ಪುರುಷ ರತ್ನ!ಅಪರೂಪದ ಔಷಧಿ ಸಸ್ಯ (VIOLACEAE)

May be an image of flower, nature and text that says

ಪುರುಷ ರತ್ನ!ಅಪರೂಪದ ಔಷಧಿ ಸಸ್ಯ

ಅಪರೂಪದ ಔಷಧಿ ಸಸ್ಯ ಪುರುಷ ರತ್ನ (VIOLACEAE)ವೈಲೆಸಿಯೇ ಕುಟುಂಬಕ್ಕೆ ಸೇರಿದ, ಪುರುಷ ರತ್ನ ಸಸ್ಯದ  ಸಸ್ಯಶಾಸ್ತ್ರೀಯ ಹೆಸರು (Botanical name) ಒರಿತಾಜ್ ತಮರಾಯಿಯof (Orithazh Thamarai) ಹೈಬಾಂತಸ್ ಎನಿಯಸ್ಪರ್ಮಸ್(Hybanthus enneaspermus) 

ಈ ಸಸ್ಯದ ಮೂಲ ಭಾರತ ಆಗಿದ್ದು ಏಷ್ಯಾ ಸೇರಿದಂತೆ ಶ್ರೀಲಂಕಾ ಆಫ್ರಿಕಾ ದಕ್ಷಿಣ ಚೀನಾ ಹಾಗೂ ಆಸ್ಟ್ರೇಲಿಯಾದ ಸ್ಥಳೀಯ ಉಷ್ಣವಲಯಗಳಲ್ಲಿ ಕಂಡುಬರುತ್ತದೆ.ಭಾರತದ ಪ್ರದೇಶಗಳು:ಚಿನ್ನಾರ್ (Chinnar),ಚಂಪಕ್ಕಾಡ್ (Champakkad),ನೆಲ್ಲಿಮುಕಲ್(Nellimukal),ತೆಲ್ಲಿಚೇರಿ, (Tellicherry),ಚೆರುವಾತೂರ್(Cheruvathur), ಮಂಜೇಶ್ವರ(Manjeswar), ಕಾಯಂಕುಲಂ(Kayamkulam), ಪೆರಕಮಣ್ಣ (Perakamanna),ಥೆನ್ಮಲೈ(Thenmalai), ಕಪ್ಪುಕಾಡು(Kappukadu),ಮಂಗಳೂರು ಅಲ್ಲೊಂದು ಇಲ್ಲೊಂದು ಇರುತ್ತೆ 

ಸಾಮಾನ್ಯ ಹೆಸರು:

ಈ ಸಸ್ಯವನ್ನು ಕನ್ನಡದಲ್ಲಿ ಪುರುಷರತ್ನ,ಚಿರಾಟ,ಸಿರಂಟಿ ಗಿಡ ,English :ಸ್ಪೆಡ್ ಫ್ಲವರ್( Spade Flower,Hybanthus enneaspermus),ಹಾಗೂ ಪಿಂಕ್ ಲೇಡಿ ಸ್ಲೀಪರ್(Pink ladies slipper),ಹಿಂದಿ:ರತನ್ ಪುರುಷ (Ratan purush), ಬಂಗಾಳಿ: ಮುನ್ಬೋರಾ(Munbora),ಮಲಯಾಳಂ:ಒರಿಲಥಮತೈ(Orilathamatai),ತೆಲುಗು: ರತ್ನಪುರುಷ(Ratnapurusha),ಮರಾಠಿ:ರಾಥನ್‌ಪಾರಸ್(Rathanparas),ಸಂಸ್ಕೃತ:ರತ್ನಪುರುಶಾ(Rathanparas), 

ಬೆಟ್ಟಗುಡ್ಡಗಳಲ್ಲಿ ಕುರುಚಲುಕಾಡು ಹುಲ್ಲುಗಾವಲು ಹಾಗೂ ಬಂಜರು ಭೂಮಿಯಲ್ಲಿ ವಿರಳವಾಗಿ ಹುಲ್ಲಿನ ಜೊತೆ ಬೆಳೆಯುವ ಈ ಗಿಡವನ್ನು ಗುರುತಿಸುವುದು ಕಷ್ಟ,ಕಳೆ ಸಸ್ಯದಂತೆ ಕಂಡರೂ ಹೂ ಮತ್ತು ಕಾಯಿಯಿಂದ ಸುಂದರವಾಗಿ ಆಕರ್ಷಿಸಲ್ಪಡುತ್ತದೆ. ಇದು ಹೆಚ್ಚಾಗಿ ಒಣ ಜಮೀನು, ಕುರುಚಲು ಕಾಡಿನಲ್ಲಿ ಹೆಚ್ಚೆಚ್ಚು ಹುಲ್ಲುಗಳು ಬೆಳೆದಿರುವ ಕಡೆ ಅವುಗಳ ಮಧ್ಯೆ ಬೆಳೆದಿರುತ್ತದೆ. ಸುಮಾರು 25 ಸೆಂ.ಮೀ.ಎತ್ತರ, ಐದಾರು ಸೆಂ.ಮೀ.ಉದ್ದನೆಯ ನೀಳವಾದ ಎಲೆಗಳನ್ನು ಹೊಂದಿದ್ದು, ಎಲೆಗಳು ಬೆಳೆದಿರುವ ಕೆಳಭಾಗದಲ್ಲಿಯೇ ನೆರಳೆ ಮಿಶ್ರಿತ ಗುಲಾಬಿ ಬಣ್ಣದ ಚಿಕ್ಕ ಚಿಕ್ಕ ಹೂಗಳಿರುತ್ತವೆ.

ಪುರುಷರತ್ನ ಸ್ಪೇಡ್ ಹೂವಿನ(Spade Flower),ಸಾಮಾನ್ಯ ಹೆಸರು ಹೂವಿನ ಆಕಾರವನ್ನು ಸೂಚಿಸುತ್ತದೆ, ಇದು ಸ್ಪೇಡ್ ಆಕಾರದ ಲ್ಯಾಬೆಲ್ಲಮ್‌ನಿಂದ ಪ್ರಾಬಲ್ಯ( labellum),ಹೊಂದಿದೆ. ಇದರ ಸಸ್ಯಶಾಸ್ತ್ರೀಯ ಹೆಸರು, ಹೈಬಾಂತಸ್ ಎನಿಯಸ್ಪರ್ಮಸ್(Hybanthus enneaspermus), ಅಷ್ಟೇ ವಿವರಣಾತ್ಮಕವಾಗಿದೆ. ಸಾಮಾನ್ಯ ಹೆಸರು ಹೈಬಾಂತಸ್(Hybanthus) ಎಂದರೆ ಹೂವಿನ ಭಂಗಿಯನ್ನು ಉಲ್ಲೇಖಿಸುವ "ಹಂಪ್‌ಬ್ಯಾಕ್ಡ್ ಹೂವು"(humpbacked flower),ಎಂದರ್ಥ. ಏತನ್ಮಧ್ಯೆ, ಎನ್ಯಾಸ್ಪರ್ಮಸ್(enneaspermus), ಎಂಬ ನಿರ್ದಿಷ್ಟ ಹೆಸರಿನ ಅರ್ಥ"ಒಂಭತ್ತು ಬೀಜಗಳು"ಏಕೆಂದರೆ ಪರಿಪಕ್ವತೆಯ ನಂತರ ಪ್ರತಿ ಸಣ್ಣ 5 ಮಿಮೀ ಹಣ್ಣುಗಳು ಮೂರು ವಿಭಾಗಗಳಾಗಿ ಮೂರು ಬೀಜಗಳನ್ನು ಹೊಂದಿರುತ್ತವೆ

ಈ ಸಸ್ಯವು ಸಹ ಹುಲ್ಲಿನಂತೆ ಕಾಣುವುದರಿಂದ ಇದನ್ನು ಕಂಡುಹಿಡಿಯುವುದು ಕಷ್ಟವಾಗಿದ್ದು.ಕೇವಲ ಇದು ಹೂವಿನಿಂದ ಕುಡಿರುವಾಗ ಮಾತ್ರ ಗುರುತಿಸಬಹುದು.ಈ ಹೂವುಗಳು  ಮಧ್ಯಾಹ್ನ 12 ಗಂಟೆಯ ಒಳಗೆ ಬಾಡಿ ಉದುರಿಹೋಗುವುದರಿಂದ ಆ ಬಳಿಕ ಇದನ್ನು ಪತ್ತೆಹಚ್ಚುವುದು ಸುಲಭದ ಮಾತಲ್ಲ. ಸುಮಾರು 20 ರಿಂದ 30 ಸೆಂಟಿಮೀಟರ್ ಎತ್ತರಕ್ಕೆ ಬೆಳೆಯಬಲ್ಲ ಈ ಸಸ್ಯ ಗಟ್ಟಿಯಾದ ಕಾಂಡದಿಂದ ಕೂಡಿದ್ದು ಕಾಂಡಕ್ಕೆ ಹೊಂದಿಕೊಂಡಿರುವ ಸುಮಾರು 4 ಸೆಂಟಿಮೀಟರ್ ಉದ್ದದ ನೀಳವಾದ ಹಸಿರು ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡನೆಗೊಂಡಿದ್ದು ಗುಲಾಬಿ ಬಣ್ಣದ ಪುಟ್ಟದಾದ ಚೌಕಾಕಾರದಂತೆ ಕಾಣುವ ಹೂವುಗಳು ಒಂಟಿಯಾಗಿ ಅರಳಿದ್ದು ಚಿಕ್ಕದಾದ ದುಂಡಾದ ಕಾಯಿಗಳಿರುತ್ತವೆ.

ಈ ಸಸ್ಯ ಇಂದು ಅವನತಿಯ ಅಂಚು ತಲುಪಿ ಅಲ್ಲೊಂದು ಇಲ್ಲೊಂದು ಕಾಣಸಿಗುತ್ತವೆ ಅಷ್ಟೇ ನೀವು ಬಯಸಿದರು ಸಹ ಔಷಧಿಗಾಗಿ ಬೇಕಾಗುವಷ್ಟು ಪ್ರಮಾಣದಲ್ಲಿ ಈ ಸಸ್ಯ ಇಂದು ಉಪಲಭ್ಯವಿಲ್ಲ ,ಅಲ್ಲದೇ ಮೃದು ಮಣ್ಣು ಇರುವ ಕಡೆ ಹುಲ್ಲಿನೊಂದಿಗೆ ಬೆಳೆಯುವ ಸಸ್ಯವನ್ನು ಅರಣ್ಯ ಭಾಗದಲ್ಲಿ ಇಲಾಖೆಯವರು ಬೇಸಿಗೆಯಲ್ಲಿ ಬೆಂಕಿ (ಫೈಯರ್‌ ಲೈನ್‌) ಮಾಡುವಾಗ ಜಾಗರೂಕತೆಯಿಂದ ನೋಡಿಕೊಂಡು ಔಷಧಿ ಸಸ್ಯ ಸಂರಕ್ಷ ಣೆಗೆ ಮುಂದಾಗಬೇಕಾಗಿದೆ.

******************************************************************************

ಸ್ಪೇಡ್ ಹೂವುಗಳು(spade flower )ಅವುಗಳ ಹೊಳಪಿನ (ಆರೆಂಜ್) ಕಿತ್ತಳೆ,ಬಿಳಿ ಬಣ್ಣದ ಸೋದರಸಂಬಂಧಿ,

ಆದರೆ ಬೇಸಿಗೆ ಮತ್ತು ಶರತ್ಕಾಲದಲ್ಲಿ ಉತ್ಪಾದಿಸುವ ಪ್ರಕಾಶಮಾನವಾದ ರಾಯಲ್ ಕಿತ್ತಳೆ(ಆರೆಂಜ್) ಹೂವುಗಳು ಅದನ್ನು ನಿಜವಾಗಿಯೂ ಪ್ರತ್ಯೇಕಿಸುತ್ತದೆ.(ಆರೆಂಜ್) ಕಿತ್ತಳೆ,ಬಿಳಿ ಮತ್ತು ಪಿಂಕ್ ಕಾಲೂರ್ ಗಿಡ ಇದೆ ಅದರಲ್ಲಿ ಪಿಂಕ್ ಪುರುಷ ರತ್ನ (spade flower)ಉಪಯುಕ್ತ ವಾಗಿದೆ,ಈ ಮೂರು ಪ್ರಭೇದಗಳು ತುಂಬಾ ಹೋಲುತ್ತವೆ, ಕೆಲವು ಸಮಯದವರೆಗೆ ಎಚ್ .ಸ್ಟೆಲ್ಲಾರಿಯೋಯಿಡ್‌ಗಳನ್ನು,ಪುರುಷ ರತ್ನ  (spade flower )ಉಪಜಾತಿ ಎಂದು ಪರಿಗಣಿಸಲಾಗಿತ್ತು, ಆದರೆ ಅವು ತಳೀಯವಾಗಿ ವಿಭಿನ್ನವಾಗಿವೆ ಎಂಬುದು ಸ್ಪಷ್ಟವಾಗಿದೆ.

ಕಿತ್ತಳೆ ಸ್ಪೇಡ್ ಹೂವು Orange Spade Flower(ಹೈಬಂತಸ್ ಔರಾಂಟಿಯಾಕಸ್) (Hybanthus aurantiacus) ಬಹುವಾರ್ಷಿಕ.

ವಯೋಲೇಸಿ(Violaceae)ನೇರಳೆ ಕುಟುಂಬ(violet family) ಕ್ಕೆ ಸೇರಿದ, ಕಿತ್ತಳೆ ಸ್ಪೇಡ್ ಹೂವು (Orange Spade Flower)7-15 ಮಿಮೀ ಉದ್ದದ ದೊಡ್ಡ ಕೆಳ ದಳವನ್ನು ಮತ್ತು 4 ಸಣ್ಣ ದಳಗಳನ್ನು 3-6 ಮಿಮೀ ಹೊಂದಿದೆ. ಎಲೆಗಳು 4 ಸೆಂಟಿಮೀಟರ್ ಉದ್ದವಿರುತ್ತವೆ, ಕಿರಿದಾಗಿರುತ್ತವೆ ಮತ್ತು ಅಂಚುಗಳು ಸಾಮಾನ್ಯವಾಗಿ ಹಲ್ಲಾಗಿರುತ್ತವೆ. 9 ರಿಂದ 40 ಸೆಂಮೀ ಎತ್ತರದಲ್ಲಿ ಎಲ್ಲಿಯಾದರೂ ಬೆಳೆಯುತ್ತಿರುವುದು ಕಂಡುಬರುತ್ತದೆ.

ವೈಜ್ಞಾನಿಕ ವರ್ಗೀಕರಣ (Scientific classification),ಸಾಮ್ರಾಜ್ಯ: ಸಸ್ಯ ಕ್ಲೇಡ್: ಟ್ರಾಕಿಯೊಫೈಟ್ಸ್Clade: Tracheophytes

ಕುಟುಂಬ(Family):ವಯೋಲೇಸಿ(Violaceae),ಕುಲ(Genus): ಹೈಬಂತಸ್(Hybanthus),

ಜಾತಿಗಳು(Species): H. ಔರಂಟಿಯಾಕಸ್(H. aurantiacus)

**********************************************************************************

ಆಯುರ್ವೇದ ಹಾಗೂ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಲ್ಲಿ ಬಳಸಲ್ಪಡುವ ಪುರುಷರತ್ನ,ಈ ಸಸ್ಯದ ಭಾಗಗಳಿಂದ ತಯಾರಿಸಿದ ಔಷಧಿಯಿಂದ ವಿಶೇಷವಾಗಿ ಪುರುಷರ ವೀರ್ಯೋತ್ಪಾದನೆ ಹಾಗೂ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿ ಎಲ್ಲ ರೀತಿಯ ಲೈಂಗಿಕ ತೊಂದರೆಗಳಿಂದಲೂ ಮುಕ್ತಿ ನೀಡಿ ಪುರುಷತ್ವವನ್ನು ಹೆಚ್ಚಿಸುವುದರಲ್ಲಿ ಅಶ್ವಗಂದಕ್ಕಿಂತಲು ಅತ್ಯಧಿಕ ಶಕ್ತಿಶಾಲಿ ಆಯುರ್ವೇದ ಗಿಡಮೂಲಿಕೆಯಾಗಿದೆ.ಮೂತ್ರಕೋಶದ ಸಮಸ್ಯೆ ತಲೆನೋವು ಕರುಳಿನ ತೊಂದರೆ ಅಸ್ತಮಾ ಮುಂತಾದ ಕಾಯಿಲೆಗಳಿಗೂ ಸಹ ಈ ಸಸ್ಯವನ್ನು ಬಳಸಲಾಗುತ್ತದೆ.   

ಪುರುಷ ರತ್ನ ಸಸ್ಯ ಔಷಧೀಯ ಗುಣ :

1 ಪುರುಷ ರತ್ನ ಇಡೀ ಸಸ್ಯವನ್ನು ಬೇರುಸಹಿತ ಕಿತ್ತು ಇದರ ಚೂರ್ಣ ಮಾಡಿಕೊಂಡು ಮುಂಜಾನೆ ಸಂಜೆ ಹಾಲಿನೊಂದಿಗೆ ಸೇವಿಸುವುದರಿಂದ ದಾತು ವೃದ್ಧಿಯಾಗಿ ಶರೀರ ಕಾಂತಿಯುಕ್ತವಾಗುತ್ತದೆ.

ಪುರುಷರ ಬಲವರ್ಧನ ದೈಹಿಕ ಇಮ್ಮಡಿಗೊಳಿಸಲು ಕಶಾಯವಾಗಿ ಮತ್ತು ಲೈಂಗಿಕ ಶಕ್ತಿಗಾಗಿ ಬಳಸಲಾಗುತ್ತದೆ.

2 ಪುರುಷರತ್ನ ಸಸ್ಯ ಕಷಾಯ:ಇಡೀ ಸಸ್ಯದ ಸಾರವನ್ನು ಹೂವು, ಕಾಂಡ, ಎಲೆಗಳು ಮತ್ತು ನೀರಿನಲ್ಲಿ ಬೇರು ಕುದಿಸಿ ಪಡೆಯುವುದರಿಂದ ದೇಹದ ಶಕ್ತಿ ಮತ್ತು ಪುರುಷರಲ್ಲಿ ಟೆಸ್ಟೋಸ್ಟೆರಾನ್(testosterone levels) ಮಟ್ಟವನ್ನು ಸುಧಾರಿಸಲು ಮತ್ತು ರಕ್ತಹೀನತೆಗೆ ಚಿಕಿತ್ಸೆ ನೀಡಬಹುದು    

3 ಪುರುಷರತ್ನ ಇದರ ಬೇರಿನ ಕಷಾಯ ಕುಡಿಯುವುದರಿಂದ ಮೂತ್ರ ಕೋಶಕ್ಕೆ ಸಂಬಂದಿಸಿದ ಕಾಯಿಲೆ ವಾಸಿಯಾಗುತ್ತದೆ. 

4 ಪುರುಷರತ್ನ  ಎಲೆಗಳ ಪುಡಿಯನ್ನು ಅಸ್ತಮಾ ಕಾಯಿಲೆಗಳಿಗೆ ಬಳಸಲಾಗುತ್ತದೆ. 

5 ಪುರುಷರತ್ನ ಸಂಪೂರ್ಣ ಗಿಡವನ್ನು ಒಣಗಿಸಿ ಚೂರ್ಣ ಮಾಡಿಕೊಂಡು ಹಲವು ದಿನಗಳ ಕಾಲ ನಿಯಮಿತವಾಗಿ ಸೇವಿಸುವುದರಿಂದ ಸ್ತ್ರೀಯರ ಸ್ತನಗಳು ಘನವಾಗುವುದರ ಜೊತೆಗೆ ಸುಂದರ ಆಕಾರ ಪಡೆದುಕೊಳ್ಳುತ್ತವೆ.

 6 ಪುರುಷರತ್ನ ಇಡೀ ಸಸ್ಯವನ್ನು ಅರೆದು ಆನೇಕಾಲು ರೋಗಕ್ಕೂ ಸಹ ಹಚ್ಚಬಹುದು. 

7 ಮಾನಸಿಕ ಖಿನ್ನತೆಗೆ ಒಳಗಾಗಿದ್ದವರಿಗೆ ಪಂಚಕರ್ಮದಲ್ಲಿ ಪುರುಷರತ್ನ ಇದನ್ನು ಔಷಧಿಯಾಗಿ ಬಳಕೆ ಮಾಡಲಾಗುತ್ತಿದೆ.

8 ಚೇಳು ಕಡಿತಕ್ಕೆ ಪುರುಷರತ್ನ ಇದರ ಕಾಯಿಯನ್ನು ಅರಿದು ಜೇನುತುಪ್ಪದೊಂದಿಗೆ ಮನೆ ಮದ್ದಾಗಿ ಇಂದಿಗೂ ಗ್ರಾಮೀಣ ಭಾಗದಲ್ಲಿ ಬಳಸುತ್ತಾರೆ. 

9 ಕಫ ಬಾಧೆ,ವಿಪರೀತ ತಲೆ ನೋವು ಇದ್ದವರಿಗೆ ಪುರುಷರತ್ನ ಈ ಸಸ್ಯದ ಭಾಗದಿಂದ ಕಷಾಯ ಮಾಡಿ ಮೂಗಿನ ಮೂಲಕ ಬೀಡುವುದರಿಂದ ತಲೆ ನೋವು ಶಾಶ್ವತವಾಗಿ ದೂರ ಮಾಡಿಕೊಂಡವರು ಹಳ್ಳಿಗಳಲ್ಲಿ ಕಾಣಬಹುದು.

10 ಪುರುಷರತ್ನ ಸಸ್ಯ ಅಷ್ಟೇ ಅಲ್ಲದೇ ಇದರ ಬೇರಿನಿಂದ ನಂಜು ನಿವಾರಣೆ, ಕಿಡ್ನಿ ಸ್ಟೋನ್‌, ವೇರಿಕೋಸ್‌ ವೆನ್‌ ಸೇರಿದಂತೆ ತಾಯಿ ಎದೆ ಹಾಲು ವೃದ್ಧಿಸಲು ಸಸ್ಯವನ್ನು ಬಳಸುತ್ತಾರೆ

11 ಮಧುಮೇಹ (Antioxidant & Anti Diabetic) ಪುರುಷರತ್ನ ಪೌಡರ್ ಅದ್ಭುತವಾದ ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು ಇದು ಆಕ್ಸಿಡೇಟಿವ್ ಒತ್ತಡವನ್ನು ಬಹಳ ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ.

12 ಕೊಲೆಸ್ಟ್ರಾಲ್ ( Cholestrol): ಪುರುಷರತ್ನ ಪೌಡರ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ,  ನಿಯಮಿತವಾಗಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಗಣನೀಯವಾಗಿ ಕಡಿಮೆಯಾಗುತ್ತದೆ.

13 ರಕ್ತಹೀನತೆ ಚಿಕಿತ್ಸೆಗಾಗಿ( Treating Anemia) :ಪುರುಷರತ್ನ ಪೌಡರ್‌ನ ಇನ್ನೊಂದು ಪ್ರಮುಖ ಉಪಯೋಗವೆಂದರೆ  ಸಾರವು ಹೆಚ್ಚಿನ ಪ್ರಮಾಣದ ಕಬ್ಬಿಣವನ್ನು (high amounts of iron) ಹೊಂದಿರುವುದರಿಂದ ರಕ್ತಹೀನತೆಗೆ ಚಿಕಿತ್ಸೆ ನೀಡುವ ಅದ್ಭುತ ಸಾಮರ್ಥ್ಯವಾಗಿದೆ.

ಪುರುಷರತ್ನಪುಡಿ | ಚೂರ್ಣಂ:ಪುಡಿಯನ್ನು ಮೂಲಿಕೆ ಅಂಗಡಿಗಳಲ್ಲಿ ಮಾರಲಾಗುತ್ತದೆ, ನಿಮಗೆ ತಾಜಾ ಗಿಡಕ್ಕೆ ಪ್ರವೇಶವಿಲ್ಲದಿದ್ದರೆ ನೀವು ಸಂಪೂರ್ಣ ಗಿಡದ ಪುಡಿಯನ್ನು ಖರೀದಿಸಿ ಬಳಸಬಹುದು. ಇದನ್ನು ತಮಿಳುನಾಡಿನಲ್ಲಿ ಓರಿಥಲ್ ತಮರಿ(Orilathamatai) ಪುಡಿ ಮತ್ತು ಉತ್ತರ ಭಾರತದಲ್ಲಿ ರತನ್ ಪುರುಷ ಪುಡಿ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ

ಇಷ್ಟೊಂದು ಪ್ರಯೋಜನಕಾರಿಯಾಗಿರುವ ಪುರುಷರತ್ನ ಸಸ್ಯ ಪರುಷರಿಗೆ ಹೆಚ್ಚು ಪರಿಣಾಮ ಬಿರುವುದರಿಂದ ಇದನ್ನು ಪುರುಷ ರತ್ನ ಎಂಬ ನಾಮಾಂಕಿತದಿಂದ ಕರೆಸಿಕೊಳ್ಳುತ್ತದೆ. ಇಂತಹ ಅನೇಕ ಸಣ್ಣ ಪುಟ್ಟ ಕಾಯಿಲೆಗೆ ರಾಮಭಾಣವಾಗಿರುವ ಪರುಷರತ್ನ ಸಸ್ಯವನ್ನು ಉಳಿಸುವಲ್ಲಿ ಪ್ರತಿಯೊಬ್ಬರು ಮುಂದಾಗಬೇಕಾಗಿದೆ.ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲದಿದ್ದರು ಸಹ ಬಳಸುವ ಮೊದಲು ಅದನ್ನು ಬೆಳೆಸಲು ಮುಂದಾದರೆ ಮುಂದಿನ ಪಿಳಿಗೆಗೆ ಈ ಸಸ್ಯ ಉಳಿಯಲು ಸಾಧ್ಯವಾಗುತ್ತದೆ.

ಅಡ್ಡ ಪರಿಣಾಮಗಳು(ide Effects):ಈ ಉತ್ಪನ್ನವನ್ನು ಬಳಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ .

ಪುರುಷರತ್ನ ಚೂರ್ಣಂ ಮತ್ತು ಮಧುಮೇಹ ಔಷಧಿಗಳನ್ನು ತೆಗೆದುಕೊಳ್ಳುವಲ್ಲಿ ಎಚ್ಚರಿಕೆಯಿಂದ ಇರಬೇಕು ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತುಂಬಾ ಕಡಿಮೆ ಮಾಡಬಹುದು.

ಗರ್ಭಿಣಿಯರು ಖಂಡಿತವಾಗಿಯೂ ಪುರುಷರತ್ನ ಮೂಲಿಕೆಯನ್ನು ಸೇವಿಸಬಾರದು ಏಕೆಂದರೆ ಇದು ಗರ್ಭಪಾತಕ್ಕೆ ಕಾರಣವಾಗುತ್ತದೆ.

ಇನ್ನೂ ಕೆಲವರು ಪುರುಷರತ್ನ ಇದರ ಬಳಕೆಯನ್ನು ಅಜಮಾಸಿನ ಲೆಕ್ಕದಲ್ಲಿ ಕಷಾಯ ಮಾಡದೇ ನುರಿತ ಆಯುರ್ವೇದ ವೈದ್ಯರ, ನಾಟಿ ವೈದ್ಯರ ಸಲಹೆ ಪಡೆದುಕೊಂಡು ಬಳಕೆ ಮಾಡಿದರೆ ಉತ್ತಮ.

ಯಾವುದೇ ಸಸ್ಯವನ್ನು ಔಷಧೀಯವಾಗಿ ಬಳಸುವ ಮೊದಲು ಯಾವಾಗಲೂ ವೃತ್ತಿಪರರಿಂದ,ಆಯುರ್ವೇದ ಪಂಡಿತರ,ಅನುಭವಿ ಹಿರಿಯರ,ಸಲಹೆ ಪಡೆಯಿರಿ 

ಸಂಗ್ರಹ ಮಾಹಿತಿ: 

 

Enjoyed this article? Stay informed by joining our newsletter!

Comments
Chethana A M - 06,ಡಿಸೆಂ,2021, ಸೋಮ,8:46 ಅಪರಾಹ್ನ - Add Reply

ನಿಮ್ಮ ಈ ಬರಹ ತುಂಬಾ ಉಪಯುಕ್ತವಾಗಿದೆ

You must be logged in to post a comment.

You must be logged in to post a comment.

About Author