ಬಿಳಿ ದಾಸವಾಳ ಉಪಯೋಗದ ಬಗ್ಗೆ ತಿಳಿಯಿರಿ

ಮನೆಯ ಮುಂದಿನ ಕೈತೋಟಗಳಲ್ಲಿ ಅಥವಾ ಹೂಕುಂಡಗಳಲ್ಲಿ ಬೆಳೆಸುವಂತಹ ಗಿಡಗಳಲ್ಲಿ ದಾಸವಾಳ ಒಂದು. ಅದರಲ್ಲಿ ಬಿಳಿದಾಸವಾಳ ಅತ್ಯಂತ ಆರೋಗ್ಯಭರಿತ ವಾಗಿರುವುದು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಅದರ ಉಪಯೋಗ ಒಮ್ಮೆ ನೋಡಿ

 

ದೋಸೆ ಹಿಟ್ಟಿಗೆ ಬಿಳಿ ದಾಸವಾಳದ ಹೂವನ್ನು ಹಾಕಿ ದೋಸೆ ಮಾಡಿದರೆ ಹೆಂಗಸರಿಗಾಗುವ ವೈಟ್ ಡಿಸ್ಚಾರ್ಜ್ ಸಮಸ್ಯೆಗೆ ರಾಮಬಾಣ.

ಗಾಯಗಳಾದಾಗ ಅಥವಾ ಮಕ್ಕಳಿಗೆ ತರಚಿದ ಗಾಯಗಳು ಆದಾಗ ಬಿಳಿ ದಾಸವಾಳದ ಹೂವು ನಿಮ್ಮ ತೋಟದಲ್ಲಿ ಇದ್ದರೆ ಹೂವುಗಳನ್ನು ಕೈಯಲ್ಲಿ ಕಿವುಚಿ ಗಾಯಗಳ ಮೇಲೆ ಹಾಗೆ ಹಚ್ಚಿ.. ಗಾಯಗಳು ಬೇಗ ಮಾಗುತ್ತದೆ.

 

ಶೀತ ನೆಗಡಿಯ ಸೂಚನೆಗಳು ಕಂಡಾಗ ಬಿಸಿನೀರಿಗೆ ಈ ಬಿಳಿ ದಾಸವಾಳದ ಹೂವನ್ನು ಹಾಕಿ ಕುದಿಸಿ ಆ ಕಷಾಯವನ್ನು ಕುಡಿಯಿರಿ.. ಬರುವ ಶೀತ ಹಾಗೆ ವಾಪಸ್ ಹೋಗಿ ಬಿಡುತ್ತದೆ.

 

ಗಂಟಲು ಕೆರತ ಕೆಮ್ಮು ಇದ್ದಾಗಲೂ ಕೂಡ ಇದರ ಕಷಾಯ ಅತ್ಯಂತ ಉಪಯುಕ್ತ.

 

ಹೂವುಗಳನ್ನು ಹಾಗೆಯೇ ಕೈಯಲ್ಲಿ ಚೆನ್ನಾಗಿ ಕಿವುಚಿ ರಸ ತೆಗೆದು ಸುಮ್ಮನೆ ಮುಖಕ್ಕೆ ಹಚ್ಚಿಕೊಂಡರು ಸಾಕು ಮುಖ ಬ್ಲೀಚ್ ಮಾಡಿದಂತೆ ಆಗುತ್ತದೆ..

 

ಹೂವುಗಳನ್ನು ಅರೆದು ಮೆಹಂದಿ ಅಪ್ಲೇ ಮಾಡುವವರು ಇದನ್ನು ಸೇರಿಸಿ ಹಾಕಿಕೊಂಡರೆ ಕೂದಲು ಸೋoಪಾಗಿ ಬೆಳೆಯುವುದರ ಜೊತೆಗೆ ಕೂದಲಿಗೆ ಕಂಡೀಷನರ್ ಇದ್ದಂತೆ ಇರುತ್ತದೆ.

 

ಒಂದು ಪುಟ್ಟ ಹೂವು ಎಷ್ಟೆಲ್ಲ ಪರಿಣಾಮಕಾರಿ ಎಂಬುದು ನಮಗೆ ಅದರ ಉಪಯೋಗವಾದಾಗ ಗೊತ್ತಾಗುತ್ತದೆ.

Enjoyed this article? Stay informed by joining our newsletter!

Comments

You must be logged in to post a comment.

About Author