ವರುಣ್ ಚಕ್ರವರ್ತಿ ಟೀಂ ಇಂಡಿಯಾದ ಟ್ರಂಪ್ ಕಾರ್ಡ್? ಕ್ಯಾಪ್ಟನ್ ಕೊಹ್ಲಿ ಕೊಟ್ರು ಮಹತ್ವದ ಸುಳಿವು

varun chakravathy ipl 20-20Featured Image Source: The Hans India

ಅಕ್ಟೋಬರ್-ನವೆಂಬರ್‍ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗೆ ಈಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ ಭಾಗ-2 ರಿಹರ್ಸಲ್ ಇದ್ದಂತೆ. 

ಐಪಿಎಲ್‍ನಲ್ಲಿ ಶೈನ್ ಆಗುತ್ತಿರುವ ಆಟಗಾರರು ಟಿ20 ವಿಶ್ವಕಪ್‍ನಲ್ಲೂ ಮಿಂಚಬಹುದು. ಮೊನ್ನೆ ಮೊನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಪಂದ್ಯದಲ್ಲಿ ಮಿಂಚಿದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಟಿ20 ವಿಶ್ವಕಪ್‍ನಲ್ಲಿ ಅಬ್ಬರಿಸುವ ಸುಳಿವು ಕೊಟ್ಟರು. 

ವರುಣ್ ಚಕ್ರವರ್ತಿ ಬೌಲಿಂಗ್‍ಗೆ ಸ್ವತಃ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯೇ ಮೆಚ್ಚುಗೆ ವ್ಯಕ್ತಪಡಿಸಿದರು. ವರುಣ್ ಟಿ20 ವಿಶ್ವಕಪ್‍ನಲ್ಲಿ ತಂಡದ ಬೌಲಿಂಗ್ ಟ್ರಂಪ್ ಕಾರ್ಡ್ ಆಗಲಿದ್ದಾರೆ ಎಂದು ಖುಷಿಯಿಂದ ಹೇಳಿದರು. 

ಚಹಲ್ ಹಿಂದಿಕ್ಕಿ ಸ್ಥಾನ ಪಡೆದಿದ್ದ ವರುಣ್ 

varun chakravarthy vs chahal

ಟಿ20 ಕ್ರಿಕೆಟ್‍ನಲ್ಲಿ ಭಾರತ ಪರ ಅತಿಹೆಚ್ಚು ವಿಕೆಟ್ ಪಡೆದಿರುವ ಯುಜುವೇಂದ್ರ ಚಹಲ್ ಅವರನ್ನು ಕೈಬಿಟ್ಟು ತಮಿಳುನಾಡಿನ ವರುಣ್ ಚಕ್ರವರ್ತಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆಗ ಕ್ರಿಕೆಟ್ ತಜ್ಞರು, ಅಭಿಮಾನಿಗಳು ಬಿಸಿಸಿಐ ಆಯ್ಕೆ ಸಮಿತಿಯ ನಿರ್ಧಾರವನ್ನು ಪ್ರಶ್ನೆ ಮಾಡಿದ್ದರು. 

ಅನುಭವಿ ಚಹಲ್ ಬದಲಿಗೆ ವರುಣ್‍ರನ್ನು ಆಯ್ಕೆ ಮಾಡಿದ್ದು ಏಕೆ? ಎನ್ನುವ ಚರ್ಚೆ ಜೋರಾಗಿ ನಡೆದಿತ್ತು. ಆ ಪ್ರಶ್ನೆಗೆ ಮಿಸ್ಟ್ರಿ ಸ್ಪಿನ್ನರ್ ಐಪಿಎಲ್‍ನಲ್ಲಿ ಉತ್ತರ ನೀಡುತ್ತಿದ್ದಾರೆ. 

ವರುಣ್, ಬೇರೆ ಬೌಲರ್‍ಗಳಿಗೆ ಹೋಲಿಸಿದರೆ ಎಷ್ಟು ವಿಭಿನ್ನ ಎನ್ನುವುದನ್ನು ನೋಡಬಹುದು. ಅವರ ಕೇರಂ ಬಾಲ್, ಗೂಗ್ಲಿ, ಬ್ಯಾಕ್ ಫ್ಲಿಪ್ಪರ್ ಎಲ್ಲವೂ ವಿಭನ್ನವಾಗಿದೆ. ರವಿಚಂದ್ರನ್ ಅಶ್ವಿನ್, ಅಜಂತಾ ಮೆಂಡಿಸ್‍ಗಿಂತಲೂ ಡಿಫರೆಂಟ್ ಬೌಲಿಂಗ್ ಶೈಲಿ ಹೊಂದಿದ್ದಾರೆ. 

ಚಹಲ್‍ಗಿಂತ ವರುಣ್ ಬೆಸ್ಟ್ 

ಆರ್‍ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದಲ್ಲಿ ಚಹಲ್ ಹಾಗೂ ವರುಣ್ ಇಬ್ಬರೂ ಆಡಿದ್ದರು. ಇಬ್ಬರದ್ದೂ ಬೌಲಿಂಗ್ ಪ್ರದರ್ಶನ ಗಮನಿಸಿದರೆ, ಚಹಲ್‍ಗಿಂತ ವರುಣ್ ಉತ್ತಮ ಎನಿಸಿದರು. 

ಚಹಲ್‍ಗೆ ಹೋಲಿಸಿದರೆ ವರುಣ್‍ರ ಫ್ಲೈಟ್ ವೇಗವಾಗಿರಲಿದೆ. ಹೆಚ್ಚು ವೆರೈಟಿ ಇರಲಿದೆ. ಹೀಗಾಗಿ ವಿಶ್ವಕಪ್‍ನಲ್ಲಿ ವರುಣ್ ಟ್ರಂಪ್ ಕಾರ್ಡ್ ಆಗಬಹುದು ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿದೆ. 

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author