ವರಮಹಾಲಕ್ಷ್ಮಿ ವ್ರತ ಆಚರಣೆಯ ಸರಳ ವಿಧಾನ

ವರಮಹಾಲಕ್ಷ್ಮಿ ವ್ರತ ಆಚರಣೆಯ ಸರಳ ವಿಧಾನ 

 

ವರಮಹಾಲಕ್ಷ್ಮಿ ವ್ರತವು ದಕ್ಷಿಣ ಭಾರತದ ಪ್ರಸಿದ್ಧ ಹಬ್ಬಗಳಲ್ಲಿ ಒಂದು. ಹಿಂದೂ ಧರ್ಮೀಯರಲ್ಲಿ ಬಹಳ ಮಹತ್ವ ಹೊಂದಿರುವ ಆಚರಣೆ. ಈ ವ್ರತವನ್ನು ಯಾರು ಆಚರಣೆ ಮಾಡಬೇಕು? ಹೇಗೆ ಆಚರಣೆ ಮಾಡಬೇಕು? ಆಚರಿಸಲು ಬೇಕಿರುವ ಪದಾರ್ಥಗಳು ಯಾವ್ಯಾವು? ಆ ಎಲ್ಲಾ ವಿವರಗಳು ಇಲ್ಲಿದೆ ಓದಿ. 

Varamahalakshmi pooja

Image Source : Mysuru Today

 

ವರಮಹಾಲಕ್ಷ್ಮಿ ಆಚರಣೆಗೆ ಇರುವ ನಿಯಮಗಳು ಏನು? 

. ಪೂಜೆಯನ್ನು ಒಂದೇ ಮನೆಯಲ್ಲಿರುವ ಮಹಿಳೆಯರು ಕೂಡಿಮಾಡಬೇಕು. 

. ಪೂಜೆ ಮಾಡುವ / ಪಾಲ್ಗೊಳ್ಳುವ ಯಾವುದೆ ಮಹಿಳೆಯು ಬಹಿಷ್ಠೆಯಾಗಿರಬಾರದು. 

. ಅಶುಭ ಹಾಗು ಶುಭ ಸೂತಕಗಳು ಇರಬಾರದು. 

. ಮದುವೆಯಾಗದ ಹೆಣ್ಣು ಮಕ್ಕಳೂ ಈ ವ್ರತದಲ್ಲಿ ಭಾಗವಹಿಸಬಹುದು. 

. ಆದಷ್ಟು ಕೃತಕ ವಸ್ತುಗಳ ಬಳಕೆಯನ್ನು ಮಾಡಬಾರದು ಮುಖ್ಯವಾಗಿ ಪ್ಲಾಸ್ಟಿಕ್ ಬಳಕೆ ಬೇಡ. 

. ಒಮ್ಮೆ ಪೂಜಿಸಿದ ನಂತರ ವಿಸರ್ಜನೆಗೆ ಮೊದಲು ಪದೇ ಪದೇ ದೇವಿಯ ಕಲಶ ಅಥವಾ ವಿಗ್ರಹವನ್ನು ಸ್ಪರ್ಶಿಸಬಾರದು. 

. ಯಾವುದೇ ಕಾರಣಕ್ಕೂ ಮಡಿಯಿಲ್ಲದ ಆಹಾರವನ್ನು ನೈವೇದ್ಯಕ್ಕಿಡಬಾರದು. 

. ಆಡಂಬರದ ಅಲಂಕಾರಕ್ಕಿಂತ ಆನಂದದ ಅಲಂಕಾರಕ್ಕೆ ದೇವಿ ಬಹುಬೇಗ ಒಲಿಯುತ್ತಾಳೆ. 

 

 

ವರಾಮಹಾಲಕ್ಷ್ಮಿ ವ್ರತಕ್ಕೆ ಬೇಕಿರುವ ಸಾಮಗ್ರಿಗಳ ಯಾವುವು?

Varamahalakshmi pooja items

. ಹಣ್ಣುಗಳು ೫ ವಿಧಗಳು: ದಾಳಿಂಬೆ, ಬಾಳೆಹಣ್ಣುಗಳು, ಸೇಬುಗಳು, ಸೀತಾಫಲ, ಮಾವಿನ ಹಣ್ಣು, 

. ಹೂವುಗಳು ೫ ವಿಧಗಳು: ಜಾಜಿ, ಕೇದಗೆ, ತಾವರೆ, ನೈದಿಲೆ, ಮಲ್ಲಿಗೆ, ಪಾರಿಜಾತ, ಸೇವಂತಿಗೆ, ಸುಗಂಧರಾಜ, ಸಂಪಿಗೆ, ಕರವೀರ, ಕಣಗಿಲೆ 

. ಪತ್ರೆಗಳು (ಎಲೆಗಳು) ೫ ವಿಧಗಳು: ಮರುಗ, ದವನ, ತುಳಸೀ, ವಿಷ್ಣುಕ್ರಾಂತಿ, ಸಂಪಿಗೆ ಎಲೆ, ಕಣಗಲೆ, ಜಾಜಿ, ಮಾವು, ವೀಳ್ಯದೆಲೆ. 

. ಅರಶಿನ, ಕುಂಕುಮ, ಚಂದನ, ಶ್ರೀಗಂಧ, ಕಾಡಿಗೆ, ಕರಿಮಣಿ ತಾಳಿ, ಕುಬುಸದ ಖಣ, ಸೀರೆ, ಒಡವೆಗಳು 

. ತುಪ್ಪ, ಮೊಸರು, ಎಳನೀರು, ಜೇನುತುಪ್ಪ, ಹಾಲು, ಸಕ್ಕರೆ, ಪಂಚಪಲ್ಲವ, ಕರ್ಪೂರ, ಕೆಸರಿ ಅಕ್ಕಿ, ಬೆಲ್ಲ. 

. ರಂಗೊಲಿ ಪುಡಿ, ಬತ್ತಿ, ತುಪ್ಪದ ಬತ್ತಿ, ಗೋಟಡಿಕೆ, ತುಂಡಡಿಕೆ, ನಿಂಬೆಹುಳಿ.

. ಕಲಶ, ಮುಖವಾಡ(ಇದ್ದಲ್ಲಿ) ದೀಪಗಳು(,,,,) ತಟ್ಟೆ, ಕೌಳಿಗೆ ಸೌಟು, 

. ಗೆಜ್ಜೆ ವಸ್ತ್ರ, ಉಪವೀತ, ಬಾಳೆ ಎಲೆಗಳು () ಎಳೆಬಾಳೆ ಕಂದುಗಳು() ಅರಿಶಿಣದ ಕೊಂಬುಗಳು. 

9. ತೆಂಗಿನಕಾಯಿಗಳು() (ಗಣಪತಿ ನೈವೆದ್ಯ, ಮಹಾಲಕ್ಷ್ಮಿ ನೈವೆದ್ಯ, ಗಂಗಾ ನೈವೆದ್ಯ ಹಾಗೂ ಕಲಶಕ್ಕೆ, ಮಹಾಲಕ್ಷ್ಮಿ ಕಲಶಕ್ಕೆ,) ಮುತ್ತೈದೆಯರಿಗೆ. 

 

Varamahalakshmi vratha pooja

Image Source : www.religionworld.in

ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವುದು ಹೇಗೆ? 

 

ದಿಕ್ಕು: ಮೊದಲಿಗೆ ಕಲಶ ಸ್ಥಾಪನೆಗೆ ಪ್ರಶಸ್ಥವಾದ ಜಾಗ ಹಾಗು ದಿಕ್ಕನ್ನು ಆರಿಸಿಕೊಳ್ಳಬೇಕು.

 

.ಪೂರ್ವಾಭಿಮುಖ: ಶ್ರೀದೇವಿಯನ್ನು ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸಿದಲ್ಲಿ ಹಸಿರು ಸೀರೆಯಿಂದ ಅಲಂಕರಿಸಿ 

.ಉತ್ತರಾಭಿಮುಖ: ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸಿದಲ್ಲಿ ಬಿಳಿ, ಬಂಗಾರದ ವರ್ಣದ ಸೀರೆಯಿಂದ ಅಲಂಕರಿಸಿ 

. ತುಂಬಿದ ಕೊಡದ ನೀರಿನಿಂದ ನಿಗದಿಪಡಿಸಿದ ಜಾಗವನ್ನು ಶುಚಿಗೊಳಿಸಬೇಕು ಸಾಧ್ಯವಾದಲ್ಲಿ ಸ್ವಲ್ಪ ಗೋಮಯದಿಂದ ಶುಚಿಗೊಳಿಸಿ. 

. ಸ್ವಚ್ಛವಾದ ಮೇಲೆ ನೆಲದ ಮೇಲೆ ಅಷ್ಟದಳ ರಂಗವಲ್ಲಿಯನ್ನು ಬಿಡಿಸಬೇಕು. 

. ಆ ರಂಗವಲ್ಲಿಯ ಮೇಲೆ ಪೀಠವನ್ನು ಪ್ರತಿಷ್ಟಾಪಿಸಬೇಕು.

. ಈಗ ಪೀಠದ ಮೇಲೆ ತುದಿಬಾಳೆಯೆಲೆಯನ್ನು ಇಡಬೇಕು ಈ ಬಾಳೆಯೆಲೆಯನ್ನು ಮನುಷ್ಯರಿಗಿಡುವಂತೆ ಇಡದೆ ವಿರುದ್ಧ ದಿಕ್ಕಿನಲ್ಲಿಡಬೇಕು ಇಲ್ಲವೇ ತುದಿ ಮುಂಭಾಗಕ್ಕೆ ಬರುವಂತೆ ಉದ್ದಕ್ಕೆ ಇಡಬೇಕು. 

. ಬಾಳೆಯ ಮೇಲೆ ಮತ್ತೊಮ್ಮೆ ಅಷ್ಟದಳ ರಂಗವಲ್ಲಿಯನ್ನು ಬಿಡಿಸಬೇಕು. 

. ನಂತರ ೩,,,,೯ ಸೇರು ಅಕ್ಕಿಯನ್ನು ಬಾಳೆಯೆಲೆಯಮೇಲೆ ಹರಡಬೇಕು. ಹೀಗೆ ಹರಡಿದ ಅಕ್ಕಿಯಮೇಲೆ ತಟ್ಟೆ ಅಥವ ಗೋಲದ ಬಟ್ಟಲನ್ನಿಟ್ಟು ಅದರಲ್ಲಿ ಅಕ್ಕಿ ತುಂಬಬೇಕು ಇದರೊಂದಿಗೆ ಗೋಡಂಬಿ, ದ್ರಾಕ್ಷಿ, ಬಾದಮಿ, ಉತ್ತುತ್ತಿ ಇತ್ಯಾದಿ ಒಣ ಹಣ್ಣುಗಳನ್ನು ಸೇರಿಸಬೇಕು 

. ಇದರ ಮೇಲೆ ಕಲಶವನ್ನಿಟ್ಟು ಕಲಶಕ್ಕೆ ಮೊದಲಿಗೆ ನೀರನ್ನು ಹಾಕಿ (ಏಳು ಪವಿತ್ರ ಕ್ಷೇತ್ರಗಳ ಪುಷ್ಕರಣಿ ನೀರು ಅಥವಾ ಸಮುದ್ರದ ನೀರು ಅಥವಾ ಬಾವಿಯ ಶುಧ್ಧವಾದ ನೀರು (ಅದರಲ್ಲೂ ಆಮೆಯಿರುವ ಬಾವಿ ನೀರು ಶ್ರೇಷ್ಠ) ತುಂಬಿರಿ. 

೧೦ ತುಂಬಿದ ಕಲಶಕ್ಕೆ ಅರಶಿಣ, ಕುಂಕುಮ, ಶ್ರೀಗಂಧ, ಚಂದನ, ಒಂದು ಬೆಳ್ಳಿ ನಾಣ್ಯ ಒಂದು ಚಿನ್ನದ ಚೂರು, ಸ್ವಲ್ಪ ಅಕ್ಕಿ ಸೇರಿಸಬೇಕು. 

೧೧. ಹೀಗೆ ತಯಾರಾದ ಕಲಶಕ್ಕೆ ಪೂಜಿಸುವ ಮೊದಲು ತುಳಸೀ ಪೂಜೆಯನ್ನು ಮಾಡಬೇಕು. ತುಳಸಿಯನ್ನು ಪೂಜಿಸಿ ನೈವೇದ್ಯ ಸಲ್ಲಿಸಿದ ಬಳಿಕ ಲಕ್ಷ್ಮೀ ಹೆಜ್ಜೆ ಗಳನ್ನು ರಂಗೋಲೆಯಲ್ಲಿ ಬಿಡಿಸಿ ಗಂಗೆಯನ್ನು ಪೂಜಿಸಿ ಲಕ್ಷ್ಮಿಯನ್ನು ಮನೆಯೊಳಕ್ಕೆ ಆಹ್ವಾನಿಸಬೇಕು. 

೧೨. ಹೀಗೆ ಅಹ್ವಾನಿಸಿದ ಗಂಗೆಯನ್ನು ಮಹಾಲಕ್ಷ್ಮಿಯ ಮೂಲ ಕಲಶಕ್ಕೆ ಬೆರೆಸಬೇಕು. 

೧೩. ಗಣಪತಿ ಪೂಜೆಯನ್ನು ಮಾಡಿ ಲಕ್ಷ್ಮಿಗೆ ಷೋಡಶೋಪಚಾರದಿಂದ ಪೂಜಿಸಬೇಕು. 

೧೪. ಶ್ರೀ ಮಹಾಲಕ್ಷ್ಮಿ ಯನ್ನು ಅಲಂಕರಿಸುವಾಗ ಜಾಗ್ರತೆಯಾಗಿರಬೇಕು ಆಭರಣಗಳನ್ನು ಮೊದಲೇ ಸ್ವಚ್ಛವಾಗಿ ತೊಳೆದು ನಂತರ ಅರಿಶಿಣದ ನೀರಲ್ಲಿ ಒಂದು ದಿನ ನೆನೆಯಿಸಿ ಇಟ್ಟು ನಂತರ ಶ್ರಂಗಾರಕ್ಕೆ ಬಳಸವುದು ಯೋಗ್ಯ. ಪ್ರತ್ಯೇಕ ಆಭರಣ/ಮೀಸಲು ಆಭರಣ ಇಟ್ಟಿದ್ದರೆ ಅದನ್ನಷ್ಟೆ ಉಪಯೋಗಿಸಬೇಕು.

೧೫. ಪೂಜೆಯ ನಂತರ ಬ್ರಾಹ್ಮಣರಿಗೆ ತೆಂಗಿನಕಾಯಿ ಹಾಗು ವಸ್ತ್ರದೊಂದಿಗೆ ತಾಂಬೂಲ ಗೌರವ/ಉಪಾಯನ ದಾನ ನೀಡಿದರೆ ಒಳ್ಳೆಯದು. 

೧೬. ಮುತ್ತೈದೆಯರಿಗೆ ಮೊರದಬಾಗಿನ ಕೊಟ್ಟು ಕನ್ಯೆಯರಿಗೆ ತಾಂಬೂಲ ಗೌರವ ಕೊಡಬಹುದು. 

೧೬. ತಾಂಬೂಲ ನೀಡುವಾಗ ಬಾಳೆಹಣ್ಣು ಹಾಗು ತೆಂಗಿನಕಾಯಿಯ ಜುಟ್ಟು ನೀಡುವವರ ಕಡೆಗಿರುವಂತೆನೀಡಿದರೆ ಒಳ್ಳೆಯದು. 

 

ಕಲಶ ವಿಸರ್ಜನೆಯ ವಿಧಾನ ಹೇಗೆ? 

varamahalakshmi kalasaImage Source : Medium

. ಪೂಜಾನಂತರ ಕಲಶವನ್ನು ಯಾವ ದಿಕ್ಕಿನಲ್ಲಿ ಸ್ಥಾಪಿಸಿರುತ್ತೀರೋ ಆ ದಿಕ್ಕಿನ ರಂಗವಲ್ಲಿ ಗೆರೆಯನ್ನು ಬಳಿದ ನಂತರ ಕಲಶದ ಬಲಭಾಗದ ಹೂವನ್ನು ಬೀಳಿಸಬೇಕು ಆಮೇಲೆ ಕಲಶವನ್ನು ಬಲದಿಂದ ಎಡಕ್ಕೆ ಮೂರು ಸಲ ಎರಡೂ ಕೈಯಿಂದ ಸರಿಸಿ ನಂತರ ಎತ್ತಿ ಇರಿಸಬೇಕು. 

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

 

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

About Author