ಜ್ವರದಲ್ಲಿ ನಮ್ಮ ಆಹಾರ ಹೇಗಿರಬೇಕು?

ಜ್ವರದಲ್ಲಿ ನಮ್ಮ ಆಹಾರ ಹೇಗಿರಬೇಕು?

ಜ್ವರದ ಆರಂಭಿಕ ಸೂಚನೆಗಳು ದೊರೆತಕೂಡಲೇ ಜೀರ್ಣಕ್ಕೆ ಅತ್ಯಂತ ಹಗುರವಿರುವಂತಹ ಆಹಾರದ ಸೇವನೆಯನ್ನು ಹಸಿವೆಯು ವ್ಯಕ್ತವಾದಲ್ಲಿ ಮಾತ್ರ ಸೇವಿಸಬೇಕು

ಕುಡಿಯಲು ಕುದಿಸಿದ ನೀರು, ಸಾಧ್ಯವಾದಲ್ಲಿ ಬಿಸಿಬಿಸಿಯಾಗಿ ನೀರನ್ನು ಕುಡಿಯಿರಿ ಅಥವಾ ಔಷಧ ಸಿದ್ಧ ನೀರನ್ನು ಕುಡಿಯಿರಿ.

 ಪ್ರಾಣಿಜನ್ಯ ವಸ್ತುಗಳಾದ ಮೊಟ್ಟೆ ಮಾಂಸ ಮೀನು ಹಾಲು ಮೊಸರು ಬೆಣ್ಣೆ ತುಪ್ಪ ಪನ್ನೀರ್ ಚೀಸ್ನಂತಹ ವಸ್ತುಗಳನ್ನು ಜ್ವರವು ವಾಸಿಯಾಗುವ ತನಕ ಬಳಸಬೇಡಿ.

ಅಡುಗೆಯಲ್ಲಿ ಎಣ್ಣೆ ಮತ್ತು ತುಪ್ಪದ ಉಪಯೋಗ ಬೇಡ.

ಜೀರ್ಣಕ್ಕೆ ಬಹಳ ಸಮಯ ಹಿಡಿಯುವ ಮೈದಾ, ಬ್ರೆಡ್ , ಉದ್ದಿನಿಂದ ಮಾಡಿದ ಆಹಾರವಸ್ತುಗಳು ಬೇಡ.

ಹಣ್ಣುಗಳು, ಹಣ್ಣಿನ ರಸ, ಎಳೆನೀರು ಮುಂತಾದುವುಗಳ ಸೇವನೆಯನ್ನು ಜ್ವರ ವಾಸಿಯಾಗುವವರೆಗೆ ನಿಲ್ಲಿಸಿ.

ಬೇಯಿಸಿದ ಆಹಾರವನ್ನು ಮಾತ್ರ ಸೇವಿಸಿ.

ಹುಳಿ ರಸ ಪ್ರಧಾನವಾದ ಆಹಾರದ ಸೇವನೆ ಬೇಡ.

ಒಣ ಹಣ್ಣುಗಳ ಬಳಕೆ ಬೇಡ 

ತಿನ್ನಲು ಆಗತಾನೆ ತಯಾರಿಸಿದ ಬಿಸಿ ಆಹಾರವನ್ನು ಬಳಸಿ.

ಮೊದಲೇ ಸಿದ್ಧಪಡಿಸಿದ ಆಹಾರಗಳು, ಉಪ್ಪಿನಕಾಯಿಯಂತಹ ವಸ್ತುಗಳ ಸೇವನೆ ಬೇಡ.

ಆಹಾರಕ್ಕೆ ಹಳೆಯ ಕೆಂಪಕ್ಕಿ, ಷಷ್ಠಿಕ ಅಕ್ಕಿ ಉತ್ತಮ.

ಜೀರ್ಣ ಶಕ್ತಿಯು ಅತಿ ಕಮ್ಮಿಯಿದ್ದಲ್ಲಿ ಬತ್ತದ ಅರಳಿನಿಂದ ತಯಾರಿಸಿದ ಗಂಜಿಯ ಸೇವನೆ ಹಿತಕಾರಿ.

ಔಷಧಯುಕ್ತ ಗಂಜಿ ಅಥವಾ ಆಹಾರವು ಜ್ವರವನ್ನು ಶೀಘ್ರವಾಗಿ ನಿವಾರಿಸುತ್ತವೆ.

ದೋಷಗಳ ಪಚನಕ್ಕೆ ಅನುಕೂಲವಾಗುವಂತೆ ಜೀರ್ಣಿಸಿಕೊಳ್ಳಲು ಭಾರವಾದ, ಉಷ್ಣ ವೀರ್ಯವಿರುವ ಆಹಾರ, ಜಿಡ್ಡಿನಿಂದ ಕೂಡಿದ, ಸಿಹಿ ಮತ್ತು ಕಷಾಯ ರುಚಿಯನ್ನು ಹೊಂದಿರುವ ಆಹಾರ ಪದಾರ್ಥಗಳು ನವ ಜ್ವರದಿಂದ (ಜ್ವರದ ಮೊದಲ ಹಂತದಲ್ಲಿ ) ಬಳಲುತ್ತಿರುವ ರೋಗಿಗಳಿಗೆ ನೀಡಬಾರದು.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author