Featured Image Source : EEV
ಭಾರತ ದೇಶದ ಹಲವು ರಾಜ್ಯಗಳಲ್ಲಿ ಪುರಾತನವಾದ ಅದೆಷ್ಟೋ ದೇವಾಲಯಗಳಿವೆ. ಸಾಂಪ್ರದಾಯಿಕವಾಗಿ , ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಪ್ರಸಿದ್ಧಿ ಪಡೆದುಕೊಂಡಿವೆ. ರಾಜರ ಕಾಲದ ಹಲವು ದೇವಸ್ಥಾನಗಳು ಇಂದಿಗೂ ಶತ ಶತಮಾನದ ಪರಂಪರೆಯನ್ನು ನೆನಪಿಸುತ್ತಾ ಭವ್ಯವಾಗಿ ತಲೆಯೆತ್ತಿ ನಿಂತಿವೆ. ಅಂದಿನ ಕಲೆ, ಕೆತ್ತನೆ, ಕುಸುರಿಯನ್ನು ಭವ್ಯವಾಗಿ ನಿರೂಪಿಸುತ್ತಿವೆ. ಅದರದಲ್ಲೂ ಆಂಧ್ರಪ್ರದೇಶದಲ್ಲಿ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಅದೆಷ್ಟೋ ಪ್ರಾಚೀನ ದೇವಾಲಯಗಳನ್ನು ನೋಡಬಹುದು. ವಾಸ್ತುಶಿಲ್ಪ, ಶಿಲ್ಪಕಲೆ, ಅದ್ಭುತ ರಚನೆಯಿಂದಲೇ ಎಲ್ಲೆಡೆ ಹೆಸರುವಾಸಿಯಾಗಿವೆ.
ಭಾರತದ ಹಲವು ರಾಜ್ಯಗಳಲ್ಲಿ ಅದೆಷ್ಟೋ ದೇವಿಯ ದೇವಸ್ಥಾನಗಳಿವೆ. ದೇವಿಯ ನಾನಾ ರೂಪದ ವಿಗ್ರಹಗಳನ್ನು ಸ್ಥಾಪಿಸಿ ಗುಡಿ ಕಟ್ಟಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಅಂಥಹಾ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಕನಕದುರ್ಗ ದೇವಾಲಯ. ಈ ದೇವಾಲಯವು ಕೃಷ್ಣ ನದಿಯ ದಡದಲ್ಲಿರುವ ಇಂದ್ರಕೀಲದ್ರಿ ಬೆಟ್ಟದಲ್ಲಿದೆ. ಕನಿಕಾ ಪುರಾಣ, ದುರ್ಗಾ ಸಪ್ತಶತಿ ಮತ್ತು ಇತರ ವೈದಿಕ ಸಾಹಿತ್ಯಗಳು ಕನಕ ದುರ್ಗಾ ದೇವಿಯ ಬಗ್ಗೆ ಉಲ್ಲೇಖಿಸಿವೆ
ಇದನ್ನು ಓದಿ : ಸತಿ ದೇವಿಯ ಮೂರು ಕಣ್ಣುಗಳು ಬಿದ್ದ ಮಹಾಕ್ಷೇತ್ರವಿದು!
ವಿಜಯವಾಡದಲ್ಲಿರುವ ಈ ಕನಕ ದುರ್ಗಮ್ಮ ದೇವಾಲಯದಲ್ಲಿನ ದುರ್ಗಾ ಅವತಾರಿಯಾದ ಆ ತಾಯಿಯು ಸ್ವಯಂ ಭೂ ಆಗಿ ನೆಲೆಸಿದ್ದಾಳೆ ಎಂಬ ಮಾತಿದೆ. ಈ ತಾಯಿ ಇಲ್ಲಿ ನೆಲೆಸಲು ರೋಚಕವಾದ ಪುರಾಣ ಕೂಡಾ ಇದೆ. ಈಕೆಯ ಕಥೆಯನ್ನು ಕೇಳಿದರೆ ಸಕಲ ಪಾಪಗಳು ನಾಶವಾಗುತ್ತದೆ ಎಂದು ಭಕ್ತಾಧಿಗಳು ನಂಬುತ್ತಾರೆ. ಕನಕದುರ್ಗಮ್ಮ ದೇವಿಯು ವಿಜಯವಾಡದಲ್ಲಿ ಹೇಗೆ ನೆಲೆಸಿದಳು? ಆ ತಾಯಿ ಅಲ್ಲಿ ನೆಲೆಸಲು ಮುಖ್ಯವಾದ ಕಾರಣವೇನು? ಆ ಕುರಿತಾಗಿ ತಿಳಿಯೋಣ
Image Source : Oneindia
ನಮ್ಮ ಭಾರತ ದೇಶದಲ್ಲಿನ ಒಂದು ಪ್ರಮುಖವಾದ ದೇವಾಲಯವೇ ಕನಕ ದುರ್ಗಮ್ಮ ದೇವಾಲಯ. ಇಲ್ಲಿ ಸ್ವಯಂ ಭೂ ಆಗಿ ನೆಲೆಸಿರುವ ಈ ತಾಯಿಯು ಅತ್ಯಂತ ಶಕ್ತಿವಂತಳು ಎಂದು ಹೇಳಲಾಗುತ್ತದೆ. ಸ್ವಯಂ ಭೂವಾಗಿ ನೆಲೆಸಿರುವ ಆ ತಾಯಿಯು ಸುಮಾರು 4 ಅಡಿ ಎತ್ತರದಲ್ಲಿದ್ದು, 8 ಕೈಗಳನ್ನು ಹೊಂದಿದ್ದಾಳೆ. ಒಂದೊಂದು ಕೈಯಲ್ಲಿ ಒಂದೊಂದು ಅಸ್ತ್ರವನ್ನು ಕೈಯಲ್ಲಿ ಹಿಡಿದುಕೊಂಡು ರೌದ್ರ ಸ್ವರೂಪಿಣಿಯಾಗಿ ನೆಲೆಸಿದ್ದಾಳೆ. ನವದುರ್ಗಿಯರಲ್ಲಿ ಕೊನೆಯ ದೇವತೆಯಾದ ಸಿದ್ಧಿಧಾತ್ರಿಯ ಅವತಾರದಲ್ಲಿ ದರ್ಶನ ನೀಡುವುದು ಅತ್ಯಂತ ಅದ್ಭುತವಾದುದು.
ಕನಕದುರ್ಗಮ್ಮ ಉಗ್ರ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ. ಅಂದರೆ ಅನೇಕ ಕೈಗಳನ್ನು ಹೊಂದಿ, ಒಂದು ಕೈಯಲ್ಲಿ ತ್ರಿಶೂಲವನ್ನು ಹಿಡಿದು ಮಹಿಷಾಸುರನನ್ನು ಸಂಹಾರ ಮಾಡುವ ಭಂಗಿಯಲ್ಲಿ ನೆಲೆಸಿರುವ ಆ ತಾಯಿಯ ರೂಪ ಅತ್ಯಂತ ಅದ್ಭುತವಾಗಿದೆ. ಈಕೆಯ ದರ್ಶನಕ್ಕೆ ದೇಶದ ಹಲವೆಡೆಯಿಂದ ಜನರು ಆಗಮಿಸುತ್ತಾರೆ. ಈ ದೇವಾಲಯ ನಿರ್ಮಾಣವಾದುದರ ಹಿಂದೆ ಪೌರಾಣಿಕ ಕತೆಯೂ ಇದೆ.
ಇದನ್ನು ಓದಿ : ಇಲ್ಲಿ ಹೆಣದ ಮೇಲೆ ಕೂತಿದ್ದಾಳೆ ಶಕ್ತಿ ದೇವತೆ!
ಪುರಾಣಗಳ ಪ್ರಕಾರ ಕೀಲ ಎಂಬ ರಾಕ್ಷಸನು ಮಹಾ ಶಕ್ತಿಯಾದ ದೇವಿಯನ್ನು ಕುರಿತು ಘೋರವಾದ ತಪಸ್ಸನ್ನು ಮಾಡುತ್ತಿದ್ದನು. ಆತನ ಭಕ್ತಿಗೆ ಮೆಚ್ಚಿದ ದೇವಿಯು ಪ್ರತ್ಯಕ್ಷವಾಗಿ ಯಾವ ವರ ಬೇಕು? ಎಂದು ಕೇಳಿದಳು. ಅದಕ್ಕೆ ಕೀಲನು "ತಾಯಿ ನೀನು ಎಂದಿಗೂ ತನ್ನ ಹೃದಯ ಸ್ಥಾನದಲ್ಲಿ ನೆಲೆಸಬೇಕು" ಎಂದು ಕೇಳಿಕೊಂಡನು.ಅದಕ್ಕೆ ಉತ್ತರವಾಗಿ ಆ ದೇವಿಯು, ಒಬ್ಬ ರಾಕ್ಷಸನನ್ನು ಸಂಹಾರ ಮಾಡಬೇಕಾಗಿದೆ. ಹಾಗಾಗಿ ಆ ರಾಕ್ಷಸ ಸಂಹಾರ ಮಾಡಿದ ನಂತರ ನಿನ್ನ ಬಳಿ ಬಂದು ನೆಲೆಸುತ್ತೇನೆ ಎಂದು ಹೇಳುತ್ತಾಳೆ.
ಅಲ್ಲಿಯವರೆಗೆ ಕೃಷ್ಣ ನದಿಯ ವರೆಗೆ ಒಂದು ಪರ್ವತವಾದರೆ ಅಲ್ಲಿ ತಾನು ಬಂದು ನೆಲೆಸುತ್ತನೆ ಎಂದು ಹೇಳಿ ಅದೃಶ್ಯಳಾದಳಂತೆ. ದೇವಿಯ ಆದೇಶದ ಮೇರೆಗೆ ಕೃಷ್ಣ ನದಿಯ ಸಮೀಪದಲ್ಲಿ ಕೀಲನು ಪರ್ವತವಾಗಿ ಮಾರ್ಪಾಟಾದನು. ಹಾಗಾಗಿಯೇ ಅಲ್ಲಿಗೆ ಕೀಲಾದ್ರಿ ಪರ್ವತ ಎಂದು ಹೆಸರು ಬಂದಿತು. ತದನಂತರ ಆ ಆದಿ ಪರಾಶಕ್ತಿಯು ಮಹಿಷಾಸುರ ರೂಪದಲ್ಲಿ ಮಹಿಷಾಸುರನನ್ನು ಸಂಹಾರ ಮಾಡಿದ ನಂತರ ಕೀಲಾದ್ರಿಯ ಮೇಲೆ ಸ್ವಯಂ ಭೂವಾಗಿ ನೆಲೆಸಿದಳು ಎಂದು ಪುರಾಣದಲ್ಲಿ ಹೇಳಲಾಗಿದೆ..
Image Source : wallpaper cave
ಸ್ವಯಂ ಭೂ ಆಗಿ ನೆಲೆಸಿರುವ ಆ ತಾಯಿಯನ್ನು ಪೂಜೆ ಮಡುವ ಸಲುವಾಗಿ ಸ್ವಯಂ ಆ ದೇವರಾಜನಾದ ಇಂದ್ರನು ಹಾಗು ಉಳಿದ ದೇವತೆಗಳು ಕೂಡ ಈ ಪರ್ವಕ್ಕೆ ಭೇಟಿ ನೀಡುತ್ತಿದ್ದರಂತೆ. ಇಂದ್ರನು ಕೀಲಾದ್ರಿ ಪರ್ವತದ ಮೇಲೆ ಕಾಲಿಟ್ಟಿದ್ದರಿಂದ ಇಂದ್ರ ಕೀಲಾದ್ರಿ ಎಂಬ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆಯಿತು. ಮಹಿಷಾಸುರನನ್ನು ಸಂಹಾರ ಮಾಡಿ ಕೀಲಾದ್ರಿ ಪರ್ವತದ ಮೇಲೆ ನೆಲೆಸಿದ್ದ ಆ ತಾಯಿಯು ಅತ್ಯಂತ ಉಗ್ರ ಸ್ವರೂಪಿಣಿಯಾಗಿ ನೆಲೆಸಿದ್ದಳಂತೆ. ಹಾಗಾಗಿ ಯೋಗಿಗಳು, ಋಷಿಗಳು, ಮುನಿಗಳ ಹೊರತು ಸಾಮಾನ್ಯ ಮಾನವರು ಈ ದೇವಿಯ ದರ್ಶನ ಮಾಡುತ್ತಿರಲ್ಲಿಲ್ಲ ಎಂದು ಪುರಾಣದಲ್ಲಿ ಹೇಳಲಾಗಿದೆ.
ಇದನ್ನು ಓದಿ : ನಮ್ಮ ಮೈಸೂರೂ ಒಂದು ಶಕ್ತಿ ಪೀಠ ಗೊತ್ತಾ? ಸತಿ ದೇವಿಯು ಚಾಮುಂಡೇಶ್ವರಿ ಆಗಿದ್ದು ಹೇಗೆ?
ಆದಿ ಗುರು ಶಂಕರಾಚಾರ್ಯರು ಇಂದ್ರಕೀಲಾದ್ರಿಗೆ ಭೇಟಿ ನೀಡಿ, ದೇವಿಯ ರೌದ್ರವತಾರವನ್ನು ಕಡಿಮೆಗೊಳಿಸುವ ಸಲುವಾಗಿ ಶ್ರೀ ಚಕ್ರವನ್ನು ಸ್ಥಾಪನೆ ಮಾಡಿದರಂತೆ. ಇದರಿಂದಾಗಿ ಆ ತಾಯಿ ಶಾಂತ ರೂಪಿಣಿಯಾಗಿ ಮಾರ್ಪಾಟಾದಳು ಎಂದು ಹೇಳುತ್ತಾರೆ. ನಂತರ ಪರ್ವತದ ಮೇಲೆ ಇದ್ದ ಕೆಲವು ಜನರು ಹಾಗು ಬೆಸ್ತರು ಆ ತಾಯಿಯನ್ನು ಪೂಜಿಸುತ್ತಿದ್ದರು. ಕ್ರಮೇಣ ಹೊರಗಡೆಯಿಂದಲೇ ಜನರು ದೇವಿಯ ದರ್ಶನಕ್ಕೆ ಬರಲು ಆರಂಭಿಸಿದರು.
ಕನಕದುರ್ಗಮ್ಮ, ಕನಕ ವರ್ಣದಲ್ಲಿ ಕಂಗೊಳಿಸುತ್ತಾ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ. ಹಾಗಾಗಿಯೇ ಆ ತಾಯಿಯನ್ನು ಕನಕದುರ್ಗಾಮ್ಮ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಪ್ರತಿನಿತ್ಯ ಸಾವಿರಾರು ಮಂದಿ ಕನಕದುರ್ಗಮ್ಮನ ದರ್ಶನ ಪಡೆಯಲು ಆಗಮಿಸಿ ಧನ್ಯರಾಗುತ್ತಾರೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
You must be logged in to post a comment.