ಸಾವಿರಾರು ವರ್ಷಗಳಾದರೂ ತುಕ್ಕು ಹಿಡಿಯದ ಕಬ್ಬಿಣದ ಕಂಬ..ಕಾರಣವೇನು..?

qutub minar iron pillarFeatured Image Source : Thevintagenews.com

ಪ್ರಪಂಚದಲ್ಲಿ ಅದೆಷ್ಟೋ ರಹಸ್ಯಗಳಿವೆ. ಉತ್ತರವಿಲ್ಲದ್ದು, ತರ್ಕಕ್ಕೆ ನಿಲುಕದ್ದು, ವರುಷ ವರುಷಗಳೂ ಕಳೆದರೂ ಪ್ರಶ್ನೆಯೇ ಆಗಿ ಉಳಿದಿರುವ ವಿಷಯಗಳು. ಪುರಾತನ ಶಾಸ್ತ್ರಜ್ಞರು, ವಿಜ್ಞಾನಿಗಳು ಎಲ್ಲರೂ ಈ ಬಗ್ಗೆ ಅದೆಷ್ಟು ಸಂಶೋಧನೆ ನಡೆಸಿದರೂ ಈ ಕೆಲವು ನಿಗೂಢ ಸ್ಥಳಗಳ ಕುರಿತು, ವಸ್ತುಗಳ ಕುರಿತು ಉತ್ತರ ಮಾತ್ರ ದೊರಕಿಲ್ಲ. ಯಾಕೆ, ಏನು, ಎಲ್ಲಿಂದ ಎಂಬುದು ಬೃಹದಾಕಾರಾವಾಗಿ ಕಾಡುತ್ತಲೇ ಇದೆ. ಇಂಥಹದ್ದೇ ಒಂದು ನಿಗೂಢತೆ ರಾಷ್ಟ್ರ ರಾಜಧಾನಿಯಲ್ಲಿದೆ. ದೆಹಲಿಯಲ್ಲಿರುವ ಐತಿಹಾಸಿಕ ಸ್ಮಾರಕವಾಗಿರುವ ಕಬ್ಬಿಣದ ಕಂಬವೊಂದು ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ

ದೆಹಲಿಯಲ್ಲಿರುವ ಪ್ರಸಿದ್ಧ ಕುತುಬ್ ಮಿನಾರ್ ಇರುವ ಕುತುಬ್ ಕಾಂಪ್ಲೆಕ್ಸ್ ಒಳಗೆ ಐರನ್ ಸ್ತಂಭವಿದೆ. ಬರೋಬ್ಬರಿ 24 ಅಡಿ ಎತ್ತರವಿರುವ ಈ ಕಂಬ ಕುತುಬ್ ಕಾಂಪ್ಲೆಕ್ಸ್‌ನ ಕ್ವಾವಾತುಲ್ ಮಸೀದಿಯ ಮುಂದೆಯಿದೆ. ಸುಮಾರು 1600 ವರ್ಷಗಳ ಹಿಂದಿನಿಂದಲೂ ಈ ಕಂಬ ಇಲ್ಲಿದೆ ಎಂದು ತಿಳಿದುಬಂದಿದೆ. ಆದರೆ ಅಚ್ಚರಿಯ ವಿಷಯವೇನೆಂದರೆ, ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿದ್ದರೂ ಈ ಕಬ್ಬಿಣದ ಕಂಬ ಇನ್ನೂ ತುಕ್ಕು ಹಿಡಿದಿಲ್ಲ. ಗಾಳಿ, ಬಿಸಿಲು ತಾಗುವಂತೆ ಇಟ್ಟಿದ್ದರೂ ಈ ಕಬ್ಬಿಣದ ಕಂಬ ಇನ್ನೂ ಗಟ್ಟಿಮುಟ್ಟಾಗಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ.

 

ಇದನ್ನು ಓದಿ : ಪ್ರಾಚೀನ ಭಾರತವನ್ನು ಆಳಿದ ಶ್ರೇಷ್ಠ ಆಡಳಿತಗಾರರು ಯಾರೆಲ್ಲಾ..?

ದೆಹಲಿಯ ಕುತುಬ್ ಸಂಕೀರ್ಣದಲ್ಲಿ ವಿಶ್ವದ ಅತ್ಯಂತ ಕುತೂಹಲಕಾರಿ ಲೋಹದ ವಸ್ತುಗಳಲ್ಲಿ ಇದು ಒಂದಾಗಿದೆ. ಕಬ್ಬಿಣದ ಕಂಬ ಪ್ರಾಚೀನ ಭಾರತದ ವೈಜ್ಞಾನಿಕ ಮತ್ತು ಎಂಜಿನಿಯರಿಂಗ್ ಪ್ರಗತಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಪುರಾತತ್ವ ತಜ್ಞರು ಮತ್ತು ವಸ್ತು ವಿಜ್ಞಾನಿಗಳು ಈ ಕಂಬದ ಬಗೆಗಿನ ರಹಸ್ಯವನ್ನು ಬಗೆಹರಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ. ವಿಶ್ವದ ಅತ್ಯಂತ ಹಳೆಯ ರಹಸ್ಯಗಳಲ್ಲಿ ಇದು ಸೇರಿಕೊಂಡಿದೆ. ವರುಷಗಳು ಕಳೆದರೂ ಈ ಕಂಬ ತುಕ್ಕು ಹಿಡಿಯದೇ ಇರಲು ಕಾರಣವೇನು ಎಂಬುವುದನ್ನು ಇದುವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

qutub minar iron pillar historyImage credits : Patrika

ದೆಹಲಿಯ ಕಬ್ಬಿಣದ ಕಂಬವನ್ನು ಫೊರ್ಜ್ ವೆಲ್ಡಿಂಗ್ ಬಳಸಿ ರಚಿಸಲಾಗಿದೆ ಎಂದು ನಂಬಲಾಗಿದೆ. ಕಬ್ಬಿಣದ ಕಂಬವು 6 ಟನ್‌ಗಳಷ್ಟು ಭಾರವಿದ್ದು 98% ಮೆತು ಕಬ್ಬಿಣದಿಂದ ಕೂಡಿದೆ. ಇದು ಈ ಸ್ತಂಭವು ತುಕ್ಕು ಹಿಡಿಯದಿರಲು ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಆದರೆ, ಇದಕ್ಕೆ ಪುಷ್ಟಿ ನೀಡುವಂತೆ ಇದುವರೆಗೂ ಯಾವುದೇ ಪುರಾವೆ ದೊರಕಿಲ್ಲ.

ಕಂಬದ ಸುತ್ತಲೂ ಕೈಯನ್ನು ಸುತ್ತಾಗಿ ಬಳಸುವುದರಿಂದ ಅದೃಷ್ಟ ಲಭಿಸುತ್ತದೆ ಎಂಬ ಮಾತು ಇಲ್ಲಿ ಪ್ರಚಲಿತದಲ್ಲಿತ್ತು. ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ಕೈಗಳಿಂದ ಕಂಬವನ್ನು ಸುತ್ತುವರೆಯಲು ಯತ್ನಿಸುತ್ತಿದ್ದರು. ಪ್ರ ವಾಸಿಗರು ತಮ್ಮ ಕೈಗಳನ್ನು ಕಂಬಕ್ಕೆ ಸುತ್ತು ತರಲು ಪ್ರಯತ್ನಿಸುವ ಜನಪ್ರಿಯ ಅಭ್ಯಾಸವಿತ್ತು. ಇದನ್ನು ಮಾಡುವುದರಿಂದ ಅದು ಮಾಡುವ ವ್ಯಕ್ತಿಗೆ ಅದೃಷ್ಟ ಬರುತ್ತದೆ ಎಂದು ನಂಬಲಾಗಿತ್ತು.

ಇದನ್ನು ಓದಿ : ಕುಮರಿ ಖಂಡಂ..ಹಿಂದೂ ಮಹಾಸಾಗರದಲ್ಲಿ ಮುಳುಗಿ ಹೋದ ಖಂಡ..!

ಅಷ್ಟೇ ಅಲ್ಲದೆ ಕಬ್ಬಿಣದ ಕಂಬವು ನಿಷ್ಕ್ರಿಯ ತುಕ್ಕು ರಕ್ಷಣಾತ್ಮಕ ಪದರವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು ಕಂಬದ ತುಕ್ಕು ಹಿಡಿಯುವುದನ್ನು ತಡೆಯುತ್ತದೆ ಎಂಬ ಅಭಿಪ್ರಾಯವೂ ಕೇಳಿ ಬಂದಿತ್ತು. ಆದರೆ ಸಂದರ್ಶಕರ ನಿರಂತರ ಸ್ಪರ್ಶ ಮತ್ತು ಚಲನೆಗಳಿಂದಾಗಿ ಈ ಪದರವು ಬಣ್ಣ ಕಳೆದುಕೊಳ್ಳುತ್ತಾ ಬಂದಿತ್ತು. ಆದ್ದರಿಂದ, ಸ್ತಂಭದ ಕೆಳಭಾಗಕ್ಕೆ ಮತ್ತಷ್ಟು ಹಾನಿಯಾಗದಂತೆ, 1997ರಲ್ಲಿ ಅದರ ಸುತ್ತಲೂ ಬೇಲಿಯನ್ನು ನಿರ್ಮಿಸಲಾಯಿತು.

why the iron pillar at qutub minar is not rustedImage Credits : SmartHistory

ದೆಹಲಿಯ ಕಬ್ಬಿಣದ ಕಂಬದ ಮೇಲೆ ಬ್ರಾಹ್ಮಿ ಲಿಪಿಯ ಜನಪ್ರಿಯ ಅನುವಾದದ ಪ್ರಕಾರ, ಈ ಸ್ತಂಭವನ್ನು ರಾಜನಿಗಾಗಿ ಇದನ್ನು ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಯಾವ ರಾಜ ಇದನ್ನು ನಿರ್ಮಿಸಿದನು ಎಂಬುದು ಸ್ಪಷ್ಟವಾಗಿಲ್ಲ. ಶಾಸನವು ಸೂಚಿಸುವ ರಾಜ ಚಂದ್ರಗುಪ್ತ ವಿಕ್ರಮಾದಿತ್ಯ ಈ ಕಂಬವನ್ನು ನಿರ್ಮಿಸಿದ ಎಂಬ ಮಾತು ಇಲ್ಲಿ ಜನಜನಿತವಾಗಿದೆ. ಅತ್ಯಂತ ಪ್ರಮುಖ ಹಿಂದೂ ದೇವರುಗಳಲ್ಲಿ ಒಬ್ಬನಾದ ವಿಷ್ಣುವನ್ನು ಗೌರವಿಸಲು ಈ ಕಂಬವನ್ನು ನಿರ್ಮಿಸಲಾಯಿತು ಎಂದು ಹೇಳುತ್ತಾರೆ.

ಇನ್ನೊಂದೆಡೆ ಸಂಶೋಧಕರು ಹೇಳುವ ಪ್ರಕಾರ, ಇದು ಮಧ್ಯಪ್ರದೇಶದ ತನ್ನ ಮೂಲ ಮನೆಯಲ್ಲಿ ರಾಜನೊಬ್ಬ ನಿರ್ಮಿಸಿದ ಕಂಬ ಎನ್ನುತ್ತಾರೆ. ಹಾಗಿದ್ದರೆ ಈ ಕಂಬ ಮಧ್ಯಪ್ರದೇಶದಲ್ಲಿ ಯಾಕಿಲ್ಲ. ಇಲ್ಲಿಗ್ಯಾಕೆ ಬಂತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.  ಒಂದು ಸಾವಿರ ವರ್ಷಗಳ ಹಿಂದೆ ಕಂಬವನ್ನು ಯಾರು ಸ್ಥಳಾಂತರಿಸಿದರು, ಅದನ್ನು ಹೇಗೆ ಸರಿಸಲಾಗಿದೆ ಅಥವಾ ಏಕೆ ಸರಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ಇದನ್ನು ಓದಿ : ಸಪ್ತ ಪಾತಾಳಗಳು ಎಂದರೇನು..? ಅತಳ, ಸುತಳ ಪಾತಾಳಗಳು ಇರುವುದು ಎಲ್ಲಿ..?

ದೆಹಲಿಯ ಕಬ್ಬಿಣದ ಕಂಬವು ಪ್ರವಾಸಿಗರನ್ನು ಮತ್ತು ಸ್ಥಳೀಯರನ್ನು ವರ್ಷಗಳಿಂದಲೂ  ಬೆರಗುಗೊಳಿಸುತ್ತಿದೆ. ಅಂತಹ ಪ್ರಾಚೀನ ಕಲಾತ್ಮಕತೆಯು ತುಕ್ಕು ಮುಕ್ತವಾಗಿ ಉಳಿದಿರುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಲೇ ಇದೆ

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author