ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ

ಎಚ್ಐವಿ ಸೋಂಕಿತರನ್ನು ನಿರ್ಲಕ್ಷ್ಯ ಭಾವನೆಯಿಂದ ಕಾಣದೆ ಅವರಿಗೆ ಆತ್ಮಸ್ಥೈರ್ಯ ತುಂಬಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸುವ ಕೆಲಸವನ್ನು ನಾಗರಿಕ ಸಮಾಜ ಮಾಡಬೇಕಿದೆ ಎಂದು ಪಟ್ಟಣದ ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಕೆಂಪರಾಜು ಹೇಳಿದರು.

ಪಟ್ಟಣದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ವಕೀಲರ ಸಂಘ, ಆರೋಗ್ಯ ಇಲಾಖೆ ಮತ್ತು ಕಾನೂನು ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಏಡ್ಸ್ ಕಾಯಿಲೆ ಮನುಷ್ಯನಲ್ಲಿ ಜೀವನ ಪರ್ಯಂತ ಉಳಿಯುವ ರೋಗವಾಗಿದ್ದು ಕಾಯಿಲೆಯೊಂದಿಗೆ ಆರೋಗ್ಯವಂತರಾಗಿ ಬದುಕುವ ರೀತಿಯನ್ನು ಕಲಿಯಬೇಕಿದೆ, ಕೆಲವು ಕಾಯಿಲೆಗಳು ನಮ್ಮ ನಡವಳಿಕೆ ಮತ್ತು ನಿರ್ಲಕ್ಷದಿಂದಾಗಿ ಬರುವ ಕಾಯಿಲೆಗಳಾಗಿದ್ದು ಗಂಭೀರ ಸ್ವರೂಪದ ಪರಿಣಾಮ ಉಂಟುಮಾಡುತ್ತವೆ ಅಂತಹ ಕಾಯಿಲೆಗಳಲ್ಲಿ ಏಡ್ಸ್ ಸಹ ಪ್ರಮುಖವಾಗಿದೆ, ಸರ್ಕಾರದೊಂದಿಗೆ ಹಲವಾರು ಸಂಘ ಸಂಸ್ಥೆಗಳು ಏಡ್ಸ್ ರೋಗ ನಿಯಂತ್ರಿಸಲು ನಿರಂತರ ಪ್ರಯತ್ನ ಮಾಡುತ್ತಿವೆ ಎಂದರು.
 
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಚರ್ಮರೋಗ ತಜ್ಞ ಡಾ.ಅನಿಲ್ ಕುಮಾರ್ ಮಾತನಾಡಿ ಈ ಬಾರಿಯ ಘೋಷವಾಕ್ಯ ಅಸಮಾನತೆ ಕೊನೆಗಾಣಿಸಿ ಏಡ್ಸ್ ಕೊನೆಗಾಣಿಸುವುದಾಗಿದ್ದು ಅದನ್ನು ಜಾರಿಗೆ ತರಲು ಸಮುದಾಯದ ಸಹಕಾರ ಅಗತ್ಯವಿದೆ, ಏಡ್ಸ್ ಕಾಯಿಲೆ ಸಾಂಕ್ರಾಮಿಕ ರೋಗವಲ್ಲ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಾಗಿದ್ದು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುತ್ತದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ಎಚ್ಐವಿ ಸೋಂಕು ಹರಡದಂತೆ ಆರೋಗ್ಯ ಇಲಾಖೆ ಜಾರಿಗೊಳಿಸಿರುವ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದರಿಂದ ಏಡ್ಸ್ ರೋಗದಿಂದ ದೂರವಿರಬಹುದು, ಹೆಚ್ಚಾಗಿ ಯುವಜನತೆ ಕಾಯಿಲೆಯ ಬಗ್ಗೆ ಅರಿವು ಮೂಡಿಸಿಕೊಂಡು ಜಾಗೃತರಾಗಬೇಕು ಎಂದರು. ಕಿರಿಯ ಶ್ರೇಣಿ ನ್ಯಾಯಾಧೀಶರಾದ ರೋಹಿಣಿ ಡಿ ಬಸಾಪುರ್, ವಕೀಲರ ಸಂಘದ ಅಧ್ಯಕ್ಷ ಬಿ.ಜಿ ಸತೀಶ್  ಮಾತನಾಡಿದರು.
 
ಈ ಸಂದರ್ಭ ಕಾಲೇಜಿನ ಪ್ರಭಾರ ಪ್ರಾಂಶುಪಾಲ ನಾಗರಾಜ್, ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕ ಪ್ರಕಾಶ್, ಲ್ಯಾಬ್ ಟೆಕ್ನಿಷಿಯನ್ ವೀರೇಶ್, ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ ಲತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಆರ್ ಪ್ರಕಾಶ್, ವಕೀಲರ ಸಂಘದ ಕಾರ್ಯದರ್ಶಿ ಬಿ.ಎನ್ ಹರೀಶ್ ಇದ್ದರು.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author