ಸೋಲಿನ ಹೊಣೆಯನ್ನು ನಾನೇ ಹೊರುವೆ ವಿ.ಪ ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ.

ಸೋಲಿನ ಹೊಣೆಯನ್ನು ನಾನೇ ಹೊರುವೆ ವಿ.ಪ ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ.

 

 

ತುಮಕೂರು_ವಿಧಾನಪರಿಷತ್ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಪಕ್ಷದ ಅಭ್ಯರ್ಥಿ ಲೋಕೇಶ್ ಗೌಡ ರವರು ತಮ್ಮ ಸೋಲಿನ ಹೊಣೆಯನ್ನು ತಾವೇ ಹೋರುವೆ ಇನ್ನೂ ನನ್ನ ಸೋಲಿನ ಬಗ್ಗೆ ಯಾವುದೇ ಮುಖಂಡರನ್ನು ಹೊಣೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

 

 

 

ಮಂಗಳವಾರ ನಡೆದ ವಿಧಾನಪರಿಷತ್ ಚುನಾವಣೆಯ ಮತ ಎಣಿಕೆ ಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಲೋಕೇಶ್ ಗೌಡರವರು 2050 ಮತಗಳನ್ನು ಪಡೆದು ಪರಾಭವಗೊಂಡರು.

 

 

ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜೇಂದ್ರ ಅವರು 3135 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

 

 

ಇದೇ ಸಂದರ್ಭದಲ್ಲಿ ಮಾತನಾಡಿದ ಲೋಕೇಶ್ ಗೌಡ ರವರು ತುಮಕೂರು ಜಿಲ್ಲೆಯ ರಾಜಕಾರಣ ನಮಗೆ ಹೊಸದು ಆದರೆ ಬೆಂಗಳೂರಿನಿಂದ ತುಮಕೂರಿನ ರಾಜಕಾರಣಕ್ಕೆ ಆಗಮಿಸಿದಾಗ ಸ್ಥಳೀಯವಾಗಿ ಎಲ್ಲಾ ಮುಖಂಡರು, ಕಾರ್ಯಕರ್ತರು, ಮತದಾರರು ಎಲ್ಲರೂ ಸಹ ಗೆಲುವಿಗಾಗಿ ಹಗಲಿರುಳು ಶ್ರಮಿಸಿದರು .

 

ಆದರೆ ಕಾಂಗ್ರೆಸ್ ಪಕ್ಷ ಮೊದಲ ಸ್ಥಾನಕ್ಕೆ ಏರುವ ಮೂಲಕ ಜಯಗಳಿಸಿದೆ ಆದರೆ ತಾವು ದ್ವಿತೀಯ ಸ್ಥಾನವನ್ನು ಗಳಿಸಿ ಎರಡನೇ ಸ್ಥಾನಕ್ಕೆ ಕುಸಿದಿದ್ದು ಸೋಲನ್ನು ಅನುಭವಿಸುವಂತಾಗಿದೆ ಆದರೆ ಈ ಸೋಲಿಗೆ ಯಾವುದೇ ನಾಯಕರು, ಕಾರ್ಯಕರ್ತರನ್ನು ಹೊಣೆ ಮಾಡುವುದಿಲ್ಲ ನನ್ನ ಸೋಲಿನ ಹೊಣೆಯನ್ನು ನಾನೇ ಹೋರುವೆ ಎಂದು ತಿಳಿಸಿದ್ದಾರೆ.

 

 

ಇನ್ನೂ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಈ ಮಟ್ಟಕ್ಕೆ ಬೆಳೆಸಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದ ಎಲ್ಲಾ ಮುಖಂಡರು ಹಾಗೂ ಪಕ್ಷಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 

 

ವರದಿ_ಮಾರುತಿ ಪ್ರಸಾದ್ ತುಮಕೂರು

Enjoyed this article? Stay informed by joining our newsletter!

Comments

You must be logged in to post a comment.

About Author