ಇದು ಬಲು ಅಪರೂಪದ ಮ್ಯಾಂಗೋ, ಒಂದು ಕೆಜಿ ಮಾವಿನ ಹಣ್ಣಿಗೆ ಬರೋಬ್ಬರಿ 2.7 ಲಕ್ಷ ರೂ..!

ಇದು ಬಲು ಅಪರೂಪದ ಮ್ಯಾಂಗೋ, ಒಂದು ಕೆಜಿ ಮಾವಿನ ಹಣ್ಣಿಗೆ ಬರೋಬ್ಬರಿ 2.7 ಲಕ್ಷ ರೂ..!

ಮಾವು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..ರಸಭರಿತವಾದ ಮಾವಿನಹಣ್ಣು ಸಿಕ್ಕರೆ ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುವವರೇ. ಮಾವಿನಹಣ್ಣುಗಳಲ್ಲೂ ಹಲವು ವಿಧಗಳಿದ್ದು, ಒಂದೊಂದು ರೀತಿಯ ಮಾವಿನಹಣ್ಣು ಸಹ ಪ್ರತ್ಯೇಕ ರುಚಿಯನ್ನು ಹೊಂದಿರುತ್ತದೆ. ಆಲ್ಫೊನ್ಸೋ, ನೀಲಂ ಮಾವು, ಚೌನ್ಸಾ, ಲ್ಯಾಂಗ್ರಾ, ಮುಲ್ಗೋಬಾ, ರಸಪೂರಿ, ಬಂಗನಾಪಲ್ಲಿ೦ ಹೀಗೆ ಹಲವಾರು ವಿಧದ ಮಾವಿನಹಣ್ಣುಗಳಿವೆ. ಕೆಲವೊಂದು ಮಾವಿನ ಹಣ್ಣು ಕಡಿಮೆ ಬೆಲೆಗೆ ದೊರೆತರೆ, ಕೆಲವೊಂದು ಹಣ್ಣುಗಳು ಕಾಸ್ಟ್ಲೀಯಾಗಿರುತ್ತವೆ. ಆದ್ರೆ ಮಾವಿನಹಣ್ಣು ಅದೆಷ್ಟೇ ಕಾಸ್ಟ್ಲೀಯಾದರೂ ಮಾವುಪ್ರಿಯರು ಮಾತ್ರ ಅದನ್ನು ಖರೀದಿಸಿ ಸವಿಯೋದಂತೂ ಬಿಡೋದಿಲ್ಲ.

 

ಒಂದು ಕೆಜಿ ಮಾವಿನಹಣ್ಣಿಗೆ ಬರೋಬ್ಬರಿ 2.7 ಲಕ್ಷ ರೂ.!

Miyazaki mango pic

Featured Image Credits : kannada.krishijagran.com

ಸಾಮಾನ್ಯವಾಗಿ ಮಾವಿಗೆ ಕೆಜಿಗೆ 100 ರೂಪಾಯಿ ಇರುತ್ತದೆ. ಸ್ಪಲ್ಪ ವೆರೈಟಿಯ ಅಪರೂಪದ ತಳಿಯಾದರೆ 200ರಿಂದ 250 ರೂಪಾಯಿಯ ಒಳಗಿರಬಹುದು ಅಷ್ಟೆ. ಆದರೆ ಈ ಮಾವಿನಹಣ್ಣಿನ ಬೆಲೆ ಕೇಳಿದರೆ ನೀವು ಬೆರಗಾಗೋದು ಖಂಡಿತ. ಮಾವಿನ ಹಣ್ಣಿನ ಬೆಲೆ ಹೆಚ್ಚಾದ್ರೆ ಎಷ್ಟು ಹೆಚ್ಚಾಗ್ಬೋದು ಅಂತ ಉಡಾಫೆ ಮಾಡ್ಬೇಡಿ. ಈ ಮಾವಿನ ಹಣ್ಣಿನ ಬೆಲೆ 200-250 ಬಿಡಿ, 500 ಕೂಡಾ ಅಲ್ಲ, ಸಾವಿರವೂ ಅಲ್ಲ. ಈ ಮಾವಿನಹಣ್ಣಿನ ಬೆಲೆ ಭರ್ತಿ 2.7 ಲಕ್ಷ ರೂಪಾಯಿಗಳು

ಅಚ್ಚರಿ ಎನಿಸಿದರೂ ಇದು ನಿಜ. ಜಪಾನ್​ನಲ್ಲಿ ಹೆಚ್ಚಾಗಿ ಕಾಣಸಿಗುವ ಈ ಮಾವಿನಹಣ್ಣಿನ ಹೆಸರು, ಮಿಯಾಜಾಕಿ. ಇದು ವಿಶ್ವದಲ್ಲಿಯೇ ಅತಿ ದುಬಾರಿಯಾಗಿರುವ ಮಾವಿನ ಹಣ್ಣು. ಆಶ್ಚರ್ಯವಾಗುತ್ತಿದ್ರೂ ಇದು ನಂಬಲೇಬೇಕಾದ ಸತ್ಯ. ಹಣ್ಣನ್ನು ಬೆಳೆದ ದಂಪತಿ ಆಭರಣಗಳನ್ನು ರಕ್ಷಿಸಿದಷ್ಟೇ ಜಾಗರೂಕತೆಯಿಂದ ಇದನ್ನು ರಕ್ಷಿಸುತ್ತಿದ್ದಾರೆ.  ವಿಶ್ವದಲ್ಲಿಯೇ ಅತಿ ದುಬಾರಿ ಹಣ್ಣನ್ನು ಬೆಳೆದ ದಂಪತಿ ಯಾರು ಅನ್ನೋ ಕುತೂಹಲ ನಿಮಗಿರಬೇಕಲ್ಲಾ..ಇಲ್ಲಿದೆ ಮಾಹಿತಿ.

ಈ ಹಣ್ಣು ಜಪಾನ್​ನಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಇದರ ಹೆಸರು ಮಿಯಾಜಾಕಿ ಮಾವಿನ ಹಣ್ಣು. ಸಾಮಾನ್ಯವಾಗಿ ಮಾವಿನ ಹಣ್ಣುಗಳು ಹಳದಿ ಬಣ್ಣದಲ್ಲಿದ್ದರೆ ಈ ಅಪರೂಪದ ಮಾವಿನ ಹಣ್ಣು ಕಡುಗೆಂಪು ಬಣ್ಣದಲ್ಲಿದೆ. ಈ ಜಪಾನೀಸ್​ಮಾವಿನ ತಳಿಯನ್ನು ಭಾರತದಲ್ಲಿ ಮಧ್ಯಪ್ರದೇಶದ ದಂಪತಿ ಬೆಳೆದಿದ್ದಾರೆ. ಸಂಕಲ್ಪ್‍ ಪರಿವಾರ್ ಮತ್ತು ರಾಣಿ ದಂಪತಿ ಈ ಕಾಸ್ಟ್ರಿಯೆಸ್ಟ್‍ ಹಣ್ಣನ್ನು ಬೆಳೆದು ಮಾರಾಟ ಮಾಡುತ್ತಿದ್ದಾರೆ.

ಈ ಹಣ್ಣು ಮಧ್ಯಪ್ರದೇಶದ ಈ ದಂಪತಿಗೆ ಹೇಗೆ ಸಿಕ್ಕಿತು ಎಂಬುದರ ಹಿಂದೆ ಕುತೂಹಲಕಾರಿ ಕಥೆಯೂ ಇದೆ. ಒಮ್ಮೆ ಮಧ್ಯಪ್ರದೇಶದ ಈ ದಂಪತಿ ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆ ಸಂದರ್ಭದಲ್ಲಿ ಓರ್ವ ವ್ಯಕ್ತಿ ಅವರಿಗಾಗಿ ಒಂದಿಷ್ಟು ಮಾವಿನ ಸಸಿಗಳನ್ನು ನೀಡಿದ್ದರು. ಇದನ್ನು ಮನೆಗೆ ತಂದ ದಂಪತಿ ತಮ್ಮ ತೋಟದಲ್ಲಿ ಸಸಿಯನ್ನು ಚೆನ್ನಾಗಿ ಬೆಳೆಸಿದ್ದಾರೆ. ಸಸಿ ಬೆಳೆದು ಮರವಾಗಿ ಹಣ್ಣುಗಳು ಬಿಡಲು ಆರಂಭವಾದಾಗ ದಂಪತಿ ಬೆರಗಾಗಿದ್ದಾರೆ. ಯಾಕೆಂದರೆ ಸಾಮಾನ್ಯವಾಗಿ ಮಾವಿನ ಹಣ್ಣು ಹಳದಿ ಬಣ್ಣದಲ್ಲಿ ಕಾಣ ಸಿಗುತ್ತದೆ. ಆದರೆ ಈ ಹಣ್ಣು ಕಡುಗೆಂಪು ಬಣ್ಣದಲ್ಲಿ ಕಂಡು ಬಂದಿದೆ. ಈ ಕುರಿತಂತೆ ದಂಪತಿ ಸಂಶೋಧನೆಗೆ ಮುಂದಾಗಿದ್ದಾರೆ. ಇದು ವಿಶ್ವದ ಕಾಸ್ಟ್ಲೀಯೆಸ್ಟ್‍ ಹಣ್ಣು ಎಂದು ತಿಳಿದು ಸಂತಸಪಟ್ಟಿದ್ದಾರೆ.

ಇನ್ನು ಮಾವಿನ ಹಣ್ಣು ಕೆಜಿಗೆ ಭರ್ತಿ 2.7 ಲಕ್ಷ ರೂಪಾಯಿಗಳಿದೆ ಎಂದರೆ ಕಳ್ಳಕಾಕರು ಬಿಡ್ತಾರಾ. ಮಾವಿನ ತೋಟಕ್ಕೆ, ಮಾವಿನ ಹಣ್ಣಿನ ದಾಸ್ತಾನಿಗೆ ಕನ್ನ ಹಾಕಲು ಯತ್ನಿಸ್ತಾರೆ. ಕಳೆದ ವರ್ಷ ಈ ದಂಪತಿಗಳ ತೋಟದಿಂದ ಮಾವಿನ ಹಣ್ಣು ಕಳ್ಳತನವಾಗಿತ್ತು. ಹೀಗಾಗಿ ಈ ಬಾರಿ ದಂಪತಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಮಾವಿನ ಹಣ್ಣಿನ ಕಾವಲಿಗೆ ಸ್ಪೆಷಲ್ ಪ್ಲಾನ್ ಮಾಡಿದ್ದಾರೆ.

 

ಹಣ್ಣಿನ ಕಾವಲಿಗೆ 6 ನಾಯಿ, 4 ಮಂದಿ ಭದ್ರತಾ ಸಿಬ್ಬಂದಿ

miyazaki mango worth 2.7 lakh

 Image Credits : kannada.krishijagran.com

ಜಪಾನೀಸ್​ಮಿಯಾಜಕಿ ಮಾವಿನ ಹಣ್ಣು ವಿಶ್ವದಲ್ಲಿಯೇ ಅತಿ ದುಬಾರಿ ಮಾವಿನ ಹಣ್ಣುಗಳಲ್ಲಿ ಒಂದಾಗಿದೆ. ಅಪರೂಪದಲ್ಲಿ ಅಪರೂಪವಾದ ಈ ಹಣ್ಣು ಕಳೆದ ವರ್ಷ ಪ್ರತಿ ಕೆಜಿಗೆ 2.7 ಲಕ್ಷ ರೂಪಾಯಿ ಇತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇದೆ. ಹೀಗಾಗಿಯೇ ದಂಪತಿ ಈ ಬೆಲೆಬಾಳುವ ಈ ಮಾವಿನ ಹಣ್ಣಿನ ಕಾವಲಿಗೆ  6 ನಾಯಿಗಳನ್ನು ಹಾಗೂ 4 ಜನ ಭದ್ರತಾ ಸಿಬ್ಬಂದಿಯನ್ನು ನೇಮಿಸಿಟ್ಟಿದ್ದಾರೆ. ಕಳೆದ ವರ್ಷ ಕಳ್ಳರು ಇವರ ಮಾವಿನ ತೋಟಕ್ಕೆ ನುಗ್ಗಿ ದುಬಾರಿ ಹಣ್ಣನ್ನು ಕದ್ದುಕೊಂಡು ಹೋಗಿದ್ದರು. ಹೀಗಾಗಿ ಈ ವರ್ಷ ದಂಪತಿ ಈ ವರ್ಷ ಮಾವಿನ ಹಣ್ಣನ್ನು ಕಳ್ಳರಿಂದ ಕಾಪಾಡಿಕೊಳ್ಳಲು ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಕಾಸ್ಟ್ಲೀಯಾಗಿರುವ ಈ ಮಾವಿನಹಣ್ಣು ಹಲವು ವಿಶೇಷತೆಯನ್ನು ಸಹ ಹೊಂದಿದೆ. ಫೋಲಿಕ್​ ಆಮ್ಲ ಮತ್ತು ಉತ್ಕರ್ಷಣ ನಿರೋಧಕ ಅಂಶದಿಂದ ಸಮೃದ್ಧಿಯಾಗಿರುವ ವಿಶೇಷ ಮಾವಿನ ಹಣ್ಣು ಇದಾಗಿದೆ. ಈ ಅಪರೂಪದ ಹಣ್ಣನ್ನು ಜಪಾನಿನಲ್ಲಿ ಮೊದಲು ಬೆಳೆದವರು ಮಿಯಾಜಾಕಿ ನಗರದವರು. ಹೀಗಾಗಿ ಈ ಮಾವಿನ ಹಣ್ಣಿಗೆ ಮಿಯಾಜಾಕಿ ಮ್ಯಾಂಗೋ ಎಂದು ಹೆಸರು ಬಂತು ಎಂದು ತಿಳಿದುಬಂದಿದೆ. ಅದೇನೆ ಇರ್ಲಿ ಈ ಕಾಸ್ಟ್ಲೀಯೆಸ್ಟ್‍ ಮ್ಯಾಂಗೋ ಎಲ್ಲರಲ್ಲಿ ಅಚ್ಚರಿ ಮೂಡಿಸುತ್ತಿರುವುದಂತೂ ನಿಜ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author