70ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತವಾದ ಕುಗ್ರಾಮ

70ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತವಾದ ಕುಗ್ರಾಮ.

 

ಬೆಳಗಾವಿ: ಗ್ರಾಮಗಳ ಜೀರ್ಣೋದ್ಧಾರಕ್ಕಾಗಿ ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟ್ಯಾಂತರ ರೂಪಾಯಿಗಳು ಬಿಡುಗಡೆ ಮಾಡಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ. ಆದ್ರೆ ಇಲ್ಲೊಂದು ಗ್ರಾಮ ಸುಮಾರು 70 ವರ್ಷಗಳಿಂದ ಮೂಲ ಸೌಕರ್ಯಗಳಿಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಇಷ್ಟೆಲ್ಲಾ ಸಂಕಷ್ಟ ಅನುಭವಿಸುತ್ತಿರುವ ಈ ಕುಗ್ರಾಮದ ಜನರ ಅಳಲನ್ನು ಯಾರು ಕೇಳವರೇ ಇಲ್ಲ. ಅಷ್ಟಕ್ಕೂ ಈ ಗ್ರಾಮ ಇರುವದಾದ್ರು ಎಲ್ಲಿ? ಇಲ್ಲಿಯ ಜನರ ಪರಿಸ್ಥಿತಿ ಆದ್ರೂ ಹೇಗಿದೆ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ...

: ಹೌದು, ನಾವಿಲ್ಲಿ ಹೇಳಲು ಹೊರಟಿರುದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಾಡಂಚಿನ ಸೌಚಿಮಾಳ ಗ್ರಾಮದ ಬಗ್ಗೆ. ಸುಮಾರು 70 ವರ್ಷಗಳಿಂದ ಮೂಲ ಸೌಕರ್ಯಗಳಿಲ್ಲದೆ ಇಲ್ಲಿಯ ಕುಟುಂಬಗಳು ಇಂದಿಗೂ ಈ ಕುಗ್ರಾಮದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ಗ್ರಾಮಕ್ಕೆ ಸರಿಯಾದ ರಸ್ತೆ, ವಿದ್ಯುತ್ ಸಂಪರ್ಕ ಇಲ್ಲ ಸಾರಿಗೆ ವ್ಯವಸ್ಥೆ ಅಂತೂ ಮೊದಲೇ ಇಲ್ಲ. ಇಲ್ಲಿನ ಜನರು ಕಾಲ್ನಡಿಗೆಯಲ್ಲಿ ಸಾಗ ಸಾಗಬೇಕಾದ ಅನಿವಾರ್ಯ ಇದೆ. ಹಳ್ಳಕೊಳ್ಳವನ್ನು ದಾಟಿ ಸಂಚರಿಸಲು ಅವರೇ ನಿರ್ಮಾಣ ಮಾಡಿರುವ ಕಟ್ಟಿಗೆಯ ಸೇತುವೆಯನ್ನೇ ಅವಲಂಬಿಸಿದ್ದಾರೆ. ಇನ್ನು ಮಳೆಗಾಲ ಬಂತ್ ಅಂದ್ರೇ ಅಲ್ಲಿಯ ಪರಿಸ್ಥಿತ ಹೇಳತೀರದು. ಇದೆಲ್ಲ ಒಂದುಕಡೆಯಾದ್ರೇ ಗುಡ್ಡದಲ್ಲಿ ವಾಸಿಸುತ್ತಿರುವ ಇವರಿಗೆ ಕಾಡು ಪ್ರಾಣಿಗಳ ಕಾಟ ಕೂಡ ಹೆಚ್ಚಾಗಿದೆ. ದಿನಾ ರಾತ್ರಿಯಾಗತ್ತಿದ್ದಂತೆ ಬೇಗನೆ ಮನೆ ಸೇರಿಕೊಳ್ಳಲೆಬೇಕು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1ರಿಂದ 5 ನೇ ತರಗತಿವರೆಗೆ ಮಾತ್ರ ಇದ್ದು ಮುಂದಿನ ವಿದ್ಯಾಭ್ಯಾಸಕ್ಕೆ ಅವಕಾಶವೇ ಇಲ್ಲ. ಇನ್ನು ವ್ಯಾಪರ ವಹಿವಾಟಕೆಂದು ಪಟ್ಟಣಕ್ಕೆ ಬರಬೇಕೆಂದರೆ ಸುಮಾರು 30 ಕಿಮೀ ದೂರದಲ್ಲಿರುವ ಖಾನಾಪುರ ಪಟ್ಟಣಕ್ಕೆ ಬರಬೇಕು. ಕಾಡಿನ ಮಧ್ಯೆ ಕಾಲ್ನಡಿಗೆಯಲ್ಲೇ ಸುಮಾರು 10 ರಿಂದ12 ಕಿಮೀ ಸಂಚರಿಸಿದಾಗ ಅಲ್ಲಲ್ಲಿ ಯಾವುದೋ ವಾಹನ ಏರಿ ಪಟ್ಟಣ ಸೇರಬೇಕು. ಇನ್ನೂ ಅನಾರೋಗ್ಯದ ಪರಿಸ್ಥಿತಿಯಲ್ಲಿ ವೈದ್ಯಕೀಯ ಚಿಕತ್ಸೆಗೆ ಅಂತೂ ಹೇಳತೀರದು ಹೆಚ್ಚು ಕಡಿಮೆಯಾದ್ರೆ ದಾರಿ ಮಧ್ಯೆದಲ್ಲಿ ಪ್ರಾಣ ಹೋಗುತ್ತೆ ಅಂತಾರೆ ಇಲ್ಲಿಯ ಸ್ಥಳೀಯರು.

: ಚೇತನ್, ಸ್ಥಳೀಯ.

: ಮಹೇಶ್ ಜಾನಕರ್, ಸ್ಥಳೀಯ.

 

ವೈ ಓ 02: ಇನ್ನೂ ಇಷ್ಟೆಲ್ಲಾ ಸಮಸ್ಯೆಯಿಂದ ಬದುಕು ನಡೆಸುತ್ತಿರುವ ವಿಚಾರ ಈ ಭಾಗದ ಜನ ಪ್ರತನಿಧಿಗಳಿಗೆ ತಿಳಿದಿದ್ದರೂ ಯಾವುದೇ ಸಹಾಯಚಾಚಲು ಮುಂದೆ ಬರದೆ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಮತ ಭೇಟೆಗೆ ಬರ್ತಾರೆ. ಅವರೆದೇ ವೆಹಿಕಲ್ ವ್ಯವಸ್ಥೆ ಮಾಡಿ ಕರಕೊಂಡು ಹೋಗ್ತಾರೆ ಗೆದ್ದ ನಂತರ ಯಾರು ಇಲ್ಲಿಯ ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ ಎಂದು ಸ್ಥಳೀಯರ ಆರೋಪವಾಗಿದೆ. ಇಲ್ಲಿಯ ಸಮಸ್ಯೆಯ ಬಗ್ಗೆ ಎಂಎಲ್ಎ ಸೇರಿದಂತೆ ಹಲವರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ರು ಕೂಡ ಇಲ್ಲಿಯ ಜನರ ಸಮಸ್ಯೆಗೆ ಯಾವುದೇ ಜನಪ್ರತಿನಿಧಿಗಳಿಂದ ಹಾಗೂ ಸರ್ಕಾರದಿಂದ ಪರಿಹಾರ ದೊರೆತಿಲ್ಲ. ಇನ್ನೂ 70 ವರ್ಷದಿಂದ ಕರೆಂಟ್ ಬೆಳಕು ಕಾಣದೆ ಕಂದಿಲ್ ದೀಪ, ಬೆಂಕಿಯ ಬೆಳಕಿನಿಂದ ಬದುಕು ನೆಡೆಸುತ್ತಿರುವ ಈ ಕುಗ್ರಾಮದ ಜನತೆಗೆ ಸಹಾಯ ಮಾಡಲು ಮುಂದೆ ಬಂದವರು ಅರಣ್ಯಅಧಿಕಾರಿಗಳು ಮಾತ್ರ ಸುಮಾರು ಎಂಟು ಲಕ್ಷ ಖರ್ಚು ಮಾಡಿ ನಿರಂತವಾಗಿ ಮಳೆಗಾಲದಲ್ಲೂ ನಡೆಯುವ ಸೋಲಾರ್ ಯೂನಿಟ್ ವಿದ್ಯುತ್ ಸಂಪರ್ಕವನ್ನು ಇನ್ಪ್ಲೂಟಿ ಎನಜಿಓ ಗ್ರೂಪ್ ದಿಂದ ಮಾಡಿಕೊಟ್ಟಿದ್ದು ಇದರ ಜೊತೆಗೆ ಸೋಲಾರ್ ವಿದ್ಯುತ್ ಸಂಪರ್ಕದಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಇದು ಉತ್ತರ ಕನ್ನಡ ಭಾಗದಲ್ಲಿಯೇ ಪ್ರಥಮ ಬಾರಿಗೆ ಈ ಪ್ರೊಜೆಕ್ಟ್ ಇದಾಗಿದೆ ಎಂದು ಅರಣ್ಯಧಿಕಾರಿ ಹೇಳುತ್ತಾರೆ.

 

 ಗೌರಾನಿ, ವಲಯ ಅರಣ್ಯಾಧಿಕಾರಿ.

 

: ದಿನೇ ದಿನೇ ಅಭಿವೃದ್ಧಿಯತ್ತ ಸಾಗುತ್ತಿರುವ ನಮ್ಮ ದೇಶದಲ್ಲಿ ಇನ್ನೂ ಇಂತಹ ಕೆಲವು ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳು ಸಿಗದೇ ಇರುವುದು ನಿಜಕ್ಕೂ ನಾಚಿಕೆಗೇಡಿನ. ಇನ್ನಾದರೂ ಈ ಕ್ಷೇತ್ರಕ್ಕೆ ಸಂಬಂಧಿಸಿದ ಜನಪ್ರತಿನಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಬೇಕೆಂಬುದು ಜನರ ಆಗ್ರಹವಾಗಿದೆ.

DONTV office

Enjoyed this article? Stay informed by joining our newsletter!

Comments

You must be logged in to post a comment.

About Author

ನ್ಯೂಸ್