ಸಪ್ತ ಪಾತಾಳಗಳು ಎಂದರೇನು..? ಅತಳ, ಸುತಳ ಪಾತಾಳಗಳು ಇರುವುದು ಎಲ್ಲಿ..?

ಸಪ್ತ ಪಾತಾಳಗಳು ಎಂದರೇನು..? ಅತಳ, ಸುತಳ ಪಾತಾಳಗಳು ಇರುವುದು ಎಲ್ಲಿ..?

earth split in pieces

Image Credits : Facebook

ಪುರಾಣ ಮತ್ತು ಶಾಸ್ತ್ರಗಳಲ್ಲಿ ಏಳು ಎಂಬ ಸಂಖ್ಯೆಗೆ ಹೆಚ್ಚಿನ ಮಹತ್ವವಿದೆ. ಜಾನಪದದಲ್ಲಿ ಇದು ಪ್ರೇರಣೆಯ ಅಂಕಿ. ಪೃಥು ಮಹಾರಾಜನು ಈ ಭೂಮಿಯನ್ನು ಏಳು ಭಾಗಗಳಾಗಿ ವಿಂಗಡಿಸಿದನಂತೆ. ಏಳು ವರ್ಷಏಳು ದಿನಏಳು ತಿಂಗಳುಏಳು ಬಣ್ಣಏಳು ಸಮುದ್ರಸಪ್ತ ಋಷಿಗಳುಸಪ್ತ ಮಾತೃಕೆಯರುಸಪ್ತಪದಿಸಪ್ತಸ್ವರಏಳುಮಲೆಎಪ್ಪತ್ತೇಳು ಮಲೆಏಳು ಕುಂಡಲವಾಡಏಳೇಳು ಜನ್ಮಏಳುಮಲ್ಲಿಗೆ ತೂಕದ ರಾಜಕುಮಾರಿ ಹೀಗೆ ಏಳು ಎಂಬ ಸಂಖ್ಯೆ ಮಹತ್ತರವಾದುದಾಗಿದೆ.

ಜನಪದರ ದೃಷ್ಠಿಯಲ್ಲಿ ಕಷ್ಟ-ಸುಖಗಳು ಬದುಕಿನ ಏಳು-ಬೀಳುಗಳಿದ್ದ ಹಾಗೆ. ಏಳು ಎಂಬ ಸಂಖ್ಯೆ ಅಪಶಕುನಕಾರಿ ಸಂಖ್ಯೆ. ಏಳೇಳು ಜನ್ಮದ ಕಷ್ಟಏಳು ವನವಾಸಏಳು ರಾಹುವಿನ ಸಂಖ್ಯೆಏಳು ಎಂಬ ಪದವನ್ನು ಮನೆಯೊಳಗೆ ಉಚ್ಚರಿಸಬಾರದು ಎಂದು ಹೇಳುತ್ತಾರೆಏಳು ಎಂಬ ಸಂಖ್ಯೆಯೊಂದಿಗೆ ಹಲವಾರು ನಂಟುಗಳಿರುವಂತೆಯೇ, ಏಳು ಪಾತಾಳಗಳು ಸಹ ಗುರುತಿಸಿಕೊಂಡಿವೆ. ಇಷ್ಟಕ್ಕೂ ಪಾತಾಳ ಎಂದರೇನು..? ಭೂಮಿಯ ಕೆಳಗಿರುವ ಒಂದು ಭಾಗಾನಾ..? ಇಲ್ಲ ಇದೊಂದು ಪ್ರತ್ಯೇಕ ಪ್ರಾಂತ್ಯಾನಾ ಹೀಗೊಂದು ಅನುಮಾನ ಹಲವರನ್ನು ಕಾಡುತ್ತದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಇದನ್ನು ಓದಿ : ಬ್ರಹ್ಮನನ್ನು ಯಾಕೆ ಪೂಜಿಸುವುದಿಲ್ಲ ಗೊತ್ತಾ..? ಇಲ್ಲಿದೆ ನೀವು ತಿಳಿದಿರದ ಅಚ್ಚರಿಯ ಮಾಹಿತಿ

ಪಾತಾಳ ಎಂದರೇನು..?

vishnu purana

Image Credits : Native Planet

ಭಾರತೀಯ ಧರ್ಮಗಳಲ್ಲಿಪಾತಾಳ ಬ್ರಹ್ಮಾಂಡದ ನೆಲದಡಿಯ ಪ್ರಾಂತ್ಯಳು ಎಂದು ಹೇಳಲಾಗುತ್ತದೆ. ಅಂದರೆ ಭೂಮಿಯ ಕೆಳಗಿರುವ ಪ್ರದೇಶವನ್ನು ಪಾತಾಳ ಲೋಕ ಎನ್ನುತ್ತಾರೆ. ವಿಶ್ವ ವಿಜ್ಞಾನದಲ್ಲಿಬ್ರಹ್ಮಾಂಡವನ್ನು ಮೂರು ಜಗತ್ತುಗಳಾಗಿ ವಿಭಜಿಸಲಾಗುತ್ತದೆ: ಸ್ವರ್ಗ (ಮೇಲಿನ ಪ್ರದೇಶಗಳು)ಪೃಥ್ವಿ (ಭೂಮಿ) ಮತ್ತು ಪಾತಾಳ. ಪಾತಾಳವು ಏಳು ಪ್ರದೇಶಗಳು ಅಥವಾ ಲೋಕಗಳಿಂದ ಕೂಡಿದೆಅವುಗಳಲ್ಲಿ ಏಳನೇಯ ಮತ್ತು ಅತ್ಯಂತ ಕೆಳಗಿನದನ್ನು ಪಾತಾಳ ಅಥವಾ ನಾಗಲೋಕ ಎಂದು ಕರೆಯಲಾಗುತ್ತದೆ. ದಾನವರುದೈತ್ಯರುಯಕ್ಷರು ಮತ್ತು ನಾಗರು ಪಾತಾಳ ಪ್ರದೇಶಗಳಲ್ಲಿ ಇರುತ್ತಾರೆ ಎಂದು ಹೇಳಲಾಗುತ್ತದೆ.

ವಿಷ್ಣು ಪುರಾಣದಲ್ಲಿ ನಾರದರು ಪಾತಾಳವನ್ನು ಸ್ವರ್ಗಕ್ಕಿಂತ ಸುಂದರವೆಂದು ವರ್ಣಿಸುತ್ತಾರೆ. ಅದ್ಭುತ ಆಭರಣಗಳುಸುಂದರ ತೋಪುಗಳು ಮತ್ತು ಸರೋವರಗಳು ಮತ್ತು ಸುಂದರ ಅಸುರ ಕನ್ಯೆಯರಿಂದ ತುಂಬಿದ್ದು, ಎಂದು ಪಾತಾಳವನ್ನು ವರ್ಣಿಸಲಾಗಿದೆ. ಇಲ್ಲಿನ ಮಣ್ಣು ಬಿಳಿಕಪ್ಪುಕೆನ್ನೀಲಿಮರಳಿನಂತೆಹಳದಿಕಲ್ಲಿನಿಂದ ಕೂಡಿದೆ ಮತ್ತು ಚಿನ್ನವನ್ನು ಹೊಂದಿದೆ ಎಂದು ಹೇಳುತ್ತಾರೆ.

ಸಪ್ತಪಾತಾಳಗಳು ಎಲ್ಲಿವೆ..?

Vishnu bhagvatha

Image Credits : Native Planet

ಭಾಗವತ ಪುರಾಣವು ಏಳು ಕೆಳಗಿನ ಲೋಕಗಳನ್ನು ಭೂಮಿಯ ಕೆಳಗಿನ ಗ್ರಹಗಳು ಅಥವಾ ಗ್ರಹಗಳ ವ್ಯವಸ್ಥೆಗಳೆಂದು ಪರಿಗಣಿಸುತ್ತದೆ. ಈ ಲೋಕಗಳು ಸ್ವರ್ಗವನ್ನು ಒಳಗೊಂಡ ಬ್ರಹ್ಮಾಂಡದ ಮೇಲಿನ ಲೋಕಗಳಿಗಿಂತ ಭವ್ಯವಾಗಿವೆ ಎಂದು ವರ್ಣಿಸಲಾಗಿದೆ. ಭಾಗವತ ಪುರಾಣದಲ್ಲಿ ವಿವರಿಸಲಾದ ಕೆಳಗಿನ ಏಳು ಲೋಕಗಳೆಂದರೆ: ಅತಳವಿತಳಸುತಳತಲಾತಳಮಹಾತಳರಸಾತಳಮತ್ತು ಪಾತಾಳ.

ಖಗೋಳಶಾಸ್ತ್ರ ಸೂರ್ಯ ಸಿದ್ಧಾಂತವುದಕ್ಷಿಣ ಗೋಲಾರ್ಧವನ್ನು ಪಾತಾಳವೆಂದು ಮತ್ತು ಉತ್ತರ ಗೋಲಾರ್ಧವನ್ನು ಜಂಬೂದ್ವೀಪವೆಂದು ಸೂಚಿಸುತ್ತದೆ.

 

ಇದನ್ನು ಓದಿ : ಶತ್ರುಗಳಿಂದ ಮುಕ್ತಿ ಕೊಡುವ ಮದ್ಯಪಾನಪ್ರಿಯ ಕಾಲಭೈರವ

ಬಲಿಚಕ್ರವರ್ತಿ ಮತ್ತು ಅತಳಸುತಳಪಾತಾಳ ಲೋಕ

Bali chakravarthy photos

Image Credits : Oneindia Telugu

ಮಹಾವಿಷ್ಣು ವಾಮನನಾಗಿ ಬಲಿ ಚಕ್ರವರ್ತಿಯ ತಲೆ ಮೇಲೆ ಮೂರನೇ ಹೆಜ್ಜೆಯಿಟ್ಟು ಪಾತಾಳಕ್ಕೆ ತಳ್ಳಿದ ಎಂದು ಪುರಾಣದಲ್ಲಿ ಹೇಳಲಾಗುತ್ತದೆ. ಅಂದರೆ ಈಗಿನ ದಕ್ಷಿಣ ಅಮೆರಿಕದ ಪೆರು ದೇಶ, ಎಂದು ಅದನ್ನೇ ಕರೆಯಲಾಗುತ್ತದೆ ಎಂದು ತಿಳಿಸಲಾಗಿದೆ. ಏಶಿಯಾಯುರೋಪ್ ಹಾಗೂ ಆಫ್ರಿಕಾ ಖಂಡಗಳು ಬಲಿ ಚಕ್ರವರ್ತಿಯು ಆಳ್ವಿಕೆಯಲ್ಲಿತ್ತು. ಬಲಿ ಉತ್ತಮ ರಾಜನಾಗಿದ್ದರೂ ದೇವತೆಗಳ ವಿರೋಧಿಯಾಗಿ ಬೆಳೆಯತ್ತಿದ್ದ‌. ಮುಂದೆ ಇವನಿಂದ ಅಪಾಯ ತಪ್ಪಿದ್ದಲ್ಲ ಎಂದು ತಿಳಿದು ದೇವತೆಗಳು ಕಾಪಾಡುವಂತೆ ಮಹಾವಿಷ್ಣುವಿಗೆ ಮೊರೆಯಿಟ್ಟರು.

ವಿಷ್ಣು ವಾಮನಾವತಾರಿಯಾಗಿ ಮಹಾನ್ ಶಕ್ತಿಶಾಲಿಯಾದ ಮತ್ತು ದಾನಿಯಾದ ರಾಕ್ಷಸ ದೊರೆ ಬಲಿಯಿಂದ ಮೂರು ಹೆಜ್ಜೆಗಳು ಭೂಭಾಗ ದಾನ ಪಡೆದು ಮೂರು ಹೆಜ್ಜೆಗಳಿಗೆ ಈಗಿನ ಏಶಿಯಾಯುರೋಪ್,ಮತ್ತು ಆಫ್ರಿಕಾ ಖಂಡಗಳು ಅಳೆದ. ಹಾಗೇ ಮೂರು ಹೆಜ್ಜೆಗಳಲ್ಲಿ ದಾನ ನೀಡಿದ ಭೂಭಾಗದಲ್ಲಿ ಬಲಿಚಕ್ರವರ್ತಿಗೆ ಇರಲು ಹಕ್ಕಿಲ್ಲದೆ ಇರುವುದರಿಂದಬಲಿಯನ್ನು ದಟ್ಟವಾದ ಕಾಡುಗಳಿಂದ ಕೂಡಿದ ದಕ್ಷಿಣ ಅಮೆರಿಕಕ್ಕೆ ಕಳುಹಿಸಿದ ಎಂದು ಹೇಳಲಾಗಿದೆ.

 

ಇದನ್ನು ಓದಿ : ಭಗವಾನ್ ಶ್ರೀ ಕೃಷ್ಣನ ಬಗ್ಗೆ ನಿಮಗೆ ಗೊತ್ತಿಲ್ಲದ 8 ವಿಷಯಗಳು!

ವಿಷ್ಣು, ಬಲಿಯ ಚಲನವಲನಗಳ ಮಾಹಿತಿ ಪಡೆಯಲು ಅಸುರರುದೈತ್ಯರು,ದಾನವರನ್ನು ಕಳುಹಿಸಿದರು. ಅದು ಭಾರತದ ಪೂರ್ವದಿಂದ ದಕ್ಷಿಣ ಅಮೆರಿಕದ ಈಗಿನ ಪೆರು ಎಂದರೆ ಸುತಲ ಸಮುದ್ರಮಾರ್ಗದಲ್ಲಿ ಕಳುಹಿಸಿದ ಎಂದು ಹೇಳಲಾಗಿದೆ. ನಮಗೆ ಪಾತಾಳ ಅಂದಕ್ಷಣ ನೀರಿನ ಕೆಳಗೆ ಹೋಗಬೇಕು ಮತ್ತೊಂದು ಪಾತಾಳ ಎಲ್ಲಿದೆ ಅಂದಕ್ಷಣ ಭೂಮಿಯ ಕೆಳಗಿದೆಯೆಂದು ಕಾಲು ಒತ್ತಿ ತೋರಿಸುತ್ತೇವೆ. ಅಂದರೆ ಭಾರತದಲ್ಲಿ ಒಂದು ರಂಧ್ರವನ್ನು ಕೊರೆದರೆ ಅದು ದಕ್ಷಿಣ ಅಮೆರಿಕಾಗೆ ತಲುಪುತ್ತದೆ ಎಂದು ಹೇಳಲಾಗುತ್ತದೆ.

ಬಲಿಯ ಆಪ್ತ ಮಯ ಶ್ರೇಷ್ಠ ವಾಸ್ತುಶಿಲ್ಪಿ ಮಾಯನ್ಸ್, ನಾಗರಿಕತೆಯು ಇವನ ಹೆಸರಿಂದಲೇ ಬಂದಿದ್ದು. ಮಯ ಅತುಲ,ತಲಾತಲ ಎಂಬ ಪ್ರದೇಶಗಳನ್ನು ಕಟ್ಟಿದ. ಬಲಿಗಾಗಿ ಆಶ್ಮನಗರವನ್ನು ನಿರ್ಮಿಸಿದ. ಇದರ ಅವಶೇಷಗಳನ್ನು ಹಲವು ಪ್ರದೇಶಗಳಲ್ಲಿ ಈಗಲೂ ನೋಡಬಹುದು ಎಂದು ಹೇಳುತ್ತಾರೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author