ಯಶ್ ಮುಂದಿನ ಚಿತ್ರದ ಪಾತ್ರ ರಿವೀಲ್, ನೇವಿ ಆಫೀಸರ್ ಆಗಿ ಕಾಣಿಸಿಕೊಳ್ಳಲಿರುವ ರಾಕಿಂಗ್ ಸ್ಟಾರ್..?

ಯಶ್ ಮುಂದಿನ ಚಿತ್ರದ ಪಾತ್ರ ರಿವೀಲ್, ನೇವಿ ಆಫೀಸರ್ ಆಗಿ ಕಾಣಿಸಿಕೊಳ್ಳಲಿರುವ ರಾಕಿಂಗ್ ಸ್ಟಾರ್..?

Yash acting as navy officer

ಕೆಜಿಎಫ್..ಈ ಚಿತ್ರ ಕೇವಲ ಕನ್ನಡಿಗರನ್ನು ಮೋಡಿ ಮಾಡಿಲ್ಲ. ದೇಶಾದ್ಯಂತ, ವಿಶ್ವದ ಹಲವು ದೇಶಗಳಲ್ಲಿ ಯಶ್ ಅಭಿನಯದ ಕೆಜಿಎಫ್ ಚಿತ್ರ ಕ್ರೇಜ್ ಹುಟ್ಟುಹಾಕಿದೆ. ಕೆಜಿಎಫ್ ಚಿತ್ರದಿಂದ ರಾಕಿಂಗ್ ಸ್ಟಾರ್ ಯಶ್‍ ಗೆ ಅಸಂಖ್ಯಾತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಾಮರ್ಥ್ಯ ತೋರಿಸಿಕೊಟ್ಟಿದ್ದು ಕೆಜಿಎಫ್ ಸಿನಿಮಾ. ಯಶ್ ಅದ್ಭುತ ನಟನೆಯೊಂದಿಗೆ ನಿರ್ದೇಶಕನ ಕೈ ಚಳಕವೂ ಸೇರಿ ಯಶಸ್ವಿ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಇದೀಗ ಇತಿಹಾಸ. ಚಿತ್ರದಲ್ಲಿ ಯಶ್ ರಗಡ್ ಲುಕ್, ಡೈಲಾಗ್, ಮ್ಯೂಸಿಕ್, ಫೈಟ್ ಸೀನ್ಸ್ ಎಲ್ಲವೂ ಸೂಪರ್ ಹಿಟ್ ಆಗಿತ್ತು. ಬಾಕ್ಸಾಫೀಸ್ ನಿಂದ ಕೋಟಿ ಕೋಟಿ ಗಳಿಸಿದ ಚಿತ್ರತಂಡ ಕೆಜಿಎಫ್-2 ಚಿತ್ರವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿತ್ತು.

 

ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ ಕೆಜಿಎಫ್ ಚಿತ್ರ. ಹೀಗಾಗಿ ಕೆಜಿಎಫ್-2 ಯಾವಾಗ ತೆರೆಗೆ ಬರುತ್ತೆ ಎಂದು ಸಿನಿ ಪ್ರೇಮಿಗಳು, ಯಶ್ ಅಭಿಮಾನಿಗಳು ಒಂದು ವರ್ಷದಿಂದ ಕಾಯುತ್ತಲೇ ಇದ್ದಾರೆ. ಚಿತ್ರ ಬಹಳ ಹಿಂದೆಯೇ ಟೀಸರ್ ಬಿಡುಗಡೆ ಮಾಡಿದ್ದು, ಚಿತ್ರದಲ್ಲಿ ಯಶ್, ಪ್ರಕಾಶ್ ರಾಜ್ ಸಂಜಯ್ ದತ್‍, ರವೀನಾ ಟಂಡನ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಹೀಗಾಗಿಯೇ ಕೆಜಿಎಫ್-2 ಚಿತ್ರದ ಬಗ್ಗೆ ಪ್ರೇಕ್ಷಕರ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಆದರೆ ಕೋವಿಡ್ ಕಾರಣದಿಂದ ಕೆಜಿಎಫ್-2 ಚಿತ್ರ ಬಿಡುಗಡೆ ತಡವಾಗುತ್ತಿದೆ ಎಂದು ಹೇಳಲಾಗುತ್ತಿದೆ.

 

ಕೆಜಿಎಫ್ 2 ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಈಗಾಗಲೆ ಸಲಾರ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ನಟನೆಯ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಹೀಗಿರುವಾಗಲೇ ಯಶ್ ಹೊಸ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಹೌದು, ಕೆಜಿಎಫ್-2 ಅಲ್ಲದೆ, ಯಶ್ ಮುಂದಿನ ಸಿನಿಮಾ ಬಗ್ಗೆ ಅಚ್ಚರಿಯ ಅಪ್ಡೇಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ತೆರೆಕಂಡ ನಂತರದಲ್ಲಿ ಯಶ್ ಹೊಸತೊಂದು ಪ್ರಾಜೆಕ್ಟ್‍ಗೆ ಕೈ ಜೋಡಿಸಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಕೂಡ ದೊಡ್ಡ ಬಜೆಟ್ ನಲ್ಲಿ ಮೂಡಿ ಬರುತ್ತಿದ್ದು, ಈಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ. ಕೆಜಿಎಫ್ ಜುಲೈ ತಿಂಗಳಲ್ಲಿ ತೆರೆಗೆ ಬರುವ ಬಗ್ಗೆ ಚಿತ್ರತಂಡ ಘೋಷಣೆ ಮಾಡಿತ್ತು. ಆದರೆ, ಕೋವಿಡ್ ಕಾರಣದಿಂದ ಇನ್ನೂ ಚಿತ್ರರಂಗ ಓಪನ್ ಆಗಿಲ್ಲ. ಹೀಗಾಗಿ, ಸಿನಿಮಾ ರಿಲೀಸ್ ಸದ್ಯಕ್ಕೆ ಸಾಧ್ಯವಾಗೋದು ಅನುಮಾನವೇ. ಪ್ಯಾನ್ ಇಂಡಿಯಾ ಚಿತ್ರವಾದ್ದರಿಂದ ಸಾಕಷ್ಟು ಸಮಯ ತೆಗೆದುಕೊಂಡು ಚಿತ್ರ ರಿಲೀಸ್ ಮಾಡಬಹುದು. ಹೀಗಾಗಿ ಯಶ್‍ ಬೇರೊಂದು ಸಿನಿಮಾದಲ್ಲಿ ನಟಿಸುವುದು ನಿಜವಾಗಿರಬಹುದು ಎಂದು ಅಭಿಮಾನಿಗಳು ಸಹ ಖುಷಿಪಟ್ಟಿದ್ದಾರೆ.

 

‘ಮಫ್ತಿ’ ನಿರ್ದೇಶಕ ನರ್ತನ್‍ ‘ಯಶ್‍-19’ ಯಶ್..?

yash trending twitter news yash 19

Image credits : Pinkvilla

ಯಶ್ ಅಭಿನಯದ ಮುಂದಿನ ಸಿನಿಮಾ ಬಗ್ಗೆ ಭಾರಿ ಚರ್ಚೆಗಳು ಶುರುವಾಗಿದೆ. ಆ ಚಿತ್ರದ ನಿರ್ಮಾಣ ಯಾರದ್ದು ? ನಿರ್ದೇಶಕರು ಯಾರು ಅನ್ನೋ ಬಗ್ಗೆ ಸಾಕಷ್ಟು ವಿಚಾರಗಳು ಕೇಳಿಬರುತ್ತಿವೆ. ಈಗ ಆ ಸಿನಿಮಾದಲ್ಲಿ ಯಶ್‌ ಪಾತ್ರವೇನು ಅನ್ನೋ ಬಗ್ಗೆ ಮಹತ್ತರ ಮಾಹಿತಿಯೊಂದು ಹೊರಬಿದ್ದಿದೆ.

 

‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ತೆರೆಕಂಡ ನಂತರದಲ್ಲಿ ಯಶ್ ನಿರ್ದೇಶಕ ನರ್ತನ್ ಜತೆ ಕೈ ಜೋಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನರ್ತನ್ ನಿರ್ದೇಶನದ ಚಿತ್ರದಲ್ಲಿ ಯಶ್‍ ಅಭಿನಯಿಸಲಿದ್ದು, ಈ ಸಿನಿಮಾ ಕೂಡ ದೊಡ್ಡ ಬಜೆಟ್ ನಲ್ಲಿ ಮೂಡಿ ಬರುಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ. ನರ್ತನ್ ನಿರ್ದೇಶನದ ಶಿವರಾಜ್ ಕುಮಾರ್ ಹಾಗೂ ಶ್ರೀಮುರಳಿ ಕಾಂಬಿನೇಷನ್ ನಲ್ಲಿ ಮಫ್ತಿ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಕಾರಣಕ್ಕ ಯಶ್-ನರ್ತನ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಸಾಮಾಜಿಕ ಜಾಲತಾಣದಲ್ಲಿ ಯಶ್‍-19 ಫುಲ್‍ ಟ್ರೆಂಡಿಂಗ್ ಆಗಿದೆ. ಯಶ್ ಅಭಿನಯದ ಮುಂದಿನ ಚಿತ್ರದ ಮಾಹಿತಿಯನ್ನು ಅಧಿಕೃತಗೊಳಿಸುವಂತೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮೂಲಕ ಒತ್ತಾಯಿಸುತ್ತಿದ್ದಾರೆ.

 

ಚಿತ್ರದಲ್ಲಿ ಯಶ್‌ ನೇವಿ ಆಫೀಸರ್‌ !

Yash trending twitter news yash 19

Image Credits : Filmibeat

ಮೂಲಗಳ ಪ್ರಕಾರ ನರ್ತನ್ ಸಿನಿಮಾದಲ್ಲಿ ಯಶ್ ನೇವಿ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಹೈ ಬಜೆಟ್‌ನಲ್ಲಿ ನಿರ್ಮಾಣ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಬಹಳ ದಿನಗಳಿಂದ ನರ್ತನ್ ಚಿತ್ರದ ಕಥೆ ಮೇಲೆ ವರ್ಕ್‌ ಮಾಡುತ್ತಿದ್ದು, ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ.

 

ಯಶ್ ಈವರೆಗೆ ಯಾವ ಚಿತ್ರದಲ್ಲೂ ನೇವಿ ಆಫೀಸರ್ ಮಾತ್ರ ಮಾಡಿಲ್ಲ. ಹೀಗಾಗಿ ಈಗ ಅವರು ಭಿನ್ನ ಪಾತ್ರ ಮಾಡುತ್ತಿರುವ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ಅಂದಹಾಗೆ, ನೌಕಾ ನೆಲೆಯ ಅಧಿಕಾರಿ ಎಂದರೆ, ಸಮುದ್ರ ದೃಶ್ಯಗಳು ಇರಲಿವೆಯೇ? ಹೌದು ಎಂದಾದರೆ ಶೂಟಿಂಗ್ ಎಲ್ಲಿ ನಡೆಯಲಿದೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

 

ಯಶ್ ಸಿನಿಮಾದ ನಾಯಕಿ ಯಾರು..?

yash new project yash 19

Image Credits : The News Minute

ಇನ್ನು, ಈ ಸಿನಿಮಾದ ನಾಯಕಿ ಯಾರು ಎಂಬುದರ ಕುರಿತಾಗಿಯೋ ಸಾಕಷ್ಟು ಚರ್ಚೆಗಳು ನಡೆದಿದ್ದವು. 'ಕೆಜಿಎಫ್‌'ನ ಒಂದು ಹಾಡಿನಲ್ಲಿ ಯಶ್‌ ಜೊತೆಗೆ ಹೆಜ್ಜೆ ಹಾಕಿದ್ದ ಬಹುಭಾಷಾ ನಟಿ ತಮನ್ನಾ ಅವರೇ ಯಶ್‌-ನರ್ತನ್ ಕಾಂಬಿನೇಷನ್‌ನ ಸಿನಿಮಾಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇನ್ನು ಯಶ್‌ ಅವರ ಈ ಮುಂದಿನ ಸಿನಿಮಾವನ್ನು ಪ್ರತಿಷ್ಠಿತ ಜೀ ಸ್ಟುಡಿಯೋಸ್ ನಿರ್ಮಾಣ ಮಾಡಲಿದೆ ಎನ್ನಲಾಗುತ್ತಿದೆ. ಜೊತೆಗೆ ಹೊಂಬಾಳೆ ಫಿಲ್ಮ್ಸ್‌ ಕೂಡ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿರಲಿದೆ ಎಂಬುದು ಕೇಳಿಬಂದಿದೆ. ಇದು ಕೂಡ 'ಕೆಜಿಎಫ್‌' ಮಾದರಿಯಲ್ಲೇ ಐದಾರು ಭಾಷೆಗಳಲ್ಲಿ ತೆರೆಗೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದೇನೆ ಇರ್ಲಿ, ರಾಕಿಂಗ್ ಸ್ಟಾರ್ ಹೊಸ ಸಿನಿಮಾದ ಬಗ್ಗೆ ಅಭಿಮಾನಿಗಳು ಫುಲ್‍ ಖುಷ್ ಆಗಿರೋದಂತೂ ನಿಜ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author