ಯೋಗ ಮಾಡಲು ಯಾವ ಸಮಯ ಹೆಚ್ಚು ಸೂಕ್ತ ಮತ್ತು ಯಾಕೆ..?

ಯೋಗ ಮಾಡಲು ಯಾವ ಸಮಯ ಹೆಚ್ಚು ಸೂಕ್ತ ಮತ್ತು ಯಾಕೆ..?

yoga and meditation benefitsFeatured Image Credits : Quora

ಯೋಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯೋಗ ಮಾಡುವುದರಿಂದ ಆರೋಗ್ಯ ಉತ್ತಮವಾಗುತ್ತದೆ. ಮನಸ್ಸಿನ ಒತ್ತಡ ಕಡಿಮೆಯಾಗಿ ಶಾಂತಿ ಲಭಿಸುತ್ತದೆ. ಯೋಗ ಎನ್ನುವುದು ಭಾರತೀಯರಿಗೆ ಪರಂಪರಾಗತವಾಗಿ ಬಂದಿರುವ ಉಡುಗೊರೆ. ಭಾರತದಲ್ಲಿ ಯೋಗಾಭ್ಯಾಸ ಪುರಾಣದ ಕಾಲದಿಂದಲೂ ಇತ್ತೆಂಬುದಕ್ಕೆ ಸಾಕ್ಷ್ಯಾಧಾರ ಲಭ್ಯವಾಗಿದೆ. ಯೋಗ ಮಾಡುವುದರಿಂದ ಶರೀರ ಬಲಗೊಳ್ಳುವುದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಶ್ವಾಸಕೋಶ, ಹೃದಯ, ನರಮಂಡಲ ಸಂಬಂಧಿತ ಆರೋಗ್ಯ ಸಮಸ್ಯೆಗಳು ಪರಿಹಾರವಾಗುವುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ನಿಯಮಿತವಾಗಿ ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳುತ್ತಾರೆ, ದೇಹವನ್ನು ಸುಸ್ಥಿತಿಗೆ ತರಲು ಯೋಗಕ್ಕಿಂತ ಬೇರೆ ಉತ್ತಮವಾದ ಉಪಾಯವಿಲ್ಲ. ಯೋಗದ ಪರಿಣಾಮಕಾರಕ ಪ್ರಭಾವವನ್ನು ಎಲ್ಲಾ ಕಾಲಗಳಲ್ಲೂ ರುಜುವಾತು ಪಡಿಸಲಾಗಿರುವುದಲ್ಲದೆ, ಯೋಗದಿಂದ ಯಾವ ಅಡ್ಡ ಪರಿಣಾಮಗಳೂ ಉಂಟಾಗುವುದಿಲ್ಲ ಎಂದು ತಿಳಿಸಲಾಗಿದೆ. ಯೋಗದಿಂದ ಜೀವನಶೈಲಿಯಲ್ಲಿ ವಿಪರೀತ ಬದಲಾವಣೆಯನ್ನು ತರದೆಯೇ ದೇಹವನ್ನು ಯೋಗವು ಪರಿಣಾಮಕಾರಕವಾಗಿ ಸುಸ್ಥಿತಿಗೆ ತರಬಹುದು ಎಂದು ನಂಬಲಾಗುತ್ತದೆ.

ಆದರೆ, ಯಾವ ಸಮಯದಲ್ಲಿ ಯೋಗ ಮಾಡುವುದು ಒಳ್ಳೆಯದು ಅನ್ನುವ ಬಗ್ಗೆ ಹಲವರಿಗೆ ಗೊಂದಲಗಳಿವೆ. ಹೆಚ್ಚಾಗಿ ಎಲ್ಲರೂ ಬೆಳಗ್ಗೆದ್ದು ಯೋಗ ಮಾಡುತ್ತಾರೆ. ಆದರೆ ಬೆಳಗ್ಗೆದ್ದು ಯೋಗ ಮಾಡಲು ಸಮಯ ಸಿಗದವರು ಸಂಜೆ ಮಾಡುವುದು ಸೂಕ್ತವೇ ಎಂಬುದರ ಬಗ್ಗೆ ಗೊಂದಲದಲ್ಲಿರುತ್ತಾರೆ. ಆ ಎಲ್ಲಾ ಕನ್‍ಫ್ಯೂಶನ್‍ ಗೆ ಇಲ್ಲಿದೆ ಉತ್ತರ. ಸಂಜೆ ಯೋಗ ಮಾಡಬಹುದಾ..? ಸಂಜೆ ಯೋಗ ಮಾಡಿದರೆ ಬೆಳಗ್ಗೆ ಯೋಗ ಮಾಡಿದ ಪ್ರಯೋಜನ ಸಿಗುತ್ತದಾ..? ಯಾವ ಸಮಯದಲ್ಲಿ ಯೋಗ ಮಾಡಿದರೆ ಉತ್ತಮ ಹೀಗೆ ಹಲವು ವಿಚಾರಗಳ ಕುರಿತು ಇಲ್ಲಿದೆ ಮಾಹಿತಿ.

ಯೋಗ ತಜ್ಞರು ಸೂರ್ಯೋದಯದ ಸಮಯದಲ್ಲಿ ಯೋಗಾಭ್ಯಾಸ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಸಂಜೆ ಯೋಗ ಮಾಡುವುದರಿಂದಲೂ ಯಾವುದೇ ರೀತಿಯ ತೊಂದರೆಯಿಲ್ಲ ಅನ್ನೋ ಅಭಿಪ್ರಾಯ ಅವರದು. ಹೆಚ್ಚಿನ ಯೋಗ ಶಾಲೆಗಳಲ್ಲಿ ಬೆಳಗ್ಗಿನ ಸಮಯ ಯೋಗಾಭ್ಯಾಸ ಮಾಡಿಸಲಾಗುತ್ತದೆ. ಆದರೆ ಬೆಳಗ್ಗೆದ್ದು ಕಾಲೇಜು, ಕಚೇರಿಗೆಂದು ಹೋಗುವವರಿಗೆ ಯೋಗ, ವಾಕಿಂಗ್‍ ಎಂದು ಮಾಡಲು ಸಮಯವಿರುವುದಿಲ್ಲ. ಇಂಥವರು ಸಂಜೆ ಹೊತ್ತಿನಲ್ಲಿಯೂ ಯೋಗಾಭ್ಯಾಸ ಮಾಡಬಹುದು.

 

ಬೆಳಗ್ಗಿನ ಯೋಗದ ಪ್ರಯೋಜನಗಳು

Yoga in morning timeImage Credits : templates.office.com

ಬೆಳಗ್ಗೆದ್ದು ಯೋಗ ಮಾಡುವುದರಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಯಾವುದೇ ದೈಹಿಕ, ಮಾನಸಿಕ ನೋವಿದ್ದರೆ ಪರಿಹಾರವಾಗುವುದು. ದಿನಪೂರ್ತಿ ಮನೆಯಲ್ಲಿ, ಆಫೀಸಿನಲ್ಲಿ ಇತರ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳಬಹುದು. ನಿಯಮಿತವಾಗಿ ಯೋಗ ಮಾಡುವುದರಿಂದ ದೇಹದಲ್ಲಿ ಜೀರ್ಣಕ್ರಿಯೆ ಸಮರ್ಪಕವಾಗಿ ಆಗುತ್ತದೆ. ಮಧುಮೇಹ ನಿಯಂತ್ರಣದಲ್ಲಿಡಲು ಯೋಗಾಭ್ಯಾಸದಿಂದ ಸಾಧ್ಯವಾಗುತ್ತದೆ. ಅಲ್ಲದೆ, ಬೆಳ್ಳಂಬೆಳಗ್ಗೆ ಎದ್ದು ಯೋಗ ಮಾಡುವುದರಿಂದ ಪಾಸಿಟಿವ್ ಎನರ್ಜಿ ದೊರೆಯುತ್ತದೆ. ದಿನಪೂರ್ತಿ ಉಲ್ಲಾಸದಿಂದ ಇತರ ಕೆಲಸದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಅದರಲ್ಲೂ ಬೆಳಿಗ್ಗೆ 5ರಿಂದ 7 ಮತ್ತು ಸಂಜೆ 5ರಿಂದ 7 ಅಭ್ಯಾಸಕ್ಕೆ ಸೂಕ್ತ. ಧ್ಯಾನ ಅಭ್ಯಾಸಕ್ಕೆ ಪ್ರಾತಃಕಾಲ ಅತ್ಯಂತ ಸೂಕ್ತವಾದುದು.

 

ಸಂಜೆ ಯೋಗದ ಪ್ರಯೋಜನಗಳು

yoga benefits in eveningImage Credits : Scroll.in

ಸಂಜೆ ಹೊತ್ತು ಎಲ್ಲರೂ ಸಾಮಾನ್ಯವಾಗಿ ದಿನನಿತ್ಯದ ಕೆಲಸ ಮುಗಿಸಿ ಮನೆಗೆ ಮರಳಿರುವುದರಿಂದ ಶಾಂತಿಯಿಂದ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬಹುದು. ಮನೆ ಕೆಲಸ, ಆಫೀಸಿಗೆ ಹೋಗಲಿಕ್ಕಿದೆ ಅನ್ನೋ ಧಾವಂತವಿಲ್ಲದೆ ಸಮಾಧಾನದಿಂದ ಯೋಗ ಮಾಡಬಹುದು. ಬೆಳಗ್ಗೆಯಿಂದಿದ್ದ ಸುಸ್ತು ಯೋಗ ಮಾಡುವುದರಿಂದ ಇಲ್ಲವಾಗುವುದು. ದಿನದ ಜಂಜಾಟದಲ್ಲಿದ್ದ ಮಾನಸಿಕ ಒತ್ತಡಗಳು ಕಳೆದುಹೋಗಿ ನೆಮ್ಮದಿ ದೊರಕುತ್ತದೆ. ಜತೆಗೆ ಸಂಜೆ ಯೋಗ ಮಾಡುವುದಿರಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ. ಯೋಗದಿಂದ ಮಾನಸಿಕ ಕಿರಿಕಿರಿ ಎಲ್ಲಾ ಕಳೆದು ಹೋಗಿರುವುದರಿಂದ ಮನಸ್ಸು ರಿಲ್ಯಾಕ್ಸ್ ಆಗಿರುತ್ತದೆ. ಇದರಿಂದ ಹಾಯಾಗಿ ನಿದ್ದೆ ಬರುತ್ತದೆ.

ಯೋಗಾಭ್ಯಾಸಕ್ಕೆ ಬೆಳಗ್ಗೆ ಒಳ್ಳೆಯದು, ಸಂಜೆ ಒಳ್ಳೆಯದಲ್ಲ ಎಂದೇನಿಲ್ಲ. ಮನಸ್ಸು ಶಾಂತವಾಗಿದ್ದ ಯಾವ ಸಮಯದಲ್ಲೂ ಯೋಗಾಭ್ಯಾಸ ಮಾಡಬಹುದು. ಯಾವ ಹೊತ್ತಿನಲ್ಲಿ ಯೋಗ ಮಾಡಿದರೂ ಅದರ ಪ್ರಯೋಜನಗಳು ಲಭಿಸುತ್ತದೆ

 

ಯೋಗ ಮಾಡುವಾಗ ಗಮನಿಸಬೇಕಾದ ವಿಚಾರಗಳು

yoga benefitsImage Credits : gaiam

ಯಾವಾಗ ಯೋಗ ಮಾಡುತ್ತೀರಿ ಅನ್ನೋದಕ್ಕಿಂತ ಯಾವ ಮನಸ್ಥಿತಿಯಲ್ಲಿ ಯೋಗ ಮಾಡುತ್ತಿದ್ದೀರಿ ಅನ್ನೋದು ಮುಖ್ಯವಾಗುತ್ತದೆ. ಹೀಗಾಗಿ ಯೋಗ ಮಾಡಲು ಮುಂದಾಗುವ ಮುನ್ನ ಮನಸ್ಸನ್ನು ಶಾಂತವಾಗಿರಿಸಿ. ಮನಸ್ಸಲ್ಲಿ ಯಾವುದಾದರೂ ಗೊಂದಲವಿದ್ದಾಗ ದಿಢೀರ್ ಆಗಿ ಯೋಗ ಮಾಡಲು ಹೋಗಬೇಡಿ. ಇದರಿಂದ ಯೋಗ ಮಾಡಿದರೂ ಯಾವ ಪ್ರಯೋಜನ ಸಿಗುವುದಿಲ್ಲ. ಅಷ್ಟೇ ಅಲ್ಲದೆ, ಸದ್ದು-ಗದ್ದಲಗಳಿಲ್ಲದ ಸ್ಥಳದಲ್ಲಿ ಕುಳಿತು ಯೋಗ ಮಾಡಬೇಕು. ಹೆಚ್ಚು ಟಿವಿ ವಾಲ್ಯೂಮ್‍, ಇತರ ಸದ್ದುಗಳು ಕೇಳಿಸುವ ಮಧ್ಯೆ ಕುಳಿತು ಯೋಗ ಮಾಡಲು ಯತ್ನಿಸಬೇಡಿ.

ನಿತ್ಯಕರ್ಮಗಳನ್ನು ಮುಗಿಸಿಯೇ ಅಭ್ಯಾಸಕ್ಕೆ ತೊಡಗಬೇಕು. ದೇಹದೊಳಗೆ ಮಲ, ಮೂತ್ರ ಇರಿಸಿಕೊಂಡು ಎಂದೂ ಅಭ್ಯಾಸ‌ಕ್ಕಿಳಿಯಬಾರದು. ಇದನ್ನು ಪಾಲಿಸದಿದ್ದರೆ ತ್ಯಾಜ್ಯದಿಂದ ವಿಷಾಣು ಉತ್ಪತ್ತಿಯಾಗಿ ಇರುವ ಆರೋಗ್ಯವನ್ನೂ ಕೆಡಿಸುತ್ತದೆ. ಅಭ್ಯಾಸ ಆರಂಭಿಸುವ 10 ನಿಮಿಷ ಮೊದಲು ಒಂದೆರೆಡು ಲೋಟ ನೀರು ಸೇವಿಸುವುದು ಒಳ್ಳೆಯದು. ಶುದ್ಧ ಗಾಳಿ, ಸ್ಪಷ್ಟ ಬೆಳಕು ಇರುವ ಸ್ಥಳ ಆಯ್ಕೆ ಮಾಡಿಕೊಳ್ಳಿ. ಅತಿಯಾದ ಮತ್ತು ಶೀತ ಗಾಳಿ ಬೀಸುವ, ಪ್ರಖರ ಬಿಸಿಲಿನಿಂದ ಕೂಡಿದ ಸ್ಥಳ ಬೇಡ. ಸಡಿಲವಾದ ಉಡುಪು ಇರಲಿ. ಅತಿ ಬಿಗಿಯಾದ, ಕಿರಿಕಿರಿ ಉಂಟು ಮಾಡುವ ಮತ್ತು ದಪ್ಪನೆಯ ಉಡುಪು ಒಳ್ಳೆಯದಲ್ಲ.

ಬೆಳಗ್ಗೆ ಲಘು ಉಪಹಾರ ಸೇವಿಸಿದ್ದರೆ ಕನಿಷ್ಠ ಒಂದು ತಾಸು, ಮಧ್ಯಾಹ್ನ ಊಟ ಮಾಡಿದ ನಂತರ ಕನಿಷ್ಠ ಮೂರು ತಾಸು ಅಂತರವಿರುವಂತೆ ನೋಡಿಕೊಳ್ಳಿ. ಖಾಲಿ ಹೊಟ್ಟೆಯಲ್ಲಿ ಯೋಗ ಅಭ್ಯಾಸ ಮಾಡುವುದು ಒಳ್ಳೆಯದು. ಅಭ್ಯಾಸ ಮುಗಿದ ತಕ್ಷಣ ಆಹಾರ ಸೇವಿಸಬೇಡಿ, 35ರಿಂದ 45ನಿಮಿಷ ಅಂತರವಿರಲಿ. ಅಭ್ಯಾಸ ಮುಗಿದ ತಕ್ಷಣ ಸ್ನಾನ ಬೇಡ. 35ರಿಂದ 45 ಮಿಷದ ಅಂತರವಿರಲಿ. ಯಾಕೆಂದರೆ ಯೋಗದಿಂದ ಬಿಸಿಯಾದ ದೇಹದ ಉಷ್ಣ ಸಾಮಾನ್ಯ ಸ್ಥಿತಿಗೆ ಬರಬೇಕು. ಈ ರೀತಿ ಸಮರ್ಪಕವಾಗಿ ನಿಯಮಗಳನ್ನು ಪಾಲಿಸಿ ಯೋಗ ಮಾಡಿದರಷ್ಟೇ ಅದರಿಂದ ಪ್ರಯೋಜನ ಸಿಗಲು ಸಾಧ್ಯ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author