ಜೀರಿಗೆ ಮೆಣಸಿಕಾಯಿಯ ಬಗ್ಗೆ ನಿಮಗೆಷ್ಟು ಗೊತ್ತು..?

 Information about chilli pepper

Featured Image Source : Pepperscale.com

ಆಹಾರದಲ್ಲಿ ಉಪ್ಪು, ಖಾರ, ಸಿಹಿ, ಹುಳಿ ಎಲ್ಲವೂ ಹದವಾಗಿದ್ದರೆ ಚೆಂದ. ಆದರೆ ದಕ್ಷಿಣಭಾರತದಲ್ಲಿ ಆಹಾರದಲ್ಲಿ ಖಾರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಅಡುಗೆಯಲ್ಲೂ ಖಾರವನ್ನು ಹೆಚ್ಚು ಬಳಸುತ್ತಾರೆ. ಖಾರಕ್ಕಾಗಿ ಹೆಚ್ಚಾಗಿ ಲವಂಗ, ಕರಿಮೆಣಸು, ಚಕ್ಕೆ ಮೊದಲಾದ ಮಸಾಲ ಪದಾರ್ಥಗಳನ್ನು ಬಳಸುತ್ತಾರೆ. ಆದರೆ ಖಾರಕ್ಕಾಗಿ ಮುಖ್ಯವಾಗಿ ಬಳಕೆ ಮಾಡುವುದು ಮೆಣಸನ್ನು. ಮೆಣಸಿನಲ್ಲಿ ಹಸಿರು ಮೆಣಸು, ಬ್ಯಾಡಗಿ ಮೆಣಸು, ಗುಂಟೂರು ಮೆಣಸು ಹೀಗೆ ಹಲವು ವಿಧಗಳಿವೆ. ಆದರೆ ನಾವಿಲ್ಲಿ ಹೇಳಲು ಹೊರಟಿರುವುದು ಇದ್ಯಾವ ಮೆಣಸಿನ ಬಗ್ಗೆಯೂ ಅಲ್ಲ. ಇನ್ಯಾವುದು..ಇಲ್ಲಿದೆ ಆಸಕ್ತಿದಾಯಕ ವಿಚಾರಗಳು..

ನಾವಿಲ್ಲಿ ಹೇಳಲು ಹೊರಟಿರುವುದು ಜೀರಿಗೆ ಮೆಣಸಿನಕಾಯಿಯ ಬಗ್ಗೆ. ಹೆಸರು ಕೇಳಿದ್ರೇನೆ ವಿಚಿತ್ರ ಅನ್ಸುತ್ತೆ ಅಲ್ವಾ. ಜೀರಿಗೆ ಅಂದ್ರೆ ಬೇರೆ, ಮೆಣಸಿನಕಾಯಿ ಅಂದ್ರೆ ಬೇರೆ. ಇದ್ಯಾವುದು ಜೀರಿಗೆ ಮೆಣಸಿನಕಾಯಿ ಅಂದ್ಕೊಂಡ್ರಾ. ಇದು ಕರಾವಳಿ ಹಾಗೂ ಮಲೆನಾಡಿನಲ್ಲಿ ಹೆಚ್ಚಾಗಿ ಬೆಳೆಯುವ ಪುಟ್ಟ ಗಾತ್ರದ ಮೆಣಸು. ನೋಡಲು ಪುಟ್ಟದಾಗಿದ್ದರೂ ಸಿಕ್ಕಾಪಟ್ಟೆ ಖಾರ. ಆ ಬಗ್ಗೆ ಹೆಚ್ಚಿನ ವಿಚಾರಗಳನ್ನು ತಿಳಿಸ್ತೀವಿ.

ಇದನ್ನು ಓದಿ : ಇದು ಬಲು ಅಪರೂಪದ ಮ್ಯಾಂಗೋ, ಒಂದು ಕೆಜಿ ಮಾವಿನ ಹಣ್ಣಿಗೆ ಬರೋಬ್ಬರಿ 2.7 ಲಕ್ಷ ರೂ..!

ಜೀರಿಗೆ ಮೆಣಸು, ಸಣ್ಣಮೆಣಸು ,ಗಾಂಧಾರಿ ಮೆಣಸು, ಮಜ್ಜಿಗೆ ಮೆಣಸು ಎಂದೆಲ್ಲಾ ಕರೆಸಿಕೊಳ್ಳುವ ಇದು ಒಂದು ಬೆಳ್ಳುಳ್ಳಿ ಎಸಳಷ್ಟು ಗಾತ್ರ ಹೊಂದಿರುವ ಸಣ್ಣ ಮೆಣಸಿನಕಾಯಿ. ಅಲ್ಲದೆ, ಚೂರು ಮೆಣಸು, ಸೂಜಿ ಮೆಣಸು, ಹೀಗೆ ನಾನಾ ತರದ ಹೆಸರಿನಿಂದ ಕರೆಯಿಸಿಕೊಳ್ಳುವ ಈ ಮೆಣಸು ಪ್ರಸ್ತುತ ಇರುವ ಮೆಣಸಿನ ತಳಿಗಳಲ್ಲೇ ಅತ್ಯಂತ ಖಾರವಾದದ್ದು ಎಂದು ಹೇಳಲಾಗುತ್ತದೆ. ಸದ್ಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಪ್ಪು ಬಂಗಾರ ಎಂದೇ ಹೆಸರು ಪಡೆದಿರುವ ಕಾಳು ಮೆಣಸಿಗೆ ಜೀರಿಗೆ ಮೆಣಸು ಪೈಪೋಟಿ ನೀಡುತ್ತಿದೆ.

ಔಷಧೀಯ ಗುಣಗಳನ್ನು ಹೊಂದಿರುವ ಜೀರಿಗೆ ಮೆಣಸು

chilli pepper from south americaImage Source : Thepeppermillinc.com

ಮೆಣಸು ಅಂದ್ರೆ ಖಾರ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈ ಮೆಣಸು ಖಾರವಾದರೂ ಹಲವರಿಗೆ ಪ್ರಿಯ. ಜೀರಿಗೆ ಮೆಣಸು ಎಂದು ಕರೆಯಲ್ಪಡುವ ಈ ಮೆಣಸನ್ನು ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಜೀರಿಗೆ ಮೆಣಸು ಅನೇಕ ಔಷಧಿಯ ಗುಣಗಳನ್ನು ಸಹ ಒಳಗೊಂಡಿದೆ. ಮಾತ್ರವಲ್ಲ ಆರೋಗ್ಯಕ್ಕೂ ಇದು ಅತ್ಯುತ್ತಮ ಎಂದು ತಿಳಿದುಬಂದಿದೆ. ಗ್ಯಾಸ್ಟ್ರಿಕ್‌ ಸಮಸ್ಯೆ ದೂರ ಮಾಡುವ ಜತೆಗೆ ದೇಹದ ಬೊಜ್ಜನ್ನೂ ಕರಗಿಸುತ್ತದೆ. ಕಷಾಯ, ಮಾಂಸದ ಅಡುಗೆಯಲ್ಲಿ ಹೆಚ್ಚಾಗಿ ಜೀರಿಗೆ ಮೆಣಸು ಬಳಸಲಾಗುತ್ತದೆ.

ಆಯುರ್ವೇದ ಔಷಧಿಗಳಲ್ಲಿ ಕಾಳುಮೆಣಸಿನ ನಂತರ ಜೀರಿಗೆ ಮೆಣಸಿಗೇ ಪ್ರಮುಖ ಸ್ಥಾನವನ್ನು ನೀಡಲಾಗುತ್ತದೆ. ಮಲೆನಾಡಿನ ಬಹುತೇಕ ಮನೆಗಳಲ್ಲಿ ಸಾಮಾನ್ಯವಾಗಿ ಒಂದಾದರೂ ಜೀರಿಗೆ ಮೆಣಸಿನ ಗಿಡ ಇರುತ್ತದೆ. ಸಣ್ಣ ಸಣ್ಣ ಎಲೆಗಳೊಂದಿಗೆ ಉದ್ದವಾಗಿ ಬೆಳೆಯುವ ಗಿಡದಲ್ಲಿ ಕೆಜಿಗಟ್ಟಲೆ ಜೀರಿಗೆ ಮೆಣಸು ಬೆಳೆಯುತ್ತವೆ. ನೇರವಾಗಿ ಜೀರಿಗೆ ಮೆಣಸು ಕಚ್ಚಿದರೆ ವಿಪರೀತ ಖಾರ. ಹೀಗಾಗಿ ಇದನ್ನು ಚಟ್ನಿಗೆ, ಸಾಂಬಾರಿಗೆ, ಸಂಡಿಗೆ ಮಾಡಲು ಬಳಸುತ್ತಾರೆ.

ಇದನ್ನು ಓದಿ : ಆರೋಗ್ಯಕ್ಕೆ ಖರ್ಜೂರದ ಸೇವನೆಯಿಂದ ಸಿಗುವ ಪ್ರಯೋಜನಗಳೇನು

ದೇಹಕ್ಕೆ ತಂಪನ್ನೀಯುವ ಈ ಜೀರಿಗೆ ಮೆಣಸು ಜೀರ್ಣಕ್ರಿಯೆಗೆ, ಗ್ಯಾಸ್ಟ್ರಿಕ್ ಸಮಸ್ಯೆಗೆ, ಹಲ್ಲು ನೋವಿನ ನಿವಾರಣೆಗೆ ಮತ್ತು ಹಲ್ಲುಗಳ ವಸಡುಗಳನ್ನು ಬಲಪಡಿಸಲು ಸಹಾಯಕವಾಗಿದೆ, ಸಂಧಿವಾತ, ಸ್ನಾಯು ಸೆಳೆತ ಸಮಸ್ಯೆ ನಿವಾರಣೆಯಾಗುತ್ತದೆ. ರಕ್ತದೊತ್ತಡವನ್ನು ನಿವಾರಿಕೆ, ರೋಗಾಣುಗಳ ವಿರುದ್ಧ ಹೋರಾಡುತ್ತದೆ. ಕೈಕಾಲುಗಳಲ್ಲಿ  ಊತ, ಗುಳ್ಳೆಗಳು ಗುಣಮುಖವಾಗುವಲ್ಲಿ  ಸಹಕಾರಿ, ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಬೊಜ್ಜು ಬರುವುದನ್ನು ತಡೆಯುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ.

ಜೀರಿಗೆ ಮೆಣಸಿನ ಗಿಡದ ಚಿಗುರೆಲೆಯಿಂದ ತಂಬುಳಿ ಮಾಡಿ ಊಟ ಮಾಡುವುದರಿಂದ ದೇಹದ ಉಷ್ಣತೆ ಹಾಗೂ ಬಾಯಿಹುಣ್ಣು ಗುಣವಾಗುತ್ತದೆ. ಅಡುಗೆ ಹಾಗೂ ಔಷಧಕ್ಕೆ ಮಾತ್ರ ಉಪಯೋಗಿಸುವುದಲ್ಲದೆ ಮನೆಯ ಅಂಗಳದ ಬದಿಯಲ್ಲಿ ಅಲಂಕಾರಿಕವಾಗಿ ಸಹ ಇದನ್ನು ಬೆಳೆಯುತ್ತಾರೆ.

ದಕ್ಷಿಣ ಅಮೇರಿಕಾದಿಂದ ಬಂತು ಜೀರಿಗೆ ಮೆಣಸಿನಕಾಯಿ..!

worlds hottest chilliImage Source : Livescience.com

ಮೂಲತಃ ದಕ್ಷಿಣ ಅಮೆರಿಕಾದ ಈ ಗಿಡವನ್ನು 16 ಶತಮಾನದಲ್ಲಿ ಪೋರ್ಚುಗೀಸರ ಭಾರತಕ್ಕೆ ತಂದರು ಎಂದು ಹೇಳಲಾಗುತ್ತದೆ. ಈ ಛೋಟ್ ಮೆಣಸಿನಕಾಯಿ ಕೇರಳ ಹಾಗೂ ಮಲೆನಾಡ್ ಪ್ರದೇಶದಲ್ಲಿ ತುಂಬಾ ಉಪಯೋಗಿಸಲ್ಪಡುತ್ತದೆ. ಇಂಗ್ಲಿಷ್‌ನಲ್ಲಿ ಇದನ್ನು ಬರ್ಡ್‌ ಐ ಚಿಲ್ಲಿ ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು 'ಕ್ಯಾಪ್ಸಿಕಂ ಚೈನೀಸ್'. ಸಾಮಾನ್ಯವಾಗಿ ಉಪಯೋಗಿಸುವ ಹಸಿ ಮೆಣಸು ಆರೋಗ್ಯಕ್ಕೆ ಹಾನಿಕಾರಕ ಎನ್ನುವ ವೈದ್ಯರೂ ಕೂಡಾ ಜೀರಿಗೆ ಮೆಣಸನ್ನು ತಿನ್ನಿ ಎಂದು ಸಲಹೆ ನೀಡುತ್ತಾರೆ.

ಸಾಮಾನ್ಯವಾಗಿ ಹಳ್ಳಿ ಮನೆಗಳ ಹಿತ್ತಲಲ್ಲಿ, ಮನೆಯ ಸುತ್ತ ಮುತ್ತ ಹಾಗೂ ತೋಟಗಳ ಬದಿಯಲ್ಲಿ ಹಕ್ಕಿಗಳು ತಿಂದು ಬೀಳಿಸಿದ ಬೀಜಗಳಲ್ಲಿ ಹುಟ್ಟಿ ಬೆಳೆದು ಕಾಯಿ ಬಿಡುತ್ತವೆ , ಮಲೆನಾಡಿನ ಕಾಫಿ ತೋಟಗಳಲ್ಲಿ ಬೆಳೆಯುವ ಈ ಮೆಣಸಿನ ಗಿಡಗಳ ತುಂಬ ಸಣ್ಣ ಕಾಯಿ ಬಿಡುತ್ತವೆ.

ಇದನ್ನು ಓದಿ : ಈ ಕೆಲವು ಪದಾರ್ಥಗಳನ್ನು ಫ್ರಿಡ್ಜ್‍ನಲ್ಲಿ ಶೇಖರಿಸಿಟ್ಟು ತಿನ್ನಲೇಬಾರದು..!

ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ

ಹಿತ್ತಲಿನ ಗಿಡವಾಗಿ ಮನೆಯವರಿಗೆ ಮಾತ್ರ ಪರಿಚಿತವಾಗಿದ್ದ ಜೀರಿಗೆ ಮೆಣಸಿಗೆ ಈಗ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ರೀತಿ ಬೇಡಿಕೆ ಪಡೆದುಕೊಳ್ಳಲು ಕಾರಣ ಅದರಲ್ಲಿರುವ ಔಷಧೀಯ ಗುಣ ಎಂದೇ ಹೇಳಲಾಗುತ್ತಿದೆ. ಆಯುರ್ವೇದದಲ್ಲಿ ಜೀರಿಗೆ ಮೆಣಸಿಗೆ ವಿಶೇಷ ಸ್ಥಾನವಿದೆ. ಇತರೆ ಮೆಣಸಿನ ಕಾಯಿಗಳಿಗಿಂತ ಉತ್ತಮ ರುಚಿ ಮತ್ತು ಸುವಾಸನೆ ಹೊಂದಿರುವ ಜೀರಿಗೆ ಮೆಣಸು, ಯಾವುದೇ ಔಷಧೋಚಾರ, ಕೀಟ ನಾಶಕಗಳ ಸಿಂಪರಣೆಯಿಲ್ಲದೆ ನೈಸರ್ಗಿಕವಾಗಿ ಬೆಳೆಯುವುದರಿಂದ ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದೆ. ಮುಂದೊಂದು ದಿನ ಹಿತ್ತಲ ಗಿಡವಾಗಿದ್ದ ಜೀರಿಗೆ ಮೆಣಸು ಪ್ರಮುಖ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

 

Enjoyed this article? Stay informed by joining our newsletter!

Comments

You must be logged in to post a comment.

About Author