಅನ್ನೋದಕಿಂತ ಮುಂಚೆ.. ಏನೇನೆಲ್ಲಾ ಆಗಿರುತ್ತೆ ಅಂತ ನೋಡಿ...

ಅವಳು ನಿಮ್ಮ ಹೆಂಡತಿ..ತಂಗಿ.. ಅಕ್ಕ.. ಕೊನೆಗೆ ಮಗಳೂ ಆಗಿರಬಹುದು..

ಅವಳು ಗರ್ಭ ಧರಿಸಿದ ದಿನದಿಂದ ಹೆರಿಗೆಯಾಗುವವರೆಗಿನ ಸಮಯ ಇದೆಯಲ್ಲಾ ಅದು ಒಂದು ರೀತಿ ಯಾದರೆ..

ಅವಳು ಜನ್ಮ ಕೊಡುವ ದಿನವಿದೆಯಲ್ಲಾ ಅದು ಅವಳಿಗೆ ಪುನರ್ಜನ್ಮದಂತೆ...!

ಲೋ ಬಿ ಪಿಯೋ. ರಕ್ತದೊತ್ತಡವೋ..ಮಗುವಿನ ಅಡ್ಡಬೆಳವಣಿಗೆಯೋ..

ಎಂಥದೋ ಸಿಝೇರಿಯನ್ ಎಂಬುದು ಡಿಕ್ಲೇರ್ ಆಗಿರುತ್ತದೆ..! 

ಮನಸ್ಸಿಲ್ಲದ ಮನಸ್ಸಿನಿಂದ ಹೂ ಅನ್ನುತ್ತೀರಿ..

 

ಸರಿ.. ಸೂಸೂತ್ರವಾ?

 

ಇಲ್ಲಾ.. ! 

 

ಸಹಜ ಹೆರಿಗೆಯಾದರೆ ಸಮಸ್ಯೆಯಿಲ್ಲ..

ಆದರೆ ಶಸ್ತ್ರ ಚಿಕಿತ್ಸೆಯ ಹೆರಿಗೆ ನೋಡಿ..

ಸ್ವಲ್ಪವೇನೂ ಬಹಳವೇ ಅಳುಕಿರುತ್ತೆ.

 

ಮೊದಲು ಅವಳ ಒಳ ದೇಹದ ಕಲ್ಮಶವನ್ನೆಲ್ಲಾ ತೊಳೆಯಲಾಗುತ್ತದೆ..

ಅರವಳಿಕೆ ಇಲ್ಲದೆ! 

 

ಒಂದು ಸಣ್ಣ ಜ್ವರ ತಲೆ ನೋವು ಮೈ ಕೈ ನೋವಿಗೆ ನೀವೆಲ್ಲಾ ಜೀವನವೇ ಸಾಕು ಸಾಕು ಎಂದು ಕೊಳ್ಳುತ್ತೀರಿ.. 

 

ಅವಳ ಆ ಸ್ಥಿತಿಯನ್ನೊಮ್ಮೆ ನೆನಸಿಕೊಳ್ಳಿ... ಅವಳೆಂದೂ ಆ ನೋವನ್ನು ಹೇಳಿಕೊಳ್ಳಲಾರಳು! 

 

ಒಂದು ಸಣ್ಣ ಸೂಜಿಗೆ ಹೌಹಾರುವ ನೀವೆಲ್ಲಾ ... ಬೆನ್ನಿನ ಹುರಿಗೆ ಹಾಕುವ ಅನಸ್ತೇಶಿಯಾದ ಸೂಜಿಯ ನೋವಿನ ಅಂದಾಜಿದೆಯಾ..? 

 

ಇನ್ನೇನೂ ಪ್ರಜ್ಞೆ ತಪ್ಪುತ್ತದೆ..

ಕಣ್ಣೆಲ್ಲಾ ಮಂಜು ಮಂಜು..

ಯಾವುದೋ ಲೋಕದಲ್ಲಿ ಹಾರುತ್ತಿರುವಂತೆ ಭ್ರಮೆ..

 

ಡಾಕ್ಟರಗಳ ಕೈಯಲ್ಲಿರುವ ಕತ್ತರಿ ಕೆಲಸ ಮಾಡತೊಡಗುತ್ತದೆ..

ನೀಟಾಗಿ ಹೊಟ್ಟೆಯನ್ನು ಸೀಳಿ..

ಗರ್ಭಕೋಶವನ್ನು ಕತ್ತರಿಸಿ ..

ಮುದ್ದಾದ ಮಗುವನ್ನೊಮ್ಮೆ ಹೊರಗೆ ತೆಗೆದರೆ ಅವಳು ಬರೀ ಹೆಣ್ಣಲ್ಲಾ ತಾಯಿಯಾಗುತ್ತಾಳೆ..! 

 

ತಾಯಿ ಆಗುವುದು ಇಷ್ಟು ಸುಲಭವಾ? 

 

ಇಲ್ಲಾ .. ಈಗ ಡಾಕ್ಟರ್ ಕೈಯಲ್ಲಿರುವ ಸೂಜಿ ದಾರ ಕೆಲಸ ಮಾಡತೊಡಗುತ್ತದೆ..ಮತ್ತೆ ಹೊಲಿಗೆ ಹಾಕಿದರೆ ಆಪರೇಷನ್ ಸಕ್ಸಸ್..

 

ನೆನಪಿರಲಿ ಅರವಳಿಕೆಯ ಅವಧಿ ಕೇವಲ ಮೂರು ಗಂಟೆ.. ಅದಾದ ನಂತರ ಮೈ ನರನಾಡಿಗಳಲೆಲ್ಲಾ ಅಸಾಧ್ಯ ಯಮ ಯಾತನೆಯ ನೋವಿಗೆ ಸ್ಪಂದಿಸಿ ಅವಳನ್ನು ಹೈರಾಣಾಗಿಸುತ್ತವೆ..

 

ಅಷ್ಟು ನೋವಿನಲ್ಲೂ ಮಗುವಿಗೆ ಹಾಲೂಡಿಸಬೇಕು..

ಮೂರು ದಿನದ ಹೊತ್ತಿನಲ್ಲಿ ಗಾಯವನ್ನು ಒಣಗಿಸಿಕೊಳ್ಳಬೇಕು..

 

ಅಷ್ಟೂ ದಿನ ಹಿಗ್ಗಿದ್ದ ಗರ್ಭಕೋಶಕ್ಕೆ ಬಟ್ಟೆಯ ಸಹಾಯದಿಂದ ಆಧಾರ ಒದಗಿಸಿಕೊಂಡು ನಡೆದಾಡಬೇಕು..

 

ಮೂರು ದಿನವಾದರೂ ಹಾಲು ಬರಲಿಲ್ಲವೆಂದರೆ ಮುಲಾಜಿಲ್ಲದೆ ಇಂಜೆಕ್ಷಿನ ಸಹಾಯದಿಂದ ಹಾಲೂಡಿಸುವ ಮನಸ್ಸು ಮಾಡಬೇಕು..! 

 

ಹುಫ್...  

 

ಈಗ ನೀವೇನೂ ಮಾಡಬಾರದು ಅನ್ನೋದನ್ನಾ ನೋಡಿ..

 

ಅಯ್ಯೋ ಸಿಝೇರಿಯನ್ನಾ ಛೆ ಅಂತ ಅನ್ನಬೇಡಿ..

 

ಹುಟ್ಟಿದ ಮಗು ಹೆಣ್ಣಾದರೆ ಛೆ ಹೆಣ್ಣು ಮಗುವಾ ಎಂದು ಮೂಗು ಮುರಿಯಬೇಡಿ..

 

ಆಪರೇಷನ್ನಿಗೆ ನಲವತ್ತು ಸಾವಿರವಾ ಎಲ್ಲಿಂದ ತರೋದು ಅಂತ ಅವಳ ಮುಂದೆ ನಿಮ್ಮ ಸಂಕಟ ಹೇಳಬೇಡಿ..

 

ನಾರ್ಮಲ್ ಆಗ್ತಾ ಇತ್ತೇನೋ ಅಂಥ ಅವಳ ಮುಂದೆ ನಿಮ್ಮ ಒಣ ಬುದ್ಧಿವಂತಿಕೆ ತೋರಿಸಬೇಡಿ..

 

ಮುಖವನ್ನು ಹುಂ ಅಂತ ಇಟಕೊಂಡು ಅವಳ ಮುಂದೆ ಓಡಾಡಬೇಡಿ..

 

ನೆನಪಿರಲಿ.. 

 

ದುಡ್ಡಿಗಿಂತ ಜೀವ ಮುಖ್ಯ..

ಜೀವನ ಮುಖ್ಯ..

 

ಸಾಧ್ಯವಾದರೆ.. 

 

ಅವಳ ಕೈಯನ್ನಿಡಿದು ಸಮಾಧಾನದ ಮಾತನ್ನಾಡಿ...

ಏನಾಗಲ್ಲಾ ನಾವಿದ್ದೀವಿ ಅಂತ ಭರವಸೆ ತುಂಬಿ..

ದುಡ್ಡಿಗಿಂತ ನೀವಿಬ್ಬರು ಮುಖ್ಯ ಅಂತ ಮನವರಿಕೆ ಮಾಡಿ..

ಹೆಣ್ಣೋ ಗಂಡೋ ನಿಮ್ಮ ಕ್ಷೇಮವೇ ತುರ್ತೆಂದು ಹೇಳಿ..

ಬೇಗ ಗುಣಮುಖವಾಗಲು ಜೊತೆ ನಾವಿದ್ದೇವೆಂದು ಭರವಸೆ ತುಂಬಿ..

 

ಅವಳು ತನ್ನ ತಾಯ್ತತನವನ್ನು ಎಂಜಾಯ್ ಮಾಡಲು ಅವಕಾಶ ಮಾಡಿಕೊಡಿ...! 

ತಾಯಿಯಾಗೋದು ಅಂದರೇನು ಸುಲಭದ ಮಾತೇ..! 

ಅವಳೆದೆಯ ಅಮೃತದಲ್ಲಿ ಬದುಕಿದೆ.!

ಅವಳ ಸಾವಿರ ನೋವಿನಲ್ಲಿ ನಮ್ಮ ಬದುಕಿನ ಆನಂದವಿದೆ..!

Enjoyed this article? Stay informed by joining our newsletter!

Comments

You must be logged in to post a comment.

Related Articles
About Author