ಗಾಂಧಿಯತ್ತ ಗುಂಡು ಹಾರಿಸುವಾಗ ಗೋಡ್ಸೆ ಮನಸ್ಸಿನಲ್ಲಿ ಏನಿತ್ತು?!

ಅವತ್ತು ಸಂಜೆಯ ಪ್ರಾರ್ಥನೆಯ ಸಮಯದಲ್ಲಿ ಗೋಡ್ಸೆ ಎನ್ನುವ ಅನಾಮಿಕ, ಆಗಂತುಕ ವ್ಯಕ್ತಿ ಗಾಂಧಿ ಅವರ ಎದುರು ಧೀಡಿರನೆ ಪ್ರತ್ಯಕ್ಷವಾಗಿ ತನ್ನ ಬಳಿ ಇರುವ ಪಿಸ್ತೂಲಿನಿಂದ ಹತ್ಯೆಗೈಯಲಿದ್ದಾನೆ ಎನ್ನುವ ಸುಳಿವು ಯಾರಿಗೂ ಸಿಗಲಿಲ್ಲ. ಇಂದು ಯಾವುದೇ ಒಬ್ಬ ನಾಯಕನ ವಿರುದ್ಧ ಅವರ ಹತ್ಯೆಗೆ ಸಂಚು ರೂಪಿಸಿದರೆ ತಕ್ಷಣ ಅವರಿಗೆ ಅಪಾಯದ ಮುನ್ಸೂಚನೆ ನೀಡುವ ಎಜೆನ್ಸಿಗಳಿವೆ. ಪೊಲೀಸ್ ವ್ಯವಸ್ಥೆಯಿದೆ. ಗುಪ್ತಚರ ಇಲಾಖೆ ಇದೆ. ಆದರೆ ಅವತ್ತು ಯಾರೆಂದರೆ ಯಾರಿಗೂ ಕೂಡ ಗಾಂಧಿ ಹತ್ಯೆಗೆ ಒಂದು ಪ್ಲಾನ್ ರೆಡಿ ಆಗುತ್ತಿತ್ತೆಂದೂ, ನಾಥುರಾಮ್ ವಿನಾಯಕ್ ಗೋಡ್ಸೆ ಮತ್ತು ಅವರ ಸಹೋದರ ಗೋಪಾಲ್ ಗೋಡ್ಸೆ ಅವರೊಂದಿಗೆ ಗಾಂಧಿ ಹತ್ಯೆಗೆ ಸಂಚು ರೂಪಿಸಲಾಗಿದೆ ಯಾರಿಗಾದರೂ ಮುಂಚಿತವಾಗಿ ತಿಳಿಯುವುದಿರಲಿ ಅದನ್ನು ಕನಸು ಮನಸಿನಲ್ಲಿ ಯಾರೂ ಊಹಿಸಿರಲೂ ಇಲ್ಲ.

ಅಷ್ಟಕ್ಕೂ ಭಾರತಕ್ಕೆ ಆಗ ಸ್ವಾತಂತ್ರ್ಯ ಸಿಕ್ಕಿ ದೇಶಕ್ಕೆ ದೇಶವೇ ಒಂದು ನಿಟ್ಟುಸಿರು ಬಿಟ್ಟಿತ್ತು. ಬ್ರಿಟಿಷರ ದಾಸ್ಯದಿಂದ ದೇಶಕ್ಕೆ ಮುಕ್ತಿ ನೀಡಿದ್ದರ ಬಗ್ಗೆ ಮಹಾತ್ಮಾ ಗಾಂಧೀಜಿ ಅವರಿಗೆ ದೇಶಕ್ಕೆ ದೇಶವೇ ಕೃತಜ್ಞತೆ ಸಲ್ಲಿಸುತ್ತಿತು. ಇಂತಹ ಸಂದರ್ಭದಲ್ಲಿ ಗಾಂಧಿಯನ್ನು ಪ್ರತಿಯೊಬ್ಬರು ದೇಶದ ಹೆಮ್ಮೆ ಎಂದು ನೋಡುವ ಸನ್ನಿವೇಶದಲ್ಲಿ ಒಂದು ಗುಂಪು ಮಾತ್ರ ಗಾಂಧಿ ಅಂದರೆ ಕೆಂಡ ಕಾರುತಿತ್ತು. ಆ ಗುಂಪಿಗೆ ಗಾಂಧೀಯ ಹೆಸರು ಕೇಳಿದರೆ ಮೈ ಎಲ್ಲಾ ಉರಿಯುತ್ತಿತ್ತು. ಆ ಗುಂಪಿನ ನಾಯಕನೇ ಗೋಡ್ಸೆ!

ಅಖಂಡ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದು ಎನ್ನುವ ಕಲ್ಪನೆಯಲ್ಲಿ ಖುಷ್ ಖುಷಿಯಾಗಿದ್ದ ಕೆಲವರಿಗೆ ದೇಶದ ವಿಭಜನೆ ಅನ್ನುವುದು ದೊಡ್ಡ ಅಘಾತವನ್ನೇ ನೀಡಿತ್ತು. ಇದೊಂದು ಮನಸ್ಸು ಮಾಡಿದರೆ ಕೃಷ್ಣ ಮಹಾಭಾರತ ಯುದ್ಧವನ್ನು ತಡೆಯಬಹುದಿತ್ತು. ಆದರೆ ಕೃಷ್ಣ ತಡೆಯಲಿಲ್ಲ. ಆದ್ದರಿಂದ ಮಹಾಭಾರತ ಯುದ್ಧದ ಹದಿನೆಂಟು ದಿನಗಳಲ್ಲಿ ರಕ್ತದ ಕೋಡಿ ಹರಿಯಿತು ಎನ್ನುವ ವಾದಾದಂತೆ. ಮಹಾತ್ಮಾ ಎನಿಸಿಕೊಂಡ ಗಾಂಧೀಜಿ ಕೊಂಚ ಎಚ್ಚರಿಕೆ ವಹಿಸಿದ್ದರೆ ದೇಶ ಎರಡು ಭಾಗ ಆಗುತ್ತಿರಲಿಲ್ಲ. ಗಾಂಧಿ ಅವರು ದೇಶ ಇಬ್ಬಾಗ ಆಗುವುದನ್ನು ತಡೆಯಬೇಕಿತ್ತು.

ಅವರಿಗೆ ಆಸಾಮರ್ಥ್ಯ ಇತ್ತು ಎನ್ನುವುದು ಗೋಡ್ಸೆ ಮತ್ತು ಅವರ ಸಂಗಡಿಗರ ವಾದವಾಗಿತ್ತು. ದೇಶ ವಿಭಜನೆಯಿಂದ ಎಂಥಹ ಅಘಾತ ಆಯಿತೆoದರೆ ಅದಕ್ಕೆ ಕಾರಣ ಮಹಾತ್ಮಾ ಗಾಂಧೀಜಿ ಅವರೆಂದು, ಗಾಂಧೀಜಿ ಮಾಡಿದ ತಪ್ಪಿಗೆ ಅವರನ್ನು ಕೊಂದು ಮುಗಿಸುವುದೇ ಸೂಕ್ತವೆಂದು ಗೋಡ್ಸೆ ತೀರ್ಮಾನಿಸಿದರು. ಪರಿಣಾಮ ಅದಕ್ಕಾಗಿ ತನ್ನ ಜೊತೆಗೆ ಇರುವವರೊಡನೆ ಒಂದು ಪ್ಲಾನ್ ರೂಪಿಸಿದರು.

ಗಾಂಧಿಯ ಎದುರು ನಿಂತು ಗುಂಡು ಹಾರಿಸಿದ ಆ ಕ್ಷಣಕ್ಕೆ ಗೋಡ್ಸೆ ಕಿರುಚಲಿಲ್ಲ. ಓಡಿ ಹೋಗಲಿಲ್ಲ. ತಪ್ಪಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಅಸಲು ಅವರು ಯಾವುದೇ ಆವೇಶಕ್ಕೆ ಒಳಗಾಗಲಿಲ್ಲ. ರೋಷ ವ್ಯಕ್ತಪಡಿಸಲಿಲ್ಲ. ಅಲ್ಲಿಯೇ ನಿಂತುಕೊಂಡಿದ್ದರು. ಅದೂ ಮೌನವಾಗಿ. ನೆಲದ ಮೇಲೆ ಬಿದ್ದುಕೊಂಡಿರುವ ಗಾಂಧೀಜಿಯ ದೇಹ ಅವರನ್ನು ನೂರು ಪ್ರಶ್ನೆ ಕೇಳುವಂತಿತ್ತು. ಆದರೆ ಯಾವುದಕ್ಕೂ ಅಲ್ಲಿ ಇದ್ದವರ ಬಳಿ ಉತ್ತರ ಇರಲಿಲ್ಲ. ಗಾಂಧೀಜಿ ಹತ್ಯೆ ಮಾಡಿದ್ದ ಗೋಡ್ಸೆ ಅವರು ಅಷ್ಟು ಜನರ ಮುಂದೆ ಮೌನವಾಗಿ ನಿಂತಿದ್ದರು!

ಗೋಡ್ಸೆ ಅವರಿಗೆ ತಾನೇನು ಅಪರಾಧ ಮಾಡಿದ್ದೇನೆ ಎಂದು ತಿಳಿದಿತ್ತು. ಹಾಗಾಗಿ ಜನರ ನಡುವೆ ಒಬ್ಬ ಅಪರಾಧಿಯಂತೆ ಅವರು ನಿಂತಿದ್ದರು. ಗೋಡ್ಸೆ ಅವರಿಗೆ ಇದ್ದ ಒಂದೇ ಉದ್ದೇಶ ಅಂದರೆ ಗಾಂಧೀಜಿಯನ್ನು ಹತ್ಯೆ ಮಾಡುವುದು. ಅವರ ಗುರಿ ತಲುಪಿದ ಕೂಡಲೇ ಅವರು ಮೌನಕ್ಕೆ ಶರಣಾದರು. ಗಾಂಧೀಜಿ ಅವರನ್ನು ತಾನು ಏಕೆ ಹತ್ಯೆ ಮಾಡಿದೆ ಎನ್ನುವುದಕ್ಕೆ ಗೋಡ್ಸೆ ಬಳಿ ನೂರು ಕಾರಣಗಳಿದ್ದವು!!

ಆಶ್ಚರ್ಯದ ಸಂಗತಿ ಅಂದರೆ ಗೋಡ್ಸೆ ಅವರು ಪಲಾಯನ ಮಾಡಲಿಲ್ಲ. ಅಲ್ಲಿದ್ದ ಜನರು ಒಟ್ಟಾಗಿ ಗೋಡ್ಸೆಯ ವಿರುದ್ಧ ತಿರುಗಿ ಬಿದ್ದು ಬಡಿಯಲಿಲ್ಲ. ಎಲ್ಲರೂ ಅಘಾತಕ್ಕೆ ಒಳಗಾಗಿದ್ದರು. ನಂತರ ಅವರನ್ನು ಬಂಧಿಸಲಾಯಿತು. ಅವರು ವಿಚಾರಣೆಯಲ್ಲಿ ಗಾಂಧೀಜಿ ಅವರನ್ನು ಹತ್ಯೆ ಮಾಡಲು ಯಾವ ರೀತಿ ಸಿದ್ಧತೆ ನಡೆಸಲಾಗಿತ್ತು ಎನ್ನುವುದನ್ನು ವಿವರಿಸಿದರು. ತಾನು ಮಾಡಿದ್ದು ಸರಿ ಗಾಂಧಿ ಈ ದೇಶದ ಅಖಂಡತೆಗೆ ಅನ್ಯಾಯ ಮಾಡಿದರು ಎಂದು ಅವರು ಹೇಳಲಿಲ್ಲ. ಗಾಂಧೀಜಿ ಅವರನ್ನು ಕೊಲ್ಲುವ ವೇಳೆ ಗೋಡ್ಸೆ ತಾಳ್ಮೆಯಿಂದ ಸಾವಧಾನದಿಂದ ಇದ್ದರು ಎನ್ನುವುದೇ ಒಂದು ಆಶ್ಚರ್ಯಕರ ಸಂಗತಿ! ಮತ್ತು ಇತಿಹಾಸದಲ್ಲಿ ಈ ಬಗೆಯ ಹತ್ಯೆಯಲ್ಲಿ ಇದು ಬಲು ತಣ್ಣನೆ ಹತ್ಯೆ ಅತ್ಯಂತ ಆಶ್ಚರ್ಯ ಮತ್ತು ದೇಶವೇ ದಿಗ್ಬ್ರಮೆ ವ್ಯಕ್ತಪಡಿಸಿದ ಹತ್ಯೆಯಾಗಿದೆ!!

 

Featured Image Source: Google 

Enjoyed this article? Stay informed by joining our newsletter!

Comments

You must be logged in to post a comment.

About Author