ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸಲು ಇವುಗಳನ್ನು ಸೇವಿಸಿ

ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸಲು ಇವುಗಳನ್ನು ಸೇವಿಸಿ

Top 10 Fruits that keeps you hydrated

Feature Image Credits : Live Love Fruit 

ದಿನವೊಂದಕ್ಕೆ ಕನಿಷ್ಠ ಮೂರು ಲೀಟರ್ ಆದರೂ ನೀರನ್ನು ಕುಡಿಯಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ನೀರು ಕುಡಿಯುವುದು ಕಡಿಮೆ ಮಾಡುವುದರಿಂದಲೇ ನಮಗೆ ಬರುವ ಅರ್ಧಕರ್ಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೇಹ ಒಣಗುವುದರಿಂದ ಡಿಹೈಡ್ರೇಶನ್ ಸಮಸ್ಯೆ ಉಂಟಾಗಿ ಆರೋಗ್ಯ ಗಂಭೀರ ಪರಿಸ್ಥಿತಿಗೆ ತಲುಪುತ್ತದೆ. ಆದರೆ ನೀರು ಕುಡಿಯುವುದು ಆರೋಗ್ಯಕ್ಕೆ ಎಷ್ಟು ಮುಖ್ಯ ಎಂದು ತಿಳಿದಿದ್ದರೂ, ಅನೇಕ ಜನರು ಸಾಕಷ್ಟು ನೀರು ಕುಡಿಯುವುದಿಲ್ಲ. ಅಗತ್ಯವಾದ ಪ್ರಮಾಣದ ನೀರನ್ನು ಕುಡಿಯದಿರುವುದು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ರೀತಿಯ ಸಮಸ್ಯೆಗಳು ಪ್ರಾರಂಭವಾಗುತ್ತವೆ.

 

ದೇಹದಲ್ಲಿರುವ ನೀರಿನ ಪ್ರಮಾಣ ಉಸಿರಾಡುತ್ತಿರುವಾಗ, ಮೂತ್ರ ಮಾಡುವುದರಿಂದ, ಬೆವರಿನ ಮೂಲಕ, ಕರುಳಿನ ಚಲನೆಯಿಂದ ಕಡಿಮೆಯಾಗುತ್ತಲೇ ಇರುತ್ತದೆ. ಹೀಗಾಗಿ ದೇಹದಲ್ಲಿ ನೀರಿನ ಪ್ರಮಾಣವನ್ನು ಸಮರ್ಪಕವಾಗಿ ಕಾಪಾಡಲು ಆಗಾಗ ನೀರು ಕುಡಿಯುವುದು ಅಗತ್ಯ. ಆಗಾಗ ನೀರು ಕುಡಿಯಲು ಸಾಧ್ಯವಾಗದಿದ್ದಾಗ ಕನಿಷ್ಟ ನೀರಿನಂಶವಿರುವ ಆಹಾರವನ್ನಾದ್ರೂ ಸೇವಿಸಬೇಕು.

 

ಬೇಸಿಗೆ ಕಾಲದಲ್ಲಿ ಬೇಗೆಯ ಉಷ್ಣತೆ ಮತ್ತು ಬಲವಾದ ಸೂರ್ಯನ ಬೆಳಕಿನಿಂದಾಗಿ ದೇಹದಲ್ಲಿ ನೀರಿನ ಕೊರತೆ ಸಾಮಾನ್ಯವಾಗಿದೆ. ಇದು ದೇಹದಲ್ಲಿ ಹೆಚ್ಚೆಚ್ಚು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ದೇಹದಲ್ಲಿ ನೀರಿನ ಕೊರತೆಯಾಗದಂತೆ ಸಾಧ್ಯವಾದಷ್ಟು ನೀರನ್ನು ಕುಡಿಯಬೇಕಯ. ಈ ಸಮಯದಲ್ಲಿ ಆರೋಗ್ಯಕರವಾಗಿರಲು ಸಹಾಯ ಮಾಡುವ ಆಹಾರವನ್ನು ಸೇವಿಸಬೇಕು. ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ, ಅಧಿಕ ಜ್ವರ, ಉಸಿರಾಟದ ತೊಂದರೆ, ವಾಂತಿ, ತಲೆತಿರುಗುವಿಕೆ, ಅತಿಸಾರ, ತಲೆನೋವು, ಆಗಾಗ್ಗೆ ಬಾಯಿ ಒಣಗುವುದು ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

 

ದೇಹದಲ್ಲಿ ನೀರಿನ ಕೊರತೆ ಇದ್ದಾಗ, ಬಾಯಿ ಒಣಗಲು ಪ್ರಾರಂಭಿಸುತ್ತದೆ. ಬಾಯಿ ಪದೇ ಪದೇ ಒಣಗಿದರೆ, ದೇಹದಲ್ಲಿ ನೀರಿನ ಕೊರತೆ ಇದೆ ಎಂದು ಅರ್ಥಮಾಡಿಕೊಳ್ಳಿ. ಇಂತಹ ಪರಿಸ್ಥಿತಿಯಲ್ಲಿ, ತಕ್ಷಣ ನೀರನ್ನು ಕುಡಿಯಬೇಕು. ಅಥವಾ ನೀರಿನ ಬದಲಾಗಿ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಿದರೂ ದೇಹದಲ್ಲಿ ಉಂಟಾಗುವ ನೀರಿನ ಕೊರತೆಯನ್ನು ನೀಗಿಸಬಹುದು. ದೇಹ ಡಿಹೈಡ್ರೇಶನ್‍ ಆಗುವುದನ್ನು ತಡೆಯಲು ನೀರನ್ನು ಕುಡಿಯಲು ಸಾಧ್ಯವಾಗದೆ ಇದ್ದ ಸಂದರ್ಭದಲ್ಲಿ ಈ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬಹುದು. ಸೌತೆಕಾಯಿ, ಕಿತ್ತಳೆ, ಕಲ್ಲಂಗಡಿ, ಚಿಕ್ಕು, ಪಪ್ಪಾಯಿ, ಅನಾನಸ್, ಸ್ಟ್ರಾಬೆರಿ ಮೊದಲಾದುದನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತದೆ.

foods that keep you hydrated

Image Credits : Renewed Living

ಸೌತೆಕಾಯಿಗಳ ಸೇವನೆ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಿಸಲು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಸೌತೆಕಾಯಿಗಳಲ್ಲಿ ಶೇಕಡಾ 95ರಷ್ಟು ನೀರಿನ ಪ್ರಮಾಣವಿದ್ದಯ, ಇದಲ್ಲದೆ ಇದರಲ್ಲಿ ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಕೂಡ ಸಮೃದ್ಧವಾಗಿದೆ. ಸೌತೆಕಾಯಿ ದೇಹ ಡಿಹೈಡ್ರೇಶನ್ ಆಗುವುದನ್ನು ತಡೆಯುತ್ತದೆ ಎಂದು ಹೇಳುತ್ತಾರೆ.

 

ಇನ್ನು, ಕಿತ್ತಳೆಯಲ್ಲಿ ಶೇಕಡಾ 88ರಷ್ಟು ನೀರಿನ ಪ್ರಮಾಣವಿದೆ. ಅಲ್ಲದೆ ವಿಟಮಿನ್ ಸಿ, ಎ, ಕ್ಯಾಲ್ಸಿಯಂ ಮತ್ತು ಫೈಬರ್ ಇರುತ್ತದೆ. ಕಿತ್ತಳೆಯಲ್ಲಿ ಪೊಟ್ಯಾಸಿಯಮ್ ಕಂಡು ಬರುವುದರಿಂದ ಕಿತ್ತಳೆ ತಿನ್ನುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ದೇಹದ ಸ್ನಾಯುಗಳ ನೋವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಕಿತ್ತಳೆ ಸೇವನೆಯಿಂದ ಪೊಟ್ಯಾಸಿಯಮ್ ಕೊರತೆಯನ್ನು ನಿವಾರಿಸಬಹುದು

 

ಕಲ್ಲಂಗಡಿ ಹಣ್ಣಿನ ಸೇವನೆ ದೇಹದಲ್ಲಿ ನೀರಿನ ಕೊರತೆಯನ್ನು ನಿವಾರಿಸುತ್ತದೆ. ಏಕೆಂದರೆ ಅದರಲ್ಲಿ ಶೇಕಡಾ 92ರಷ್ಟು ನೀರು ಕಂಡುಬರುತ್ತದೆ. ಇದಲ್ಲದೆ, ಇದು ಫೈಬರ್, ವಿಟಮಿನ್-ಸಿ, ವಿಟಮಿನ್-ಎ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ನಂತಹ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಸೇಬು ಹಣ್ಣಿನಲ್ಲಿ 84 ಶೇಕಡಾದಷ್ಟು ನೀರಿನಂಶವಿರುತ್ತದೆ. ಅಲ್ಲದೆ ಇದರಲ್ಲಿ ಸೇಬ್ರಿಟಾಲ್ ಅಂಶವಿದ್ದು, ಇದಕ್ಕೆ ತುಂಬಾ ಹೊತ್ತಿನವರೆಗೆ ಹಸಿವನ್ನು ನೀಗಿಸುವ ಶಕ್ತಿಯಿದೆ. ಮತ್ತು ತೂಕ ಕಡಿಮೆಯಾಗಲು ಸಹ ಸೇಬು ಹಣ್ಣಿನ ಸೇವನೆ ಉತ್ತಮವಾಗಿದೆ. ಇನ್ನು ಬಾಳೆಹಣ್ಣಿನಲ್ಲಿ ಶೇಕಡಾ 74ರಷ್ಟು ನೀರಿನಂಶವಿರುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ, ಪೊಟಾಶಿಯಂ ಅಂಶಗಳಿರುತ್ತವೆ.

 

ದ್ರಾಕ್ಷಿಯಲ್ಲಿ 92 ಶೇಕಡಾ ನೀರಿನಂಶದ ಜತೆಗೆ ರೋಗ ನಿರೋಧಕ ಗುಣಗಳಿರುತ್ತವೆ. ಕರಬೂಜ ಹಣ್ಣಿನಲ್ಲಿ 90 ಶೇಕಡಾದಷ್ಟು ನೀರಿನಂಶವಿದ್ದು, ಕ್ಯಾಲರಿಯ ಪ್ರಮಾಣ ಕಡಿಮೆಯಿರುತ್ತದೆ. ಇದರಿಂದ ತೂಕ ಕಡಿಮೆಯಾಗುತ್ತದೆ. ಅನನಾಸು ಹಣ್ಣಿನಲ್ಲಿ ಸೇಕಡಾ 87ರಷ್ಟು ನೀರಿನಂಶವಿದೆ. ಸ್ಟ್ರಾಬೆರಿ ಹಣ್ಣಿನಲ್ಲಿ ಶೇಕಡಾ 92ರಷ್ಟು ನೀರಿನ ಅಂಶದ ಜತೆಗೆ ವಿಟಮಿನ್ ಬಿ ಇರುತ್ತದೆ, ಇದರಿಂದ ದೇಹದಲ್ಲಿ ರಕ್ತಸಂಚಾರ ಸುಲಭವಾಗುತ್ತದೆ.

 

ಹಲವು ತರಕಾರಿಗಳ ಸೇವನೆಯಿಂದ ಸಹ ದೇಹದಲ್ಲಿ ನೀರಿನ ಪ್ರಮಾಣವನ್ನು ಉತ್ತಮವಾಗಿಡಬಹುದು. ಟೊಮೇಟೋಗಳ ಸೇವನೆ ಸಹ ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ದಿನವೊಂದಕ್ಕೆ 1 ಕಪ್‍ ಟೊಮೇಟೋ ಸ್ಲೈಸ್ ಸೇವನೆ ದೇಹಕ್ಕೆ ಅಗತ್ಯ ನೀರನ್ನು ಒದಗಿಸುತ್ತದೆ. ಸೇಬು ಹಣ್ಣು ತಿನ್ನುವುದು ಸಹ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಿಸಲು ಉಪಕಾರಿ. ಬದನೆಕಾಯಿ ತಿನ್ನುವುದರಿಂದ ದೇಹಕ್ಕೆ 92 ಶೇಕಡಾದಷ್ಟು ನೀರಿನಾಂಶ ಲಭಿಸುತ್ತದೆ. ಬದನೆಕಾಯಿಯಲ್ಲಿ ಫೈಬರ್ ಹೇರಳ ಪ್ರಮಾಣದಲ್ಲಿರುವ ಕಾರಣ, ಪಚನಕ್ರಿಯೆ ಸರಾಗವಾಗಿ ನಡೆಯುತ್ತದೆ. ಇದು ಮಲಬದ್ಧತೆಯನ್ನು ತಪ್ಪಿಸುತ್ತದೆ.

 

ಒಟ್ಟಿನಲ್ಲಿ ಪ್ರತಿನಿತ್ಯ ಹೆಚ್ಚು ನೀರು ಕುಡಿಯುವುದರಿಂದ ಅಥವಾ ನೀರಿನಂಶವುಳ್ಳ ಆಹಾರ ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಇನ್ಯಾಕೆ ತಡ, ನೀರಿನಂಶವುಳ್ಳ ಆಹಾರ ಸೇವಿಸಿ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author