ತಮ್ಮ ದೇಹದ ತೂಕ ಕಮ್ಮಿ ಮಾಡಿಕೊಳ್ಳುವುದು ಬಹುತೇಕ ಜನರಿಗೆ ತುಂಬಾ ಕಷ್ಟದ ಕೆಲಸ.

ತಮ್ಮ ದೇಹದ ತೂಕ ಕಮ್ಮಿ ಮಾಡಿಕೊಳ್ಳುವುದು ಬಹುತೇಕ ಜನರಿಗೆ ತುಂಬಾ ಕಷ್ಟದ ಕೆಲಸ. ಕಾರಣ ಅಧಿಕ ಬೊಜ್ಜು. ಸಾಕಷ್ಟು ಜನರಿಗೆ ಎಷ್ಟೇ ವ್ಯಾಯಾಮ ಮಾಡಿದರೂ ಬೊಜ್ಜು ಕರಗಿ ತೂಕ ಇಳಿಯುವುದು ಕಷ್ಟ. ಅಷ್ಟು ಕಠಿಣವಾದ ಬೊಜ್ಜು / ಕೊಬ್ಬು ಶೇಕರಣೆಯಾಗಿರುತ್ತದೆ.

 

ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ದೇಶೀಯ ಮತ್ತು ವಿದೇಶಿ ಪುಡಿಗಳನ್ನು ತಿಂಗಳಿಗೆ ಸಾವಿರಾರು ರೂಪಾಯಿ ಕೊಟ್ಟು ನಿತ್ಯ ಸೇವಿಸುವವರಿದ್ದಾರೆ ( ನಾನು ಹೆಸರುಗಳನ್ನು ಹೇಳಲು ಇಚ್ಛಿಸದ ಕೆಲವು shake ಗಳಿಗೆ, ತಿಂಗಳಿಗೆ ರೂ. 25,000 ವರೆಗೂ ಖರ್ಚುಮಾಡುವವರಿದ್ದಾರೆ ) ಈ ಪುಡಿಗಳ ಬಗ್ಗೆ ನಮಗೆ ಹೆಚ್ಚು ಗೊತ್ತಿಲ್ಲದ, ಕೇವಲ ಕಮಿಷನ್ ಆಸೆಯ ಏಜೆಂಟ್ ಗಳು ಹೇಳಿದ್ದನ್ನು ಮಾತ್ರ ಕೇಳಿ ತೂಕ ಮಾತ್ರವಲ್ಲದೆ ಕಿಡ್ನಿ ಲಿವರ್ ಮತ್ತಿತರ ಅಂಗಾಂಗಗಳನ್ನು ಹಾಳು ಮಾಡಿಕೊಂಡಿರುವವರು ತುಂಬಾ ಜನರಿದ್ದಾರೆ.

 

ಹಾಗಾಗಿ ಮನೆಯಲ್ಲಿಯೇ ನಾವೇ ಮಾಡಿಕೊಳ್ಳಬಹುದಾದ ದೇಹದಲ್ಲಿ ಶೇಖರಣೆಯಾದ ಕೊಬ್ಬನ್ನು ಕರಗಿಸುವ ಪುಡಿಗಳ ಬಗ್ಗೆ ನಾನು ಅಧ್ಯಯನ ಮಾಡಿ ತಿಳಿದು, ಕೇಳಿದವರಿಗೆ ಸಲಹೆ ಮಾಡುವ 5 ವಿವಿಧ ಬಗೆಯ ಪುಡಿಗಳ ವಿಧಾನ ಕೊಟ್ಟಿದ್ದೇನೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದಾದರೂ ಒಂದನ್ನು ಮನೆಯಲ್ಲಿಯೇ ಮಾಡಿಕೊಂಡು ಉಪಯೋಗಿಸಿ.

 

ಪುಡಿ ನಂಬರ್ - 1.

 

ಇದು ತೂಕವನ್ನು ಕಳೆದುಕೊಳ್ಳಲು ಉತ್ತಮವಾದ ಎಲ್ಲಾ ಪೌಷ್ಟಿಕಾಂಶವನ್ನು ಹೊಂದಿರುವ ಪಾನೀಯವಾಗಿದೆ. ಆಮ್ಲಾ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಅಗಸೆಬೀಜವು ( Flax seeds ) ಪ್ರೋಟೀನ್ಗಳು ಮತ್ತು ಆಹಾರದ ಫೈಬರ್ ಅನ್ನು ಹೊಂದಿದ್ದು ಅದು ಹಸಿವನ್ನು ನಿಗ್ರಹಿಸುತ್ತದೆ. 

 

ಬೇಕಾದ ಪದಾರ್ಥಗಳು ( 15 ದಿನಗಳಿಗೆ ಆಗುವಷ್ಟು ).

 

ಆಮ್ಲಾ ಪೌಡರ್ ( ಬೆಟ್ಟದ ನೆಲ್ಲಿಕಾಯಿ) - 9 ಟೀ ಸ್ಪೂನ್.

ಅಗಸೆಬೀಜದ ಪುಡಿ - 3 ಟೀ ಸ್ಪೂನ್.

ದಾಲ್ಚಿನ್ನಿ ( ಚೆಕ್ಕೆ - Cinnamon ) ಪುಡಿ - 2 ಟೀ ಸ್ಪೂನ್.

ಶುಂಠಿ ಪುಡಿ - 1 ಟೀ ಸ್ಪೂನ್.

 

ತಯಾರಿಸುವ ವಿಧಾನ :-

 

ಆಮ್ಲಾ ಪೌಡರ್, ಅಗಸೆಬೀಜದ ಪುಡಿ, ದಾಲ್ಚಿನ್ನಿ ಪುಡಿ ಮತ್ತು ಶುಂಠಿ ಪುಡಿಯನ್ನು ಮಿಶ್ರಣ ಮಾಡಿ ಮತ್ತು ಗಾಳಿಯಾಡದ ಡಬ್ಬದಲ್ಲಿ ಇರಿಸಿ. ಈ ಪುಡಿ 15 ದಿನಗಳವರೆಗೆ ಇರುತ್ತದೆ.

 

 ತೆಗೆದುಕೊಳ್ಳುವ ವಿಧಾನ :- 

 

ಚಳಿಗಾಲದಲ್ಲಿ 1 ಚಮಚ ಮತ್ತು ಬೇಸಿಗೆಯಲ್ಲಿ 1/2 ಚಮಚ ( ಇದು ಸ್ವಲ್ಪ ಉಷ್ಣ ಪ್ರಕೃತಿ ) ಈ ಪುಡಿಯನ್ನು 1 ಕಪ್ ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಮತ್ತು ಅದನ್ನು ಮುಚ್ಚಿ 3-4 ನಿಮಿಷಗಳ ಕಾಲ ಇರಿಸಿ ನಂತರ ಸಂಪೂರ್ಣವಾಗಿ ಕುಡಿಯಿರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.

 

ಪುಡಿ ನಂಬರ್ - 2.

 

ಜೀರಿಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ, ಗ್ಯಾಸ್ ಆಗಲು ಬಿಡುವುದಿಲ್ಲ. ಅಗಸೆ ಬೀಜಗಳು ಪ್ರೋಟೀನ್‌ಗಳು ಮತ್ತು ಆಹಾರದ ಫೈಬರ್‌ನಲ್ಲಿ ಸಮೃದ್ಧವಾಗಿವೆ, ಇದು ಹಸಿವನ್ನು ನಿಗ್ರಹಿಸುತ್ತದೆ.

 

ಬೇಕಾದ ಪದಾರ್ಥಗಳು :

 

ಅರಿಶಿನ ಪುಡಿ ( ಆದಷ್ಟೂ ಶುದ್ಧವಾದ ಮನೆಯಲ್ಲಿ ಮಾಡಿಕೊಂಡ ) 4 ಟೀ ಸ್ಪೂನ್.

ಜೀರಿಗೆ ( ಕರಿ ಜೀರಿಗೆ ಇನ್ನೂ ಉತ್ತಮ ) ಪುಡಿ - 2 ಟೀ ಸ್ಪೂನ್.

ಅಗಸೆಬೀಜದ ( Flax seeds ) ಪುಡಿ - 1 ಟೀ ಸ್ಪೂನ್.

ಚೆಕ್ಕೆ ಪುಡಿ - 2 ಟೀ ಸ್ಪೂನ್.

ಕರಿ ಮೆಣಸಿನ ( Pepper ) ಪುಡಿ - 1 ಟೀ ಸ್ಪೂನ್.

ಶುಂಠಿ ಪುಡಿ - 1 ಟೀಸ್ಪೂನ್

ಹಸಿರು ಚಹಾ ( Green tea ) - 5 ಟೀ ಬ್ಯಾಗ್ ನಲ್ಲಿರುವಷ್ಟು.

 

ತಯಾರಿಸುವ ವಿಧಾನ :-

 

ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ಅದನ್ನು ಬಿಗಿಯಾದ ಮುಚ್ಚಿದ ಪಾತ್ರೆಯಲ್ಲಿ ಇರಿಸಿ.

 

ತೆಗೆದುಕೊಳ್ಳುವ ವಿಧಾನ :-

 

1 ಕಪ್ ಬೆಚ್ಚಗಿನ ನೀರಿನಲ್ಲಿ 1/2 ಚಮಚ ಈ ಪುಡಿಯನ್ನು ತೆಗೆದುಕೊಳ್ಳಿ. ಇದನ್ನು 3-4 ನಿಮಿಷಗಳ ಕಾಲ ಮುಚ್ಚಿ ಪಕ್ಕಕ್ಕೆ ಇರಿಸಿ ಮತ್ತು ನಂತರ ಶೋದಿಸದೇ ಕುಡಿಯಿರಿ. ಬೆಳಗಿನ ತಿಂಡಿ ಮತ್ತು ರಾತ್ರಿಯ ಊಟದ ಅರ್ಧ ಘಂಟೆಯ ನಂತರ ಎರಡು ಬಾರಿ ತೆಗೆದುಕೊಳ್ಳಿ .

 

ಪುಡಿ ನಂಬರ್ - 3.

 

ಜೀರಿಗೆ ಮತ್ತು ಕರಿಬೇವು ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಕ್ಯಾಲೊರಿಗಳನ್ನು ವೇಗವಾಗಿ ಕರಗಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಕರಿಬೇವಿನ ಎಲೆಗಳು ಕೆಟ್ಟ ಕೊಲೆಸ್ಟ್ರಾಲ್ ವಿರುದ್ಧವೂ ಹೋರಾಡುತ್ತವೆ. ಸೋಂಪು ದೇಹದಲ್ಲಿ ವಿಟಮಿನ್ ಮತ್ತು ಖನಿಜ ಹೀರಿಕೊಳ್ಳುವಿಕೆಯನ್ನು ಸುಧಾರಿಸುವ ಮೂಲಕ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

 

ಪದಾರ್ಥಗಳು :

 

ಜೀರಿಗೆ ಪುಡಿ (ಜೀರಾ) - 4 ಟೀ ಸ್ಪೂನ್

ಸೊಂಪಿನ ಪುಡಿ ( Fennel ) - 2 ಟೀ ಸ್ಪೂನ್.

ಅಗಸೆಬೀಜದ ಪುಡಿ - 2 ಟೀ ಸ್ಪೂನ್.

ಕರಿಬೇವಿನ ಪುಡಿ - 1.5 ಟೀ ಸ್ಪೂನ್.

ಅರಿಶಿನ ಪುಡಿ- 1/2 ಟೀ ಸ್ಪೂನ್.

ಇಂಗಿನ ಪುಡಿ (ಹಿಂಗ್ - Asafetida ) - 1 ಚಿಟಿಕೆ.

ಕಪ್ಪು ಉಪ್ಪು ( black salt - ಕಾಲಾ ನಮಕ್ ) - 1/4 ಟೀ ಸ್ಪೂನ್.

ಅಳಲೇಕಾಯಿ ( Terminalia chebula ) ಪುಡಿ- 1 ಟೀ ಸ್ಪೂನ್.

 

 ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ ,ಗಾಳಿಯಾಡದ ಗಾಜಿನ ಬಾಟಲಿಯಲ್ಲಿ ಶೇಕರಿಸಿಡಿ.

 

ತೆಗೆದುಕೊಳ್ಳುವ ವಿಧಾನ :-

 

ಈ ಪುಡಿಯ 1 ಚಮಚವನ್ನು ಅರ್ಧ ಗ್ಲಾಸ್ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ. ಇದನ್ನು 5 ನಿಮಿಷ ಒಂದು ತಟ್ಟೆ ಮುಚ್ಚಿಟ್ಟು ನಂತರ ಕುಡಿಯಿರಿ. ರಾತ್ರಿ ಮಲಗುವ ಮುನ್ನ ಅಥವಾ ರಾತ್ರಿಯ ಊಟದ 30 ನಿಮಿಷಗಳ ನಂತರ ಇದನ್ನು ಕುಡಿಯಬೇಕು.

 

 ಪುಡಿ ನಂಬರ್ - 4.

 

ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಕಾರ್ಡಿಯೋ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾರ್ಮೋನ್ ಅನ್ನು ಸಮತೋಲನಗೊಳಿಸುತ್ತದೆ ಮತ್ತು ಸಕ್ಕರೆಯ / ಸಿಹಿಯ ಬಯಕೆಗಳನ್ನು ಕಡಿಮೆ ಮಾಡುತ್ತದೆ.

 

ಬೇಕಾಗುವ ಪದಾರ್ಥಗಳು :-

 

ಮೆಂತ್ಯೆ ಸೊಪ್ಪಿನ ಪುಡಿ - 4 ಟೀ ಸ್ಪೂನ್.

ಅಗಸೆ ಬೀಜದ ಪುಡಿ - 1 ಟೀಸ್ಪೂನ್.

ಶುಂಠಿ ಪುಡಿ - 1/2 ಟೀ ಸ್ಪೂನ್.

ಚೆಕ್ಕೆ ಪುಡಿ - 1/2 ಟೀ ಸ್ಪೂನ್.

 

ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಪುಡಿಮಾಡಿ ಮತ್ತು ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ.

 

ಉಪಯೋಗಿಸುವ ವಿಧಾನ :-

 

ನಿಮ್ಮ ಊಟದ ಪಲ್ಯ, ಸಾಲಾಡ್ , ಹೆಚ್ಚಿದ / ಬೇಯಿಸಿಕೊಂಡ ತರಕಾರಿ ಸೌತೆಕಾಯಿ ಮೇಲೆ 1-2 ಚಮಚ ಸಿಂಪಡಿಸಿ ಅಥವಾ 1 ಚಮಚ ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಖಾಲಿ ಹೊಟ್ಟೆಯಲ್ಲಿ ಸೇವಿಸಿ.

 

ಪುಡಿ ನಂಬರ್ - 5.

 

 ಇದರಲ್ಲಿ ಕೊತ್ತಂಬರಿ ಮತ್ತು ಬೆಳ್ಳುಳ್ಳಿ ಎಂಬ ಎರಡು ವಿಶೇಷ ಕೊಬ್ಬು ಕರಗಿಸುವ ಪದಾರ್ಥಗಳಿವೆ. ಕೊತ್ತಂಬರಿ ನಾರಿನ ಉತ್ತಮ ಮೂಲವಾಗಿದೆ ಮತ್ತು ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ವರ್ಧಿಸುವ ಜೀರ್ಣಕಾರಿ ಕಿಣ್ವಗಳು ಮತ್ತು ರಸವನ್ನು ಉತ್ತೇಜಿಸುತ್ತದೆ. ಬೆಳ್ಳುಳ್ಳಿ ಚಯಾಪಚಯ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಎಲ್ಲಾ ಕ್ಯಾಲೊರಿಗಳನ್ನು ಸುಡುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

 

ಬೇಕಾದ ಪದಾರ್ಥಗಳು :-

 

ಕರಿಬೇವಿನ ಪುಡಿ - 1 ಟೀ ಸ್ಪೂನ್.

ಶುಂಠಿ ಪುಡಿ - 1/2 ಟೀ ಸ್ಪೂನ್.

ಏಲಕ್ಕಿ ಪುಡಿ- 1 tbsp

ಕೊತ್ತಂಬರಿ ಬೀಜ ಪುಡಿಮಾಡಿದ್ದು (ಧನಿಯಾ) - 4 ಟೀ ಸ್ಪೂನ್.

ಸೋಂಪು - 1 ಟೀ ಸ್ಪೂನ್.

ನೆಲ್ಲಿಕಾಯಿ ಪುಡಿ - 4 ಟೀ ಸ್ಪೂನ್.

ಚೆಕ್ಕೆ - 1/2 ಟೀ ಸ್ಪೂನ್.

ಬೆಳ್ಳುಳ್ಳಿ ಒಣ ಅಥವಾ ಪುಡಿ - 1 tbsp.

 

ಎಲ್ಲಾ ಪದಾರ್ಥಗಳನ್ನು ಪುಡಿಮಾಡಿ ಮತ್ತು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ

 

ಈ ಪುಡಿಯ 1 ಚಮಚವನ್ನು ತೆಗೆದುಕೊಂಡು ಅದನ್ನು ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ಸೇರಿಸಿ. ಇದನ್ನು 5 ನಿಮಿಷ ಬಿಟ್ಟು ಕುಡಿಯಿರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತೆಗೆದುಕೊಳ್ಳಿ .

 

 

ಸೂಚನೆ : ಈ ಎಲ್ಲಾ ಪುಡಿಗಳು ಸ್ವಲ್ಪ ಉಷ್ಣಕಾರಕ ಆದ್ದರಿಂದ ನಿಮ್ಮ ದೇಹದ ಪ್ರತಿಕ್ರಿಯೆ ನೋಡಿಕೊಂಡು ನಿತ್ಯ ಅಥವ ದಿನ ಬಿಟ್ಟು ದಿನ ತೆಗೆದುಕೊಳ್ಳಿ. ರುಚಿ ನಿಮಗೆ ಇಷ್ಟವಾಗದಿದ್ದರೆ ನೀವು ನಿಂಬೆ ರಸ, ಬ್ಲಾಕ್ ಸಾಲ್ಟ್ ಅಥವಾ ಜೇನುತುಪ್ಪ ಸೇರಿಸಬಹುದು. ನಿಮ್ಮ ಎಂದಿನ ವ್ಯಾಯಾಮ, ನಡಿಗೆ, ಯೋಗ ನಿಲ್ಲಿಸದೇ ಮುಂದುವರಿಸಿ. 

 

ಮುಂದಿನ ಲೇಖನದಲ್ಲಿ ಸಕ್ಕರೆ ಖಾಯಿಲೆ - Type 2 Diabetes ಇರುವವರಿಗೆ ಸಕ್ಕರೆ ಅಂಶ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸೇವಿಸಬೇಕಾದ, ಮನೆಯಲ್ಲಿ ಮಾಡಿಕೊಳ್ಳುವ ಪುಡಿ ಬಗ್ಗೆ ತಿಳಿಸುವೆ.

 

ಲೇಖನ :- ಮಂಜುನಾಥ್ ಪ್ರಸಾದ್

Enjoyed this article? Stay informed by joining our newsletter!

Comments

You must be logged in to post a comment.

About Author