ದೇವಸ್ಥಾನ, ಮನೆಯೊಳಗೆ ಚಪ್ಪಲಿ ಧರಿಸಬಾರದು ಯಾಕೆ..?
Featured Image Credits : wordzz
ಕೆಲವೊಂದು ಆಚರಣೆ, ಸಂಪ್ರದಾಯಗಳೇ ಹಾಗೇ. ಯಾವತ್ತು ಆರಂಭವಾಯಿತು, ಯಾಕಾಗಿ ಆರಂಭವಾಯಿತು ಗೊತ್ತಿಲ್ಲ. ಆದರೆ ಅದೆಷ್ಟೋ ವರ್ಷಗಳಿಂದ ಜನರು ಅದನ್ನು ಪಾಲಿಸುತ್ತಲೇ ಬರುತ್ತಿದ್ದಾರೆ. ಸಂಜೆ ಹೊತ್ತು ಮನೆಯಲ್ಲಿ ದೀಪ ಬೆಳಗುವುದು, ರಾತ್ರಿ ಉಗುರು ತೆಗೆಯದೇ ಇರುವುದು, ಸಂಜೆ ಹೊತ್ತಿನ ಮೇಲೆ ಮನೆಯ ಕಸ ಹೊಡೆದರೆ ಕಸವನ್ನು ಹೊರಗೆ ಬಿಸಾಡದೇ ಇರುವುದು. ಹೀಗೆ ಹಲವಾರು ವಿಚಾರಗಳಿವೆ. ಕಾರಣವೇನೆಂದು ತಿಳಿಯದಿದ್ದರೂ ಎಲ್ಲರೂ ಇದನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಅದೇ ರೀತಿ ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ವಿಷಯವೆಂದರೆ, ದೇವಸ್ಥಾನ ಹಾಗೂ ಮನೆಯೊಳಗೆ ಚಪ್ಪಲಿ ಹಾಕಿ ಪ್ರವೇಶಿಸದಿರುವುದು.
ಊರೆಲ್ಲಾ ಚಪ್ಪಲಿ ಹಾಕಿ ಸುತ್ತಾಡಿದರೂ ದೇವಸ್ಥಾನದೊಳಗೆ ಮಾತ್ರ ಚಪ್ಪಲಿಗೆ ಪ್ರವೇಶವಿಲ್ಲ. ಹೆಚ್ಚೇಕೆ ಹಿಂದೂ ಸಂಪ್ರದಾಯದಲ್ಲಿ ಮನೆಯ ಒಳಗೂ ಚಪ್ಪಲಿ ಹಾಕಬಾರದು. ಅದು ಎಷ್ಟು ಸ್ಟೈಲಿಶ್ ಚಪ್ಪಲಿಯಾದರೂ ಸರಿ, ಕಾಸ್ಟ್ಲೀ ಚಪ್ಪಲಿಯಾದರೂ ಸರಿ. ಹೊಸ್ತಿಲನ್ನು ದಾಟಿ ಹೊರಗೆ ಬರುವಂತಿಲ್ಲ. ಯಾವುದೇ ದೇವಾಲಯಕ್ಕೆ ಹೋದರೂ, ಚಪ್ಪಲಿ ಹೊರಗೆ ಬಿಡಬೇಕು. ಅವರು ಎಂಥಹಾ ರಾಜಕಾರಣಿಗಳಾದರೂ, ಸೆಲಬ್ರಿಟಿಗಳಾದರೂ, ವಿಐಪಿಗಳಾದರೂ ಚಪ್ಪಲಿ ಹಾಕಿ ದೇವಸ್ಥಾನದೊಳಗೆ ಪ್ರವೇಶಿಸಲು ಬಿಡುವುದುಇಲ್ಲ.
ನಾವ್ಯಾಕೆ ದೇವಸ್ಥಾನ, ಮನೆಯೊಳಗೆ ಚಪ್ಪಲಿ ಹೊರಗೇ ಬಿಡಬೇಕು? ಅದಕ್ಕಿರುವ ಕಾರಣಗಳೇನು. ಬರೀ ಸ್ವಚ್ಛತೆಯ ದೃಷ್ಟಿಯಿಂದ ಮಾತ್ರ ಚಪ್ಪಲಿಯನ್ನು ಮನೆಯಿಂದ ಹೊರಗಿಡಲಾಗುತ್ತದೆಯೋ, ಬೇರೆ ಯಾವುದಾದರೂ ಕಾರಣಗಳಿದೆಯಾ. ಈ ಮೊದಲಾದ ವಿಚಾರಗಳನ್ನು ತಿಳಿದುಕೊಳ್ಳೋಣ.
ಇದನ್ನು ಓದಿ: ಮನೆಯಿಂದ ಹೊರ ಹೋಗುವಾಗ ಮೊಸರು, ಸಕ್ಕರೆ ತಿನ್ನಿಸುವುದು ಯಾಕೆ..?
Image Credits : Travel Triangle
ಚಪ್ಪಲಿ ಎನ್ನುವುದು ಅಹಂಕಾರದ ಸಂಕೇತ ಎಂದು ಹೇಳಲಾಗುತ್ತದೆ. ದೇವಾಲಯದಲ್ಲಿ ದೇವರ ದರ್ಶನಕ್ಕೆ ಹೋಗುವಾಗ ನಮ್ಮಲ್ಲಿರುವ ಅಹಂಕಾರವನ್ನೆಲ್ಲಾ ಬಿಟ್ಟು, ಕೇವಲ ನಾನೊಬ್ಬ ಸಾಮಾನ್ಯ ಎಂಬ ಭಾವನೆಯಿಂದ ಹೋಗಬೇಕು ಎಂದು ಹಿರಿಯರು ಹೇಳುತ್ತಾರೆ. ಹೀಗಾಗಿಯೇ ಚಪ್ಪಲಿಯನ್ನು ದೇವಾಲಯದ ಹೊರಗೆ ಬಿಟ್ಟು ಹೋಗಬೇಕೆಂದು ಹೇಳುತ್ತಾರೆ. ಮನೆಯೊಳಗೂ ದೇವರ ವಾಸ ಸ್ಥಾನವಿದೆ. ಇದೇ ಕಾರಣಕ್ಕೆ ಮನೆ ಮತ್ತು ದೇವಾಲಯದ ಒಳಗೆ ಹೋಗುವಾಗ ಚಪ್ಪಲಿ ಹೊರಗಡೆ ಇಟ್ಟೇ ಹೋಗಬೇಕು ಎಂದು ನಿಯಮ ಮಾಡುತ್ತಾರೆ.
ಇನ್ನೊಂದು ವಿಚಾರ ಏನೆಂದರೆ, ದೇವಾಲಯ ಎಂದರೆ ಪವಿತ್ರವಾದುದು, ಪರಿಶುದ್ಧಿಯಿಂದ ಕೂಡಿದ್ದು, ಹೀಗಾಗಿ ಕಸ, ಕೊಳಚೆಯನ್ನೆಲ್ಲಾ ತುಳಿದ ಚಪ್ಪಲಿಯನ್ನು ಧರಿಸಿ ದೇವಾಲಯ ಪ್ರವೇಶಿಸಿದರೆ ಅಶುದ್ಧವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ರೀತಿಯ ಸಾಂಪ್ರದಾಯಿಕ ಕಾರಣಗಳಿಂದಾಗಿ ಮನೆಯೊಳಗೆ, ದೇವಾಲಯದೊಳಗೆ ಚಪ್ಪಲಿ ಧರಿಸುವುದಿಲ್ಲ. ಇವಿಷ್ಟೇ ಅಲ್ಲದೆ ಇನ್ನೂ ಕೆಲವು ವೈಜ್ಞಾನಿಕ ಕಾರಣಗಳೂ ಇವೆ. ಆ ಬಗ್ಗೆ ತಿಳಿಯೋಣ.
ಆರೋಗ್ಯವೊಂದು ಸರಿಯಿದ್ದರೆ ಸಾಕಪ್ಪಾ ಎಂದು ಜನರು ಅಂದುಕೊಳ್ಳುತ್ತಿರುವ ಕಾಲ ಇದು. ಅದಕ್ಕಾಗಿ ಆರ್ಯುವೇದ, ಅಲೋಪತಿ ಅಂತ ಎಲ್ಲಾ ರೀತಿಯ ಚಿಕಿತ್ಸೆಯ ಮೊರೆ ಹೋಗುತ್ತಾರೆ. ಆರೋಗ್ಯ ಕಾಪಾಡಿಕೊಳ್ಳುವ ಎಲ್ಲಾ ಮಾರ್ಗಗಳನ್ನೂ ಪ್ರತಿದಿನ ಅನುಸರಿಸುವ ರೂಢಿ ಬಹುತೇಕ ಎಲ್ಲರಲ್ಲೂ ಇರುತ್ತದೆ. ಸ್ವಚ್ಛತೆ, ಪೌಷ್ಠಿಕ ಆಹಾರ, ನಿದ್ರೆ ಮುಂತಾದ ಅಂಶಗಳನ್ನು ಪಾಲಿಸುತ್ತಾರೆ. ಆದರೆ ಇಷ್ಟು ಮಾತ್ರ ಮಾಡಿದರೆ ಸಾಕಾಗುವುದಿಲ್ಲ. ಉತ್ತಮ ಆರೋಗ್ಯಕ್ಕೆ ಮನೆ ಸ್ವಚ್ಛವಾಗಿರಬೇಕಾದುದು ಕೂಡಾ ಮುಖ್ಯ.
ಇದನ್ನು ಓದಿ: ಮಂಗಳಮುಖಿಯರ ಅಂತ್ಯಸಂಸ್ಕಾರ ರಾತ್ರೋರಾತ್ರಿ ಮಾಡುವುದ್ಯಾಕೆ ಗೊತ್ತಾ..?
Image Credits : wordzz
ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾಗಿರುವುದೆಲ್ಲವೂ ನಮ್ಮ ಸಂಸ್ಕೃತಿಯಲ್ಲೇ ಇದೆ. ಇಂತಹುದೇ ಒಂದು ಆಚರಣೆ ಚಪ್ಪಲಿಯನ್ನು ಮನೆಯ ಆಚೆಯೇ ಬಿಡುವುದು. ಮನೆಯೊಳಗೆ ಪ್ರತ್ಯೇಕ ಸ್ಲಿಪರ್ ಹಾಕಿಕೊಳ್ಳುವುದು. ಹೊರಜಗತ್ತಿನಲ್ಲಿ, ಅಂದರೆ ರಸ್ತೆ, ಕಚೇರಿ, ಬಸ್ ಸ್ಟಾಂಡ್ ಮುಂತಾದೆಡೆ ಬಳಸುವ ಚಪ್ಪಲಿಗಳಲ್ಲಿ ಧೂಳು, ಕಸ ಕಡ್ಡಿ, ಕೊಳಚೆಗಳಂತಹ ಕಲ್ಮಶಗಳು ಸೇರಿರುತ್ತವೆ. ಇಂತಹ ಕಲ್ಮಶದಿಂದ ರೋಗಕ್ಕೆ ಕಾರಣವಾಗುವ ಕೀಟಾಣುಗಳು ಮನೆಯೊಳಗೆ ಸೇರಿಕೊಳ್ಳುತ್ತವೆ. ಹೀಗಾಗಿ ಮನೆಯ ಹೊರಗೇ ಚಪ್ಪಲಿಗಳನ್ನು ಇಡುವುದು ಅತ್ಯಂತ ಉತ್ತಮವಾದದ್ದು ಎಂದು ವೈಜ್ಞಾನಿಕವಾಗಿ ಹೇಳಲಾಗಿದೆ.
ಹೊರಗೆ ಬಳಸುವ ಚಪ್ಪಲಿಗಳನ್ನು ಮನೆಯೊಳಗೆ ಧರಿಸುವುದರಿಂದ ಮನೆ ಮಲಿನವಾಗುತ್ತದೆ. ಮನೆಯ ನೆಲ ಗಲೀಜಾಗುತ್ತದೆ. ಚಪ್ಪಲಿಗೆ ತಾಗಿರುವ ಮಣ್ಣು, ನೀರು, ಸಗಣಿಯಂತಹ ವಸ್ತುಗಳಿಂದ ಮನೆ ಅಶುಚಿಗೊಳ್ಳುತ್ತವೆ. ಇದು ಬಹು ಬೇಗನೇ ಅನಾರೋಗ್ಯ ತಂದೊಡ್ಡುತ್ತದೆ. ಹೀಗಾಗಿ ಮನೆಯೊಳಗೆ ಹೊರಗೆ ಬಳಸುವ ಚಪ್ಪಲಿ ಧರಿಸಬಾರದು ಎಂದು ಸಂಶೋಧನೆಗಳು ತಿಳಿಸಿವೆ. ಹಿಂದಿನಿಂದ ಪಾಲಿಸುವ ಸಂಪ್ರದಾಯಕ್ಕೆ ಈ ಸಂಶೋಧನೆ ಇನ್ನಷ್ಟು ಪುಷ್ಟಿ ನೀಡಿದೆ. ಹೀಗಾಗಿ ಮನೆಯ ಹೊರಗೇ ಚಪ್ಪಲಿ ಇರಿಸುವುದನ್ನು ರೂಢಿ ಮಾಡಿಕೊಳ್ಳಿ. ಮನೆ ಪ್ರವೇಶಿಸುವ ಬಾಗಿಲಿನ ಮುಂದೆ ಒಂದು ಮ್ಯಾಟ್ ಹಾಕಿ. ಮ್ಯಾಟ್‍ಗೆ ಕಾಲನ್ನು ಒರೆಸಿಕೊಂಡೇ ಹೊರಗಿನಿಂದ ಬರುವವರು ಮನೆಯನ್ನು ಪ್ರವೇಶಿಸುವಂತೆ ತಿಳಿಸಿ.
ಇದನ್ನು ಓದಿ: ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸಲು ಇವುಗಳನ್ನು ಸೇವಿಸಿ
ಭಾರತೀಯರಲ್ಲಿ ಮಾತ್ರ ಮನೆಯೊಳಗೆ ಚಪ್ಪಲಿ ಹಾಕದಿರುವ ಈ ಅಭ್ಯಾಸ ರೂಢಿಯಲ್ಲಿದೆ. ಭಾರತ ಬಿಟ್ಟು ಉಳಿದ ಹಲವು ದೇಶಗಳಲ್ಲಿಯೂ ಮನೆಯಿಂದ ಹೊರ ಹೋದ ಚಪ್ಪಲಿಯನ್ನು ಮನೆಯ ಒಳಗೂ ಹಾಕುತ್ತಾರೆ. ಇದರಿಂದ ತಿಳಿಯುತ್ತದೆ ನಮ್ಮ ಸಂಸ್ಕೃತಿ ಅದೆಷ್ಟು ಅರ್ಥಪೂರ್ಣವಾದುದು ಎಂದು. ಜನ ಜೀವನದ ಉತ್ತಮ ಆರೋಗ್ಯಕ್ಕೆ ಬೇಕಾಗಿರುವ ಎಲ್ಲಾ ಸಂಪ್ರದಾಯಗಳು, ಆಚರಣೆಯಗಳು ಭಾರತೀಯ ಸಂಸ್ಕೃತಿಯಲ್ಲಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
You must be logged in to post a comment.