ವೈಕುಂಠ ಏಕಾದಶಿ

ಹರೇ ಶ್ರೀನಿವಾಸ...
*ವೈಕುಂಠ ಏಕಾದಶಿ 13.01.2022*
*This time Vaikunta Ekadashi on 13.1.22*
*Quiz on Vaikunta Ekadashi*
*Vaikunta Ekadashi* will be observed on the Ekadashi Day during Shukla paksha of Dhanurmasa. There is no specific month for Vaikunta Ekadashi.
೧. ವೈಕುಂಠ ಏಕಾದಶಿ ಎಂದು ಆಚರಿಸಲಾಗುತ್ತದೆ?
*ಉತ್ತರ* - ಧನುರ್ಮಾಸದಲ್ಲಿ ಬರುವ ಶುಕ್ಲ ಪಕ್ಷದ ಏಕಾದಶಿ (ಸಾಮಾನ್ಯವಾಗಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ) ಆಚರಿಸಲಾಗುತ್ತದೆ.
೨. ವೈಕುಂಠ ಏಕಾದಶಿಯಂದು ಉಪವಾಸ ಮಾಡಬೇಕಾ ? ಫಲಾಹಾರ ಮಾಡಬಹುದಾ?
*ಉತ್ತರ* - ಎಲ್ಲಾ ಏಕಾದಶಿಯಂದೂ ಉಪವಾಸ ಮಾಡಬೇಕು.
ಅಶಕ್ತರು, ಬಸುರಿ, ಬಾಣಂತಿಯರು, ಎಂಟು ವರ್ಷದ ಒಳಗಿನವರು ಮತ್ತು ಎಂಭತ್ತು ದಾಟಿದವರು ಫಲಾಹಾರ ಮಾಡಬಹುದು.
೩. ಕೆಲವು ದೇವಸ್ಥಾನಗಳಲ್ಲಿ ನೈವೇದ್ಯ ರೂಪದಲ್ಲಿ ಪೊಂಗಲ್, ಹುಗ್ಗಿ, ಚಿತ್ರಾನ್ನ ಇತ್ಯಾದಿ ಕೊಡುತ್ತಾರಲ್ಲ ಅದನ್ನು ತಿನ್ನಬಹುದೆ?
*ಉತ್ತರ* - ತಿನ್ನಬಾರದು. *ಮಾಧ್ವ ಸಂಪ್ರದಾಯದ* ಯಾವ ದೇವಸ್ಥಾನದಲ್ಲೂ ಕೊಡುವುದಿಲ್ಲ. ಅಕಸ್ಮಾತ್ ಅವರೇನಾದರೂ ಕೊಟ್ಟರೆ ಅವರಿಗೆ ಕೊಡಬಾರದೆಂದು ಹೇಳಿ.
೪. ಏಕಾದಶಿಯಂದು ತೀರ್ಥ ಎಷ್ಟು ಸಲ ತೆಗೆದುಕೊಳ್ಳಬೇಕು.
*ಉತ್ತರ* - ನಿರ್ಮಾಲ್ಯ ಒಂದು ಸಾರೀ ಮತ್ತು ತೀರ್ಥ ಒಂದು ಸಾರಿ ಮಾತ್ರ.
೫. ಮನೆಯಲ್ಲಿ ತೀರ್ಥ ತೆಗೆದುಕೊಂಡವರು ದೇವಸ್ಥಾನದಲ್ಲೂ ತೆಗೆದುಕೊಳ್ಳಬಹುದಾ?
*ಉತ್ತರ* - ಮನೆಯಲ್ಲಿ ತೆಗೆದುಕೊಂಡಿದ್ದರೆ ಏಕಾದಶಿಯಂದು ಅಲ್ಲಿ ಸ್ವೀಕರಿಸಬೇಡಿ.
೬. ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಏನು ಫಲ?
*ಉತ್ತರ* - ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಒಂದು ವರ್ಷದ ೨೪ ಏಕಾದಶಿ ಉಪವಾಸ ಮಾಡಿದ ಫಲ. ಪ್ರತಿ ಏಕಾದಶಿಯೂ ಉಪವಾಸ ಮಾಡಲೇಬೇಕು.
7 ವೈಕುಂಠ ಏಕಾದಶಿ ಉಪವಾಸ ಮಾಡಿದರೆ ಸಾಕು ೨೪ ಏಕಾದಶಿ ಫಲ ಬರುವುದರಿಂದ ಬೇರೆ ಯಾವ ಏಕಾದಶಿ ಮಾಡದಿದ್ದರೂ ಪರವಾಗಿಲ್ಲವಾ ?
ಉತ್ತರ : ಎಲ್ಲಾ ಏಕಾದಶಿಯೂ ಮಾಡಬೇಕು. ಅವತ್ತು ಮಾಡಿದರೆ ಹೆಚ್ಚು ಫಲ, ಅಷ್ಟೇ.
8. ದಿನತ್ರಯ ಎಂದರೇನು?
ಉತ್ತರ - ದಶಮಿ, ಏಕಾದಶಿ, ದ್ವಾದಶಿ ಈ ಮೂರೂ ದಿನಗಳನ್ನು ದಿನತ್ರಯವೆನ್ನುತ್ತಾರೆ.
9. ಏಕಾದಶಿ ಶ್ರಾದ್ಧ ಏಕಾದಶಿಯಂದೇ ಮಾಡಬಹುದಾ?
ಉತ್ತರ - ಏಕಾದಶಿಯಂದು ಶ್ರಾದ್ಧ ಮಾಡಬಾರದು. ದಶಮೀ ಅಥವಾ ದ್ವಾದಶಿ ಮಾಡಬೇಕು (ನಿಮ್ಮ ಮಠದ ಪಂಚಾಂಗದಲ್ಲಿ ಶ್ರಾದ್ಧ ಕಾಲಂ ನೋಡಿ)
10. ಏಕಾದಶಿ ಆಚರಿಸಿದ ಕೆಲವು ಭಾಗವತೋತ್ತಮರ ಹೆಸರು ತಿಳಿಸಿ.
*ಉತ್ತರ* - ಭೀಮಸೇನ, ದೂರ್ವಾಸರು, ಅಂಬರೀಷ, ರುಕ್ಮಾಂಗದ ಮುಂತಾದವರು.
11. ದೂರ್ವಾಸರು ಅಂಬರೀಷನಿಗಿಂತ ದೊಡ್ಡವರಾದರೂ ಅವರು ಏಕಾದಶಿಯ ಅನುಸರಿಸಲಿಲ್ಲವೇಕೆ?
ಉತ್ತರ - ದೂರ್ವಾಸರು ರುದ್ರದೇವರ ಅವತಾರ. ಪರಮ ವೈಷ್ಣವರು. ಆದರೆ ಅವರು ಅಂಬರೀಷನ ಏಕಾದಶಿ ಮಹತ್ವ ತಿಳಿಸಬೇಕಿತ್ತು. ಅದಕ್ಕೇ ಪರಮಾತ್ಮನ ಪ್ರೇರಣಾನುಸಾರ ಹಾಗೆ ಮಾಡಿರುತ್ತಾರೆ .
12. ಏಕಾದಶಿ ಅಭಿಮಾನಿ ದೇವತೆ ಯಾರು?
ಉತ್ತರ : ದಶಮಿ, ಏಕಾದಶಿ ಮತ್ತು ದ್ವಾದಶಿಗೆ ಶ್ರೀಹರಿಯೇ ಅಭಿಮಾನಿ ದೇವತೆ.
ಸಂಗ್ರಹ :
Ñarahari Sumadhwa
*Sumadhwa Seva*

Enjoyed this article? Stay informed by joining our newsletter!

Comments

You must be logged in to post a comment.

About Author